ಸಂದರ್ಶನ : ಶೀಲಾ ಸಿ. ಶೆಟ್ಟಿ
ಉದ್ಯಾನನಗರಿಯ ಫ್ಯಾಷನ್‌ಲೋಕದಲ್ಲಿ ಸದಾ ಮಹಿಳೆಯರೇ ಮುಂದೆ!
ಡಾ. ಸಂಗೀತಾ ಹೊಳ್ಳ ಫ್ಯಾಷನ್ ಪ್ರೇಮ
ಈಗಾಗಲೇ ತಾಜ್ ಮಿಸ್ ಯೂನಿವರ್ಸ್ 2022, ಮಿಸ್ ಕ್ವೀನ್, ಮಿಸ್ ಬೆಂಗಳೂರು ಸೇರಿದಂತೆ ಹಲವಾರು ಟೈಟಲ್‌ಗಳನ್ನು ತನ್ನದಾಗಿಸಿಕೊಂಡಿರುವ ಡಾ. ಸಂಗೀತಾ ಹೊಳ್ಳ, ಸದಾ ಒಂದಲ್ಲ ಒಂದು ಫ್ಯಾಷನ್ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಅವರ ಪ್ರಕಾರ, ಮಾಡೆಲ್‌ಗಳಿಗೆ ಫ್ಯಾಷನ್-ರ‍್ಯಾಂಪ್ ಜೀವನಶೈಲಿಯ ಒಂದು ಭಾಗವಿದ್ದಂತೆ. ಜಸ್ಟ್ ಐ ಲವ್ ಫ್ಯಾಷನ್ ವಲ್ರ್ಡ್ ಎನ್ನುತ್ತಾರೆ ಅವರು. “ಫ್ಯಾಷನ್ ಕ್ಷೇತ್ರ ಸದಾ ಹೊಸ ಹೊಸ ಮಾಡೆಲ್‌ಗಳನ್ನು ಕೈ ಬೀಸಿ ಕರೆಯುತ್ತಿರುತ್ತದೆ. ಯುವತಿಯರು ಈ ಅವಕಾಶವನ್ನು (Womens Day 2024) ಸದಪಯೋಗಪಡಿಸಿಕೊಳ್ಳಬೇಕಷ್ಟೇ!” ಎನ್ನುತ್ತಾರೆ.
ಮಾಡೆಲ್‌ಗಳ ನೆಚ್ಚಿನ ಸೆಲೆಬ್ರೆಟಿ ಡಿಸೈನರ್ ರೇಷ್ಮಾ
ಅತ್ಯಾಕರ್ಷಕ ಡಿಸೈನರ್‌ವೇರ್‌ಗಳ ಮೂಲಕ ತನ್ನದೇ ಆದ ಬಿಕಮಿಂಗ್ ಲೆಬೆಲ್ ಹೊಂದಿರುವ ಸೆಲೆಬ್ರೆಟಿ ಡಿಸೈನರ್ ರೇಷ್ಮಾ ಕುನ್ಹಿ ಟಾಪ್ ಡಿಸೈನರ್ ಲಿಸ್ಟ್‌ಗೆ ಸೇರಿದವರು. ಈಗಾಗಲೇ ಸಾಕಷ್ಟು ರಾಷ್ಟ್ರೀಯ ಅಂತರಾಷ್ಟ್ರೀಯ ರನ್‌ವೇ ಹಾಗೂ ಫ್ಯಾಷನ್ ವೀಕ್‌ಗಳಲ್ಲಿ ತಮ್ಮ ಡಿಸೈನರ್‌ವೇರ್‌ಗಳನ್ನು ಅನಾವರಣ ಮಾಡಿರುವ ರೇಷ್ಮಾ ಬೆಸ್ಟ್ ಡಿಸೈನರ್ ಎನ್ನಬಹುದು. ಅವರು ಹೇಳುವಂತೆ, ಫ್ಯಾಷನ್ ಕ್ಷೇತ್ರವು ಕೂಡ ಇದೀಗ ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ವೇದಿಕೆಯಾಗಿದೆ ಮಾತ್ರವಲ್ಲ, ಮುಂಬರುವ ಜನರೇಷನ್‌ನ ಯುವತಿಯರು ಕೂಡ ಈ ಕ್ಷೇತ್ರವನ್ನು ಪ್ರೀತಿಸುವಂತೆ ಮಾಡಿದೆ ಎನ್ನುತ್ತಾರೆ.
ಫ್ಯಾಷನ್ ವಿದ್ಯಾರ್ಥಿಗಳ ನೆಚ್ಚಿನ ವಿದ್ಯಾ ವಿವೇಕ್
ಫ್ಯಾಷನ್ ಲೋಕಕ್ಕೆ ಕಾಲಿಡುವ ಮುನ್ನ ಈ ಕುರಿತಂತೆ ಕಲಿಯಬೇಕಾದ್ದು ಅವಶ್ಯ. ಅಂತಹವರಿಗೆ ಕಲಿಸುವ ನಿಟ್ಟಿನಲ್ಲಿ , ಕಲಿಸಲು ವಿದ್ಯಾ ಫ್ಯಾಷನ್ ಅಕಾಡೆಮಿಯ ಸಂಸ್ಥಾಪಕರಾದ ವಿದ್ಯಾ ವಿವೇಕ್ ಸದಾ ಮುಂದು. ವಿಶೇಷಚೇತನ ಹೆಣ್ಣು ಹುಡುಗಿಗೂ ಕಲಿಸುತ್ತಿರುವ ಹೆಗ್ಗಳಿಕೆ ಇವರದ್ದು. ಅವರ ಪ್ರಕಾರ, ಉದ್ಯಾನನಗರಿ, ಮಾತ್ರವಲ್ಲ, ರಾಜ್ಯಾದ್ಯಂತ ಫ್ಯಾಷನ್ ಡಿಸೈನಿಂಗ್ ಕುರಿತಂತೆ ಆಸಕ್ತಿ ಮೊದಲಿಗಿಂತ ಹೆಚ್ಚಾಗಿದೆ. ಎಲ್ಲೆಡೆಯಿಂದ ಬಂದ ಹುಡುಗಿಯರು ಪ್ರಯೋಗಾತ್ಮಕ ಡಿಸೈನ್‌ಗಳನ್ನು ಕಲಿಯಲು ಇಚ್ಛಿಸುತ್ತಿರುವುದು ಕಂಡು ಬರುತ್ತಿದೆ. ಇದು ಈ ಕ್ಷೇತ್ರ ಅಭಿವೃದ್ಧಿ ಹೊಂದುತ್ತಿರುವ ಧ್ಯೋತಕ ಎನ್ನುತ್ತಾರೆ.
ಮಹಿಳೆಯರನ್ನು ಪ್ರೋತ್ಸಾಹಿಸುವ ಅನಿ ಥಾಮಸ್
ಫ್ಯಾಷನ್ ಸ್ಟ್ರೀಕ್ಸ್ ಮತ್ತು ಮಾಡೆಲಿಂಗ್ ಸಂಸ್ಥೆಯ ಸಂಸ್ಥಾಪಕರಾದ ಅನಿ ಥಾಮಸ್ ಮೊದಲಿನಿಂದಲೂ ಮಹಿಳೆಯರನ್ನು ಪ್ರೋತ್ಸಾಹಿಸುತ್ತಲೇ ಬಂದಿದ್ದಾರೆ, ಬಾಡಿ ಶೇಪ್‌ಗೆ ಮಹತ್ವ ನೀಡದೇ ಕೇವಲ ಮಹಿಳೆಯರ ಟ್ಯಾಲೆಂಟ್‌ಗೆ ಆದ್ಯತೆ ನೀಡಿ, ಯುವತಿಯರನ್ನು ಹಾಗೂ ಮಹಿಳೆಯರನ್ನು ಫ್ಯಾಷನ್ ರ‍್ಯಾಂಪ್ ಮೇಲೆ ವಾಕ್ ಮಾಡಿಸಿದ್ದಾರೆ. ಮಹಿಳಾ ಸ್ವಾವಲಂಭಿಯಾಗಿಸಲು ಆತ್ಮ ವಿಶ್ವಾಸ ತುಂಬುತ್ತಿದ್ದಾರೆ. “ಥಳುಕು ಬಳುಕುವ ಮಹಿಳೆಯರು ಮಾತ್ರವಲ್ಲ, ಎಲ್ಲಾ ವರ್ಗದ ಹಾಗೂ ಪ್ಲಸ್ ಸೈಝ್ ಮಹಿಳೆಯರು ಕೂಡ ರ‍್ಯಾಂಪ್ ಮೇಲೆ ಯಶಸ್ವಿಯಾಗಬಹುದು”
ಎನ್ನುತ್ತಾರೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)