ಬೆಂಗಳೂರು: ಚಿನ್ನದ ದರಗಳು (Gold Rate today) ಭಾರತದ ಮಾರುಕಟ್ಟೆಯಲ್ಲಿ ನಿನ್ನೆಯಂತೆಯೇ ಯಥಾಸ್ಥಿತಿ ಕಾಪಾಡಿಕೊಂಡಿವೆ. 22 ಕ್ಯಾರೆಟ್ ಚಿನ್ನದ ದರ ಒಂದು ಗ್ರಾಂಗೆ ₹ 5,515, 8 ಗ್ರಾಂಗೆ ₹ 44,120, 10 ಗ್ರಾಂಗೆ ₹ 55,150 ಹಾಗೂ 100 ಗ್ರಾಂಗೆ ₹ 5,51,500ರಷ್ಟಿದೆ. 24 ಕ್ಯಾರೆಟ್ ಚಿನ್ನದ ಬೆಲೆಯೂ ವ್ಯತ್ಯಾಸವಾಗಿಲ್ಲ. 1 ಗ್ರಾಂಗೆ ₹ 6,016, 8 ಗ್ರಾಂಗೆ ₹ 48,128, 10 ಗ್ರಾಂಗೆ ₹ 60,160 ಹಾಗೂ 100 ಗ್ರಾಂಗೆ ₹ 6,01,600 ಬೆಲೆಯಿದೆ.
ಇದೇ ವೇಳೆ ಬೆಳ್ಳಿ ಬೆಲೆ ಹಿಂದಿನ ದಿನದಂತೆಯೇ ಇದೆ. 1 ಗ್ರಾಂಗೆ ₹ 74.50, 8 ಗ್ರಾಂಗೆ ₹ 596, 10 ಗ್ರಾಂಗೆ ₹ 745, 100 ಗ್ರಾಂಗೆ ₹ 7,450 ಹಾಗೂ 1 ಕೆಜಿಗೆ ₹ 74,500 ರೂ.ಗಳಿವೆ.
ನಗರ | 22 ಕ್ಯಾರಟ್ | 24 ಕ್ಯಾರಟ್ |
ದಿಲ್ಲಿ | 55,300 | 60,310 |
ಮುಂಬಯಿ | 55,150 | 60,160 |
ಬೆಂಗಳೂರು | 55,150 | 60,160 |
ಹೈದರಾಬಾದ್ | 55,150 | 60,160 |
ಬಂಗಾರದ ದರದ ಮೇಲೆ ಪ್ರಭಾವ ಬೀರುವ ಅಂಶಗಳು: ಬೇಡಿಕೆ ಮತ್ತು ಪೂರೈಕೆಯು ಬಂಗಾರದ ದರವನ್ನು ನಿರ್ಧರಿಸುತ್ತದೆ. ಬೇಡಿಕೆ ಏರಿಕೆಯಾದಾಗ ದರ ಕೂಡ ವೃದ್ಧಿಸುತ್ತದೆ. ಜಾಗತಿಕ ಆರ್ಥಿಕ ಪರಿಸ್ಥಿತಿ ಕೂಡ ಬಂಗಾರದ ದರದ ಮೇಲೆ ಪ್ರಭಾವ ಬೀರುತ್ತದೆ. ಉದಾಹರಣೆಗೆ ಜಾಗತಿಕ ಆರ್ಥಿಕತೆ ಮಂದಗತಿಯಲ್ಲಿ ಇದ್ದಾಗ ಹೂಡಿಕೆದಾರರು ಬಂಗಾರದಲ್ಲಿ ಹೂಡಿಕೆ ಮಾಡುತ್ತಾರೆ. ಆಗ ಅದರ ದರ ಏರುತ್ತದೆ. ರಾಜಕೀಯ ಅಸ್ಥಿರತೆ ಅಥವಾ ಸಂಘರ್ಷ ಇದ್ದಾಗ ಕೂಡ ಬಂಗಾರದ ದರ ವ್ಯತ್ಯಾಸವಾದೀತು. ಭಾರತ ಜಗತ್ತಿನ ಪ್ರಮುಖ ಬಂಗಾರ ಆಮದು ರಾಷ್ಟ್ರಗಳಲ್ಲೊಂದು.
ಭಾರತ ವಿಶ್ವದಲ್ಲಿಯೇ ಅತಿ ಹೆಚ್ಚು ಚಿನ್ನದ ಗಟ್ಟಿ ಮತ್ತು ನಾಣ್ಯಗಳನ್ನು ತಯಾರಿಸುವ ದೇಶ. ಭಾರತೀಯರ ಮನೆಗಳಲ್ಲಿ 25,000 ಟನ್ ಬಂಗಾರ ಇರಬಹುದು ಎಂದು ಅಂದಾಜು ಮಾಡಲಾಗಿದೆ. ಆದ್ದರಿಂದ ಈ ಬಂಗಾರದಲ್ಲಿ ಕೆಲ ಭಾಗವನ್ನು ಆರ್ಥಿಕತೆಗೆ ತರಲು ಸರ್ಕಾರ ಆಸಕ್ತಿ ವಹಿಸಿದೆ. ಈ ನಿಟ್ಟಿನಲ್ಲಿ ಗೋಲ್ಡ್ ಮಾನಿಟೈಸೇಶನ್ ಸ್ಕೀಮ್ ಇದೆ. ಚಿನ್ನದ ಗಟ್ಟಿ ಮತ್ತು ಕಾಯಿನ್ ಮಾರುಕಟ್ಟೆಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. 2007ರಲ್ಲಿ ಗೋಲ್ಡ್ ಇಟಿಎಫ್ ಅನ್ನು ಬಿಡುಗಡೆಗೊಳಿಸಲಾಯಿತು. ಕೋವಿಡ್ ಸಮಯದಲ್ಲಿ ಚಿನ್ನದ ಬೇಡಿಕೆ ಕುಸಿದಿತ್ತು. ಆದರೆ 2022ರಲ್ಲಿ ಮತ್ತೆ ಬಂಗಾರದ ವಹಿವಾಟು ಚೇತರಿಸಿದೆ. 2022ರಲ್ಲಿ ಗೋಲ್ಡ್ ಇಟಿಎಫ್‌ನಲ್ಲಿ 38 ಟನ್ ಬಂಗಾರ ಇತ್ತು.
ಇದನ್ನೂ ಓದಿ: Gold Rate Today: ಬಂಗಾರದ ಬೆಲೆ 200 ರೂ. ಏರಿಕೆ, ಇಂದು 10 ಗ್ರಾಂ ಚಿನ್ನದ ದರ ಎಷ್ಟಿದೆ ನೋಡಿ