– ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಾಡೆಲ್ ಆಗಿದ್ದ ಸುಮನಾ ಗೌಡ ಇದೀಗ ಸಿನಿಮಾ ಕ್ಷೇತ್ರದಲ್ಲಿ ಕಂಪ್ಲೀಟ್ ಬ್ಯುಸಿ. ಹೀಗೆ ಎರಡು ಕ್ಷೇತ್ರದಲ್ಲೂ ತೊಡಗಿಸಿಕೊಂಡಿರುವ ಸುಮನಾ ಗೌಡ, ಫ್ಯಾಷನ್ ಲವರ್ ಕೂಡ. ಹಾಗೆಂದು ಟ್ರೆಂಡ್ ಫಾಲೋ ಮಾಡುವವರಲ್ಲ. ತಮ್ಮದೇ ಆದ ಸ್ಟೈಲ್‌ಸ್ಟೇಟ್‌ಮೆಂಟ್ ಹೊಂದಿರುವವರು. ಈ ಬಗ್ಗೆ ಅವರು ಈ ಬಾರಿಯ ವೀಕೆಂಡ್ ಸ್ಟೈಲ್‌ನಲ್ಲಿ (Weekend style) ಮಾತನಾಡಿದ್ದಾರೆ.
ನಿಮ್ಮ ಫ್ಯಾಷನ್ ಮಂತ್ರ ಏನು?
ಫ್ಯಾಷನ್ ಎಂದರೆ ಉಡುಪಿನ ಬಜೆಟ್ ಬಗ್ಗೆ ಯೋಚಿಸುವುದಲ್ಲ. ನಮ್ಮ ಬಾಡಿ ಮಾಸ್ ಇಂಡೆಕ್ಸ್‌ಗೆ ಸೂಟ್ ಆಗುವಂತೆ ಫ್ಯಾಷೆನಬಲ್ ಉಡುಪುಗಳನ್ನು ಧರಿಸುವುದು ಹಾಗೂ ನೋಡಲು ಆಕರ್ಷಕವಾಗಿ ಕಾಣುವುದು. ಇನ್ನು ನಮ್ಮ ಆತ್ಮವಿಶ್ವಾಸ ಹಾಗೂ ಐಡೆಂಟಿಟಿಯನ್ನು ಪ್ರತಿಬಿಂಬಿಸುವುದೇ ಫ್ಯಾಷನ್. ಫ್ಯಾಷನ್ ಜತೆಜತೆಗೆ ಮುಖದ ಮೇಲೆ ಒಂದು ಬ್ಯೂಟಿಫುಲ್ ಸ್ಮೈಲ್ ಇದ್ದರೇ ಸಾಕು, ಕಂಪ್ಲೀಟ್ ಫ್ಯಾಷನ್ ಲುಕ್ ನಮ್ಮದಾಗುವುದು. ಇದೇ ನನ್ನ ಫ್ಯಾಷನ್ ಮಂತ್ರ.
ನಿಮ್ಮ ಸ್ಟೈಲ್‌ಸ್ಟೇಟ್‌ಮೆಂಟ್ ಇತರರಿಗಿಂತ ಭಿನ್ನ ಹೇಗೆ? ಏಕೆ?
ನಾವು ಏನನ್ನು ಧರಿಸುತ್ತೇವೆ ಹಾಗೂ ಹೇಗೆ ಕಾಣಿಸುತ್ತೇವೆ ಎನ್ನುವ ಆಧಾರದ ಮೇಲೆ ನಮ್ಮ ಸ್ಟೈಲ್ ಸ್ಟೇಟ್‌ಮೆಂಟ್ ಬಗ್ಗೆ ಹೇಳಬಹುದು. ನಮ್ಮ ಹೃದಯ ಹಾಗೂ ಮನಸ್ಸಿಗೆ ಖುಷಿಯಾಗುವ ಸ್ಟೈಲ್ ಸ್ಟೇಟ್‌ಮೆಂಟ್ ನಮ್ಮದಾಗಬೇಕೇ ಹೊರತು ತೋರ್ಪಡಿಕೆಗಲ್ಲ!ಎಂಬುದನ್ನು ನೆನಪಿನಲ್ಲಿಟ್ಟುಕೊಂಡಿರಬೇಕು. ಸ್ಟೈಲ್ ಸ್ಟೇಟ್‌ಮೆಂಟ್ ನಮ್ಮ ಐಡೆಂಟಿಟಿಗೆ ಸಾಕ್ಷಿಯಾಗಬೇಕು. ಎಲ್ಲರಿಗೂ ಪ್ರಿಯವಾಗಬೇಕು. ಗೌರವ ಮೂಡಬೇಕು.
ನೀವು ಟ್ರೆಂಡ್ ಫಾಲೋ ಮಾಡುತ್ತೀರಾ? ಮಾಡಿದಲ್ಲಿ ಅದು ಯಾಕೆ? ಹೇಗೆ ಡಿಸೈಡ್ ಮಾಡುತ್ತೀರಾ?
ನಾನು ಯಾವುದೇ ಟ್ರೆಂಡ್ ಫಾಲೋ ಮಾಡುವುದಿಲ್ಲ. ಯಾಕೆಂದರೆ, ಯಾವುದೇ ಟ್ರೆಂಡ್ ಆಯಾ ಬ್ರಾಂಡ್‌ನ ಬ್ಯುಸಿನೆಸ್ ಮೇಲೆ ನಿರ್ಧರಿತವಾಗಿರುತ್ತದೆ. ನಾನು ಸೀಸನ್‌ವೈಸ್ ಫ್ಯಾಷನ್ ಪಾಲೋ ಮಾಡುತ್ತೇನೆ. ಇದು ನೋಡಲು ಮಾತ್ರವಲ್ಲ, ಹವಮಾನಕ್ಕೆ ತಕ್ಕಂತೆ ಡಿಸೈಡ್ ಆಗಿರುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ಸೀಸನ್‌ವೈಸ್ ನಾವು ಫ್ಯಾಷನ್ ಮಾಡಿದಾಗ ಅದು ಕಾಲಕ್ಕೆ ತಕ್ಕಂತೆ ಸೂಟ್ ಆಗುತ್ತದೆ.
ಫ್ಯಾಷನ್ ಜತೆಜತೆಗೆ ಬಾಡಿಲಾಂಗ್ವೇಜ್ ಕೂಡ ಮುಖ್ಯವಾ?
ಖಂಡಿತ. ನಮ್ಮ ಸಿಂಪ್ಲಿಸಿಟಿ ಕೂಡ ನಮ್ಮ ಫ್ಯಾಷನ್ ಹಾಗೂ ಸ್ಟೈಲನ್ನು ಪ್ರತಿಬಿಂಬಿಸುತ್ತದೆ. ಮುಖದಲ್ಲಿ ಕಳೆ ಹೆಚ್ಚಿಸುತ್ತದೆ. ಹಾಗಾಗಿ ನಾನು ಸದಾ ಸಿಂಪಲ್ ಆಗಿರಲು ಇಷ್ಟಪಡುತ್ತೇನೆ.
ಫೆಸ್ಟೀವ್ ಸೀಸನ್ ಫ್ಯಾಷನ್ ಬಗ್ಗೆ ಹೇಳಿ?
ನಾನಂತೂ ಫೆಸ್ಟೀವ್ ಸೀಸನ್‌ನಲ್ಲಿ ಟ್ರೆಡಿಷನಲ್ ವೇರ್‌ಗೆ ಪ್ರಾಮುಖ್ಯತೆ ನೀಡುತ್ತೇನೆ. ಅದರಲ್ಲೂ ಸೀರೆಯನ್ನು ಇಷ್ಟಪಟ್ಟು ಉಡುತ್ತೇನೆ.
ಇದನ್ನೂ ಓದಿ | Navaratri Fashion | ನವರಾತ್ರಿ ಫ್ಯಾಷನ್‌ನಲ್ಲಿ ಟ್ರೆಂಡಿಯಾದ ದುರ್ಗಾ ದೇವಿ ವಿನ್ಯಾಸ