Site icon Vistara News

Bonus Declared: ರೈಲ್ವೆ ಇಲಾಖೆಯ ಸಿಬ್ಬಂದಿಗೆ 78 ದಿನಗಳ ವೇತನ ಬೋನಸ್ ಘೋಷಿಸಿದ ಕೇಂದ್ರ!

Railway fined even confirmed ticket and bengaluru Couple won Rs 40000 compensation

ನವದೆಹಲಿ: ಭಾರತೀಯ ರೈಲ್ವೆ ಇಲಾಖೆಯ (Indian Railway) ನಾನ್‌ ಗೆಜೆಟೆಡ್ ನೌಕರರಿಗೆ (non-gazetted employee) ಕೇಂದ್ರ ಸರ್ಕಾರ (Central Government) ಸಿಹಿ ಸುದ್ದಿ ನೀಡಿದೆ. 78 ದಿನಗಳ ವೇತನಕ್ಕೆ ಸಮನಾದ ಉತ್ಪಾದಕತೆ ಲಿಂಕ್ಡ್ ಬೋನಸ್(PLB) ನೀಡಲು ಕೇಂದ್ರ ಸರ್ಕಾರವು ತನ್ನ ಒಪ್ಪಿಗೆಯನ್ನು ನೀಡಿದೆ. ಟ್ರ್ಯಾಕ್ ನಿರ್ವಾಹಕರು, ಲೊಕೊ ಪೈಲಟ್‌ಗಳು, ರೈಲು ನಿರ್ವಾಹಕರು (ಗಾರ್ಡ್‌ಗಳು), ಸ್ಟೇಷನ್ ಮಾಸ್ಟರ್‌ಗಳು, ಮೇಲ್ವಿಚಾರಕರು, ತಂತ್ರಜ್ಞರು, ತಂತ್ರಜ್ಞ ಸಹಾಯಕರು, ಪಾಯಿಂಟ್ಸ್‌ಮನ್, ಮಂತ್ರಿ ಸಿಬ್ಬಂದಿ ಮತ್ತು ಇತರ ಗ್ರೂಪ್ ‘ಸಿ’ ಸಿಬ್ಬಂದಿ ಸೇರಿದಂತೆ ರೈಲ್ವೆಯ ಇತರ ಸಿಬ್ಬಂದಿಗೆ ಈ ಬೋನಸ್ ದೊರೆಯಲಿದೆ. ಆದರೆ, ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (RPF) ಮತ್ತು ರೈಲ್ವೇ ಪ್ರೊಟೆಕ್ಷನ್ ಸ್ಪೆಷಲ್ ಫೋರ್ಸ್ (RPSP) ಸಿಬ್ಬಂದಿ ಈ ಬೋನಸ್‌ಗೆ ಅರ್ಹರಾಗಿರುವುದಿಲ್ಲ.

ರೈಲ್ವೆ ಇಲಾಖೆಯ ಸಿಬ್ಬಂದಿಯ ಅತ್ಯುತ್ತಮ ಕೆಲಸವನ್ನು ಗುರುತಿಸಿರುವ ಕೇಂದ್ರ ಸರ್ಕಾರವು 1968 ಕೋಟಿ ರೂಪಾಯಿ ಪಿಎಲ್‌ಬಿ ಬೋನಸ್‌ಗೆ ಒಪ್ಪಿಗೆ ನೀಡಿದೆ. ರೈಲ್ವೆಯ 11,07,346 ಸಿಬ್ಬಂದಿ ಈ ಬೋನಸ್‌ ಪಡೆಯಲು ಅರ್ಹರಾಗಿದ್ದಾರೆ ಎಂದು ಕೇಂದ್ರ ಸರ್ಕಾರವು ತನ್ನ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಭಾರತೀಯ ರೈಲ್ವೆ ಇಲಾಖೆಯ ಪ್ರಸಕ್ತ ಹಣಕಾಸು ವರ್ಷದಲ್ಲಿ 1,509 ಮಿಲಿಯನ್ ಟನ್ಸ್ ಕಾರ್ಗೋ ಹಾಗೂ ಹೆಚ್ಚು ಕಡಿಮೆ 6.5 ಶತಕೋಟಿ ಪ್ರಯಾಣಿಕರನ್ನು ಅವರ ಗಮ್ಯ ಸ್ಥಾನಗಳಿಗೆ ತಲುಪಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದೇ ವೇಳೆ, ಮಂಗಳವಾರವಷ್ಟೇ (ಅಕ್ಟೋಬರ್‌ 17) ಕೇಂದ್ರ ಸರ್ಕಾರವು ಗ್ರೂಪ್‌ ಸಿ ನೌಕರರು, ನಾನ್‌-ಗೆಜೆಟೆಡ್‌ ಗ್ರೂಫ್‌ ಬಿ ಬ್ಯಾಂಕ್‌ ನೌಕರರಿಗೆ ಬೋನಸ್‌ ಘೋಷಿಸಿದೆ. ಆಯಾ ನೌಕರರ ಕಾರ್ಯಕ್ಷಮತೆ, ಸೇವಾ ಮನೋಭಾವ, ದಕ್ಷತೆ, ಸಮಯಪಾಲನೆ ಸೇರಿ ಹಲವು ಮಾನದಂಡಗಳನ್ನು ಆಧರಿಸಿ ಗರಿಷ್ಠ 7 ಸಾವಿರ ರೂಪಾಯಿವರೆಗೆ ಸರ್ಕಾರ ಬೋನಸ್‌ ನೀಡುತ್ತದೆ. ಇದರಿಂದ ನೌಕರರು ಹಬ್ಬವನ್ನು ಇನ್ನಷ್ಟು ಸಂಭ್ರಮದಿಂದ ಆಚರಿಸಲು ಸಾಧ್ಯವಾಗುತ್ತದೆ.

ಕೇಂದ್ರ ಸರ್ಕಾರಿ ನೌಕರರಿಗೆ ದೀಪಾವಳಿ‌ ಭರ್ಜರಿ ಗಿಫ್ಟ್

ಕೇಂದ್ರ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರವು ದಸರಾ ಹಬ್ಬದ ಸಿಹಿ ಸುದ್ದಿ ನೀಡಿದೆ. ಕೇಂದ್ರ ಸರ್ಕಾರರಿಗೆ ಸರ್ಕಾರವು ಶೇ.4ರಷ್ಟು ತುಟ್ಟಿಭತ್ಯೆ ಹೆಚ್ಚಿಸಿದ್ದು (DA Hike), ಇದರಿಂದಾಗಿ ಲಕ್ಷಾಂತರ ನೌಕರರಿಗೆ ಭಾರಿ ಅನುಕೂಲವಾಗಲಿದೆ. ತುಟ್ಟಿಭತ್ಯೆ ಹೆಚ್ಚಿಸಲು ಸಚಿವ ಸಂಪುಟ ಸಮ್ಮತಿ ಸೂಚಿಸಿದ್ದು, ಕೆಲವೇ ಗಂಟೆಗಳಲ್ಲಿ ಅಧಿಕೃತ ಆದೇಶ ಹೊರಬೀಳಲಿದೆ ಎಂದು ತಿಳಿದುಬಂದಿದೆ.

ಕಳೆದ ಮಾರ್ಚ್‌ನಲ್ಲಷ್ಟೇ ಕೇಂದ್ರ ಸರ್ಕಾರವು ನೌಕರರು ಹಾಗೂ ಪಿಂಚಣಿದಾರರಿಗೆ ನೀಡುವ ತುಟ್ಟಿಭತ್ಯೆಯನ್ನು ಶೇ.4ರಷ್ಟು ಹೆಚ್ಚಿಸಿತ್ತು. ಇದರಿಂದ ನೌಕರರಿಗೆ ಸಿಗುವ ತುಟ್ಟಿಭತ್ಯೆಯು ಶೇ.38ರಿಂದ ಶೇ.42ಕ್ಕೆ ಏರಿಕೆಯಾಗಿತ್ತು. ಈಗ ನೌಕರರು ಹಾಗೂ ಪಿಂಚಣಿದಾರರಿಗೆ ನೀಡುವ ತುಟ್ಟಿಭತ್ಯೆಯನ್ನು ಶೇ.42ರಿಂದ ಶೇ.46ಕ್ಕೆ ಏರಿಕೆ ಮಾಡಲಾಗಿದೆ. ಜುಲೈ 1ರಿಂದಲೇ ಪೂರ್ವಾನ್ವಯವಾಗುವಂತೆ ತುಟ್ಟಿಭತ್ಯೆ ನೀಡಲಾಗುತ್ತದೆ. ಜುಲೈನಿಂದಲೂ ಕೇಂದ್ರ ಸರ್ಕಾರಿ ನೌಕರರು ತುಟ್ಟಿಭತ್ಯೆ ಏರಿಕೆಯ ನಿರೀಕ್ಷೆಯಲ್ಲಿದ್ದರು. ಈಗ ದಸರಾ ಹಾಗೂ ದೀಪಾವಳಿ ಸಂದರ್ಭದಲ್ಲಿ ಜನರಿಗೆ ಸರ್ಕಾರವು ತುಟ್ಟಿಭತ್ಯೆಯ ಗಿಫ್ಟ್‌ ನೀಡಿದೆ.

ಈ ಸುದ್ದಿಯನ್ನೂ ಓದಿ: DA Hike: ಕೇಂದ್ರ ಸರ್ಕಾರಿ ನೌಕರರಿಗೆ ದೀಪಾವಳಿ‌ ಭರ್ಜರಿ ಗಿಫ್ಟ್; ತುಟ್ಟಿಭತ್ಯೆ ಹೆಚ್ಚಳ!

Exit mobile version