ನವದೆಹಲಿ: ಚಿನ್ನ ಖರೀದಿಸಲು ಬಯಸುವವರಿಗೆ ಇದು ಸಿಹಿ ಸುದ್ದಿ. ಬಂಗಾರದ ದರದಲ್ಲಿ ದಿಢೀರ್ ೯೦೦ ರೂ. ಇಳಿಕೆ ದಾಖಲಾಗಿದೆ. ಬೆಂಗಳೂರಿನಲ್ಲಿ ೨೪ ಕ್ಯಾರಟ್‌ನ ೧೦ ಗ್ರಾಮ್ ಚಿನ್ನದ ದರದಲ್ಲಿ ಗುರುವಾರ ೯೬೦ ರೂ. ಇಳಿಕೆಯಾಗಿದ್ದು, ೫೧,೯೮೦ ರೂ.ಗೆ ತಗ್ಗಿದೆ.
೨೨ ಕ್ಯಾರಟ್ ಅಥವಾ ಆಭರಣ ಚಿನ್ನದ ದರದಲ್ಲಿ ೮೮೦ ರೂ. ಇಳಿದಿದ್ದು, ೪೭,೬೫೦ ರೂ.ಗೆ ಇಳಿದಿದೆ. ೧ ಕೆಜಿ ಬೆಳ್ಳಿಯ ದರದಲ್ಲಿ ೩೦೦ ರೂ. ಇಳಿದಿದ್ದು, ೬೫,೩೦೦ ರೂ.ಗೆ ತಗ್ಗಿದೆ. ಮತ್ತೊಂದು ಕಡೆ ಪ್ಲಾಟಿನಮ್ ದರದಲ್ಲಿ ೧೦ ಗ್ರಾಮ್‌ಗೆ ೪೨೦ ರೂ. ಏರಿದ್ದು, ೨೩,೩೫೦ ರೂ.ಗೆ ವೃದ್ಧಿಸಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಕುಸಿತದ ಪರಿಣಾಮ ದೇಶಿ ಚಿನಿವಾರ ಪೇಟೆಯಲ್ಲೂ ಬೆಲೆ ತಗ್ಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಚಿನ್ನದ ದರ ೧,೮೨೧ ಡಾಲರ್ ಇತ್ತು. ಅಮೆರಿಕದಲ್ಲಿ ಬಾಂಡ್‌ಗಳ ಮೇಲಿನ ಹೂಡಿಕೆ ಲಾಭ ಕೊಡುತ್ತಿರುವುದರಿಂದ ಹೂಡಿಕೆದಾರರು ಚಿನ್ನದ ಮೇಲಿನ ಹೂಡಿಕೆ ಹಿಂತೆಗೆದುಕೊಳ್ಳುತ್ತಿದ್ದಾರೆ. ಇದರ ಪರಿಣಾಮ ಬಂಗಾರದ ದರ ಇಳಿದಿದೆ ಎನ್ನುತ್ತಾರೆ ತಜ್ಞರು.