-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪರಿಸರ ದಿನಾಚಾರಣೆಯಂದು (World Environment Day) ಸಸ್ಟೈನಬಲ್ ಫ್ಯಾಷನ್‌ಗೆ ಸೈ ಎನ್ನಿ! ಹಾಗೆನ್ನುತ್ತಾರೆ ಫ್ಯಾಷನಿಸ್ಟ್‌ಗಳು. ಇಂದು ವಿಶ್ವ ಪರಿಸರ ದಿನಾಚಾರಣೆ. ಅರರೆ! ಫ್ಯಾಷನ್‌ಗೂ ಪರಿಸರ ದಿನಾಚರಣೆಗೂ ಏನು ಸಂಬಂಧ ಎಂದು ಯೋಚಿಸುತ್ತಿದ್ದೀರಾ! ಹೌದು, ಸಸ್ಟೈನಬಲ್ ಫ್ಯಾಷನ್ ಅಳವಡಿಸಿಕೊಳ್ಳುವುದರ ಮೂಲಕ ಫ್ಯಾಷನ್ ಪ್ರಿಯರು ಕೂಡ ತಮ್ಮದೇ ಆದ ರೀತಿಯಲ್ಲಿ, ಪರಿಸರಕ್ಕೆ ಚಿಕ್ಕ ಕೊಡುಗೆ ಸಲ್ಲಿಸಬಹುದು ಎನ್ನುತ್ತಾರೆ ಫ್ಯಾಷನ್ ಎಕ್ಸ್‌ಫರ್ಟ್ಸ್.
ಫ್ಯಾಷನಿಸ್ಟ್‌ಗಳ ಸಸ್ಟೈನಬಲ್ ಫ್ಯಾಷನ್ ಟಾಕ್
“ಉಡುಗೆಗಳ ಮರು ಬಳಕೆ, ಮರು ವಿನ್ಯಾಸದಿಂದ ಹಾಗೂ ಹಳೆಯ ಫ್ಯಾಷನ್‌ವೇರ್‌ಗಳ ಮರುಬಳಕೆಯಿಂದ, ಫ್ಯಾಷನ್ ಲೋಕದಲ್ಲಿ ಹೊಸ ಉತ್ಪಾದನೆಗೆ ತಗುಲುವ ಖರ್ಚು –ವೆಚ್ಚ, ಸಿಂಥೆಟಿಕ್ ಫ್ಯಾಬ್ರಿಕ್ ಹಾಗೂ ಆಕ್ಸೆಸರೀಸ್‌ಗಳ ಡಂಪಿಂಗ್‌ನಿಂದ ಪರಿಸರಕ್ಕೆ ಉಂಟಾಗುವ ಚಿಕ್ಕ ಪ್ರಮಾಣದ ಹಾನಿ ತಡೆಯಬಹುದು. ಪ್ರತಿಯೊಬ್ಬರು ಇದೇ ರೀತಿ ಯೋಚಿಸಿದಲ್ಲಿ , ಪರಿಸರ ಸ್ನೇಹಿ ಫ್ಯಾಷನ್ ನಿರ್ಮಾಣವಾಗುವುದು. ಇದರಿಂದ ಪ್ರಕೃತಿಗೆ ಫ್ಯಾಷನ್ ಪ್ರಿಯರ ಕಡೆಯಿಂದ ಕಿರು ಕಾಣಿಕೆ ಸಲ್ಲಿಸಿದಂತಾಗುವುದು” ಎನ್ನುತ್ತಾರೆ ಫ್ಯಾಷನ್ ಗುರು ಪ್ರಸಾದ್ ಬಿದ್ದಪ್ಪ. ಇನ್ನು ಫ್ಯಾಷನಿಸ್ಟ್ ರಾಜ್ ಶ್ರಾಫ್ ಹೇಳುವಂತೆ, ಇದೀಗ ದೊಡ್ಡ ದೊಡ್ಡ ಬ್ರಾಂಡ್‌ಗಳು ಕೂಡ ಪರಿಸರ ಸ್ನೇಹಿ ಔಟ್‌ಫಿಟ್‌ಗಳನ್ನು ಬಿಡುಗಡೆಗೊಳಿಸುತ್ತಿವೆ. ಅಲ್ಲದೇ, ರಿಸೈಕಲ್ ಆಗಿ ಮರು ನಿರ್ಮಾಣಗೊಂಡ ಫ್ಯಾಷನ್‌ವೇರ್‌ಗಳನ್ನು ಬಿಡುಗಡೆಗೊಳಿಸುತ್ತಿವೆ. ಇದು ಪ್ರಶಂಸನೀಯ ಎನ್ನುತ್ತಾರೆ. ಅದೇ ರೀತಿ, ಸ್ಟೈಲಿಸ್ಟ್ ಜಗನ್ ಹೇಳುವಂತೆ, ಆನ್‌ಲೈನ್‌ನಲ್ಲೂ ಸಾಕಷ್ಟು ಸಸ್ಟೈನಬಲ್ ಫ್ಯಾಷನ್‌ವೇರ್‌ಗಳು ಕಾಲಿಟ್ಟಿವೆ. ಇದು ಫ್ಯಾಷನ್ ಪ್ರಿಯರಿಗೆ ಸಹಕಾರಿಯಾಗಿವೆ ಎನ್ನುತ್ತಾರೆ.
ಸಸ್ಟೈನಬಲ್ ಫ್ಯಾಷನ್‌ಗೆ 7 ಸಿಂಪಲ್ ಐಡಿಯಾಗಳು
- ನಿಮ್ಮ ಬಳಿಯಿರುವ ಉಡುಗೆಗಳಿಗೆ ಹೊಸ ರೂಪ ನೀಡಿ, ಮರುಬಳಕೆ ಮಾಡಬಹುದು. ಮೇಕೋವರ್‌ನಿಂದ ಡಿಫರೆಂಟ್ ಲುಕ್ ನೀಡಬಹುದು.
- ಹಳೆಯ ಸೀರೆಗಳಿಗೆ ಹೊಸ ರೂಪ ನೀಡಬಹುದು. ಉದಾಹರಣೆಗೆ., ಹಳೆಯ ರೇಷ್ಮೆ ಸೀರೆಯನ್ನು ಲೆಹೆಂಗಾ ಅಥವಾ ದಾವಣಿ-ಲಂಗವಾಗಿ ಪರಿವರ್ತಿಸಬಹುದು. ಬಾರ್ಡರ್ ಸೀರೆಗಳನ್ನು ಎಥ್ನಿಕ್ ಗೌನ್‌ಗಳಾಗಿಸಬಹುದು. ತಾಯಿ-ಮಗಳಿಗೆ ಟ್ವಿನ್ನಿಂಗ್ ಡ್ರೆಸ್ ಮಾಡಬಹುದು.
- ಹಳೆ ಫ್ಯಾಬ್ರಿಕ್‌ನಿಂದ ಕ್ಲಾತ್ ಆಕ್ಸೆಸರೀಸ್‌ಗಳನ್ನು ಸಿದ್ಧಗೊಳಿಸಬಹುದು. ಮ್ಯಾಚಿಂಗ್ ಕಮರ್‌ಬಾಂದ್ ರೆಡಿ ಮಾಡಬಹುದು.
- ಕಾಟನ್ ದುಪಟ್ಟಾಗಳಿಂದ ವೆಸ್ಟರ್ನ್ ಲುಕ್ ನೀಡುವ ಟಾಪ್ ಅಥವಾ ಫ್ರಾಕ್‌ಗಳನ್ನು ವಿನ್ಯಾಸಗೊಳಿಸಿ ಧರಿಸಬಹುದು.
- ಸಸ್ಟೈನಬಲ್ ಫ್ಯಾಷನ್‌ಗೆ ಸಾಥ್ ನೀಡುವಂತಹ ಬ್ರಾಂಡ್‌ಗಳ ಡಿಸೈನರ್‌ವೇರ್‌ಗಳನ್ನು ಆಯ್ಕೆ ಮಾಡಬೇಕು.
- ಹಳೆಯ ಜೀನ್ಸ್ ಅಥವಾ ಡೆನಿಮ್ ಪ್ಯಾಂಟ್‌ಗಳಿದ್ದಲ್ಲಿ , ಅವುಗಳನ್ನು ಬಳಸಿ ಹೊಸ ಡಿಸೈನರ್‌ವೇರ್ ತಯಾರಿಸಿ, ಧರಿಸಬಹುದು. ಉದಾಹರಣೆ., ಕ್ರಾಪ್ ಟಾಪ್, ಟೊರ್ನ್ ಶಾರ್ಟ್ಸ್ ಇತ್ಯಾದಿ.
- ( ಲೇಖಕಿ ಫ್ಯಾಷನ್ ಪತ್ರಕರ್ತೆ )
ಇದನ್ನೂ ಓದಿ: Jumka Bangles Fashion: ಡಿಸೈನರ್ ಬಳೆಗಳಿಗೆ ಜುಮ್ಕಾ ಅಲಂಕಾರ!