-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಿಸ್ಟರ್ ಕರ್ನಾಟಕ ಟೈಟಲ್ ವಿಜೇತ ಧೀಮಂತ್ ಈಗಾಗಾಲೇ ಮಾಡೆಲಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿರುವ ಹುಡುಗ. ಮಿಸ್ಟರ್ ಸೌತ್ ಇಂಡಿಯಾ ಟೈಟಲ್ ಗೆದ್ದ ನಂತರ, ಮಿಸ್ಟರ್ ಇಂಡಿಯಾ ಸ್ಪರ್ಧೆಯ ಫೈನಲ್‌ವರೆಗೂ ಹೋಗಿ ಬಂದ ಕನ್ನಡಿಗ. ಪ್ರೊಫೆಷನಲ್ ಮಾಡೆಲ್ ಹಾಗೂ ನಟ ಮಾತ್ರವಲ್ಲ, ಫ್ಯಾಷನ್ ಕೊರಿಯಾಗ್ರಾಫರ್ ಕೂಡ. ಜಾಹೀರಾತು ಕ್ಷೇತ್ರದಲ್ಲೂ ಕಾರ್ಯನಿರ್ವಹಿಸಿರುವ ಧೀಮಂತ್ ಇದೀಗ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಈ ಬಾರಿಯ ವಿಸ್ತಾರದ ವೀಕೆಂಡ್ ಸ್ಟೈಲ್‌ನಲ್ಲಿ (Weekend Style) ತಮ್ಮ ಸ್ಟೈಲ್, ಫೆಸ್ಟೀವ್ ಫ್ಯಾಷನ್ ಬಗ್ಗೆ ಮಾತನಾಡಿದ್ದಾರೆ.
ಮಾಡೆಲ್‌ಗಳ ಫ್ಯಾಷನ್ ಸ್ಟೇಟ್‌ಮೆಂಟ್ ಇತರರಿಗಿಂತ ಹೇಗೆ ಭಿನ್ನ?
ಪ್ರತಿ ಮಾಡೆಲ್‌ಗಳಲ್ಲಿ ಅಡಕವಾಗಿರುವ ಆತ್ಮವಿಶ್ವಾಸ ಹಾಗೂ ಪ್ರೊಫೆಷನಲಿಸಂ ಮತ್ತಷ್ಟು ಆಕರ್ಷಕವಾಗಿ ಬಿಂಬಿಸುತ್ತದೆ. ಪ್ರತಿ ಮಾಡೆಲ್‌ಗೂ ತನ್ನದ್ದೇ ಆದ ಫ್ಯಾಷನ್ ಸ್ಟೇಟ್‌ಮೆಂಟ್‌ಗಳಿರುತ್ತವೆ. ಅದು ಕ್ಯಾಶುವಲ್ ಆಗಿರಬಹುದು ಇಲ್ಲವೇ ಬಿಂದಾಸ್ ವೆಸ್ಟರ್ನ್ ಔಟ್‌ಫಿಟ್‌ನದ್ದಾಗಿರಬಹುದು. ಇನ್ನು ಸಾಮಾನ್ಯರು ಇಷ್ಟೆಲ್ಲಾ ಗಮನದಲ್ಲಿಟ್ಟುಕೊಳ್ಳುವುದಿಲ್ಲ. ಅವರವರ ಪ್ರೊಫೆಷನ್‌ಗೆ ತಕ್ಕಂತೆ ರೂಢಿಸಿಕೊಂಡಿರುತ್ತಾರೆ ಎನ್ನಬಹುದು.
ಇದನ್ನೂ ಓದಿ | Fashion Show | ನಿಫ್ಟ್ ಹ್ಯಾಂಡ್‌ಲೂಮ್ ಫ್ಯಾಷನ್ ಶೋ
ಈ ಹಬ್ಬದ ಸೀಸನ್‌ನಲ್ಲಿ ನಿಮ್ಮ ಸ್ಟೈಲ್ ಸ್ಟೇಟ್‌ಮೆಂಟ್ ಏನು?
ನಮ್ಮತನವನ್ನು ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಈ ಹಬ್ಬಗಳಲ್ಲಿ ಕಂಪ್ಲೀಟ್ ಎಥ್ನಿಕ್‌ವೇರ್‌ಗೆ ಶರಣಾಗುತ್ತೇನೆ. ಹುಡುಗರೆಂದಾಕ್ಷಣಾ ಕೇವಲ ಜೀನ್ಸ್‌ನಲ್ಲೆ ಹಬ್ಬ-ಹರಿದಿನಗಳನ್ನು ಆಚರಿಸಲಾಗದು. ಕುಟುಂಬದೊಂದಿಗೆ ಆಯಾ ಹಬ್ಬಕ್ಕೆ ಸೂಟ್ ಆಗುವಂತಹ ಎಥ್ನಿಕ್‌ವೇರ್‌ಗಳನ್ನು ಧರಿಸಿ ಸೆಲೆಬ್ರೇಟ್ ಮಾಡುವುದು ರೂಢಿಯಾಗಿದೆ.
ಹುಡುಗರಿಗೆ ಹಬ್ಬದ ಉಡುಪು ಆಯ್ಕೆ ಮಾಡಲು ಏನು ಸಲಹೆ ನೀಡುತ್ತೀರಾ?
ಪರ್ಸನಾಲಿಟಿಗೆ ತಕ್ಕಂತೆ ಎಥ್ನಿಕ್‌ವೇರ್ ಆಯ್ಕೆ ಮಾಡಿ. ಯಾಕೆಂದರೇ, ಎಲ್ಲವೂ ಎಲ್ಲರಿಗೂ ಸೂಟ್ ಆಗದು. ನಿಮ್ಮ ಎತ್ತರಕ್ಕೆ ತಕ್ಕಂತೆ ಎಥ್ನಿಕ್ ಡಿಸೈನರ್‌ವೇರ್ ಧರಿಸುವುದು ಉತ್ತಮ. ಇಲ್ಲವಾದಲ್ಲಿ ನೋಡಲು ಅಭಾಸ ಉಂಟಾಗಬಹುದು. ಮನೆಯಲ್ಲಿ ಆಚರಿಸುವ ಹಬ್ಬಗಳಿಗೆ ಆದಷ್ಟೂ ಪಂಚೆ-ಶಲ್ಯ ಹಾಗೂ ಜುಬ್ಬಾದಂತವನ್ನು ಧರಿಸಿ.
ಈ ಕ್ಷೇತ್ರದಲ್ಲಿ ಮುನ್ನೆಡೆಯಲು ಬಯಸುವ ಭಾವಿ ಮಾಡೆಲ್‌ಗಳಿಗೆ ಏನು ಹೇಳುತ್ತೀರಾ?
ಮಾಡೆಲಿಂಗ್ ಕ್ಷೇತ್ರ ಹೊರಗಿನಿಂದ ನೋಡಲು ಕಲರ್‌ಫುಲ್ ಆಗಿರಬಹುದು. ಅಷ್ಟೇ ಹಾರ್ಡ್ವರ್ಕ್ ಅಗತ್ಯ. ಆತ್ಮವಿಶ್ವಾಸವನ್ನುಮೊದಲು ಬೆಳೆಸಿಕೊಳ್ಳಬೇಕು. ಎಲ್ಲದಕ್ಕಿಂತ ಹೆಚ್ಚಾಗಿ ಯಾವುದೇ ರ್ಯಾಂಪ್ ಆದರೂ ಸರಿಯೇ ಪ್ರೊಫೆಷನಲಿಸಂ ಬೆಳೆಸಿಕೊಂಡು ವಾಕ್ ಮಾಡಬೇಕು. ಎಲ್ಲದಕ್ಕಿಂತ ಹೆಚ್ಚಾಗಿ ವ್ಯಕ್ತಿತ್ವವನ್ನು ರೂಪಿಸುವ ಐಡೆಂಟಿಟಿಗೆ ತಕ್ಕನಾಗಿ ಔಟ್‌ಫಿಟ್ ಧರಿಸಬೇಕು.
ಇದನ್ನೂ ಓದಿ | Fashion Show | ನಿಫ್ಟ್ ಹ್ಯಾಂಡ್‌ಲೂಮ್ ಫ್ಯಾಷನ್ ಶೋ