Site icon Vistara News

Winter Stockings Fashion | ವಿಂಟರ್‌ ಸೀಸನ್‌ ಡ್ರೆಸ್‌ಕೋಡ್‌ಗೆ ಸೇರಿದ ಟ್ರೆಂಡಿ ಸ್ಟಾಕಿಂಗ್ಸ್‌

Winter Stockings Fashion

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಈ ಬಾರಿಯ ವಿಂಟರ್‌ ಫ್ಯಾಷನ್‌ನಲ್ಲಿ ಸ್ಟಾಕಿಂಗ್ಸ್‌ ಫ್ಯಾಷನ್‌ ಮರಳಿದೆ. ಕೇವಲ ಒಂದೆರೆಡು ವರ್ಣಗಳಲ್ಲಿ ಲಭ್ಯವಿದ್ದ ಸ್ಟಾಕಿಂಗ್ಸ್‌ ಇಂದು ಕಲರ್‌ಫುಲ್‌ ಆಗಿವೆ. ನೋಡಲು ಮೊದಲಿಗಿಂತ ಗ್ಲಾಮರಸ್‌ ಲುಕ್‌ನಲ್ಲಿ ಫ್ಯಾಷನ್‌ ಪ್ರಿಯರ ಕಾಲುಗಳನ್ನು ಸಿಂಗರಿಸುತ್ತಿವೆ. ಸ್ಟಾಕಿಂಗ್ಸ್‌ ನೋಡಲು ಒಂದೇ ತರಹ ಕಂಡರೂ ಇವುಗಳಲ್ಲೂ ಸೈಜ್, ಕಲರ್‌ ಹಾಗೂ ಸ್ಟೈಲ್‌ ಆಧಾರಿತದ ಮೇಲೆ ನಾನಾ ಬಗೆಯವು ಲಭ್ಯ. “ಅಂದಹಾಗೆ ಎಲ್ಲಾ ಉಡುಪಿಗೆ ಸ್ಟಾಕಿಂಗ್ಸ್‌ ಧರಿಸಲು ಸಾಧ್ಯವಿಲ್ಲ. ವೆಸ್ಟರ್ನ್‌ ಕಾನ್ಸೆಪ್ಟ್‌ (Winter Stockings Fashion) ಉಡುಪುಗಳಿಗೆ ಮಾತ್ರ ಇವು ಸೂಟ್‌ ಆಗುತ್ತವೆ” ಎನ್ನುತ್ತಾರೆ ಸ್ಟೈಲಿಸ್ಟ್‌ ದಿಯಾ.

ಸ್ಲಿಮ್‌ ಸೀಮ್ಡ್‌ ಸ್ಟಾಕಿಂಗ್ಸ್‌
ಕಾಲುಗಳು ತೆಳ್ಳಗೆ ಕಾಣಿಸಬೇಕೆಂದು ಬಯಸುವವರಿಗಾಗಿ ಈ ಸ್ಟಾಕಿಂಗ್ಸ್‌ ಸರಿಯಾದ ಆಯ್ಕೆ. ಯಾಕೆಂದರೆ, ಈ ಶೈಲಿಯಲ್ಲಿಬ್ಲಾಕ್‌ ಬೆಸ್ಟ್‌. ಡಾರ್ಕ್‌ ವರ್ಣದ ಇವು ಬೆಳಕನ್ನು ಹೀರಿಕೊಂಡು ನೋಡುಗರಿಗೆ ಕಾಲು ತೆಳ್ಳಗೆ ಕಾಣಿಸುವಂತೆ ಬಿಂಬಿಸುತ್ತವೆ.

ಇದನ್ನೂ ಓದಿ | Star Winter Fashion | ವಾಷಿಂಗ್ಟನ್​ನಲ್ಲಿ ನಟಿ ನೇಹಾ ಶೆಟ್ಟಿಯ ಕ್ಲಾಸಿ ವಿಂಟರ್‌ ಫ್ಯಾಷನ್‌ ಝಲಕ್‌

ಫಿಶ್‌ನೆಟ್‌ ಸ್ಟಾಕಿಂಗ್ಸ್‌
ಡೈಮಂಡ್‌ ಶೇಪ್‌ನಲ್ಲಿರುವ ಫಿಶ್‌ನೆಟ್‌ ಸ್ಟಾಕಿಂಗ್ಸನ್ನು ಹೆಚ್ಚಾಗಿ ಕಾರ್ಸೆಟ್‌ ಶೈಲಿಯ ಉಡುಪನ್ನು ಧರಿಸುವವರು ಹೆಚ್ಚಾಗಿ ಧರಿಸುತ್ತಾರೆ. ಇವು ಕೂಡ ನೋಡಲು ನ್ಯೂ ಲುಕ್‌ ನೀಡುತ್ತವೆ. ಇವು ಕೂಡ ಕಾಲನ್ನು ಮಸ್ಕುಲಾರ್‌ ಇಲ್ಲವೇ ಸ್ಲೀಕ್‌ ಆಗಿ ಕಾಣಿಸಲು ಇವು ಸಹಾಯ ಮಾಡುತ್ತವೆ.

ಟ್ರೆಂಡಿ ನೈಲಾನ್‌ ಸ್ಟಾಕಿಂಗ್ಸ್‌
ನೈಲಾನ್‌ ಸ್ಟಾಕಿಂಗ್ಸ್‌ ಯಾವ ಮಟ್ಟಿಗೆ ಟ್ರೆಂಡಿಯಾಗಿವೆ ಎಂದರೇ ಇವುಗಳಲ್ಲಿ ನಾನಾ ಕಲರ್ಸ್‌ ಹಾಗೂ ವೆರೈಟಿ ಲಭ್ಯ. ಬ್ಲಾಕ್‌, ನ್ಯೂಡ್‌ ಹಾಗೂ ಗ್ರೇ ವರ್ಣಗಳಲ್ಲಿಲಭ್ಯವಿರುವ ಈ ಸ್ಟಾಕಿಂಗ್ಸ್‌ ಹೆಚ್ಚು ಬೇಡಿಕೆಯಲ್ಲಿದೆ. ಇನ್ನು ಶೀರ್‌ ಶೈಲಿಯ ಸ್ಟಾಕಿಂಗ್ಸ್‌ ಕೂಡ ಈಗ ಟ್ರೆಂಡ್‌ನಲ್ಲಿವೆ.

ಧರಿಸುವವರ ಪರ್ಸನಾಲಿಟಿಗೆ ತಕ್ಕಂತಿರಲಿ
ಅವರವರ ಪರ್ಸನಾಲಿಟಿಗೆ ತಕ್ಕಂತೆ ಸ್ಟಾಕಿಂಗ್ಸ್‌ ಧರಿಸುವುದು ಮುಖ್ಯ. ದಪ್ಪಗಿರುವವರು ಕೂಡ ಇವನ್ನು ಧರಿಸುವುದರಿಂದ ಕಾಲುಗಳು ತೆಳ್ಳಗೆ ಕಾಣಿಸಬಹುದು ಎನ್ನುತ್ತಾರೆ ಫ್ಯಾಷನಿಸ್ಟಾ ರಿಚಾ.

ಹೀಗಿರಲಿ ಸ್ಟಾಕಿಂಗ್ಸ್‌
ಲೈಟ್‌ ವರ್ಣದ ಶೂಗೆ ಅದಕ್ಕಿಂತ ಲೈಟ್‌ ವರ್ಣದ ಸ್ಟಾಕಿಂಗ್ಸ್‌ ಧರಿಸಕೂಡದು. ಇದಕ್ಕೆ ಡಾರ್ಕ್‌ ಮ್ಯಾಚ್‌ ಮಾಡಬೇಕು. ಇನ್ನು ಯಾವುದೇ ವರ್ಣಕ್ಕಾದರೂ ಅದರಲ್ಲೂಡಾರ್ಕ್‌ ವರ್ಣದ ಉಡುಪಿಗೆ ಸ್ಕಿನ್‌ ಕಲರ್‌ನ ಸ್ಟಾಕಿಂಗ್ಸ್‌ ಧರಿಸುವವರು ಹೆಚ್ಚು. ಇದು ಯೂನಿವರ್ಸಲ್‌ ಸ್ಟಾಕಿಂಗ್ಸ್‌ ಎನ್ನಬಹುದು. ಹುಡುಗಿಯರಿಂದಿಡಿದು ವಿವಾಹಿತರವರೆಗೂ ಈ ವರ್ಣವನ್ನು ಎಲ್ಲರೂ ಪ್ರಿಫರ್‌ ಮಾಡುತ್ತಾರೆ.

ಸ್ಟಾಕಿಂಗ್ಸ್‌ ಧರಿಸುವವರಿಗಾಗಿ…

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ | Stars Holiday Fashion | ಹೊಸ ವರ್ಷದ ಆರಂಭದಲ್ಲೆ ಹಾಲಿಡೇ ಫ್ಯಾಷನ್‌ ಟ್ರೆಂಡಿಯಾಗಿಸಿದ ಬಾಲಿವುಡ್‌ ತಾರೆಯರು

Exit mobile version