-ಶೀಲಾ ಸಿ, ಶೆಟ್ಟಿ, ಬೆಂಗಳೂರು
ವೆಡ್ಡಿಂಗ್ ಜ್ಯುವೆಲ್ ಫ್ಯಾಷನ್‌ನಲ್ಲಿ (Wedding Jewel Fashion) ಇದೀಗ ಕಿವಿಯ ಸೌಂದರ್ಯವನ್ನು ಹೆಚ್ಚಿಸುವ ನಾನಾ ಬಗೆಯ ಟ್ರೆಡಿಷನಲ್ ಲುಕ್ ನೀಡುವ ಡಿಸೈನರ್ ಮಾಟಿಗಳು ರೀ ಎಂಟ್ರಿ ನೀಡಿದ್ದು, ಅವುಗಳಲ್ಲಿ 3 ಶೈಲಿಯವು ಮಹಿಳೆಯರನ್ನು ಅಲಂಕರಿಸುತ್ತಿವೆ.
ಟ್ರೆಡಿಷನಲ್ ಲುಕ್‌ಗೆ ಸಾಥ್ ನೀಡುವ ಮಾಟಿ
“ಕಿವಿಯ ಓಲೆಯೊಂದಿಗೆ ಧರಿಸುವ ಮಾಟಿಗಳು ಮೊದಲಿನಿಂದಲೂ ಟ್ರೆಡಿಷನಲ್ ಲುಕ್ ಬಯಸುವ ಮಹಿಳೆಯರ ಕಿವಿಯನ್ನು ಶೃಂಗರಿಸುತ್ತಿವೆ. ಮನೆಯ ಸಮಾರಂಭಗಳು ಅದರಲ್ಲೂ ಮದುವೆಯಂತಹ ದೊಡ್ಡ ಕ್ರಾರ್ಯಕ್ರಮಗಳಲ್ಲಿ ಮಾನಿನಿಯರನ್ನು ಸಿಂಗರಿಸುತ್ತಿವೆ. ಸಂತಸದ ವಿಚಾರವೆಂದರೇ, ಇದೀಗ ಮಾಡರ್ನ್ ಲುಕ್ ಬಯಸುವ ಯುವತಿಯರೂ ಕೂಡ ಇಷ್ಟಪಟ್ಟು ಧರಿಸತೊಡಗಿದ್ದಾರೆ” ಎನ್ನುತ್ತಾರೆ” ಜ್ಯುವೆಲ್ ಡಿಸೈನರ್ ಧೃತಿ. ಅವರ ಪ್ರಕಾರ, ಈ ಮಾಟಿಗಳು ಯುವತಿಯರ ಹೇರ್‌ಸ್ಟೈಲ್ ಸೌಂದರ್ಯಕ್ಕೂ ಸಾಥ್ ನೀಡುತ್ತಿವೆಯಂತೆ.
ಬ್ರೈಡಲ್ ಲುಕ್‌ಗೆ ಸಾಥ್
ಮದುಮಗಳ ಜುವೆಲರಿ ಸೆಟ್‌ನಲ್ಲಿ ಇದೀಗ ನಾನಾ ಬಗೆಯ ಮಾಟಿಗಳು ಟ್ರೆಂಡಿಯಾಗಿದ್ದು, ಅವುಗಳಲ್ಲಿ ಆಂಟಿಕ್ ಮಾಟಿಗಳು ಪ್ರಾಮುಖ್ಯತೆ ಪಡೆದುಕೊಂಡಿವೆ. ಇನ್ನು, ಸಾಮಾನ್ಯವಾಗಿ ಎರಡು ಬಗೆಯ ಮಾಟಿಗಳು ದೊರೆಯುತ್ತವೆ. ಅವುಗಳಲ್ಲಿ, ಕೂದಲಿಗೆ ಸಿಕ್ಕಿಸುವ ಮಾಟಿಗಳು ಹಾಗೂ ಕಿವಿಯ ಮುಂದಿನ ಭಾಗದಿಂದ ಕಿವಿಯ ಓಲೆಯ ಹಿಂದಿನ ಭಾಗಕ್ಕೆ ಸಿಕ್ಕಿಸುವ ಮಾಟಿಗಳು ದೊರೆಯುತ್ತವೆ. ಕೂದಲಿಗೆ ಸಿಕ್ಕಿಸುವಂತವು ಹೇರ್‌ಸ್ಟೈಲನ್ನು ಹೈಲೈಟ್ ಮಾಡುತ್ತವೆ. ಕಿವಿಯಿಂದ ಹಿಂದಿನ ಓಲೆಯ ಭಾಗಕ್ಕೆ ಧರಿಸುವಂತವು ಸಿಂಪಲ್ಲಾಗಿ ಕಾಣುತ್ತವೆ. ಒಟ್ಟಿನಲ್ಲಿ, ಮಹಿಳೆಯರಿಗೆ ಟ್ರೆಡಿಷನಲ್ ಲುಕ್ ನೀಡುತ್ತವೆ ಎನ್ನುತ್ತಾರೆ ಜ್ಯುವೆಲ್ ಡಿಸೈನರ್ ದಿಯಾ.
ಪರ್ಲ್ ಲೇಯರ್ ಮಾಟಿ
ಮೂರ್ನಾಲ್ಕು ಸಾಲುಗಳ ಮುತ್ತಿನ ಎಳೆಗಳಿರುವ ಪರ್ಲ್ ಮಾಟಿಯು ಇಂದು ಮದುಮಗಳನ್ನು ಮಾತ್ರವಲ್ಲ, ಇತರೇ ಮಹಿಳೆಯರನ್ನು ಸೆಳೆದಿದೆ. ಮುತ್ತಿನ ಎಳೆಗಳಿರುವಂತವು ಇಂದು ಹೆಚ್ಚು ಬೇಡಿಕೆ ಪಡೆದುಕೊಂಡಿವೆ.
ಹರಳಿನ ಮಾಟಿ
ಇದು ಹಳೆಯ ಕಾಲದ ಡಿಸೈನ್‌ನ ಮಾಟಿಯಿದು. ಅಜ್ಜಿ ಕಾಲದ ಮಾಟಿ ಎಂದು ಕರೆಯಲಾಗುತ್ತಾದರೂ ಇದೀಗ ಚಾಲ್ತಿಯಲ್ಲಿರುವ ಟ್ರೆಡಿಷನಲ್ ಜ್ಯುವೆಲರಿಗಳಲ್ಲಿ ಇವು ಒಂದಾಗಿವೆ. ಕಿವಿಯ ಮುಂದಿನಿಂದ, ಓಲೆಯ ಹಿಂದಿನವರೆಗೆ ಎಳೆದು ಧರಿಸಲಾಗುತ್ತದೆ.
ಸಾದಾ ಗೋಲ್ಡ್ ಮಾಟಿ
ಸಾದಾ ಡಿಸೈನ್‌ನ ಮಾಟಿಗಳಲ್ಲಿ ನಾನಾ ಡಿಸೈನ್‌ನವು ಲಭ್ಯ. ಕೆಲವು ಸಾದಾ ಚೈನ್‌ನೊಂದಿಗೆ ಬೀಡ್ಸ್ ಡಿಸೈನ್ ಹೊಂದಿರುತ್ತವೆ. ಇಲ್ಲವೇ ಡಿಸ್ಕೋ ಚೈನ್, ರೋಪ್ ಚೈನ್ ಸೇರಿದಂತೆ ನಾನಾ ವಿನ್ಯಾಸದಲ್ಲಿ ದೊರೆಯುತ್ತವೆ.
ಇದನ್ನೂ ಓದಿ: Kangana Ranaut Saree Fashion: ದೇಸಿ ಸೀರೆ ನೇಯ್ದ ನೇಕಾರರಿಗೆ ಥ್ಯಾಂಕ್ಸ್ ಹೇಳಿದ ಕಂಗನಾ ರಣಾವತ್!
ಮಾಟಿ ಪ್ರಿಯರಿಗೆ ಟಿಪ್ಸ್
- ಕಿವಿಗೆ ಹೊಂದುವಂತಹ ಡಿಸೈನ್ನವನ್ನು ಆಯ್ಕೆ ಮಾಡಿ.
- ಚಿಕ್ಕ ಕಿವಿಗೆ ಲೇಯರ್ ಮಾಟಿ ಧರಿಸಿ. ಅಂದವಾಗಿ ಕಾಣಿಸುವುದು.
- ದೊಡ್ಡ ಕಿವಿಗೆ ಆದಷ್ಟೂ ಸ್ಟೋನ್ಸ್ ಡಿಸೈನ್ನವನ್ನು ಧರಿಸಿ.
( ಲೇಖಕಿ ಫ್ಯಾಷನ್ ಪತ್ರಕರ್ತೆ )