ಬೆಂಗಳೂರು: ಬೆಂಗಳೂರಿನಲ್ಲಿ ಬಂಗಾರದ ದರದಲ್ಲಿ ಭಾನು ವಾರ 220 ರೂ. ಏರಿಕೆಯಾಗಿದೆ. (Gold price ) ಪ್ರತಿ 10 ಗ್ರಾಮ್‌ಗೆ 54,000 ರೂ.ಗೆ (24 ಕ್ಯಾರಟ್) ವೃದ್ಧಿಸಿದೆ. 22 ಕ್ಯಾರಟ್ ಅಥವಾ ಆಭರಣ ಚಿನ್ನದ ದರದಲ್ಲಿ ೨೦೦ ರೂ. ಏರಿದ್ದು, 49,500 ರೂ.ಗೆ (Gold price ) ಹೆಚ್ಚಳವಾಗಿದೆ.
ಬೆಳ್ಳಿಯ ದರದಲ್ಲಿ 6,00 ರೂ. ಏರಿಕೆಯಾಗಿದ್ದು, ಪ್ರತಿ ಕೆಜಿಗೆ ೭೧,೬೦೦ ರೂ.ಗೆ ಏರಿಕೆಯಾಗಿದೆ. ಪ್ಲಾಟಿನಮ್ ದರದಲ್ಲಿ 10 ಗ್ರಾಮ್‌ಗೆ ೫೩೦ ರೂ. ಏರಿಕೆಯಾಗಿದ್ದು, ೨೬,೧೮೦ ರೂ.ಗೆ ವೃದ್ಧಿಸಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಂಗಾರದ ದರ, ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿಯ ವಿನಿಮಯ ದರವನ್ನು ಆಧರಿಸಿ ಸ್ಥಳೀಯ ದರಗಳಲ್ಲಿ ವ್ಯತ್ಯಾಸವಾಗುತ್ತದೆ.