Site icon Vistara News

Astrology Answers | ನಾನು ಮಾಡಿರುವ ಸಾಲಗಳು ಯಾವಾಗ ತೀರುತ್ತವೆ ಗುರೂಜಿ?

ಭವಿಷ್ಯ ಪ್ರಶ್ನೋತ್ತರ rajaguru

rajaguru

ಪ್ರಶ್ನೆ: ನಾನು ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದೇನೆ. ಮಾಡಿದ ಸಾಲ ಯಾವಾಗ ತೀರುತ್ತೆ ಹೇಳಿ ಗುರೂಜಿ?
ಜನ್ಮದಿನಾಂಕ : 28-09-1974 ನಕ್ಷತ್ರ: ಶತಭಿಷ

ಪರಿಹಾರ: ಶತಭಿಷ ನಕ್ಷತ್ರ ಕುಂಭ ರಾಶಿಗೆ 12ನೇ ಶನಿ ಹೋಗಿ, ಜನ್ಮಕ್ಕೆ ಶನಿ ಬರುವ ಕಾಲ. 2 ವರ್ಷ ಶನಿ ದೆಸೆಯಲ್ಲಿ ಕಳೆದಿದ್ದೀರಿ. ಹನ್ನೆರಡನೇ ಮನೆಯನ್ನು ಶನಿ ಬಿಟ್ಟರೆ ಎಷ್ಟೋ ದುಃಖ ಕಡಿಮೆಯಾಗುತ್ತದೆ. ಜನ್ಮಕ್ಕೆ ಬಂದಾಗ ಸ್ವಲ್ಪ ಬಲವನ್ನು ಕೊಡುತ್ತಾನೆ. ಎರಡನೇ ಮನೆಯಲ್ಲಿ ಗುರುವಿದ್ದಾನೆ. ಮೀನದಲ್ಲಿ ಗುರುವಿರುವುದರಿಂದ ಕುಂಭ ರಾಶಿಗೆ ಗುರುವಿನ ಫಲ ಚೆನ್ನಾಗಿರುತ್ತದೆ. ನಿಮಗೆ ಗುರುವು ಒಳ್ಳೆಯದನ್ನು ಮಾಡುತ್ತಾನೆ. ಹೀಗಾಗಿ ಗುರುವನ್ನು ನಂಬಿ. ಇಡುಗುಂಜಿ ಅಥವಾ ಕುಂಬಾಸಿಯ ಗಣೇಶನನ್ನು ದರ್ಶನ ಮಾಡಿ, ವಿಶೇಷವಾಗಿ ಪೂಜೆ ಸಲ್ಲಿಸಿ. ಶ್ರೀ ಕ್ಷೇತ್ರ ಸ್ವರ್ಣವಲ್ಲಿಗೆ ಭೇಟಿ ನೀಡಿ, ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ ದರ್ಶನ ಪಡೆದು, ಆಶೀರ್ವಾದ ಪಡೆದುಕೊಂಡು ಬನ್ನಿ. ನಿಮ್ಮ ಸಮಸ್ಯೆಗಳು ದೂರವಾಗುತ್ತವೆ. ಒಳ್ಳೆಯದಾಗಲಿ.

ನೀವೂ ಪ್ರಶ್ನೆ ಕೇಳಬಹುದು…
ಇದು ವಿಸ್ತಾರನ್ಯೂಸ್‌ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್‌. ದ್ವಾರಕನಾಥ್‌ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ಇ-ಮೇಲ್‌ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕೇಳಲು ನಮ್ಮ ಇ-ಮೇಲ್‌ ವಿಳಾಸ: janasamparka@vistaranews.com

ಇದನ್ನೂ ಓದಿ | Weekly Horoscope | ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ?

Exit mobile version