ಮುಂಬಯಿ: ಅದಾನಿ ಗ್ರೂಪ್ ನಾನಾ ಕಾರಣಗಳಿಂದಾಗಿ ಈಗ ಸುದ್ದಿಯಲ್ಲಿದೆ. ಕಳೆದ ವರ್ಷ ಭಾರಿ ಏರಿಕೆಯಾಗಿದ್ದ ಅದಾನಿ ಸಮೂಹದ (Adani Group) ಕಂಪನಿಗಳ ಷೇರು ದರಗಳು ಇತ್ತೀಚೆಗೆ ನಷ್ಟದಲ್ಲಿದೆ. ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ಅದಾನಿ ಗ್ರೂಪ್‌ನ ಕಂಪನಿಗಳಲ್ಲಿ ಭಾರಿ ಹೂಡಿಕೆ ಮಾಡಿರುವುದು ಗಮನಾರ್ಹ. ಒಟ್ಟು 87,380 ಕೋಟಿ ರೂ.ಗಳನ್ನು ಅದು ಹೂಡಿಕೆ ಮಾಡಿದೆ. ವಿವರ ಟ್ರೇಡ್ ಬ್ರೈನ್ಸ್ ಸಂಸ್ಥೆಯ ಈ ಗ್ರಾಫ್‌ನಲ್ಲಿದೆ. ಎಲ್‌ಐಸಿಯು (LIC) ಅದಾನಿ ಸಮೂಹದ ಅದಾನಿ ಗ್ಯಾಸ್‌ನ ಷೇರುಗಳಲ್ಲಿ 24.1 ಕೋಟಿ ರೂ. ಹೂಡಿಕೆ ಮಾಡಿದೆ. ಅದಾನಿ ಪೋರ್ಟ್ಸ್‌ನಲ್ಲಿ 18.4 ಕೋಟಿ ರೂ, ಅದಾನಿ ಎಂಟರ್‌ಪ್ರೈಸಸ್‌ನಲ್ಲಿ 18.1 ಕೋಟಿ ರೂ, ಅದಾನಿ ಟ್ರಾನ್ಸ್‌ಮಿಶನ್‌ನಲ್ಲಿ 12.6 ಕೋಟಿ ರೂ, ಅಂಬುಜಾ ಸಿಮೆಂಟ್‌ನಲ್ಲಿ 7.2 ಕೋಟಿ ರೂ. ಹೂಡಿಕೆ ಮಾಡಿದೆ.