-ಶೀಲಾ ಸಿ. ಶೆಟ್ಟಿ, ಬೆಂಗಳೂರು
ವ್ಯಾಲೆಂಟೈನ್ಸ್ ವೀಕ್‌ನಲ್ಲಿ ವೆರೈಟಿ ಔಟ್‌ಫಿಟ್‌ಗಳು (Valentines Week Fashion) ಆಗಮಿಸಿದ್ದು, ಅವುಗಳಲ್ಲಿ ೩ ಥೀಮ್‌ನ ಯುವತಿಯರ ಔಟ್‌ಫಿಟ್ಸ್‌ಗೆ ಬೇಡಿಕೆ ಹೆಚ್ಚಿದೆ. ಈ ಥೀಮ್‌ಗೆ ಸೇರಿದ ಯಾವ್ಯಾವ ಔಟ್‌ಫಿಟ್‌ಗಳು ಟ್ರೆಂಡ್‌ನಲ್ಲಿವೆ ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಇಲ್ಲಿ ವಿವರಿಸಿದ್ದಾರೆ.
ಸ್ಟೈಲಿಸ್ಟ್ ರಿಯಾ ಪ್ರಕಾರ, ಮೊದಲಿನಂತೆ ಈಗ ಕೇವಲ ಯಂಗ್‌ಸ್ಟರ್ಸ್ ಮಾತ್ರ ವ್ಯಾಲೆಂಟೈನ್ಸ್ ಡೇ ಸೆಲೆಬ್ರೇಷನ್ ಮಾಡುತ್ತಿಲ್ಲ, ಬದಲಿಗೆ ವಯಸ್ಸಿನ ಭೇದ-ಭಾವವಿಲ್ಲದೇ ಎಲ್ಲಾ ವಯಸ್ಸಿನವರು ಕೂಡ ವ್ಯಾಲೆಂಟೈನ್ಸ್ ಡೇಯನ್ನು ಭಿನ್ನ-ವಿಭಿನ್ನವಾಗಿ ಆಚರಿಸುವುದು ಸಾಮಾನ್ಯ ವಾಗಿದೆ. ಅವರು ಪ್ರೇಮಿಗಳಾಗಬಹುದು, ಪತಿ-ಪತ್ನಿಯಾಗಬಹುದು. ಇದಕ್ಕೆ ಪೂರಕ ಎಂಬಂತೆ, ಫ್ಯಾಷನ್ ಲೋಕವು ಕೂಡ ಈ ಸೀಸನ್‌ಗೆ ಹೊಂದುವಂತಹ ಅದರಲ್ಲೂ ಯುವತಿಯರಿಗೆ ಪ್ರಿಯವಾಗುವಂತಹ ಥೀಮ್ ಬೇಸ್ಡ್ ಔಟ್‌ಫಿಟ್‌ಗಳನ್ನು ಬಿಡುಗಡೆಮಾಡಿದೆ” ಎನ್ನುತ್ತಾರೆ ಸ್ಟೈಲಿಸ್ಟ್ ಹರ್ಷ್.
ರೊಮ್ಯಾಂಟಿಕ್ ಥೀಮ್‌ಗೆ ಹೊಂದುವ ಔಟ್‌ಫಿಟ್ಸ್
ರೊಮ್ಯಾಂಟಿಕ್ ಥೀಮ್‌ಗೆ ಸೇರುವ ಔಟ್‌ಫಿಟ್‌ಗಳಲ್ಲಿಕ್ಯಾಶುವಲ್ ಹಾಗೂ ಎಥ್ನಿಕ್ ಎರಡೂ ಬಗೆಯವು ಸೇರುತ್ತವೆ. ಇವು ಗ್ಲಾಮರಸ್ ಔಟ್‌ಫಿಟ್‌ಗಳಿವು ಎಂದರೂ ತಪ್ಪಿಲ್ಲ! ಮಿಡ್ ವಿಂಟರ್ ಸೀಸನ್‌ನ ಗ್ಲಾಮರಸ್ ಔಟ್‌ಫಿಟ್ ವರ್ಗಕ್ಕೆ ಸೇರುತ್ತವೆ. ಉದಾಹರಣೆಗೆ., ಯಾವುದೇ ಸೆಲೆಬ್ರಿಟಿ ಕಪಲ್ಸ್ ನೋಡಿ. ಅವರು ಧರಿಸುವ ಒಂದೊಂದು ಉಡುಪು ಒಟ್ಟೊಟ್ಟಿಗೆ ಓಡಾಡುವಾಗ ನೋಡಲು ಪ್ಲೆಸೆಂಟ್ ಲುಕ್ ನೀಡುತ್ತದೆ. ಹಾಗಿರಬೇಕು ನಿಮ್ಮ ಚಾಯ್ಸ್ ಎನ್ನುತ್ತಾರೆ ಸ್ಟೈಲಿಸ್ಟ್ ದೀಪಕ್. ಈ ರೊಮ್ಯಾಂಟಿಕ್ ಔಟ್‌ಫಿಟ್‌ಗಳಲ್ಲಿ ಸ್ಟ್ರಾಪ್ ಫ್ರಾಕ್, ಗೌನ್, ಕಟೌಟ್ ಫ್ರಾಕ್, ಶೀತ್ ಫ್ರಾಕ್, ಶೋಲ್ಡರ್‌ಲೆಸ್ ಬಾಡಿಕಾನ್ ಫ್ರಾಕ್-ಗೌನ್‌ಗಳು ಸೇರುತ್ತವೆ. ಇನ್ನು ಯುವಕರು ಹುಡುಗಿಯರ ಈ ಔಟ್‌ಫಿಟ್‌ಗಳಿಗೆ ಮ್ಯಾಚ್ ಆಗುವಂತಹ ಯಾವುದೇ ವೆಸ್ಟರ್ನ್ ವೇರ್ ಹೊಂದಿಬಹುದು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ವ್ಯಾಲೆಂಟೈನ್ಸ್ ಪಾರ್ಟಿ ಔಟ್‌ಫಿಟ್ಸ್
ವ್ಯಾಲೆಂಟೈನ್ಸ್ ಪಾರ್ಟಿಗೆಂದೇ ನಾನಾ ಬಗೆಯ ಗ್ಲಿಟ್ಟರ್, ಸಿಕ್ವಿನ್ಸ್ ಡಿಸೈನ್‌ನ ಶಿಮ್ಮರ್ ಪಾರ್ಟಿವೇರ್‌ಗಳು ಲಗ್ಗೆ ಇಟ್ಟಿವೆ. ನೋಡಲು ಮಿನುಗುವ ಈ ಉಡುಪುಗಳು ಗ್ಲಾಮರಸ್ ಲುಕ್‌ನೊಂದಿಗೆ ನಾನಾ ಶೇಡ್‌ಗಳಾದ ಸಿಲ್ವರ್, ಗೋಲ್ಡ್, ವೈನ್, ಮಾರ್ಸೆಲ್ಲಾ ವರ್ಣಗಳಲ್ಲಿ ಲಭ್ಯ. ಶಿಮ್ಮರಿಂಗ್ ಫ್ಯಾಬ್ರಿಕ್‌ನಲ್ಲಿ ಮಿನಿ, ಮೈಕ್ರೋ, ಮಿಡಿ ಸ್ಕರ್ಟ್ಸ್, ಬಾಡಿ ಹಗ್ಗಿಂಗ್ ಬಗೆಯ ಫ್ರಾಕ್‌ಗಳು ಟ್ರೆಂಡಿಯಾಗಿವೆ. ಆಯಾ ಪಾರ್ಟಿಯ ಥೀಮ್‌ಗೆ ತಕ್ಕಂತೆ ಧರಿಸಬೇಕಾಗುತ್ತದೆ.
ಸೆಲೆಬ್ರಿಟಿ ಲುಕ್ ನೀಡುವ ಔಟ್‌ಫಿಟ್ಸ್
ಇನ್ನು ಈ ಸೀಸನ್‌ನಲ್ಲಿ ಸೆಲೆಬ್ರಿಟಿ ಲುಕ್ ನೀಡುವ ಸಾಕಷ್ಟು ಡಿಸೈನರ್‌ವೇರ್‌ಗಳು ಅಥವಾ ವೆಸ್ಟರ್ನ್ ಔಟ್‌ಫಿಟ್‌ಗಳು ಕೂಡ ಆಗಮಿಸಿವೆ. ನಾನಾ ವೈಬ್ರೆಂಟ್ ಶೇಡ್‌ನ ಬಾಡಿಕಾನ್ ಡ್ರೆಸ್, ಡಿಟೇಲ್ ರಫಲ್ಸ್, ಶಾರ್ಟ್ ಪೆಪ್ಲಮ್ಸ್ , ಸಿಲ್ಲೋಟ್, ಮಿನಿ ಸ್ಲೀವ್ ಫ್ರಾಕ್, ಡ್ರೆಸ್, ಬ್ಯಾಕ್ ಕಟ್‌ಔಟ್ ಮ್ಯಾಕ್ಸಿ, ಪೆನ್ಸಿಲ್ ಸ್ಕರ್ಟ್ಸ್, ಕ್ರಾಪ್ ಟಾಪ್ ವಿತ್ ಶಾರ್ಟ್ ಪ್ಯಾಂಟ್ ಹೀಗೆ ಲೆಕ್ಕವಿಲ್ಲದಷ್ಟು ಬಗೆಯವು ಬಂದಿವೆ.
ವ್ಯಾಲೆಂಟೈನ್ಸ್ ವೀಕ್ ಔಟ್‌ಫಿಟ್ ಪ್ರಿಯರಿಗಾಗಿ ಒಂದಿಷ್ಟು ಟಿಪ್ಸ್
- ಈ ಸೀಸನ್‌ನಲ್ಲಿ ಕೊಳ್ಳುವಾಗ ಅವು ಟ್ರೆಂಡ್ಗೆ ಹೊಂದುತ್ತವೆಯೇ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು.
- ರೆಡ್ ಕಾಂಬಿನೇಷನ್ ಇರುವ ಡಿಸೈನರ್ವೇರ್ಗಳನ್ನು ಇತರೇ ಸಮಯದಲ್ಲೂ ಧರಿಸಬಹುದು.
- ಟ್ರೆಂಡಿಯಾಗಿರುವುದರೊಂದಿಗೆ ಔಟ್‌ಫಿಟ್ಸ್ ಕಂಫರ್ಟಬಲ್ ಆಗಿರುವುದು ಅತ್ಯಗತ್ಯ. ಕೊಂಚ ಫಂಕಿ ಹಾಗೂ ರಿಲವೆಂಟ್ ಆಗಿರಲಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)