ಬೆಂಗಳೂರು: ಬಂಗಾರದ ದರದಲ್ಲಿ ಸೋಮವಾರ ಯಥಾಸ್ಥಿತಿ ಇದ್ದರೆ, ( Gold Price)ಪ್ಲಾಟಿನಮ್ ದರದಲ್ಲಿ 1,110 ರೂ. ಇಳಿಕೆಯಾಗಿದೆ.
ಪ್ಲಾಟಿನಮ್‌ನ ಪ್ರತಿ 10 ಗ್ರಾಮ್‌ಗೆ 22,310 ರೂ.ಗೆ ಇಳಿಕೆಯಾಗಿದೆ. ಅಂದರೆ 1,110 ರೂ. ತಗ್ಗಿದೆ. 22 ಕ್ಯಾರಟ್‌ನ 10 ಗ್ರಾಮ್ ಚಿನ್ನದ ದರ 46,050 ರೂ.ನಷ್ಟಿತ್ತು. 24 ಕ್ಯಾರಟ್ ಚಿನ್ನದ ದರ 10 ಗ್ರಾಮ್‌ಗೆ 50,240 ರೂ. ಇತ್ತು.
ಒಂದು ಕೆ.ಜಿ ಬೆಳ್ಳಿಯ ದರ 61,500 ರೂ. ಇತ್ತು. ಅಂತಾರಾಷ್ಟ್ರೀಯ ದರವನ್ನು ಆಧರಿಸಿ ಸ್ಥಳೀಯ ದರಗಳು ನಿಗದಿಯಾಗುತ್ತವೆ. ಇತ್ತೀಚಿನ ದಿನಗಳಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ದರ ಮಂದಗತಿಯಲ್ಲಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಂಗಾರದ ದರ ಕಳೆದ 2.5 ವರ್ಷಗಳ ಅವಧಿಯಲ್ಲೇ ಕೆಳ ಮಟ್ಟದಲ್ಲಿದೆ. ಅಮೆರಿಕದಲ್ಲಿ ಫೆಡರಲ್ ರಿಸರ್ವ್ ಬಡ್ಡಿ ದರವನ್ನು ಏರಿಸಿರುವುದು ಪ್ರಭಾವ ಬೀರಿದೆ. ಹೂಡಿಕೆದಾರರು ಚಿನ್ನದ ಬದಲಿಗೆ ಡಾಲರ್ ಬಾಂಡ್‌ಗಳಲ್ಲಿ ಹೂಡಿಕೆ ಹೆಚ್ಚಿಸುತ್ತಿದ್ದಾರೆ.