ಶೀಲಾ ಸಿ. ಶೆಟ್ಟಿ, ಬೆಂಗಳೂರು
ಫ್ಯಾಷನ್ ಹಾಗೂ ಸ್ಟೈಲನ್ನು ಪ್ರತಿ ಬಾರಿಯೂ ಬ್ಯೂಟಿಫುಲ್ ಆಗಿ ಪ್ರೆಸೆಂಟ್ ಮಾಡುವುದು ಎಲ್ಲರಿಂದಲೂ ಸಾಧ್ಯವಿಲ್ಲ. ಆದರೆ ಮಾಡೆಲ್, ಮೋಟಿವೇಷನಲ್ ಸ್ಪೀಕರ್ ಹಾಗೂ ಫಿಲ್ಮ್ ಮೇಕರ್ ವಿಸ್ಮಯಾ ಗೌಡ ಮಾತ್ರ ಎಲ್ಲಾ ಸನ್ನಿವೇಶದಲ್ಲೂ ಫ್ಯಾಷೆನಬಲ್ ಆಗಿ ಕಾಣಿಸಿಕೊಳ್ಳುತ್ತಾರೆ. ಸಂದರ್ಭ ಹಾಗೂ ಸನ್ನಿವೇಶಕ್ಕೆ ತಕ್ಕಂತೆ ಪರ್ಫೆಕ್ಟ್ ಆಗಿ ಬದಲಾಗುತ್ತಾರೆ. ಈ ಬಾರಿಯ ವೀಕೆಂಡ್ ಸ್ಟೈಲ್‌ನಲ್ಲಿ (Weekend style) ಅವರು ತಮ್ಮ ಸೀಸನ್ ಫ್ಯಾಷನ್, ಸೆಲ್ಫ್ ಲವ್ ಹಾಗೂ ಸ್ಟೈಲ್ ಬಗ್ಗೆ ಮಾತನಾಡಿದ್ದಾರೆ.
ಸದಾ ಫ್ಯಾಷೆನಬಲ್ ಆಗಿ ಕಾಣಿಸಿಕೊಳ್ಳುವ ನಿಮ್ಮ ಫ್ಯಾಷನ್ ಮಂತ್ರ ಏನು?
ನನ್ನ ಪ್ರಕಾರ, ನಮ್ಮ ವ್ಯಕ್ತಿತ್ವಕ್ಕೆ ತಕ್ಕಂತೆ ಸಿಂಗರಿಸಿಕೊಳ್ಳುವುದು. ಇನ್ನು ನಮ್ಮನ್ನು ನಾವು ಪ್ರೀತಿಸಿದಾಗ ಮಾತ್ರ ಆಕರ್ಷಕವಾಗಿ ಕಾಣಲು ಸಾಧ್ಯ. ಇದನ್ನು ಸೆಲ್ಫ್ ಲವ್ ಎನ್ನಬಹುದು. ನಮ್ಮ ಬಾಡಿ ಲಾಂಗ್ವೇಜ್‌ಗೆ ತಕ್ಕಂತೆ ಆತ್ಮವಿಶ್ವಾಸದಿಂದ ಕಂಫರ್ಟಬಲ್ ಆಗಿ ಉಡುಪುಗಳನ್ನು ಧರಿಸುವುದು. ಎಲ್ಲದಕ್ಕಿಂತ ಹೆಚ್ಚಾಗಿ ಬೇರೆಯವರನ್ನು ಇಂಪ್ರೆಸ್ ಮಾಡುವುದಕ್ಕಿಂತ ನಮಗೆ ಇಷ್ಟವಾಗುವಂತೆ ಬಿಂಬಿಸಿಕೊಳ್ಳುವುದು ನನ್ನ ಫ್ಯಾಷನ್ ಮಂತ್ರ.
ಇದನ್ನೂ ಓದಿ | Winter Fashion | ಚಳಿಗಾಲದ ಗ್ಲಾಮರಸ್ ಫ್ಯಾಷನ್ಗೆ ಎಂಟ್ರಿ ಕೊಟ್ಟ ಬೂಟ್ಸ್
ನಿಮ್ಮ ಸ್ಟೈಲ್ ಸ್ಟೇಟ್‌ಮೆಂಟ್ ಬಗ್ಗೆ ವಿವರಿಸಿ
ಆಯಾ ಸನ್ನಿವೇಶಕ್ಕೆ ತಕ್ಕಂತೆ ಬದಲಾಗುವುದು ನನ್ನ ಸ್ಟೈಲ್ ಸ್ಟೇಟ್‌ಮೆಂಟ್‌ನಲ್ಲಿ ಸೇರುತ್ತದೆ. ಧರಿಸುವ ಉಡುಪಿಗೆ ತಕ್ಕಂತೆ ಹೇರ್‌ಸ್ಟೈಲ್, ಆಕ್ಸೆಸರೀಸ್ ಧರಿಸುವುದು ಸೇರಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಕಂಫರ್ಟನಲ್ ಫ್ಯಾಷನ್ ನನ್ನ ಸ್ಟೈಲ್‌ಸ್ಟೇಟ್‌ಮೆಂಟ್‌ನ ಮೊದಲ ಸ್ಥಾನದಲ್ಲಿದೆ.
ಮಾಡೆಲ್, ಮೋಟಿಫೇಷನಲ್ ಸ್ಪೀಕರ್ ಹಾಗೂ ಫಿಲ್ಮ್ ಮೇಕರ್ ಆಗಿರುವ ನೀವು ಲೈಫ್‌ಸ್ಟೈಲ್‌ಗೆ ತಕ್ಕಂತೆ ಹೇಗೆ ಬದಲಾಗುತ್ತೀರಾ?
ಹಾಗೇನಿಲ್ಲ! ಶಾಪಿಂಗ್ ಹೋಗುವಾಗ ಬಿಂದಾಸ್ ಸ್ಟೈಲ್‌ನಲ್ಲಿ ಕಾಣಿಸಿಕೊಳ್ಳುತ್ತೇನೆ. ದೇವಸ್ಥಾನಕ್ಕೆ ಹೋಗುವಾಗ ಸೀರೆಯಲ್ಲಿ, ಇತರೆ ಸಮಾರಂಭಗಳಿಗೆ ಹೋಗುವಾಗ ಅಲ್ಲಿನ ಥೀಮ್‌ಗೆ ತಕ್ಕಂತೆ ಬದಲಾಗುತ್ತೇನೆ.
ವಿಂಟರ್‌ಕೇರ್‌ಗೆ ಯಾವ ೩ ಸಲಹೆ ನೀಡುವೀರಿ?
ಮೊದಲಿಗೆ ಮಾಯಿಶ್ಚರೈಸರ್ ಬಳಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ತ್ವಚೆಯ ಆರೋಗ್ಯ ಕಾಪಾಡಿಕೊಳ್ಳಿ. ವೆಸ್ಟರ್ನ್ ಔಟ್‌ಫಿಟ್ಸ್ ಹಾಗೂ ಬೂಟ್ಸ್ ಬಳಸಿ.
ಮಾಡೆಲ್‌ಗಳಾಗುವುದರಿಂದ ಆಗುವ ಲಾಭವೇನು?
ಆರೋಗ್ಯಕರ ಲೈಫ್‌ಸ್ಟೈಲ್ ರೂಢಿಸಿಕೊಳ್ಳಲು ಸಹಾಯವಾಗುತ್ತದೆ. ಪ್ರತಿನಿತ್ಯ ವರ್ಕೌಟ್, ಡಯಟ್, ಸೆಲ್ಫ್ ಲವ್, ಆರೋಗ್ಯಕರ ಲೈಫ್‌ಸ್ಟೈಲ್ ಅಳವಡಿಸಿಕೊಳ್ಳಲು ಸಹಾಯವಾಗುತ್ತದೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ | Weekend style | ನಮ್ಮತನ ಬಿಂಬಿಸುವುದೇ ಫ್ಯಾಷನ್ ಎನ್ನುತ್ತಾರೆ ಡಾ. ಸಂಗೀತಾ ಹೊಳ್ಳ