ಬೆಂಗಳೂರು: ಚಿನ್ನದ ದರದಲ್ಲಿ ಶನಿವಾರ 110 ರೂ. ಇಳಿಕೆಯಾಗಿದ್ದು ಬೆಂಗಳೂರಿನಲ್ಲಿ (Gold price) 24 ಕ್ಯಾರಟ್‌ನ ಪ್ರತಿ 10 ಗ್ರಾಮ್ ಬಂಗಾರದ ದರ 50,670 ರೂ.ಗೆ ತಗ್ಗಿದೆ. ಶುಕ್ರವಾರ ಕೂಡ 540 ರೂ. ಇಳಿಕೆಯಾಗಿತ್ತು. ಹಳದಿ ಲೋಹದ ದರ ಕಳೆದ ಮೂರು ತಿಂಗಳಿನಲ್ಲಿಯೇ ಕನಿಷ್ಠ ಮಟ್ಟಕ್ಕೆ ತಗ್ಗಿದೆ. ಅದರಲ್ಲೂ ಕಳೆದ ಮೂರು ದಿನಗಳಲ್ಲಿ 920 ರೂ. ತಗ್ಗಿದೆ. ಬೆಳ್ಳಿಯ ದರ ಕೂಡ ಕೆಲವು ವರ್ಷಗಳ ಹಿಂದಿನ ದರಕ್ಕೆ ಹೋಲಿಸಿದರೆ ಈಗ ಕೆಳ ಮಟ್ಟದಲ್ಲಿದೆ.
ಆಭರಣ ಚಿನ್ನ ಅಥವಾ 22 ಕ್ಯಾರಟ್ ಬಂಗಾರದ ದರದಲ್ಲಿ 100 ರೂ. ಇಳಿಕೆಯಾಗಿದ್ದು, 46,450 ರೂ.ಗೆ ತಗ್ಗಿದೆ. ಬೆಳ್ಳಿಯ ದರದಲ್ಲಿ ಪ್ರತಿ ಕೆ.ಜಿಗೆ 58,000 ರೂ.ನಲ್ಲಿತ್ತು. ಪ್ಲಾಟಿನಮ್ ದರದಲ್ಲಿ 300 ರೂ. ಇಳಿಕೆಯಾಗಿದ್ದು, 10 ಗ್ರಾಮ್ ದರ 21,560 ರೂ.ಗೆ ಇಳಿದಿದೆ.
ಅಮೆರಿಕದಲ್ಲಿ ಫೆಡರಲ್ ರಿಸರ್ವ್ ಮತ್ತಷ್ಟು ಬಡ್ಡಿ ದರ ಇಳಿಕೆ ಮಾಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸ್ವರ್ಣ ದರ ಇಳಿಕೆಯಾಗಿದೆ. ಅಂತಾರಾಷ್ಟ್ರೀಯ ದರ ಮತ್ತು ಡಾಲರ್ ಎದುರು ರೂಪಾಯಿಯ ಮೌಲ್ಯವನ್ನು ಆಧರಿಸಿ ಬಂಗಾರದ ದರದಲ್ಲಿ ಏರಿಳಿತವಾಗುತ್ತದೆ. ಚಿನ್ನದ ದರ ಇಳಿಕೆ ತಾತ್ಕಾಲಿಕವಾಗಿದ್ದು, ಮುಂಬರುವ ದಿನಗಳಲ್ಲಿ ದರ ಏರಿಕೆಯಾಗುವ ನಿರೀಕ್ಷೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.