-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮದುವೆ ಸೀಸನ್‌ನಲ್ಲಿ ಹೆಣ್ಣುಮಕ್ಕಳ ಸಂಭ್ರಮಕ್ಕೆ (Wedding Fashion) ಮತ್ತಷ್ಟು ರಂಗು ಹೆಚ್ಚಿಸುವ ನಾನಾ ವಿನ್ಯಾಸದ ಡಿಸೈನರ್ ಬ್ಯಾಂಗಲ್ ಸೆಟ್‌ಗಳು ಮಾರುಕಟ್ಟೆಗೆ ಎಂಟ್ರಿ ನೀಡಿವೆ. ಮದುವೆಯಾಗುವ ಮದುಮಗಳು ಮಾತ್ರವಲ್ಲ, ಮದುವೆಯಲ್ಲಿ ಪಾಲ್ಗೊಳ್ಳುವ ಸ್ನೇಹಿತೆಯರು, ಸಹೋದರಿಯರು, ಫ್ಯಾಷನ್ ಪ್ರಿಯ ಹೆಣ್ಣುಮಕ್ಕಳು ಧರಿಸಬಹುದಾದ ನಾನಾ ಬಗೆಯ ಡಿಸೈನರ್ ಬ್ಯಾಂಗಲ್ ಸೆಟ್‌ಗಳು ಲಗ್ಗೆ ಇಟ್ಟಿವೆ.
ಮದುವೆ ಕಾರ್ಯಕ್ರಮಕ್ಕೆ ಮೆರಗು ನೀಡುವ ಬ್ಯಾಂಗಲ್‌ಗಳಿವು
ಪ್ರತಿ ವರ್ಷ ಮದುವೆ ಸೀಸನ್‌ಗಳಲ್ಲಿ ನಾನಾ ವೆರೈಟಿ ಬ್ಯಾಂಗಲ್ ಹಾಗೂ ಸೆಟ್‌ಗಳು ಲಗ್ಗೆ ಇಡುತ್ತವೆ. ಈ ಬಾರಿ ಕೊಂಚ ಗ್ರ್ಯಾಂಡ್ ಲುಕ್ ನೀಡುವ ಮ್ಯಾಚಿಂಗ್ ಡಿಸೈನರ್ ಬ್ಯಾಂಗಲ್ ಸೆಟ್‌ಗಳು ಅತ್ಯಾಕರ್ಷಕ ಡಿಸೈನ್‌ನಲ್ಲಿ ಆಗಮಿಸಿದ್ದು, ಒಂದಕ್ಕಿಂತ ಒಂದು ಆಕರ್ಷಕವಾಗಿವೆ. ಅಂದಹಾಗೆ, ಬೆಲೆ ಮಾತ್ರ ಸಾಮಾನ್ಯ ಬಳೆಗಳಿಗಿಂತ ದುಬಾರಿ. ಹಾಗಾಗಿ ಮದುವೆಗೆ ಧರಿಸುವ ಸೀರೆ ಅಥವಾ ಯಾವುದೇ ಉಡುಪಿಗೆ ಮ್ಯಾಚ್ ಆಗುವಂತೆ ಖರೀದಿಸಿದಲ್ಲಿ ಕನಿಷ್ಠ ಒಂದೆರೆಡು ಉಡುಪಿಗಾದರೂ ಮ್ಯಾಚ್ ಮಾಡಬಹುದು ಎನ್ನುತ್ತಾರೆ ಸ್ಟೈಲಿಸ್ಟ್ ರಕ್ಷಾ.
ಇದನ್ನೂ ಓದಿ | Kids winter Fashion | ಮಕ್ಕಳನ್ನು ಕ್ಯೂಟ್ ಆಗಿ ಬಿಂಬಿಸುವ ವಿಂಟರ್ ಫ್ಯಾಷನ್
ಟ್ರೆಂಡಿಯಾಗಿರುವ ಬ್ಯಾಂಗಲ್ ಸೆಟ್‌ಗಳಿವು
ಗ್ರ್ಯಾಂಡ್ ಬ್ಯಾಂಗಲ್ ಸೆಟ್, ಮ್ಯಾಚಿಂಗ್ ಬ್ಯಾಂಗಲ್ ಸೆಟ್, ಗೋಲ್ಡನ್ ಬ್ಯಾಂಗಲ್ ಸೆಟ್ ಈ ಬಾರಿಯ ವೆಡ್ಡಿಂಗ್ ಆಕ್ಸೆಸರೀಸ್ ಫ್ಯಾಷನ್‌ನಲ್ಲಿ ಹೆಚ್ಚು ಟ್ರೆಂಡಿಯಾಗಿವೆ. ಹೆಚ್ಚೆಚ್ಚು ಬೇಡಿಕೆ ಸೃಷ್ಟಿಸಿಕೊಂಡಿವೆ.
“ಕೆಲವರು ತಮ್ಮ ಡಿಸೈನರ್‌ವೇರ್ ಇಲ್ಲವೇ ಸೀರೆಯ ಫೋಟೊಗಳನ್ನು ಮೊಬೈಲ್‌ನಲ್ಲಿ ಕ್ಲಿಕ್ಕಿಸಿಕೊಂಡು ಬಂದು ಈ ಬ್ಯಾಂಗಲ್‌ಗಳನ್ನು ಖರೀದಿಸುತ್ತಾರೆ. ಇನ್ನು ಕೆಲವರು ಅತಿ ಹೆಚ್ಚು ಟ್ರೆಂಡಿಯಾಗಿರುವ ಬಳೆಗಳನ್ನು ತೋರಿಸಿ ಎಂದು ಕೇಳಿ ಅವನ್ನೇ ಖರೀದಿಸುತ್ತಾರೆ. ಒಟ್ಟಿನಲ್ಲಿ ಮದುವೆ ಸೀಸನ್‌ನಲ್ಲಿ ಬ್ಯಾಂಗಲ್ಸ್ ಮಾರಾಟ ಹೆಚ್ಚು ” ಎನ್ನುತ್ತಾರೆ ಬ್ಯಾಂಗಲ್ ಶಾಪ್‌ನ ಮಾಲೀಕರು.
ಸಂಪ್ರದಾಯಕ್ಕೆ ತಕ್ಕಂತೆ ಬದಲಾದ ಬ್ಯಾಂಗಲ್‌ಗಳು
ಬಹುತೇಕ ಮದುವೆಗಳಲ್ಲಿ ಮದುಮಗಳಿಗೆ ವಿವಾಹಕ್ಕೂ ಮುನ್ನ ಮಾತ್ರ ನಾನಾ ಕಲರ್‌ಫುಲ್ ಬಳೆಗಳನ್ನು ಧರಿಸಬಹುದು. ಮಹೂರ್ತಕ್ಕೆ ಮಾತ್ರ ಇಂತಹದ್ದೇ ಬಳೆಗಳನ್ನು ಧರಿಸಬೇಕೆಂಬ ನಾನಾ ನಿಯಮಗಳಿವೆ. ಇದನ್ನು ಗಮನದಲ್ಲಿಟ್ಟುಕೊಂಡಿರುವ ಬ್ಯಾಂಗಲ್ ಡಿಸೈನರ್‌ಗಳು ಆಯಾ ಸಮುದಾಯದಲ್ಲಿ ಧರಿಸುವ ಬಳೆಗಳ ವರ್ಣಗಳನ್ನು ಆಯ್ಕೆ ಮಾಡಿಕೊಂಡು ಡಿಸೈನರ್ ಬ್ಯಾಂಗಲ್ಸ್ ಲುಕ್ ನೀಡಿದ್ದಾರೆ. ಉದಾಹರಣೆಗೆ., ಹಸಿರು, ಕೆಂಪು ಹಾಗೂ ಕಪ್ಪು ಬಳೆಗಳನ್ನು ಕೂಡ ಸೆಟ್ ಮಾದರಿಯಲ್ಲಿ ಸಿದ್ಧಪಡಿಸಿ ಬಿಡುಗಡೆಗೊಳಿಸಿದ್ದಾರೆ.
ಡಿಸೈನರ್ ಬ್ಯಾಂಗಲ್ ಸೆಟ್ ಪ್ರಿಯರಿಗೆ ಟಿಪ್ಸ್
- ಮ್ಯಾಚಿಂಗ್ ಧರಿಸಿದಾಗ ನೋಡಲು ಆಕರ್ಷಕವಾಗಿ ಕಾಣುತ್ತದೆ.
- ಗಾಜಿನ ಬದಲು ಮೆಟಲ್ನದ್ದು ಕೊಂಡಲ್ಲಿ ಬಾಳಿಕೆ ಬರುತ್ತದೆ.
- ಸೈಡ್ ಬಳೆಗಳು ಗ್ರ್ಯಾಂಡ್ ಆಗಿರುವುದನ್ನು ಆಯ್ಕೆ ಮಾಡಿ.
- ಧೂಳು ಹಿಡಿಯದಂತೆ ಎತ್ತಿಟ್ಟಲ್ಲಿ ಆಕರ್ಷಣೆ ಕುಂದುವುದಿಲ್ಲ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ | Kids Fashion | ಥೀಮ್‌ಗೆ ತಕ್ಕಂತೆ ಬದಲಾಗುವ ಇಂದಿನ ಮಕ್ಕಳ ಫ್ಯಾಷನ್