Site icon Vistara News

Gold rate | ಬಂಗಾರದ ದರದಲ್ಲಿ 990 ರೂ. ಜಿಗಿತ, ಬೆಳ್ಳಿ 3,900 ರೂ. ಕುಸಿತ!

gold

ಬೆಂಗಳೂರು: ಬಂಗಾರದ ದರದಲ್ಲಿ ಸೋಮವಾರ ಪ್ರತಿ 10 ಗ್ರಾಮ್‌ಗೆ 900 ರೂ. ಏರಿಕೆಯಾಗಿದೆ. (Gold rate) ಬೆಂಗಳೂರಿನಲ್ಲಿ 24 ಕ್ಯಾರಟ್‌ ಚಿನ್ನದ ದರ 51,330 ರೂ.ಗೆ ವೃದ್ಧಿಸಿದೆ.

ಆಭರಣ ಚಿನ್ನ ಅಥವಾ 22 ಕ್ಯಾರಟ್‌ ಬಂಗಾರದ ದರದಲ್ಲಿ 900 ರೂ. ಹೆಚ್ಚಳವಾಗಿದೆ. 47,050 ರೂ.ಗೆ ವೃದ್ಧಿಸಿದೆ.

ಬೆಳ್ಳಿಯ ದರದಲ್ಲಿ ಪ್ರತಿ ಕೆಜಿಗೆ 3,900 ರೂ. ಇಳಿಕೆಯಾಗಿದ್ದು, 64,400 ರೂ.ಗೆ ಇಳಿಕೆಯಾಗಿದೆ. ಪ್ಲಾಟಿನಮ್‌ ದರ ಯಥಾಸ್ಥಿತಿಯಲ್ಲಿದ್ದು, 10 ಗ್ರಾಮ್‌ಗೆ 25,300 ರೂ.ನಷ್ಟಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ದರ ಮತ್ತು ಡಾಲರ್‌ ಎದುರು ರೂಪಾಯಿ ಮೌಲ್ಯ, ಸ್ಥಳೀಯ ಬೇಡಿಕೆಯನ್ನು ಆಧರಿಸಿ ಬಂಗಾರದ ದರ ನಿಗದಿಯಾಗುತ್ತದೆ.

ಬೆಳ್ಳಿಯ ದರದಲ್ಲಿ ಇಳಿಕೆ ಏಕೆ?: ಕೈಗಾರಿಕಾ ಉದ್ದೇಶಗಳಿಗೆ ಬೆಳ್ಳಿಯ ಬಳಕೆಯಾಗುತ್ತದೆ. ಸೌರ ಫಲಕದ ಫೊಟೊವೊಲಾಟಿಕ್‌ ಯುನಿಟ್‌ಗಳಿಗೆ ಇದರ ಅಗತ್ಯ ಇದೆ. ಫೋಟೊಗ್ರಫಿ, ಎಲೆಕ್ಟ್ರಾನಿಕ್ಸ್‌, ನೀರಿನ ಶುದ್ಧೀಕರಣ, ದಂತ ವೈದ್ಯಕೀಯ, ಗೃಹೋಪಕರಣ, ಔಷಧ ಇತ್ಯಾದಿ ವಲಯಗಳಲ್ಲಿ ಬಳಕೆಯಾಗುತ್ತದೆ. ಕೈಗಾರಿಕಾ ಬೇಡಿಕೆ ಇಳಿಕೆಯಾಗಿರುವುದು ಬೆಲೆ ಇಳಿಕೆಗೆ ಕಾರಣವಾಗಿದೆ.

Exit mobile version