Site icon Vistara News

DA Hike News : ಕಳೆದ ಐದು ತಿಂಗಳ ಬಾಕಿ ತುಟ್ಟಿ ಭತ್ಯೆ; ಯಾವ ವೇತನ ಶ್ರೇಣಿಯವರಿಗೆ ಎಷ್ಟು ಹಣ ಲಭ್ಯ?

da hike calculator 2023

#image_title

ಬೆಂಗಳೂರು: ರಾಜ್ಯ ಸರ್ಕಾರವು ಸರ್ಕಾರಿ ನೌಕರರ ತುಟ್ಟಿ ಭತ್ಯೆ (Dearness Allowance) ಹೆಚ್ಚಳ ಮಾಡಿ ಕಳೆದ ಮೇ 30 ರಂದು ಆದೇಶ ಹೊರಡಿಸಿರುವುದು ಎಲ್ಲರಿಗೂ ತಿಳಿದೇ ಇದೆ. ಕೇಂದ್ರ ಸರ್ಕಾರದಂತೆ ಶೇ.4 ರಷ್ಟು (DA Hike News) ತುಟ್ಟಿಭತ್ಯೆ ಹೆಚ್ಚಳ ಮಾಡಲಾಗಿದೆ. ತುಟ್ಟಿಭತ್ಯೆಯ ದರಗಳನ್ನು ಪ್ರಸ್ತುತ ಮೂಲ ವೇತನದ ಶೇಕಡ 31 ರಿಂದ ಶೇಕಡ 35 ಕ್ಕೆ ಪರಿಷ್ಕರಿಸಲಾಗಿದೆ. ಈ ಹೆಚ್ಚಳದಿಂದ ಯಾರಿಗೆ ಎಷ್ಟು ವೇತನ ಸಿಗಲಿದೆ ಎಂಬ ಚರ್ಚೆ ಈಗ ಸರ್ಕಾರಿ ನೌಕರರ ವರ್ಗದಲ್ಲಿ ನಡೆಯುತ್ತಿದೆ.

ತುಟ್ಟಿ ಭತ್ಯೆ ಹೆಚ್ಚಳವು ಕಳೆದ ಜನವರಿ 1 ರಿಂದ ಪೂರ್ವಾನ್ವಯವಾಗಿ ಜಾರಿಗೆ ಬಂದಿದೆ. ರಾಜ್ಯ ಸರ್ಕಾರದ ನಿವೃತ್ತಿ ವೇತನದಾರರು/ಕುಟುಂಬ ನಿವೃತ್ತಿ ವೇತನದಾರರಿಗೆ ಮತ್ತು ರಾಜ್ಯದ ಸಂಚಿತ ನಿಧಿಯಿಂದ ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನವನ್ನು ಪಡೆಯುತ್ತಿರುವ ಅನುದಾನಿತ ಶಿಕ್ಷಣ ಸಂಸ್ಥೆಗಳ ನಿವೃತ್ತಿ ವೇತನದಾರರು ಸಹ ಈ ಹೆಚ್ಚಳದ ಲಾಭ ಪಡೆಯಲಿದ್ದಾರೆ. ಯುಜಿಸಿ/ಎಐಸಿಟಿಇ/ಐಸಿಎಆರ್‌ ವೇತನ ಶ್ರೇಣಿಗಳ ನಿವೃತ್ತಿ ವೇತನದಾರರಿಗೂ ಸಹ ಈ ಅದೇಶ ಅನ್ವಯವಾಗುತ್ತದೆ.

ಕಳೆದ ಐದು ತಿಂಗಳಿನ ಬಾಕಿ ತುಟ್ಟಿಭತ್ಯೆ (ಅರಿಯರ್ಸ್‌) ಯಾವ ವೇತನ ಶ್ರೇಣಿಯವರಿಗೆ ಎಷ್ಟು ಲಭ್ಯವಾಗಲಿದೆ (da hike calculator 2023) ಎಂಬ ಲೆಕ್ಕಾಚಾರವೂ ಈಗ ಜೋರಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ;

DA Hike News da hike calculator 2023
DA Hike News da hike calculator 2023
DA Hike News da hike calculator 2023

ಸರ್ಕಾರಿ ನೌಕರರಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ (Click Here) ಕ್ಲಿಕ್‌ ಮಾಡಿ

ರಾಜ್ಯ ಸರ್ಕಾರವು ಕಳೆದ ಅಕ್ಟೋಬರ್‌ನಲ್ಲಿ ಶೇ. 3.75ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಿತ್ತು. ಇದು 2022ರ ಜುಲೈ1 ರಿಂದ ಜಾರಿಗೆ ಬಂದಿತ್ತು. ಇದಕ್ಕಾಗಿ ಸರ್ಕಾರ ಹೆಚ್ಚುವರಿಯಾಗಿ ರೂ 1,282.72 ಕೋಟಿ ರೂ. ಭರಿಸಿತ್ತು. ಅದಕ್ಕೂ ಮೊದಲು ಏಪ್ರಿಲ್‌ನಲ್ಲಿ ಶೇ. 2.75 ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಲಾಗಿತ್ತು. ಇದು ಜನವರಿ 1 ರಿಂದ ಜಾರಿಗೆ ಬಂದಿತ್ತು. ಇದಕ್ಕಾಗಿ ಸರ್ಕಾರ 1,447 ಕೋಟಿ ರೂ. ವಾರ್ಷಿಕ ವೆಚ್ಚ ಭರಿಸಿತ್ತು.

ಇದನ್ನೂ ಓದಿ: DA Hike News : ಶೇ.4 ರಷ್ಟು ತುಟ್ಟಿಭತ್ಯೆ ಹೆಚ್ಚಳ; ಯಾರ ವೇತನ ಎಷ್ಟು ಹೆಚ್ಚಲಿದೆ?

Exit mobile version