ಶೀಲಾ ಸಿ. ಶೆಟ್ಟಿ, ಬೆಂಗಳೂರು
ಯುವಕರ ಸಮ್ಮರ್ ಫ್ಯಾಷನ್‌ನಲ್ಲಿ ಇದೀಗ ವೈಟ್ ಟೀ ಶರ್ಟ್ಸ್ಗಳದ್ದೇ ಕಾರುಬಾರು. ನೋಡಲು ಸಿಂಪಲ್ ಹಾಗೂ ಫ್ರೆಶ್ ಫೀಲಿಂಗ್ ನೀಡುವ ಈ ಶ್ವೇತ ವರ್ಣದ ನಾನಾ ವಿನ್ಯಾಸದ ಟೀ ಶರ್ಟ್ಸ್ಗಳು ಬೇಸಿಗೆಯ ಬಿಸಿಲಿಗೆ ತಂಪನ್ನೆರೆಯುವ ವಿನ್ಯಾಸದಲ್ಲಿ ಬಿಡುಗಡೆಗೊಂಡಿವೆ.
ವಿನೂತನ ರೂಪದಲ್ಲಿ ರೌಂಡ್, ವಿ ನೆಕ್‌ನ ಸಿಂಪಲ್ ಕಾಟನ್, ಲೆನಿನ್, ಜೆರ್ಸಿ ಹಾಗೂ ನಾನಾ ಬಗೆಯ ಲೋಗೋ, ಜೆಮೆಟ್ರಿಕ್ ಪ್ರಿಂಟೆಡ್ ಟೀ ಶರ್ಟ್ಗಳು ಸೇರಿದಂತೆ ನಾನಾ ಡಿಸೈನ್‌ನ ಟೀ ಶರ್ಟ್ಗಳು ಈ ಬಿರು ಬೇಸಿಗೆಯಲ್ಲಿ ಎಂಟ್ರಿ ನೀಡಿವೆ. ಯುವಕರ ಔಟಿಂಗ್ ಹಾಗೂ ವೀಕೆಂಡ್‌ಗೆ ಸೂಟ್ ಆಗುವಂತಹ ಫಂಕಿ ಡಿಸೈನ್‌ನಲ್ಲೂ ಬಿಡುಗಡೆಗೊಂಡಿವೆ.
ಕಾಲೇಜು ಹುಡುಗರ ಫೇವರೇಟ್ ಟೀ ಶರ್ಟ್
ಟಿನೇಜ್ ಹಾಗೂ ಯುವಕರ ಫೇವರೇಟ್ ಲಿಸ್ಟ್‌ನಲ್ಲಿರುವ ಈ ಸಮ್ಮರ್ ವೈಟ್ ಶೇಡ್ನ ಟಿ ಶರ್ಟ್ಗಳು ಬ್ರಿಥೆಬಲ್ ಫ್ಯಾಬ್ರಿಕ್‌ನಲ್ಲಿ ದೊರೆಯುತ್ತಿರುವುದು ಟ್ರೆಂಡಿಯಾಗಲು ಕಾರಣ. ಯಾವುದೇ ಜೀನ್ಸ್ ಪ್ಯಾಂಟ್ ಮೇಲೆ ಧರಿಸಿದರಾಯಿತು. ನೋಡಲು ಮಾಡರ್ನ್ ಲುಕ್ ನೀಡುವುದರೊಂದಿಗೆ ಟ್ರೆಂಡಿಯಾಗಿಯೂ ಕಾಣಿಸುತ್ತವೆ. ಹೇರ್‌ಸ್ಟೈಲ್ ಕೊಂಚ ಸ್ಟೈಲಾಗಿ ಮಾಡಿದರಾಯಿತು. ಫಂಕಿ ಲುಕ್ ಗ್ಯಾರಂಟಿ ಎನ್ನುತ್ತಾರೆ ಸ್ಟೈಲಿಸ್ಟ್ ರಿಚರ್ಡ್.
ಪ್ರಿಂಟೆಡ್ ಸಮ್ಮರ್ ಟೀ ಶರ್ಟ್
ಮೊದಲೆಲ್ಲಾ ಪ್ರಿಂಟೆಡ್ ಟೀ ಶರ್ಟ್ಗಳು ಕೇವಲ ಹುಡುಗಿಯರ ಆಸ್ತಿ ಎಂಬಂತಿದ್ದವು. ಇದೀಗ ಹುಡುಗರಿಗೂ ಪ್ರಿಂಟೆಡ್ ಟೀ ಶರ್ಟ್ಗಳು ಕೊಂಚ ವಿಭಿನ್ನ ವಿನ್ಯಾಸದಲ್ಲಿ ದೊರಕಲಾರಂಭಿಸಿವೆ. ಬ್ರಾಂಡೆಡ್ ಟೀ ಶರ್ಟ್ನಿಂದ ಹಿಡಿದು ಲೋಕಲ್ ಬ್ರಾಂಡ್‌ವರೆಗೂ ಆಕರ್ಷಕ ವಿನ್ಯಾಸದಲ್ಲಿ ಸಿಗುತ್ತಿವೆ ಎನ್ನುತ್ತಾರೆ ಡಿಸೈನರ್ ಧೀರಜ್. ಹಾಗೆಂದು ಇಡೀ ವೈಟ್ ಟೀ ಶರ್ಟ್ ಪ್ರಿಂಟೆಡ್‌ನದ್ದಾಗಿರುವುದಿಲ್ಲ! ಉದಾಹರಣೆಗೆ., ಟೀ ಶರ್ಟ್ನ ಮಧ್ಯ ಭಾಗದಲ್ಲಿ ಜೆಮೆಟ್ರಿಕ್ ಶೇಪ್‌ನೊಳಗೆ ಪ್ರಿಂಟ್ಸ್ ಕಾಣಬಹುದು. ಇಲ್ಲವೇ ಲೋಗೋದಂತಹ ಸಿಂಬಲ್‌ನೊಳಗೆ ಪ್ರಿಂಟ್ಸ್ ಅಥವಾ ಜೆರ್ಸಿ ಮೆಟೀರಿಯಲ್‌ನಲ್ಲಿ ಕ್ಯಾರೆಕ್ಟರ್ಸ್ ಪ್ರಿಂಟ್ಸ್ ನೋಡಬಹುದು ಎನ್ನುತ್ತಾರೆ.
ಕೂಲ್ ಲುಕ್ಕಾಗಿ ವೈಟ್ ಟೀ ಶರ್ಟ್
ಬಿಸಿಲಿಗೆ ಆದಷ್ಟೂ ಡಾರ್ಕ್ ಕಲರ್‌ನ ಟೀ ಶರ್ಟ್ಗಳನ್ನು ಅವಾಯ್ಡ್ ಮಾಡಬೇಕು. ವೈಟ್ ಟೀ ಶರ್ಟ್ ನೋಡಲು ಕೂಲ್ ಲುಕ್ ನೀಡುವುದಲ್ಲದೇ ಫ್ರೆಶ್ ಲುಕ್ ನೀಡುತ್ತದೆ. ಜೊತೆಗೆ ಆಕರ್ಷಕವಾಗಿಯೂ ಕಾಣಿಸುತ್ತದೆ ಎನ್ನುವ ಸ್ಟೈಲಿಸ್ಟ್ ರಾಜ್ ಪ್ರಕಾರ, ಯುವಕರು ಮಾತ್ರವಲ್ಲ, ಯಾವುದೇ ವಯಸ್ಸಿನ ಪುರುಷರು ಕೂಡ ಶ್ವೇತ ವರ್ಣದ ಟೀ ಶರ್ಟ್ನ ಧರಿಸಬಹುದು. ಇದು ಯಂಗ್ ಲುಕ್‌ಗೆ ಸಹಕಾರಿ ಎನ್ನುತ್ತಾರೆ.
ವೈಟ್ ಟೀ ಶರ್ಟ್ ಪ್ರಿಯ ಯುವಕರು ಪಾಲಿಸಬೇಕಾದ್ದು…
- · ಯೂನಿಸೆಕ್ಸ್ ಟೀ ಶರ್ಟ್ ಆಯ್ಕೆ ಬೇಡ. ಫೆಮಿನೈನ್ ಲುಕ್ ನೀಡುವ ಸಾಧ್ಯತೆ ಹೆಚ್ಚು.
- · ಕಾಲರ್ ಟೀ ಶರ್ಟ್ ಬೇಸಿಗೆಯಲ್ಲಿ ಆವಾಯ್ಡ್ ಮಾಡಿ.
- · ರೌಂಡ್ ನೆಕ್ ಟೀ ಶರ್ಟ್ ಮೇಲೆ ಅಗತ್ಯವಿದ್ದಲ್ಲಿ ಲೈಟ್ವೈಟ್ ಬ್ಲೇಝರ್ ಧರಿಸಬಹುದು.
ಚಿತ್ರಗಳು : ಇಶಾನ್, ಬಾಲಿವುಡ್ ನಟ
(ಲೇಖಕಿ : ಫ್ಯಾಷನ್ ಪತ್ರಕರ್ತೆ)