-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಒಂದು ನಯಾ ಪೈಸೆ ಖರ್ಚಿಲ್ಲದೇ (Varamahalakshmi Festival 2024) ನಿಮ್ಮ ಸೀರೆಯನ್ನು ಡಿಸೈನರ್ ದಾವಣಿ-ಲಂಗವಾಗಿ ಪರಿವರ್ತಿಸಬಹುದು. ಅದು ಹೇಗೆ? ಎಂದು ಯೋಚಿಸುತ್ತಿದ್ದೀರಾ! ಖಂಡಿತಾ ಸಾಧ್ಯ! ಅದು ಯಾವುದೇ ಮ್ಯಾಜಿಕ್‌ನಿಂದಲ್ಲ! ಸೀರೆಯ ಡಿಫರೆಂಟ್ ಡ್ರೇಪಿಂಗ್‌ನಿಂದ ಇದು ಸಾಧ್ಯ ಎನ್ನುತ್ತಾರೆ ಡ್ರೇಪಿಸ್ಟ್‌ಗಳು.
ಹೌದು, ಈ ಫೆಸ್ಟಿವ್ ಸೀಸನ್‌ನಲ್ಲಿ, ಹೆಚ್ಚು ಖರ್ಚಿಲ್ಲದೇ ರೇಷ್ಮೆ ಸೀರೆಯನ್ನೇ ಲಂಗ-ದಾವಣಿಯಂತೆ ಧರಿಸುವ ಸ್ಟೈಲಿಂಗ್ ಟ್ರೆಂಡಿಯಾಗಿದೆ. ನೋಡಲು ಆಕರ್ಷಕವಾಗಿ ಕಾಣಿಸುವ ಡಿಸೈನರ್ ಲಂಗ-ದಾವಣಿಯಂತೆ ಸೀರೆಯನ್ನು ಉಡುವ ಶೈಲಿ ಇದೀಗ ಡ್ರೇಪಿಂಗ್ ಪ್ಯಾಟರ್ನ್‌ನಲ್ಲಿ ಹೆಚ್ಚು ಪಾಪುಲರ್ ಆಗಿದೆ. ಹಾಗಾದಲ್ಲಿ ಅದು ಹೇಗೆ? ಇದಕ್ಕಾಗಿ ಪಾಲಿಸಬೇಕಾದ ಡ್ರೇಪಿಂಗ್ ರೂಲ್ಸ್ ಏನು ಎಂಬುದರ ಕುರಿತಂತೆ ಸ್ಟೈಲಿಸ್ಟ್‌ಗಳು ಇಲ್ಲಿ ಸಿಂಪಲ್ಲಾಗಿ ವಿವರಿಸಿದ್ದಾರೆ.
ಸೀರೆಯನ್ನು ದಾವಣಿಯಂತೆ ಡ್ರೇಪ್ ಮಾಡುವುದು ಹೇಗೆ?
ಯಾವುದೇ ಸೀರೆ ಬ್ಲೌಸ್ ಅಥವಾ ಉದ್ದಲಂಗದ ಲಂಗವನ್ನು ಮೊದಲು ಧರಿಸಬೇಕು. ಮಾಮೂಲಿಯಂತೆ ಸೀರೆಯ ಒಂದು ಅಂಚನ್ನು ದಾವಣಿ ಸಿಕ್ಕಿಸುವಂತೆ ಮುಂಭಾಗದಲ್ಲಿ ಸಿಕ್ಕಿಸಿ, ಹಿಂಭಾಗದಲ್ಲಿ ಎಳೆದು ಒಂದಿಷ್ಟು ನೆರಿಗೆ ಮಾಡಿಕೊಳ್ಳಬೇಕು. ಸೆರಗಿಗೆ ಅಗತ್ಯವಿರುವಷ್ಟು ಸೀರೆಯ ಕೊನೆಯ ಭಾಗವನ್ನು ಉಳಿಸಿಕೊಂಡು, ಇನ್ನುಳಿದ ನೆರಿಗೆಯ ಭಾಗವನ್ನು, ಹಿಂಭಾಗದಲ್ಲಿ ಅಂದರೇ, ಬೆನ್ನಿನ ಹಿಂದೆ ಲಂಗಕ್ಕೆ ಸಿಕ್ಕಿಸಬೇಕು. ನಂತರ ಸೆರಗನ್ನು ಮುಂಭಾಗಕ್ಕೆ ಹಾಕಬೇಕು. ಹಿಂಭಾಗದಲ್ಲಿ ಸೀರೆ ನೀಟಾಗಿ ಸಿಕ್ಕಿಸಬೇಕು. ಜಾರಿ ಹೋಗದಂತೆ ಅದನ್ನು ಪಿನ್ ಮಾಡಬೇಕು ಎನ್ನುತ್ತಾರೆ ಸೀರೆ ಡ್ರೇಪರ್ ಸಾಕ್ಷಿ. ಇಷ್ಟಾಗಿಯೂ ಈ ಸ್ಟೈಲಿಂಗ್ ಮಾಡುವುದು ಗೊತ್ತಾಗದಿದ್ದಲ್ಲಿ, ಯೂ ಟ್ಯೂಬ್‌ನಲ್ಲಿಈ ಶೈಲಿಯ ಡ್ರೇಪಿಂಗ್ ಕುರಿತ ಸಾಕಷ್ಟು ಟ್ಯುಟೋರಿಯಲ್ ಹಾಗೂ ಕಲಿಸಿಕೊಡುವ ವಿಡಿಯೋಗಳು ಲಭ್ಯವಿದೆ. ಅವುಗಳ ಸಹಾಯ ಪಡೆಯಬಹುದು ಎನ್ನುತ್ತಾರೆ ಅವರು.
ದಾವಣಿ-ಲಂಗ ಮಾಪರ್ಡಿಸಲು ಸೀರೆ ಆಯ್ಕೆ ಹೀಗಿರಲಿ
ಹಬ್ಬದಂದು ಸೀರೆಯನ್ನು ಡಿಸೈನರ್ ದಾವಣಿ –ಲಂಗದಂತೆ ಮಾರ್ಪಡಿಸಲು ಸೂಕ್ತವಾದ ಸೀರೆಯ ಆಯ್ಕೆ ಮಾಡಬೇಕು. ಆಗಷ್ಟೇ ಅದು ಉಟ್ಟಾಗ ನೋಡಲು ಆಕರ್ಷಕವಾಗಿ ಕಾಣಿಸುವುದು. ಇದಕ್ಕಾಗಿ ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎನ್ನುತ್ತಾರೆ ಸೀರೆ ಡ್ರೇಪರ್ ನೈನಾ.
- ಹಬ್ಬಕ್ಕೆ ಉಡುವುದಾದಲ್ಲಿ ರೇಷ್ಮೆ ಸೀರೆ ಆಯ್ಕೆ ಮಾಡಬೇಕು.
- ಗ್ರ್ಯಾಂಡ್ ಸೀರೆಯಾದಲ್ಲಿ ನೋಡಲು ಆಕರ್ಷಕವಾಗಿ ಕಾಣಿಸುವುದು.
- ಉಡುವ ಲಂಗ, ಸೀರೆಗೆ ಕಾಂಟ್ರಾಸ್ಟ್ ಶೇಡ್ನದ್ದಾಗಿರಬೇಕು.
- ಯಾವುದೇ ಹಳೆಯ ಸಾದಾ ಲೆಹೆಂಗಾ ಅಥವಾ ರೇಷ್ಮೆಯ ಲಂಗವಾದರೂ ಸರಿಯೇ ಮ್ಯಾಚ್ ಆಗುತ್ತದೆ.
- ಪ್ರಿಂಟೆಡ್ ಲಂಗ ಆವಾಯ್ಡ್ ಮಾಡಿ. ಸಾದಾ ಡಿಸೈನ್ ಅಥವಾ ಗ್ರ್ಯಾಂಡ್ ಬ್ರೋಕೆಡ್ನವನ್ನು ಆಯ್ಕೆ ಮಾಡಿ.
( ಲೇಖಕಿ ಫ್ಯಾಷನ್ ಪತ್ರಕರ್ತೆ )
ಇದನ್ನೂ ಓದಿ: Varamahalakshmi Festival Fashion: ಫೆಸ್ಟಿವ್ ಸೀಸನ್‌ಗೆ ಮರಳಿದ ಹೆಣ್ಣುಮಕ್ಕಳ ಟ್ರೆಡಿಷನಲ್ ಉದ್ದ ಲಂಗ!