ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಸೇರಿ ದೇಶಾದ್ಯಂತ ಸೋಮವಾರ (ಆಗಸ್ಟ್ 21) ಚಿನ್ನದ ಬೆಲೆ ಯಥಾಸ್ಥಿತಿ ಮುಂದುವರಿದಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 54,100 ರೂ. ಇದ್ದರೆ, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 59,020 ರೂ. ಇದೆ. ದೇಶಾದ್ಯಂತ ಕೂಡ 22 ಕ್ಯಾರೆಟ್ ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ ಇಷ್ಟೇ ಇದೆ. ಭಾನುವಾರವೂ (ಆಗಸ್ಟ್ 20) ದರದಲ್ಲಿ ವ್ಯತ್ಯಾಸ ಆಗಿರಲಿಲ್ಲ.
ಇನ್ನು ಬೆಳ್ಳಿಯ ಬೆಲೆ ಬೆಂಗಳೂರಿನಲ್ಲಿ ಗ್ರಾಂಗೆ 72.50 ರೂಗಳಷ್ಟಿದೆ, ಇತರ ನಗರಗಳಲ್ಲಿ ಇಷ್ಟೆ ಬೆಲೆ ಇದೆ. ಜಿಎಸ್‌ಟಿ ಇತ್ಯಾದಿಗಳನ್ನು ಈ ದರದಲ್ಲಿ ಸೇರಿಸಿಲ್ಲ.
ನಗರ | 22 ಕ್ಯಾರಟ್ | 24 ಕ್ಯಾರಟ್ |
ದಿಲ್ಲಿ | 54,250 | 59,170 |
ಮುಂಬಯಿ | 54,100 | 59,020 |
ಬೆಂಗಳೂರು | 54,100 | 59,020 |
ಹೈದರಾಬಾದ್ | 54,100 | 59,020 |
ಭಾರತ ವಿಶ್ವದಲ್ಲಿಯೇ ಎರಡನೆಯ ಅತಿ ದೊಡ್ಡ ಬಂಗಾರದ ( Gold rate ) ಮಾರುಕಟ್ಟೆಯಾಗಿದೆ. ಚೀನಾ ಬಿಟ್ಟರೆ ಅತಿ ಹೆಚ್ಚು ಚಿನ್ನ ಕೊಳ್ಳುವ ದೇಶ ಜಗತ್ತಿನಲ್ಲಿ ಯಾವುದಾದರೂ ಇದ್ದರೆ ಅದು ಭಾರತ ಮಾತ್ರ. ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಜನ ಸಂಖ್ಯೆಯ ಹೆಚ್ಚಳ, ವಿವಾಹ ಸಮಾರಂಭಗಳ ಏರಿಕೆ, ಹಬ್ಬಗಳ ಸಂಭ್ರಮ, ಜನರ ಆದಾಯದಲ್ಲಿ ಏರಿಕೆ, ನಗರೀಕರಣ ಮೊದಲಾದ ಕಾರಣಗಳಿಂದ ಚಿನ್ನದ ಖರೀದಿ ಗಣನೀಯ ಏರಿಕೆಯಾಗುತ್ತಿದೆ. ಈ ಟ್ರೆಂಡ್ ಮತ್ತಷ್ಟು ಹೆಚ್ಚಳವಾಗಲಿದೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ ತನ್ನ ವರದಿಯಲ್ಲಿ ತಿಳಿಸಿದೆ. ಈ ವರದಿ ಹಲವು ಸ್ವಾರಸ್ಯಕರ ಅಂಶಗಳನ್ನು ಬಹಿರಂಗಪಡಿಸಿದೆ.
ಭಾರತದಿಂದ ಇತ್ತೀಚಿನ ವರ್ಷಗಳಲ್ಲಿ ಜ್ಯುವೆಲ್ಲರಿ ರಫ್ತು ಕೂಡ ಗಣನೀಯ ಏರಿಕೆಯಾಗುತ್ತಿದೆ. 2015ರಲ್ಲಿ 7.6 ಶತಕೋಟಿ ಡಾಲರ್‌ನಷ್ಟಿದ್ದ ಜ್ಯುವೆಲ್ಲರಿ ರಫ್ತು 2020ರಲ್ಲಿ ಕೋವಿಡ್-19 ಬರುವುದಕ್ಕೆ ಮುನ್ನ ೧೨.೪ ಶತಕೋಟಿ ಡಾಲರ್‌ಗೆ ಏರಿಕೆಯಾಗಿತ್ತು. ಭಾರತೀಯ ಜ್ಯುವೆಲ್ಲರಿಗಳನ್ನು ಹೊಸ ಮಾರುಕಟ್ಟೆಗೆ ರಫ್ತು ಮಾಡಬೇಕಾದ ಅಗತ್ಯವೂ ಇದೆ. ಈಗ ಜ್ಯುವೆಲ್ಲರಿ ರಫ್ತಿನ 90% ಪಾಲು ಕೂಡ ಕೇವಲ ಐದು ದೇಶಗಳಿಗೆ ಹೋಗುತ್ತಿದೆ.