Site icon Vistara News

Wedding Trend | ಮದುವೆಯ ಅರಿಶಿಣ ಶಾಸ್ತ್ರಕ್ಕೂ ಬಂತು ಡ್ರೆಸ್‌ಕೋಡ್‌

Wedding Trend

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮದುವೆಯ ಮುನ್ನ ನಡೆಯುವ ಅರಿಶಿಣ ಶಾಸ್ತ್ರಕ್ಕೂ ಡ್ರೆಸ್‌ಕೋಡ್‌ (Wedding Trend) ಎಂಟ್ರಿ ನೀಡಿದೆ. ಮೊದಲೆಲ್ಲಾ ಖಾಸಗಿಯಾಗಿದ್ದ ಅರಿಶಿಣ ಶಾಸ್ತ್ರ ಇದೀಗ ಹೊಸ ರೂಪ ಪಡೆದುಕೊಂಡಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆಲ್ಲರಿಗೂ ಡ್ರೆಸ್‌ಕೋಡ್‌ ಬಂದಿದೆ. ನೋಡಲು ಒಂದೇ ರೀತಿ ಕಾಣುವಂತೆ ಬಿಂಬಿಸುವ ಈ ಡ್ರೆಸ್‌ಕೋಡ್‌ನಲ್ಲಿ ಹಳದಿ ಹಾಗೂ ಸನ್‌ ಕಲರ್‌ಗೆ ಪ್ರಾಧಾನ್ಯತೆ ನೀಡಲಾಗಿದೆ.

ಏನಿದು ಅರಿಶಿಣಶಾಸ್ತ್ರದ ಡ್ರೆಸ್‌ಕೋಡ್‌?
ಸಾಮಾನ್ಯವಾಗಿ ಮದುಮಗ ಹಾಗೂ ಮದುಮಗಳ ಮನೆಯಲ್ಲಿ ಈ ಅರಿಶಿಣ ಶಾಸ್ತ್ರದ ಕಾರ್ಯಕ್ರಮಗಳು ನಡೆಯುತ್ತವೆ. ಅಂತಹ ಸಮಯದಲ್ಲಿ ಇಬ್ಬರಿಗೂ ಕುಟುಂಬದವರು ಹಾಗೂ ಆಪ್ತ ವಲಯದವರು ಅರಿಶಿಣ ಹಚ್ಚುವುದು ಕಾಮನ್‌. ಈ ಸಂದರ್ಭದಲ್ಲಿ ಸೂಟ್‌ ಆಗುವಂತಹ ಅರಿಶಿಣ ವರ್ಣದ ಅಂದರೆ, ಯೆಲ್ಲೊ ಅಥವಾ ಸನ್‌ ಕಲರ್‌ನ ಉಡುಪುಗಳನ್ನು ಧರಿಸುವುದು ಯೂನಿಫಾರ್ಮಿಟಿ ಫಾಲೋ ಮಾಡುವುದು ಇತ್ತೀಚಿನ ಟ್ರೆಂಡ್‌ಗಳಲ್ಲೊಂದಾಗಿದೆ ಎನ್ನುತ್ತಾರೆ ಸ್ಟೈಲಿಸ್ಟ್‌. ಇನ್ನು, ಈ ಹಿಂದೆ ಮದುಮಗ ಹಾಗೂ ಮದುಮಗಳು ಮಾತ್ರ ಶ್ವೇತ ವರ್ಣದ ಇಲ್ಲವೇ ಯೆಲ್ಲೋ ವರ್ಣದ ಎಥ್ನಿಕ್‌ ಉಡುಪುಗಳನ್ನು ಧರಿಸುತ್ತಿದ್ದರು. ಇದೀಗ ಈ ಶಾಸ್ತ್ರಕ್ಕೆ ಬರುವ ಅತಿಥಿಗಳು ಕೂಡ ಈ ವರ್ಣದ ಎಥ್ನಿಕ್‌ ಉಡುಪು ಧರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಕಡ್ಡಾಯವಾಗಿದೆ.

ಇದನ್ನೂ ಓದಿ Business success |‌ 10,000 ರೂ.ನಿಂದ ಆರಂಭವಾದ ಶರ್ಟ್‌ ಮಾರಾಟ ಈಗ 400 ಕೋಟಿ ರೂ. ಫ್ಯಾಷನ್‌ ಬ್ರಾಂಡ್!

ಸನ್‌ ಕಲರ್‌ ಎಥ್ನಿಕ್‌ ಉಡುಪುಗಳು
ಡಿಸೈನರ್‌ ಹರ್ಷ್ ಹೇಳುವಂತೆ, ಪುರುಷರು ಈ ಸಂದರ್ಭಕ್ಕೆ ಮ್ಯಾಚ್‌ ಆಗುವಂತಹ ಕುರ್ತಾ-ಪೈಜಾಮ, ಜುಬ್ಬಾ –ಪೈಜಾಮ ಅಥವಾ ಕಾಟನ್‌ ಅಥವಾ ಸಿಲ್ಕ್‌ ಶರ್ಟ್ ಜತೆಗೆ ಪಂಚೆ ಧರಿಸಬಹುದು. ಇನ್ನು ಹೆಣ್ಣುಮಕ್ಕಳು ಸೀರೆ ಧರಿಸಬಹುದು. ಕಷ್ಟವೆನಿಸಿದರೇ, ಕುರ್ತಾ ಇಲ್ಲವೇ, ದಾವಣಿ-ಲಂಗ, ಉದ್ದ-ಲಂಗದಂತಹ ಎಥ್ನಿಕ್‌ ಸ್ಕರ್ಟ್ ಧರಿಸಬಹುದು. ಆದರೆ, ಇವೆಲ್ಲವೂ ಯೆಲ್ಲೊ ಶೇಡ್‌ನದ್ದಾಗಿರಬೇಕು ಎನ್ನುತ್ತಾರೆ. ಅವರ ಪ್ರಕಾರ, ಸನ್‌ಕಲರ್ ಉಡುಪುಗಳು ಇಡೀ ಕಾರ್ಯಕ್ರಮದ ಸೊಬಗನ್ನು ಹೆಚ್ಚಿಸುತ್ತವೆ. ನೋಡಲು ಆಹ್ಲಾದಕರವೆನಿಸುತ್ತವೆ.

ವಧು-ವರನ ಡ್ರೆಸ್‌ಕೋಡ್‌ ಹೀಗಿರಲಿ
ವಧು-ವರನ ಅಂದಿನ ಡ್ರೆಸ್‌ಕೋಡ್‌ ಆದಷ್ಟೂ ಲೈಟ್‌ವೇಟ್‌ನದ್ದಾಗಿರಲಿ. ಎಲ್ಲದಕ್ಕಿಂತ ಹೆಚ್ಚಾಗಿ ಹೆಚ್ಚು ದುಬಾರಿಯಾಗಿರುವುದನ್ನು ಆವಾಯ್ಡ್‌ ಮಾಡುವುದು ಉತ್ತಮ. ಯಾಕೆಂದರೆ, ಶಾಸ್ತ್ರದ ನಂತರ ಬಳಸಲಾಗದು. ಬಣ್ಣ ಹಾಗೂ ನೀರಿನಿಂದ ಒದ್ದೆಯಾದ ಉಡುಪು ಒಂದೇ ಬಾರಿಗೆ ಮಾತ್ರ ಎಂಬುದು ನೆನಪಿನಲ್ಲಿರಲಿ. ಹಾಗಾಗಿ ಹೆಚ್ಚು ಬೆಲೆಯ ದುಬಾರಿ ಡಿಸೈನರ್‌ವೇರ್‌ ಧರಿಸುವುದು ನಾಟ್‌ ಓಕೆ ಎನ್ನುತ್ತಾರೆ ಸ್ಟೈಲಿಸ್ಟ್ಗಳು.

ಡ್ರೆಸ್‌ಕೋಡ್‌ ಆಯ್ಕೆಗೆ ಒಂದಿಷ್ಟು ಟಿಪ್ಸ್‌

ಇದನ್ನೂ ಓದಿ | ಈ ಫ್ಯಾಷನ್‌ ಪ್ರಿಯ ಆಮೆಗೆ ಕಪ್ಪು ಶೂ ಕಂಡರೆ ಕೆಂಡಾಮಂಡಲ ಕೋಪ!

Exit mobile version