Site icon Vistara News

Yoga Fashion: ಯೋಗ ಕೋ-ಆರ್ಡ್ ಸೆಟ್‌ಗೆ ಸಿಕ್ತು ಗ್ಲಾಮರ್‌ ಟಚ್‌!

Yoga Fashion

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಯೋಗ ಕೋ- ಆರ್ಡ್ ಸೆಟ್‌ಗಳು (Yoga Fashion) ಇದೀಗ ಟ್ರೆಂಡಿಯಾಗಿವೆ. ಹೌದು, ವಿದೇಶಿಯರನ್ನು ಆವರಿಸಿಕೊಂಡಿದ್ದ ವೆಸ್ಟರ್ನ್‌ ಶೈಲಿಯ ಈ ಕೋ ಆರ್ಡ್ ಸೆಟ್‌ಗಳು ಇದೀಗ ನಮ್ಮಲ್ಲೂ ಟ್ರೆಂಡಿಯಾಗಿವೆ.
ಇದೀಗ ಯುವತಿಯರು ಮೊದಲಿನಂತೆ ಚೂಡಿದಾರ್‌, ಕುರ್ತಾ, ಟಾಪ್‌, ಲೂಸಾದ ಯಾವುದೋ ಒಂದು ಪ್ಯಾಂಟ್‌ ಧರಿಸಿ ಯೋಗ ಪ್ರಾಕ್ಟೀಸ್‌ ಮಾಡುವುದಿಲ್ಲ! ಬದಲಿಗೆ ಟ್ರೆಂಡಿಯಾಗಿರುವ ಯೋಗ ಕೋ-ಆರ್ಡ್ ಸೆಟ್‌ ಧರಿಸಿ ಗ್ಲಾಮರಸ್‌ ಆಗಿ ಕಾಣಿಸಿಕೊಳ್ಳುತ್ತಾ ಯೋಗ ಮಾಡಲು ಬಯಸುತ್ತಾರೆ. ಇದಕ್ಕೆ ಪೂರಕ ಎಂಬಂತೆ, ಮಾರುಕಟ್ಟೆಯಲ್ಲೂ ಲೆಕ್ಕವಿಲ್ಲದಷ್ಟು ದೊಡ್ಡ ದೊಡ್ಡ ಬ್ರಾಂಡ್‌ಗಳ ಯೋಗ ಕೋ -ಆರ್ಡ್ ಸೆಟ್‌ಗಳು ಕಾಲಿಟ್ಟಿವೆ. ಪರಿಣಾಮ, ಈ ವೆಸ್ಟರ್ನ್‌ ಲುಕ್‌ ನೀಡುವ ಕೋ- ಆರ್ಡ್ ಸೆಟ್‌ ಔಟ್‌ಫಿಟ್‌ಗಳು ಪ್ರಚಲಿದಲ್ಲಿವೆ ಎನ್ನುತ್ತಾರೆ ಸ್ಟೈಲಿಸ್ಟ್ ಧನು. ಅವರ ಪ್ರಕಾರ, ಇವು ಕೂಡ ಇದೀಗ ಇತರೇ ಡ್ರೆಸ್‌ಗಳಂತೆ ಯೋಗ ಪ್ರಿಯರ ವಾರ್ಡ್ರೋಬ್‌ಗಳನ್ನು ಸೇರುತ್ತಿವೆ ಎನ್ನುತ್ತಾರೆ.

ಟ್ರೆಂಡ್‌ನಲ್ಲಿರುವ ಯೋಗ ಕೋ- ಆರ್ಡ್ ಸೆಟ್ಸ್

ಮಾನೋಕ್ರೋಮ್‌, ಸಾಲಿಡ್‌ ಕಲರ್ಸ್, ಸಾದಾ, ಗ್ರಾಫಿಕ್‌ ಪ್ರಿಂಟ್ಸ್, ಬ್ರಶ್‌ ಸ್ಟ್ರೋಕ್ಸ್, ಜೆಮೆಟ್ರಿಕಲ್‌ ಪ್ರಿಂಟ್ಸ್ ನವು ಇದೀಗ ಕೋ- ಆರ್ಡ್ ಸೆಟ್‌ ಔಟ್‌ಫಿಟ್‌ ಕೆಟಗರಿಯಲ್ಲಿ ಟ್ರೆಂಡಿಯಾಗಿವೆ. ಆಯಾ ಬ್ರಾಂಡ್‌ನ ಡಿಸೈನ್‌ ಹಾಗೂ ಫ್ಯಾಬ್ರಿಕ್‌ಗೆ ತಕ್ಕಂತೆ ಇವುಗಳ ಬೆಲೆ ನಿಗಧಿಯಾಗಿರುತ್ತವೆ. ಹಾಗೆಂದು ಇವೇನು ಕೈಗೆಟಕುವ ಬೆಲೆಯಲ್ಲಿ ದೊರೆಯುತ್ತಿಲ್ಲ. ದುಬಾರಿ ಬೆಲೆ ಹೊಂದಿವೆ ಎನ್ನುತ್ತಾರೆ ಮಾರಾಟಗಾರರು.

ವೆಸ್ಟರ್ನ್‌ ಲುಕ್‌ ಕೋ- ಆರ್ಡ್ ಸೆಟ್‌ಗೆ ಹೆಚ್ಚಿದ ಬೇಡಿಕೆ

ಯುವತಿಯರು ಅದರಲ್ಲೂ ಜೆನ್‌ ಜಿ, ಕಾಲೇಜು ಹುಡುಗಿಯರು, ಕಾರ್ಪೋರೇಟ್‌ ಕ್ಷೇತ್ರದ ಮಹಿಳೆಯರು ಸೇರಿದಂತೆ ಹೈ ಫ್ಯಾಷನ್‌ ಟಚ್‌ ಬಯಸುವವರು ಹೆಚ್ಚಾಗಿ ವೆಸ್ಟರ್ನ್ ಲುಕ್‌ ನೀಡುವ ಕೋ -ಆರ್ಡ್ ಸೆಟ್‌ಗಳನ್ನೇ ಖರೀದಿಸುತ್ತಿದ್ದಾರೆ. ಅವುಗಳಲ್ಲಿ, ಕ್ರಿಸ್‌ ಕ್ರಾಸ್‌ ಕ್ರಾಪ್‌ ಫಿಟ್ಟಿಂಗ್‌ ಟಾಪ್‌, ಬ್ರಿಥೆಬಲ್‌ ಪ್ಯಾಂಟ್‌ನಂತವು ಹೆಚ್ಚು ಮಾರಾಟವಾಗುತ್ತಿವೆ. ಸಾಲಿಡ್‌ ಕಲರ್‌ನವು ಪ್ರಿಂಟೆಡ್‌ಗಿಂತ ಹೆಚ್ಚು ಬೇಡಿಕೆ ಪಡೆದುಕೊಂಡಿವೆ ಎನ್ನುತ್ತಾರೆ ಸ್ಟೈಲಿಸ್ಟ್ ರಿಚಾ.

ಯೋಗ ಕೋ- ಆರ್ಡ್ ಸೆಟ್‌ ಆಯ್ಕೆ ಹೀಗಿರಲಿ

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: International Yoga Day 2024: ಯುವತಿಯರ ಯೋಗಾಭ್ಯಾಸಕ್ಕೆ ಸಾಥ್‌ ನೀಡುವ 3 ಶೈಲಿಯ ಫ್ಯಾಷನ್‌ವೇರ್ಸ್

Exit mobile version