Site icon Vistara News

Sequence saree : ಸಿಕ್ವಿನ್ಸ್ ಸೀರೆಯಲ್ಲಿ ಸೆಲೆಬ್ರೆಟಿ ಲುಕ್‌ ನಿಮ್ಮದಾಗಿಸಿಕೊಳ್ಳಬೇಕೇ! ಹೀಗೆ ಸ್ಟೈಲಿಂಗ್‌ ಮಾಡಿ

saree

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಸಿಕ್ವಿನ್ಸ್‌ ಸೀರೆಯಲ್ಲಿ ಸೆಲೆಬ್ರೆಟಿಯಂತೆ ಕಾಣಿಸಿಕೊಳ್ಳಬೇಕೇ! ತಾರೆಯರಂತೆ ಮಿನುಗಬೇಕೇ! ಅವರಂತೆ ಕಾಣಿಸುವುದು ಅಂತಹ ಕಷ್ಟವೇನಲ್ಲ, ಆದರೆ, ಸ್ಟಾರ್‌ಗಳು ಫಾಲೋ ಮಾಡುವ ಒಂದಿಷ್ಟು ಸ್ಟೈಲಿಂಗ್‌ ಹಾಗೂ ಮೇಕಪ್‌ ಟಿಪ್ಸ್‌ ಫಾಲೋ ಮಾಡಬೇಕಷ್ಟೇ! ಆಗ ಎಂತಹವರು ಕೂಡ ಸೆಲೆಬ್ರೆಟಿಯಂತೆ ಕಾಣಿಸಿಕೊಳ್ಳಬಹುದು ಎನ್ನುತ್ತಾರೆ ಸ್ಟೈಲಿಸ್ಟ್ ಗಳು. ಸಿಕ್ವಿನ್ಸ್‌ ಸೀರೆ ಸಖತ್‌ ಟ್ರೆಂಡಿಯಾಗಿರುವ ಪಾರ್ಟಿ ಸೀರೆಗಳು ಎನ್ನಬಹುದು. ಪಾರ್ಟಿ ಯಾಕೆ! ಚಿಕ್ಕ ಪುಟ್ಟ ಕ್ಯಾಶುವಲ್‌ ಸಮಾರಂಭಗಳಲ್ಲೂ ಸಿಕ್ವಿನ್ಸ್‌ ಸೀರೆ ಉಡುವವರು ಹೆಚ್ಚಾಗಿದ್ದಾರೆ. ಆದರೆ, ಎಲ್ಲರೂ ಸೆಲೆಬ್ರೆಟಿಗಳಂತೆ ಕಾಣುವುದಿಲ್ಲ! ಯಾಕೆ ಹೀಗೆ ಎಂದು ಯೋಚಿಸುತ್ತಿದ್ದೀರಾ? ಇದಕ್ಕೂ ನಾನಾ ಕಾರಣಗಳಿವೆ. ತಾರೆಯರು ಉಡುವ ಸೀರೆಗಳನ್ನು ನೋಡಿ, ಖರೀದಿಸಿ, ಸುಖಾಸುಮ್ಮನೆ ಉಡುವುದರಿಂದ ಈ ಲುಕ್‌ ಪಡೆಯಲು ಸಾಧ್ಯವಿಲ್ಲ. ಸೀರೆಯೊಂದಿಗೆ ಅದಕ್ಕೆ ಮ್ಯಾಚ್‌ ಆಗುವ ಮೇಕಪ್‌, ಆಕ್ಸೆಸರೀಸ್‌ ಧರಿಸಿ ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಪ್ರಾಮುಖ್ಯತೆ ನೀಡಿದಲ್ಲಿ ಥೇಟ್‌ ಸೆಲೆಬ್ರೆಟಿಯಂತೆಯೇ ಕಾಣಿಸಬಹುದು ಎನ್ನುತ್ತಾರೆ ಸ್ಟೈಲಿಸ್ಟ್ಸ್. ಅದಕ್ಕಾಗಿ ಒಂದಿಷ್ಟು ಸಿಂಪಲ್‌ ಟಿಪ್ಸ್‌ ಕೂಡ ನೀಡಿದ್ದಾರೆ. ಫಾಲೋ ಮಾಡಿ ನೋಡಿ ಎನ್ನುತ್ತಾರೆ.

ಸಿಕ್ವಿನ್ಸ್‌ ಸೀರೆ ಆಯ್ಕೆ ಹೀಗಿರಲಿ

ನೀವು ಆಯ್ಕೆ ಮಾಡುವ ಸಿಕ್ವಿನ್ಸ್‌ ಸೀರೆ ಟ್ರೆಂಡಿಯಾಗಿರುವುದರೊಂದಿಗೆ ನಿಮ್ಮ ಸ್ಕಿನ್‌ ಟೋನ್‌ಗೆ ಮ್ಯಾಚ್‌ ಆಗಬೇಕು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ.

ಗ್ಲಾಮರಸ್‌ ಲುಕ್‌ಗಾಗಿ ಸ್ಲೀವ್‌ಲೆಸ್‌ ಬ್ಲೌಸ್‌ ಆಯ್ಕೆ

ಈ ಸೀರೆಗೆ ನೀವು ಫುಲ್‌ ಸ್ಲೀವ್‌ ಅಥವಾ ಇನ್ಯಾವುದೇ ಬಗೆಯ ಸ್ಲೀವ್‌ ಡಿಸೈನ್‌ ಹೊಲೆಸಿಕೊಂಡಲ್ಲಿ ಅಷ್ಟಾಗಿ ಸ್ಟಾರ್‌ ಲುಕ್‌ ಸಿಗದು. ಗ್ಲಾಮರಸ್‌ ಲುಕ್‌ಗಾಗಿ ಆದಷ್ಟೂ ಸ್ಲೀವ್‌ಲೆಸ್‌ ಬ್ಲೌಸ್‌ ಆಯ್ಕೆ ಮಾಡಿ.

ಪಾರ್ಟಿ ಮೇಕಪ್‌ಗೆ ಆದ್ಯತೆ ನೀಡಿ

ಎಥ್ನಿಕ್‌ ಲುಕ್‌ ನೀಡುವ ಮೇಕಪ್‌ ಮಾಡಕೂಡದು. ಆದಷ್ಟೂ ಪಾರ್ಟಿ ಮೇಕಪ್‌ ಈ ಸೀರೆಗೆ ಹೊಂದುತ್ತದೆ. ಜೊತೆಗೆ ಐ ಮೇಕಪ್‌ ಶೈನಿಂಗ್‌ ಇರಲಿ. ಗ್ಲಾಸಿ ಲುಕ್‌ ಇದ್ದಷ್ಟು ಮುಖ ಮಿರುಗುವುದು. ಲಿಪ್‌ಸ್ಟಿಕ್‌ ಕೂಡ ಅಷ್ಟೇ ಲೈಟಾಗಿ ಗ್ಲಾಸಿಯಾಗಿರಲಿ.

ಪರ್ಫೆಕ್ಟ್ ಹೇರ್‌ಸ್ಟೈಲ್‌

ಇನ್ನು ಕಾಂಪ್ಲಿಕೇಟೇಡ್‌ ಹೇರ್‌ಸ್ಟೈಲ್‌ ಬೇಡವೇ ಬೇಡ! ನಿಮ್ಮ ನ್ಯಾಚುರಲ್‌ ಹೇರ್‌ಸ್ಟೈಲ್‌ ಅಂದರೇ ಕೂದಲನ್ನು ಫ್ರಿಯಾಗಿ ಬಿಡಿ. ಯಾವುದೇ ಡಿಸೈನ್‌ ಬೇಡ. ಬೇಕಿದ್ದಲ್ಲಿ ಸ್ಟ್ರೇಟ್‌ ಹೇರ್‌ಸ್ಟೈಲ್‌ ಮಾಡಬಹುದು. ಮುಖಕ್ಕೆ ಹೊಂದುವಂತಿದ್ದಲ್ಲಿ, ಕರ್ಲಿಂಗ್‌ ಕೂಡ ಮಾಡಬಹುದು.

ಇದನ್ನೂ ಓದಿ : Joggers Co-Ord Set Fashion: ಜಾಗರ್ಸ್‌ಗಳಿಗೂ ಬಂತು ಮಾನೋಕ್ರೋಮ್‌ ಕೋ-ಆರ್ಡ್ ಸೆಟ್ಸ್

ಟ್ರೆಡಿಷನಲ್‌ ಲುಕ್‌ ನೀಡುವ ಆಕ್ಸೆಸರೀಸ್‌ ಬೇಡ

ಟ್ರೆಡಿಷನಲ್‌ ಲುಕ್‌ ನೀಡುವ ಆಕ್ಸೆಸರೀಸ್‌ ಧರಿಸುವುದು ಬೇಡ. ಜರ್ಕೋಸಿ ಅಥವಾ ಕ್ರಿಸ್ಟಲ್‌ ಸೆಟ್‌ಗಳನ್ನು ಧರಿಸಬಹುದು. ಕಿವಿಗೆ ಹ್ಯಾಂಗಿಂಗ್ಸ್‌ ಬೆಸ್ಟ್‌. ಟೈಟ್‌ ನೆಕ್ಲೇಸ್‌ ಚೆನ್ನಾಗಿ ಕಾಣುತ್ತದೆ.

ಶಿಮ್ಮರ್‌ ಸ್ಯಾಂಡಲ್ಸ್

ಸಿಕ್ವಿನ್ಸ್ ಸೀರೆಗೆ ಮ್ಯಾಚ್‌ ಆಗುವಂತಹ ಶಿಮ್ಮರ್‌ ಗೋಲ್ಡನ್‌ ಅಥವಾ ಸಿಲ್ವರ್‌ ಹೈ ಹೀಲ್ಸ್ ಸ್ಯಾಂಡಲ್ಸ್ ಪರ್ಫೆಕ್ಟ್ ಮ್ಯಾಚ್‌ ಆಗುವುದರೊಂದಿಗೆ ಲುಕ್ಕನ್ನು ಹೈಲೈಟ್‌ ಮಾಡುತ್ತದೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Exit mobile version