Site icon Vistara News

Valentines Day E-Greeting Cards: ವ್ಯಾಲೆಂಟೈನ್ಸ್ ವೀಕ್‌ನಲ್ಲಿ ವರ್ಚುವಲ್‌ ಇ-ಗ್ರೀಟಿಂಗ್‌ ಕಾರ್ಡ್‌ಗಳ ಹವಾ

Valentines Day E-Greeting Cards

ಶೀಲಾ ಸಿ. ಶೆಟ್ಟಿ, ಬೆಂಗಳೂರು

ವ್ಯಾಲೆಂಟೈನ್ಸ್‌ ವೀಕ್‌ನಲ್ಲಿ (Valentines Day E-Greeting Cards) ವರ್ಚುವಲ್‌ ಇ-ಗ್ರೀಟಿಂಗ್‌ ಕಾರ್ಡ್‌ಗಳು ಟ್ರೆಂಡಿಯಾಗಿವೆ. ಟೀನೇಜ್‌ ಹುಡುಗ-ಹುಡುಗಿಯರನ್ನು ಮಾತ್ರವಲ್ಲ ಎಲ್ಲಾ ವರ್ಗದ ಪ್ರೇಮಿಗಳನ್ನು ಇವು ಆಕರ್ಷಿಸಿವೆ. ಆನ್‌ಲೈನ್‌ನಲ್ಲಿ ಲಭ್ಯವಿರುವ ಇವು ನೋಡಲು ಒಂದಕ್ಕಿಂತ ಒಂದು ಆಕರ್ಷಕವಾಗಿದ್ದು, ತಮ್ಮ ಪ್ರೀತಿ-ಪಾತ್ರರಿಗೆ ಸುಲಭವಾಗಿ ಪ್ರೀತಿಯನ್ನು ವ್ಯಕ್ತಪಡಿಸಲು ಸಹಕರಿಸುತ್ತಿವೆ. ದೂರದಲ್ಲಿರುವ ಪ್ರೇಮಿಗೆ ಅಥವಾ ಸಂಗಾತಿಗೆ ಪದಗಳ ಮೂಲಕ ಇಲ್ಲವೇ ಚಿತ್ರಗಳ ಮೂಲಕ ಎಮೋಷನಲ್‌ ಆಗಿ ಸಂದೇಶ ಕಳುಹಿಸಲು ಈ ವರ್ಚುವಲ್‌ ಇ-ಗ್ರೀಟಿಂಗ್‌ ಕಾರ್ಡ್‌ಗಳು ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿವೆ ಎನ್ನುತ್ತಾರೆ ಟೆಕ್ಕಿ ಸ್ಯಾವಿಗಳಾದ ರಕ್ಷಾ ಹಾಗೂ ರೇವಂತ್‌.

ಮೂಲೆಗೆ ಸರಿದ ಕಾಗದದ ಮ್ಯೂಸಿಕಲ್‌ ಗ್ರೀಟಿಂಗ್ಸ್‌

ಜನರೇಷನ್‌ ಬದಲಾದಂತೆ ವಿಶೇಷ ಸಂದರ್ಭಗಳಲ್ಲಿ ನೀಡುವ ಸಂಗೀತ ಹೊರ ಹೊಮ್ಮುವಂತಹ ಕಾಗದದ ಗ್ರೀಟಿಂಗ್‌ ಕಾರ್ಡ್‌ಗಳನ್ನು ಕೈಯಾರೆ ನೀಡುವ ರಿವಾಜು ಇದೀಗ ಸಂಪೂರ್ಣ ಮರೆಯಾಗಿದೆ. ಇದರ ಮಾರಾಟ ಕುಸಿದಿದೆ. ಹಾಗೆಂದು ಸಂಗೀತದ ಮೂಲಕ ಭಾವನೆಗಳನ್ನು ವ್ಯಕ್ತಪಡಿಸುವ ಪ್ರೇಮಿಗಳು ಮಾತ್ರ ಕಡಿಮೆಯಾಗಿಲ್ಲ. ಬದಲಿಗೆ ನೀಡುವ ಪರಿಕ್ರಮ ಬದಲಾಗಿದೆ, ಅಷ್ಟೇ! ಪೇಪರ್‌ ಕಾರ್ಡ್‌ಗಳ ಬದಲು ಸೋಷಿಯಲ್‌ ಮೀಡಿಯಾ ಹಾಗೂ ಆ್ಯಪ್‌ಗಳ ಮೂಲಕ ಆನ್‌ಲೈನ್‌ನಲ್ಲಿ ಕಳುಹಿಸಬಹುದಾದ ಪ್ರೇಮ ಸಂದೇಶ ಸಾರುವ ಇ- ಗ್ರೀಟಿಂಗ್‌ ಕಾರ್ಡ್‌ಗಳು ಇವುಗಳ ಜಾಗಕ್ಕೆ ಬಂದಿವೆ. ಖಾಸಗಿ ಆನ್‌ಲೈನ್‌ ಸಂಸ್ಥೆಯೊಂದರ ಸಮೀಕ್ಷೆಯ ಪ್ರಕಾರ, ಹೊಸ ವರ್ಷ ಹೊರತುಪಡಿಸಿದಲ್ಲಿ, ನಂತರ ಆಗಮಿಸುವ ಫೆಬ್ರವರಿ ತಿಂಗಳ ವ್ಯಾಲೆಂಟೈನ್ಸ್‌ ವೀಕ್‌ನಲ್ಲಿ ಅತಿ ಹೆಚ್ಚು ವರ್ಚುಯಲ್‌ ಇ-ಗ್ರೀಟಿಂಗ್‌ ಕಾರ್ಡ್‌ಗಳು ವಿನಿಮಯಗೊಳ್ಳುತ್ತವಂತೆ. ಇನ್ನು ಮೊಬೈಲ್‌ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಇ-ಗ್ರೀಟಿಂಗ್‌ ಕಾರ್ಡ್‌ಗಳನ್ನು ಕಳುಹಿಸುವ ಹಾಗೂ ಸ್ವೀಕರಿಸುವವರ ಸಂಖ್ಯೆ ಅಧಿಕಗೊಂಡಿದೆಯಂತೆ.

ಇದನ್ನೂ ಓದಿ: Valentine’s Week : ಪ್ರೇಮಿಗಳ ದಿನದ ಹಿಂದಿನ ಮಹತ್ವವೇನು? ಆಚರಿಸೋದು ಹೇಗೆ?

ಸುರಕ್ಷಾ ಕ್ರಮ ವಹಿಸಿ

ಯಾವುದೇ ವರ್ಚುವಲ್‌ ಕಾರ್ಡ್‌ಗಳನ್ನು ಡೌನ್‌ಲೋಡ್‌ ಮಾಡುವ ಮುನ್ನ ಹಾಗೂ ಕಳುಹಿಸುವ ಮುನ್ನ, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ವೈರಸ್‌ ದಾಳಿ ಇಡದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡುತ್ತಾರೆ ಎಕ್ಸ್‌ಪರ್ಟ್ಸ್.

ಇದನ್ನೂ ಓದಿ: Valentine’s Week : ಪ್ರೇಮಿಗಳ ಈ ವಾರದಲ್ಲಿ ನೀವು ಕೇಳಲೇಬೇಕಾದ ಲೇಟೆಸ್ಟ್‌ ಲವ್‌ ಸಾಂಗ್‌ಗಳಿವು…

ನಿಮ್ಮ ಚಾಯ್ಸ್‌ ಹೀಗಿರಲಿ

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Exit mobile version