Site icon Vistara News

Gold Rate Today: ಬಂಗಾರದ ದರ ಯಥಾಸ್ಥಿತಿ, ಬೆಳ್ಳಿ ದರವೂ ಬದಲಾವಣೆ ಇಲ್ಲ

Gold

ಬೆಂಗಳೂರು: ಶುಕ್ರವಾರ ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಯಲ್ಲಿ (Gold Rate Today) ಯಾವುದೇ ಬದಲಾವಣೆ ಆಗಿಲ್ಲ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ₹ 5,470ರಷ್ಟಿದೆ. ಮತ್ತೊಂದೆಡೆ, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹ 5,951 ಆಗಿದೆ.

ಕ್ಯಾರೆಟ್ ಎಂಬುದು ಚಿನ್ನದ ಶುದ್ಧತೆಯನ್ನು ಅಳೆಯಲು ಬಳಸುವ ಪದ. ಶೇ.99.9ರಷ್ಟು ಶುದ್ಧತೆಯನ್ನು ಹೊಂದಿರುವ ಕಾರಣ 24K ಚಿನ್ನವನ್ನು ಶುದ್ಧ ಚಿನ್ನ ಎಂದು ಕರೆಯಲಾಗುತ್ತದೆ. ಇದರಲ್ಲಿ ಇತರ ಲೋಹಗಳು ಸೇರಿಕೊಂಡಿರುವುದಿಲ್ಲ. ಮತ್ತೊಂದೆಡೆ, 22K ಚಿನ್ನವು ತಾಮ್ರ ಮತ್ತು ಸತುವುಗಳಂತಹ ಇತರ ಲೋಹಗಳ ಮಿಶ್ರಣವನ್ನು ಹೊಂದಿದೆ. ಇದನ್ನು ಆಭರಣಗಳನ್ನು ತಯಾರಿಸಲು ಬಳಸಲಾಗುತ್ತದೆ.

ಶುಕ್ರವಾರ ಬೆಳ್ಳಿ ಬೆಲೆಯಲ್ಲಿಯೂ ಯಾವುದೇ ಬದಲಾವಣೆ ಇಲ್ಲ. ಒಂದು ಗ್ರಾಂ ಬೆಳ್ಳಿಯ ಬೆಲೆ ₹ 73ರಷ್ಟಿದೆ. ದೆಹಲಿ, ಮುಂಬೈ ಮತ್ತು ಕೋಲ್ಕತ್ತಾದಲ್ಲಿ 10 ಗ್ರಾಂ ಬೆಳ್ಳಿ ಬೆಲೆ ₹730 ಇತ್ತು. ಚೆನ್ನೈ ಮತ್ತು ಬೆಂಗಳೂರಿನಲ್ಲಿ 10 ಗ್ರಾಂ ಬೆಳ್ಳಿಯ ಬೆಲೆ ಕ್ರಮವಾಗಿ ₹762 ಮತ್ತು ₹722.50ರಷ್ಟಿದೆ.

ನಗರ 22 ಕ್ಯಾರಟ್ 24 ಕ್ಯಾರಟ್
ದಿಲ್ಲಿ 54,700 59,660
ಬೆಂಗಳೂರು 54,550 59,510
ಮುಂಬಯಿ 54,700 59,510
ಚೆನ್ನೈ 54,850 59,840

ಬಂಗಾರದ ದರದ ಮೇಲೆ ಪ್ರಭಾವ ಬೀರುವ ಅಂಶಗಳು: ಬೇಡಿಕೆ ಮತ್ತು ಪೂರೈಕೆಯು ಬಂಗಾರದ ದರವನ್ನು ನಿರ್ಧರಿಸುತ್ತದೆ. ಬೇಡಿಕೆ ಏರಿಕೆಯಾದಾಗ ದರ ಕೂಡ ವೃದ್ಧಿಸುತ್ತದೆ.

ಜಾಗತಿಕ ಆರ್ಥಿಕ ಪರಿಸ್ಥಿತಿ ಕೂಡ ಬಂಗಾರದ ದರದ ಮೇಲೆ ಪ್ರಭಾವ ಬೀರುತ್ತದೆ. ಉದಾಹರಣೆಗೆ ಜಾಗತಿಕ ಆರ್ಥಿಕತೆ ಮಂದಗತಿಯಲ್ಲಿ ಇದ್ದಾಗ ಹೂಡಿಕೆದಾರರು ಬಂಗಾರದಲ್ಲಿ ಹೂಡಿಕೆ ಮಾಡುತ್ತಾರೆ. ಆಗ ಅದರ ದರ ಏರುತ್ತದೆ. ರಾಜಕೀಯ ಅಸ್ಥಿರತೆ ಅಥವಾ ಸಂಘರ್ಷ ಇದ್ದಾಗ ಕೂಡ ಬಂಗಾರದ ದರ ವ್ಯತ್ಯಾಸವಾದೀತು. ಭಾರತ ಜಗತ್ತಿನ ಪ್ರಮುಖ ಬಂಗಾರ ಆಮದು ರಾಷ್ಟ್ರಗಳಲ್ಲೊಂದು.

ಭಾರತ ವಿಶ್ವದಲ್ಲಿಯೇ ಅತಿ ಹೆಚ್ಚು ಚಿನ್ನದ ಗಟ್ಟಿ ಮತ್ತು ನಾಣ್ಯಗಳನ್ನು ತಯಾರಿಸುವ ದೇಶ. ಭಾರತೀಯರ ಮನೆಗಳಲ್ಲಿ 25,000 ಟನ್‌ ಬಂಗಾರ ಇರಬಹುದು ಎಂದು ಅಂದಾಜು ಮಾಡಲಾಗಿದೆ. ಆದ್ದರಿಂದ ಈ ಬಂಗಾರದಲ್ಲಿ ಕೆಲ ಭಾಗವನ್ನು ಆರ್ಥಿಕತೆಗೆ ತರಲು ಸರ್ಕಾರ ಆಸಕ್ತಿ ವಹಿಸಿದೆ. ಈ ನಿಟ್ಟಿನಲ್ಲಿ ಗೋಲ್ಡ್‌ ಮಾನಿಟೈಸೇಶನ್‌ ಸ್ಕೀಮ್ ಇದೆ. ಚಿನ್ನದ ಗಟ್ಟಿ ಮತ್ತು ಕಾಯಿನ್‌ ಮಾರುಕಟ್ಟೆಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. 2007ರಲ್ಲಿ ಗೋಲ್ಡ್ ಇಟಿಎಫ್ ಅನ್ನು ಬಿಡುಗಡೆಗೊಳಿಸಲಾಯಿತು.

ಕೋವಿಡ್‌ ಸಮಯದಲ್ಲಿ ಚಿನ್ನದ ಬೇಡಿಕೆ ಕುಸಿದಿತ್ತು. ಆದರೆ 2022ರಲ್ಲಿ ಮತ್ತೆ ಬಂಗಾರದ ವಹಿವಾಟು ಚೇತರಿಸಿದೆ. 2022ರಲ್ಲಿ ಗೋಲ್ಡ್ ಇಟಿಎಫ್‌ನಲ್ಲಿ 38 ಟನ್ ಬಂಗಾರ ಇತ್ತು. ಗೋಲ್ಡ್‌ ಮಾನಿಟೈಸೇಶನ್‌ ಸ್ಕೀಮ್‌ನಲ್ಲಿ ವಾರ್ಷಿಕ 2.25% ಬಡ್ಡಿ ದರ ಸಿಗುತ್ತದೆ. ಲಾಕ್ಇನ್ ಅವಧಿ 5 ವರ್ಷಗಳು.

Exit mobile version