ಬೆಂಗಳೂರು: ಬಂಗಾರದ ದರ 2023ರಲ್ಲಿ 61,000 ರೂ.ಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು (Gold price) ಮಾರುಕಟ್ಟೆಯ ತಜ್ಞರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಒಂದೇ ದಿನ 22 ಕ್ಯಾರಟ್‌ನ ಪ್ರತಿ 10 ಗ್ರಾಮ್ ಬಂಗಾರದ ದರದಲ್ಲಿ 5,000 ರೂ. ಏರಿಕೆಯಾಗಿದೆ. 24 ಕ್ಯಾರಟ್ ಚಿನ್ನದ ದರ ಯಥಾಸ್ಥಿತಿಯಲ್ಲಿ ಇತ್ತು. ಬೆಳ್ಳಿಯ ದರ ಕೆ.ಜಿಗೆ 74,300 ರೂ.ನಷ್ಟಿತ್ತು.
ಪ್ಲಾಟಿನಮ್ ದರ ಪ್ರತಿ 10 ಗ್ರಾಮ್‌ಗೆ 28,430 ರೂ.ನಷ್ಟಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಚಿನ್ನದ ದರ 2022ರ ಮಧ್ಯಭಾಗದಲ್ಲಿ 1615 ಡಾಲರ್ ಇತ್ತು. ಅದು ಈಗ 1800 ಡಾಲರ್‌ಗೆ ಏರಿದೆ. ಇನ್ನೂ ಏರಿಕೆ ನಿರೀಕ್ಷಿಸಲಾಗಿದೆ.