Weekly Horoscope | ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ? - Vistara News

ಪ್ರಮುಖ ಸುದ್ದಿ

Weekly Horoscope | ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ?

ಈ ವಾರ ಅಂದರೆ ಜನವರಿ 8 ರಿಂದ 14 ರವರೆಗೆ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ (Weekly Horoscope), ಯಾವ ರಾಶಿಯವರ ಅದೃಷ್ಟ ಸಂಖ್ಯೆ ಎಷ್ಟು, ಶುಭ ದಿಕ್ಕು ಯಾವುದು ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

horoscope today
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ಮೇಷ: ಮಾತು ಮನೆ ಕೆಡಿಸದಿರಲಿ

Weekly Horoscope

ಮತ್ಸೋದ್ಯಮ, ಶೈತ್ಯಾಗಾರ ಸಂಬಂಧಿ ವಹಿವಾಟಿನ ಜನ ತಾಂತ್ರಿಕ ವಿಜ್ಞಾನ ಅರಿತ ಎಂಜಿನಿಯರ್‌ಗಳು ಈ ವಾರ ಹೆಚ್ಚು ಎಚ್ಚರ ಹೊಂದಿರಬೇಕು. ನಿಮ್ಮ ಜಾತಕದ ಪ್ರಕಾರ ಕೇತು ದಶಾ ನಡೆಯುತ್ತಿದ್ದಲ್ಲಿ, ವಿವಾಹಿತರು ಮಾತಿನ ಮೇಲೆ ಹಿಡಿತ ಹೊಂದಿರಲಿ. ಪತಿ ಪತ್ನಿಯರ ನಡುವೆ ಅತಿಯಾದ ಚರ್ಚೆ, ವಾಗ್ವಾದಗಳು ನಡೆಯದಿರಲಿ. ಹಿರಿಯರ ಆಸ್ತಿ ವಿಚಾರಗಳು ಕೂಡ ವ್ಯಾಜ್ಯಕ್ಕೆ ಪರಿವರ್ತನೆ ಹೊಂದದಂತೆ ಕಾಳಜಿ ವಹಿಸಿ. ಮುಖ್ಯವಾಗಿ ತಾಳ್ಮೆ ಸಮಾಧಾನಗಳಿರಲಿ. ಉದ್ವೇಗಗಳಿಗೆ ಕಾರಣವಾಗುವ ವಿಷಯಗಳಿಂದ ದೂರವಿರಿ.
ಶುಭ ಸಂಖ್ಯೆ: 6 ಶುಭ ದಿಕ್ಕು: ನೈಋತ್ಯ

ವೃಷಭ: ನಷ್ಟದ ಲೆಕ್ಕಾಚಾರ ತಪ್ಪದಿರಲಿ

Weekly Horoscope

ಬುಧನ ಸಂಚಾರದ ತಾಪಕ್ಕೆ ನೀವು ಕಾರಣವಾಗುವ ಸಾಧ್ಯತೆ ಹೆಚ್ಚು. ಈ ವಾರ ರಾಹು ಪೀಡಾ ನಿವಾರಣಾ ಸ್ತೋತ್ರ ಪಠಿಸಿ, ಧನ ನಷ್ಟದ ಸಂದರ್ಭವನ್ನು ದೂರ ಮಾಡಿಕೊಳ್ಳಿ. ಸುಖಕ್ಕೆ ಆಧಾರವಾಗುವ ಶ್ರೀ ಲಲಿತಾಳನ್ನು ಆರಾಧಿಸಿ. ದೂರ ಪ್ರವಾಸಕ್ಕೆ ಹೋಗಬೇಕಾದ ತುರ್ತು ಅಗತ್ಯ ಎದುರಾಗಬಹುದು. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರದಿರಿ. ವಹಿವಾಟಿನ ಸಂಬಂಧವಾದ ತುರ್ತು ನಿರ್ಧಾರಗಳ ಬಗ್ಗೆ ಸಾಕಷ್ಟು ನಿಂಯಂತ್ರಣವಿರಲಿ. ಹಣ್ಣಿನ ವ್ಯಪಾರಿಗಳಿಗೆ ಲಾಭವಾಗುವ ಸಾಧ್ಯತೆ.
ಶುಭ ಸಂಖ್ಯೆ : 3 ಶುಭ ದಿಕ್ಕು: ಆಗ್ನೇಯ

ಮಿಥುನ: ತಣ್ಣೀರನ್ನು ತಣಿಸಿ ಕುಡಿಯಿರಿ

Weekly Horoscope

ಪಂಚಮ ಶನಿ ಕಳೆದ ದಿನಗಳಾಗಿರುವುದರಿಂದ ಅವಸರದ ಹೆಜ್ಜೆ ಇಡದಿರಿ. ತಣ್ಣೀರನ್ನು ತಣಿಸಿ ಕುಡಿಯಿರಿ. ಆಕಾಶಕ್ಕೆ ಏಣಿ ಇರಿಸಿ, ನಕ್ಷತ್ರ ಹೆಕ್ಕುವ ಕನಸುಗಳು ಇರಲಿ, ಆದರೆ ತಾರ್ಕಿಕವಾಗಿ ಯೋಚಿಸಿ, ಯೋಜನೆಗಳನ್ನು ರೂಪಿಸಿ. ಕೆಲಸದ ಸ್ಥಳದಲ್ಲಿ ಗುರ್‌ ಎನ್ನುವ ಸಹೋದ್ಯೋಗಿಗಳು ಮನಸ್ಸಿನ ಶಾಂತಿ ಕೆಡಿಸಬಹುದು. ಬಾಸ್‌ ಜತೆಗೆ ವಾದಕ್ಕೆ ಇಳಿಯದಿರಿ. ಪದೋನ್ನತಿಗೆ ಅವಕಾಶಗಳು ಇದ್ದೇ ಇವೆ. ಯಾವುದೇ ಕಾರ್ಯಗಳನ್ನು ನಡೆಸುವ ಮುನ್ನ ಕುಲ ದೇವರನ್ನು ನೆನೆದೇ ಹೆಜ್ಜೆ ಇಡಿ. ವೈದ್ಯರ ಬಳಿ ಹೋಗುವ ಅವಕಾಶ, ಅನಿವಾರ್ಯವಾದರೆ ಹೋಗಿ ಬಂದು ಬಿಡಿ.
ಶುಭ ಸಂಖ್ಯೆ : 9 ಶುಭ ದಿಕ್ಕು: ಪೂರ್ವ

ಕಟಕ: ಗೆಳೆತನದ ಸವಿಯನ್ನು ಉಣ್ಣುವ ಕಾಲ

Weekly Horoscope

ನಿಮ್ಮದೇ ಆದ ಗುರಿಗಳನ್ನು ಸಲೀಸಾಗಿ ತಲುಪುವ ಅಪೂರ್ವ ಅವಕಾಶಗಳನ್ನು ಪಡೆಯುವ ಸುಸಂದರ್ಭವಾಗಿದೆ. ಅತಿಯಾಸೆಗೆ ಮಾತ್ರ ಬೀಳಬೇಡಿ. ಒಂದೊಂದೇ ಮೆಟ್ಟಿಲನ್ನು ಯಶಸ್ವಿನ ಏಣಿಯಲ್ಲಿ ಗುರುತಿಸಿ ಸರಿಯಾಗಿ ಹೆಜ್ಜೆ ಇಡಿ. ಹಲವು ಗೆಳೆಯರನ್ನು ಭೇಟಿಯಾಗುವ ಅವಕಾಶ ಹೇಳರವಾಗಿದೆ. ಎಷ್ಟೋ ದಿನಗಳಿಂದ ಕಂಡಿರದ ಗೆಳೆಯರು ಭೇಟಿಯಾಗುತ್ತಾರೆ. ಉತ್ತಮವಾದ ಸಹಾಯ ಕೂಡ ಗೆಳೆಯರಿಂದ ಸಿಗಲು ಅವಕಾಶ ಜಾಸ್ತಿ. ಹೊಸ ಕೆಲಸಗಳು ನಿಮಗೆ ದೊರಕುವ ಸಾಧ್ಯತೆಗಳಿವೆ. ಇರುವ ಕೆಲಸ ಬಿಟ್ಟು ಹೊಸ ಕೆಲಸ ಹುಡುಕದಿರಿ. ಶಿವನ ಆರಾಧನೆಯಿಂದ ಕ್ಷೇಮ.
ಶುಭ ಸಂಖ್ಯೆ : 5 ಶುಭ ದಿಕ್ಕು: ಉತ್ತಮ

ಸಿಂಹ: ಉತ್ಸಾಹವಿದ್ದರೆ ಆದಾಯವೂ ಜಾಸ್ತಿ

Weekly Horoscope

ಮಕ್ಕಳ ವಿಷಯದಲ್ಲಿ ಎಚ್ಚರ ಇರಲಿ. ಕೆಲ ಕಾರಣಗಳಿಗಾಗಿ ಬಿಸ್ನೆಸ್‌ ವಿಚಾರದಲ್ಲಿ ಪಾರ್ಟ್‌ನರ್ಸ್‌ ನಡುವೆ ವಿವಾದ ಉಂಟಾಗುವ ಸಾಧ್ಯತೆ ಇದೆಯಾದರೂ ಹಲವು ಬಿಕ್ಕಟ್ಟುಗಳನ್ನು ಮಾತುಕತೆಯಿಂದಲೇ ನಿವಾಸಿಕೊಳ್ಳಿ. ಕಿರಾಣಿ ಅಂಗಡಿ ನಡೆಸುವ ಮಂದಿಗೆ ಹೊಸ ಸಾಹಸಗಳಿಗೂ ಪ್ರವೇಶ ಮಾಡುವ ಸುಸಂದರ್ಭ ಲಭ್ಯವಾಗಬಹುದು. ಹಣಕಾಸಿನ ವಿಚಾರದಲ್ಲಿ ಲಾಭಗಳಿಸುತ್ತಿರಾದರೂ ಖರ್ಚುಗಳಿಗೂ ಒಂದಿಲ್ಲೊಂದು ಕಾರಣಗಳು ಸೃಷ್ಟಿಯಾಗುವ ಸಾಧ್ಯತೆ ಜಾಸ್ತಿ. ಆದರೂ ಉತ್ಸಾಹ, ಲವಲವಿಕೆಗಳಿಂದ ಆದಾಯವೇ ಜಾಸ್ತಿ. ಮಹಾಗಣಪತಿಯನ್ನು ಆರಾಧಿಸಿ.
ಶುಭ ಸಂಖ್ಯೆ :೧ ಶುಭ ದಿಕ್ಕು: ನೈಋತ್ಯ

ಕನ್ಯಾ: ಕಿರಿಕಿರಿ ತಪ್ಪದು, ಶುಭ ಕಾಲವೂ ನಿಮ್ಮದು!

Weekly Horoscope

ಆಸ್ತಿಯ ವಿಚಾರದಲ್ಲಿ ಬಂಧುಗಳು ಸಹಕರಿಸುವರು. ಮನೆಯ ಸದಸ್ಯರ ಕುರಿತಾದ ಒಳ್ಳೆಯ ವಾರ್ತೆಯೊಂದನ್ನು ಕೇಳಿಸಿಕೊಳ್ಳುವಿರಿ. ಸಿನಿಮಾ ರಂಗದ ಜನರಿಗೆ, ಕುಂಚ ಕಲಾವಿದರಿಗೆ, ಕಾಳುಕಡಿ ಧಾನ್ಯ ಮಾರಾಟಗಾರರಿಗೆ ಮಿಶ್ರ ಫಲ. ಎರಡು ವ್ಯಕ್ತಿಗಳಿಂದ ಸತತವಾಗಿ ಎದುರಿಸುತ್ತಿರುವ ಕಿರಿಕಿರಿಗಳಿಂದ ಹೊರ ಬರಲು ಚಂದ್ರನ ಕಾರಣ ಗಳಿಂದಾಗಿ ತುಸು ಕ್ಲಿಷ್ಟವೇ ಆಗಲಿದೆ. ಪಂಚಮ ಶನಿ ಕಾಟದಿಂದಾಗಿ ಕಿರಿಕಿರಿಯ ವಿಚಾರ ಒಂದ ಹಿಂದೆ ಇನ್ನೊಂದು ಬರಬಹುದು. ಹನುಮಾನ್‌ ಚಾಲೀಸಾ ಪಠಿಸಿ.
ಶುಭ ಸಂಖ್ಯೆ : 6 ಶುಭ ದಿಕ್ಕು: ಪಶ್ಚಿಮ

ತುಲಾ: ಸಾಮಾಜಿಕ ಮನ್ನಣೆ ದೊರೆಯುವ ಸಮಯ

Weekly Horoscope

ಅನೇಕ ರೀತಿಯ ಸವಾಲುಗಳನ್ನು ಎದುರಿಸುತ್ತೀರಿ. ಆದರೆ ಚತುರಮತಿಗಳಾದ ನೀವು ಸವಾಲುಗಳನ್ನು ಮೆಟ್ಟಿ ನಿಲ್ಲುವ ಧೈರ್ಯ ಮತ್ತು ಶಕ್ತಿ ತೋರಿಸುತ್ತೀರಿ. ಸಮಸ್ತ ಜಗದಾಧಾರ ಮೂರ್ತಿಗಳಾದ ಹರಿ ಮತ್ತು ಹರನನ್ನು ಆರಾಧಿಸಿ. ಇದರಿಂದಾಗಿ ವಿಶಿಷ್ಟವಾದ ಸಾಮಾಜಿಕ ಮನ್ನಣೆಗಳಿಗೆ ಪಾತ್ರರಾಗುತ್ತೀರಿ. ರಾಜಕಾರಣಿಗಳಿಗೆ ಜನರ ನಡುವೆ ಎದ್ದು ನಿಲ್ಲಲು ಬೇಕಾದ ಅಮಿತ ಉತ್ಸಾಹ ಹಾಗೂ ಸಂಪನ್ನವಾದ ಶಕ್ತಿ ಸಾಮರ್ಥ್ಯಗಳು ಬಲಗೊಳ್ಳಲಿವೆ. ನಿಮ್ಮ ಮಾತಿನ ಶಕ್ತಿಯಲ್ಲಿ ಅರ್ಥಪೂರ್ಣ ವೈಚಾರಿಕ ನೆಲೆಗಳನ್ನು ರೂಪಿಸಿಕೊಳ್ಳಿ. ವೈದ್ಯರುಗಳಿಗೂ ಉತ್ತಮವಾದ ವಾರ.
ಶುಭ ಸಂಖ್ಯೆ : 2 ಶುಭ ದಿಕ್ಕು: ದಕ್ಷಿಣ

ವೃಶ್ಚಿಕ: ಕಷ್ಟಪಟ್ಟರೆ ಫಲವುಂಟು

Weekly Horoscope

ಅವಿರತವಾದ ಶ್ರಮದಿಂದ ನಿಮಗೆ ಅನುಕೂಲಕರವಾದ ಸಂದರ್ಭಗಳು ಒದಗಿ ಬಂದು ಸಾಮಾಜಿಕ ಸ್ಥಾನಮಾನಕ್ಕೆ ಉತ್ತಮವಾದ ಸಾಧನೆಗಳಿಗೆ ಅವಕಾಶ ಸಕಾರಾತ್ಮಕವಾಗಿದೆ. ಯಾರಿಗೂ ಹಣ ಕೊಡಲು ಹೋಗಬೇಡಿ. ವಿದೇಶಿ ಪ್ರವಾಸವೂ ಕೂಡ ಕೈಗೂಡುವ ಸಂದರ್ಭ ಸ್ಪಷ್ಟವಾಗಿದೆ. ನಿಮ್ಮದು ಆಡಿಟ್‌, ಚಾರ್ಟರ್ಡ್‌ ಅಕೌಂಟೆಂಟ್‌ ಇಲ್ಲಾ ಬ್ಯಾಂಕಿಂಗ್‌ ಚಟುವಟಿಕೆಗಳ ಕಾರ್ಯಕ್ಷೇತ್ರವಾಗಿದ್ದರೆ ಅನುಕೂಲಕರವಾದ ಸಮಯ ಇದು. ಹೊಸ ವಾಣಿಜ್ಯ ಸಂಸ್ಥೆ ಯಾ ಬ್ಯಾಂಕಿಂಗ್‌ ಕ್ಷೇತ್ರ ಸೊಸೈಟಿ ಕನ್ಸೂಮರ್ಸ್‌ ಹಿತ ಸಂಬಂಧಿ ಕಾರ್ಯ ಚಟುವಟಿಕೆಗಳಿಗೆ ಯಶಸ್ಸಿದೆ. ದುರ್ಗಾದೇವಿಯನ್ನು ಸ್ತುತಿಸಿ.
ಶುಭ ಸಂಖ್ಯೆ : 8 ಶುಭ ದಿಕ್ಕು: ಪೂರ್ವ

ಧನಸ್ಸು: ಅವಸರವೇ ಅಪಘಾತಕ್ಕೆ ಕಾರಣ

Weekly Horoscope

ಸದ್ಯವೇ ನಿಮ್ಮ ಬೆನ್ನು ಹತ್ತಿದ ಸಾಡೇಸಾತಿ ಕಾಟದ ದಿನಗಳು ದೂರವಾಗಲಿವೆ. ಕರಿ ಮೋಡದಿಂದ ಹೊರ ಬಂದ ರವಿಯಂತೆ ಶೋಭಿಸಲು ಅವಕಾಶ ಧಾವಿಸಿ ಬರುತ್ತದೆ. ಆದರೆ ಸದ್ಯಕ್ಕೆ ಅವಸರಿಸಬೇಡಿ. ಘಾತಕ ತರುವ ಜನರು ಸುತ್ತುವರಿಯುವ ವಿಚಾರ ಇದ್ದೇ ಇದೆ. ಚತುರಮತಿಗಳಾದ ನೀವು ಈ ಜನರಿಂದ ಉಪಾಯವಾಗಿ ದೂರವಾಗಬೇಕು. ಲೋಹದ ವ್ಯಾಪಾರಿಗಳಾಗಿದ್ದರೆ ಸದ್ಯಕ್ಕೆ ಸಾಲ ಮಾಡಲು ಮಂದಾಗಬೇಡಿ. ಒಳ್ಳೆಯ ಲಾಭದ ನಿರೀಕ್ಷೆಯನ್ನಿಟ್ಟುಕೊಂಡು ಯಾವುದನ್ನೂ ಕ್ರೆಡಿಟ್‌ಗೆ ಕೊಡಬೇಡಿ, ಅಪಾಯವಿದೆ. ರಾಮ ರಕ್ಷಾ ಸ್ತ್ರೋತ್ರ ಓದಿ.
ಶುಭ ಸಂಖ್ಯೆ: ೧ ಶುಭ ದಿಕ್ಕು: ವಾಯವ್ಯ

ಮಕರ: ಹಗ್ಗ ಹಾವಾಗುವ ಕಾಲ!

Weekly Horoscope

ಹಗ್ಗ ಎಂದು ಭಾವಿಸಿದ್ದು ಹಾವಾಗುವ ಸಾಧ್ಯತೆಯ ದಿನಗಳು. ಹೀಗಾಗಿ ಯಾಮಾರಿಸುವ ಜನರಿಂದ ದೂರವಾಗಿರಿ. ನಿಮ್ಮ ಘನತೆಗೆ ಅಲ್ಪರು ಕುಂದು ತರುತ್ತಾರೆ. ಹೆಚ್ಚು ಮಾತು ಪ್ರಯೋಜನ ತಾರದು. ಆಡಬೇಕಾದ ಮಾತುಗಳಿಂದ ಪ್ರಯೋಜನವಿದೆ. ಆದರೆ ಚುಟುಕಾಗಿ ಪರಿಣಾಮಕಾರಿಯಾದ ಮೃದು ಮಾತುಗಳಿಂದ ಎದುರಿನವರನ್ನು ಗೆಲ್ಲುವ ಪ್ರಯತ್ನ ಮಾಡಿ. ನೀವು ಬುದ್ಧಿವಂತರೇ, ಅನುಮಾನವಿಲ್ಲ. ಆದರೆ ನಿಮಗಿಂತಲೂ ಬುದ್ಧಿವಂತರೇ ನಿಮಗೆ ಸಿಗುತ್ತಾರೆ. ಈ ಜನರಿಂದಾಗಿ ನಿಮಗೆ ತೀರಾ ಅವಶ್ಯವಾದ ಏಕಾಗ್ರತೆಗೆ ತೊಂದರೆ ಬಂದೀತು. ಹನುಮಾನ್‌ ಚಾಲೀಸ್‌ ಓದಿ.
ಶುಭ ಸಂಖ್ಯೆ : 4 ಶುಭ ದಿಕ್ಕು: ಆಗ್ನೇಯ

ಕುಂಭ: ತಳಮಳ ಬೇಡ, ತಾಳ್ಮೆ ಇರಲಿ

Weekly Horoscope

ಪರಿಸ್ಥಿತಿಯನ್ನು ಎಂಥದೇ ಕ್ಲಿಷ್ಟ ಸನ್ನಿವೇಶಗಳ ಸಂದರ್ಭದಲ್ಲೂ ಪರಿಣಾಮಕಾರಿಯಾದ ಹಂತಕ್ಕೆ ತಂದು ನಿಲ್ಲಿಸುವ ಅಪರೂಪದ ಪ್ರತಿಭೆಯೇನೋ ನಿಮ್ಮಲ್ಲಿ ವಿಪುಲವಾಗಿದೆ. ಆದರೆ ಸಮಯ ಸಾಧಕರೂ ನಿಮ್ಮ ನೆಮ್ಮದಿ ಹಾಳು ಮಾಡುತ್ತಾರೆ. ಯಾವುದೇ ವಿಷಯದ ಮೇಲೆ ನಿಯಂತ್ರಣ ಸಾಧಿಸಲು ನಿಮಗೆ ಬಿಡುವುದಿಲ್ಲ. ದಿವ್ಯಶಕ್ತಿಯೊಂದು ಸೂಕ್ತವಾದ ಸಜ್ಜನರಿಂದ ಬೆಂಬಲಸಿಗುವಂತೆ ನಿಮ್ಮನ್ನು ಅನುಗ್ರಹಿಸುತ್ತದೆ. ಆದರೂ ಏನೋ ಆತಂಕ, ಭಯ ತಳಮಳ ತರುತ್ತಿರುತ್ತವೆ. ದಶರಥ ಮಹಾರಾಜ ಶನೈಶ್ವರ ಸ್ತೋತ್ರವನ್ನು ಪಠಿಸಿ, ಗೆಲ್ಲುತ್ತೀರಿ.
ಶುಭ ಸಂಖ್ಯೆ : 8 ಶುಭ ದಿಕ್ಕು: ಈಶಾನ್ಯ

ಮೀನ: ಹಿತ ಶತ್ರುಗಳ ಬಗ್ಗೆ ಇರಲಿ ಎಚ್ಚರ

Weekly Horoscope

ಬಹು ಮಹತ್ವದ ಜವಾಬ್ದಾರಿಯೊಂದನ್ನು ಹೊಸತಾಗಿ ಹೊರಲಿದ್ದೀರಿ. ಚಿನ್ನಾಭರಣ ಖರೀದಿಗಳಿಗೂ ಸದಾವಕಾಶವಿದೆ. ರೆಸ್ಟೊರೆಂಟ್‌ ನಡೆಸುವವರಾಗಿದ್ದರೆ ಈ ವಾರ ಕಾರ್ಮಿಕರ ಸಮಸ್ಯೆಯಿಂದ ನೀವು ಹೆಣಗಾಡಬೇಕಾಗಿ ಬರಬಹುದು. ನಿಮ್ಮ ಸಮೀಪದಲ್ಲೇ ಶತ್ರುಗಳಿರುತ್ತಾರೆ. ಹೀಗಾಗಿ ಮಾತುಗಳ ಬಗ್ಗೆ ನಿಗಾವಹಿಸಿ. ಹರಕು ಬಾಯಿ ಬಿಚ್ಚುವ ದುಃಸ್ಸಾಹಸ ಮಾಡದಿರಿ. ಹೈನು ಸರಕುಗಳ ವಹಿವಾಟುದಾರರಿಗೆ ಅನಿರೀಕ್ಷಿತವಾದ ಲಾಭ ತೂರಿ ಬರುತ್ತಿದೆ. ಜೂಜಿನ ವಿಷಯದಲ್ಲಿ ಎಚ್ಚರ ತಪ್ಪದಿರಿ. ಶ್ರೀ ವಲ್ಲಭ ನಾದ ವಿಷ್ಣುವನ್ನು ಆರಾಧಿಸಿ.
ಶುಭ ಸಂಖ್ಯೆ : 5 ಶುಭ ದಿಕ್ಕು: ದಕ್ಷಿಣ

ಎಂ.ಎಂ.ಕೆ. ಶರ್ಮ, ಬೆಂಗಳೂರು
ಮೊಬೈಲ್‌ ನಂ.: 9632980996

ಇದನ್ನೂ ಓದಿ | Astrology: ನಿಮ್ಮ ರಾಶಿಗೆ ಸಾಡೇಸಾತಿ ಮತ್ತು ಶನಿ ದೆಸೆ ಯಾವಾಗ ಇದೆ ಗೊತ್ತೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ

Latest

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಬಾಂಗ್ಲಾದೇಶಕ್ಕೆ ಏಕೆ ಟೆನ್ಶನ್‌?

VISTARANEWS.COM


on

ಪಶ್ಚಿಮ ಬಂಗಾಳದ ಚುನಾವಣೋತ್ತರ ಸಮೀಕ್ಷೆಯ ಟ್ರೆಂಡ್‌ ಪಕ್ಕದ ಬಾಂಗ್ಲಾದೇಶಕ್ಕೆ ಆತಂಕ ಉಂಟುಮಾಡಿದೆ. ಎಂಟು ಎಕ್ಸಿಟ್‌ ಪೋಲ್‌ಗಳ ಪೈಕಿ ಆರು ಸಮೀಕ್ಷೆಗಳು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೇರುವ ಮುನ್ಸೂಚನೆ ನೀಡಿವೆ. ಈ ಮುನ್ಸೂಚನೆಯೇ ಬಾಂಗ್ಲಾದೇಶದ ಆತಂಕಕ್ಕೆ ಕಾರಣವಾಗಿದೆ.
ಬಾಂಗ್ಲಾದೇಶದ ಸಂಸದ ಆಖ್ತರ್‌ ಹೊಸೈನ್‌ ಈ ವಿಷಯವನ್ನು ಅಲ್ಲಿನ ಸಂಸತ್ತಿನಲ್ಲಿ ಎತ್ತಿದ್ದಾರೆ. “ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಅದು ಅಲ್ಲಿನ ಎಲ್ಲಾ ಬಾಂಗ್ಲಾದೇಶಿ ನುಸುಳುಕೋರರನ್ನು ಹೊರಗಟ್ಟುತ್ತದೆ. ಇದು ಬಾಂಗ್ಲಾದೇಶದಲ್ಲಿ ಅತಿದೊಡ್ಡ ಮಾನವೀಯ, ಅರ್ಥಿಕ ಹಾಗೂ ನಿರಾಶ್ರಿತರ ಬಿಕ್ಕಟ್ಟನ್ನು ಸೃಷ್ಟಿಸಲಿದೆ. ಇದು ನಮ್ಮ ಅತಿದೊಡ್ಡ ಆತಂಕಕ್ಕೆ ಕಾರಣವಾಗಿದೆʼʼ ಎಂದು ಹೇಳಿದ್ದಾರೆ.
ಗಡಿದಾಟಿ ಭಾರತಕ್ಕೆ ಬಂದಿರುವ ಅಕ್ರಮ ಬಾಂಗ್ಲಾ ದೇಶಿ ನುಸುಳುಕೋರರನ್ನು ಬಿಜೆಪಿ ಹೊರಗಟ್ಟಿದರೆ ಅವರಿಗೆ ಹೊಸ ನೆಲೆ ಕಲ್ಪಿಸುವುದು ಹೇಗೆ ಎಂಬ ಚಿಂತೆ ಬಾಂಗ್ಲಾದೇಶವನ್ನು ಕಾಡುತ್ತಿದೆ. ಬಾಂಗ್ಲಾದೇಶದ ಅಕ್ರಮ ನುಸುಳುಕೋರರ ಸಮಸ್ಯೆಯೇ ಪಶ್ಚಿಮ ಬಂಗಾಳದ ಅತಿದೊಡ್ಡ ಚುನಾವಣಾ ವಿಷಯವಾಗಿತ್ತು. ಅಧಿಕಾರಕ್ಕೇರಿದ ತಕ್ಷಣವೇ ಅಕ್ರಮ ಬಾಂಗ್ಲಾ ವಲಸಿಗರನ್ನು ಗಡಿಪಾರು ಮಾಡುವುದಾಗಿ ಬಿಜೆಪಿ ಹೇಳಿತ್ತು.

Continue Reading

Latest

ಎಕ್ಸಿಟ್‌ ಪೋಲ್‌: ಅಸ್ಸಾಂ, ಪುದುಚೇರಿ ಪ.ಬಂಗಾಳದಲ್ಲಿ ಬಿಜೆಪಿ, ತ.ನಾಡಲ್ಲಿ ಡಿಎಂಕೆ, ಕೇರಳಂನಲ್ಲಿ ಯುಡಿಎಫ್‌

VISTARANEWS.COM


on

ಎಕ್ಸಿಟ್‌ ಪೋಲ್‌: ಅಸ್ಸಾಂ, ಪುದುಚೇರಿ ಪ.ಬಂಗಾಳದಲ್ಲಿ ಬಿಜೆಪಿ, ತ.ನಾಡಲ್ಲಿ ಡಿಎಂಕೆ, ಕೇರಳಂನಲ್ಲಿ ಯುಡಿಎಫ್‌
ಐದು ರಾಜ್ಯಗಳ ಎಕ್ಸಿಟ್‌ ಪೋಲ್‌ ಫಲಿತಾಂಶ ಹೊರಬಿದ್ದಿದೆ. ಅಸ್ಸಾಂನಲ್ಲಿ ಬಿಜೆಪಿ, ಕೇರಳದಲ್ಲಿ ಯುಡಿಎಫ್‌, ಪುದುಚೇರಿಯಲ್ಲಿ ಎನ್‌ಡಿಎ ಜಯಭೇರಿ ಬಾರಿಸಲಿದೆ ಎಂದು ಎಲ್ಲಾ ಎಕ್ಸಿಟ್‌ ಪೋಲ್‌ಗಳು ಹೇಳಿವೆ. ಆದರೆ, ಪ.ಬಂಗಾಳ ಮತ್ತು ತಮಿಳುನಾಡು ಮತದಾನೋತ್ತರ ಸಮೀಕ್ಷೆಗಳು ಮಾತ್ರ ಭಿನ್ನ ಫಲಿತಾಂಶ ನೀಡಿವೆ.
ಅಸ್ಸಾಂನಲ್ಲಿ ಕಮಲ ಕಿಲಕಿಲ:
126 ಸದಸ್ಯ ಬಲದ ಅಸ್ಸಾಂ ವಿಧಾನಸಭೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸುವ ಸಾಧ್ಯತೆಯನ್ನು ಎಲ್ಲಾ ಎಕ್ಸಿಟ್‌ ಪೋಲ್‌ಗಳು ಹೇಳಿವೆ. ಹಿಮಂತ ಬಿಸ್ವ ಶರ್ಮಾ ಎರಡನೇ ಅವಧಿಗೆ ಸಿಎಂ ಆಗುವ ಸಾಧ್ಯತೆ ಹೆಚ್ಚಿವೆ. ಆಕ್ಸಿಸ್‌ ಮೈ ಇಂಡಿಯಾ, ಪಿ-ಮಾರ್ಕ್‌, ಮಾಟ್ರಿಜ್‌, ಜೆವಿಸಿ ಮತ್ತು ಚಾಣಕ್ಯ ಸ್ಟ್ರಾಟಜಿಸ್‌ ಬಿಜೆಪಿ ಭಾರೀ ಬಹುಮತ ದಾಖಲಿಸಲಿದೆ ಎಂದು ಭವಿಷ್ಯ ನುಡಿದಿವೆ. ಕಾಂಗ್ರೆಸ್‌ ಪ್ರತಿಪಕ್ಷಕ್ಕೆ ಸೀಮಿತಗೊಳ್ಳಲಿದೆ.
ಕೇರಳಂನಲ್ಲಿ ಯುಡಿಎಫ್‌ಗೆ ಅಧಿಕಾರ?:
ಕೇರಳಂ ವಿಧಾನಸಭೆಯ ಬಲ 140. ಬಹುಮತಕ್ಕೆ 71 ಸೀಟುಗಳು ಬೇಕು. ಕೇರಳಂನಲ್ಲಿ ಹ್ಯಾಟ್ರಿಕ್‌ ದಾಖಲಿಸುವ ಎಲ್‌ಡಿಎಫ್‌ ಕನಸು ನುಚ್ಚುನೂರಾಗುವ ಸಾಧ್ಯತೆಗಳಿವೆ. ಈ ಸಲ ಕಾಂಗ್ರೆಸ್‌ ನೇತೃತ್ವದ ಯುನೈಟೆಡ್‌ ಡೆಮಾಕ್ರಾಟಿಕ್‌ ಫ್ರಂಟ್‌ – ಯುಡಿಎಫ್‌, ಜಯಭೇರಿ ಬಾರಿಸಲಿದೆ ಎಂದು ಆಕ್ಸಿಸ್‌ ಮೈ ಇಂಡಿಯಾ, ಪಿ-ಮಾರ್ಕ್‌, ಮಾಟ್ರಿಜ್‌, ಮನೋರಮಾ ನ್ಯೂಸ್‌ ಸಿವೋಟರ್ಸ್‌ ಮತ್ತು ಜೆವಿಸಿ ಸಮೀಕ್ಷೆಗಳು ಹೇಳಿವೆ. ಬಿಜೆಪಿ ಕೇರಳಂನಲ್ಲಿ ಮೂರರಿಂದ ಏಳು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಗಳಿವೆ.
ಪುದುಚೇರಿಯಲ್ಲಿ ಎನ್‌ಡಿಎ?:
ಪುದುಚೇರಿ ವಿಚಾರದಲ್ಲಿ ಎಕ್ಸಿಟ್‌ ಪೋಲ್‌ ಏಜೆನ್ಸಿಗಳಿಗೆ ಯಾವುದೇ ಅನುಮಾನ ಇಲ್ಲ. 30 ಸದಸ್ಯಬಲದ ಪುದುಚೇರಿ ಅಸೆಂಬ್ಲಿಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ದಿಗ್ವಿಜಯ ಬಾರಿಸಲಿದೆ ಎಂದು ಎಲ್ಲಾ ಚುನಾವಣೋತ್ತರ ಭವಿಷ್ಯ ನುಡಿದಿವೆ.
ಪ. ಬಂಗಾಳದಲ್ಲಿ ದೀದಿಯೋ, ಮೋದಿಯೋ?
ಪಶ್ಚಿಮ ಬಂಗಾಳದ ಎಕ್ಸಿಟ್‌ ಪೋಲ್‌ನಲ್ಲಿ ಏಕಮತ ಇಲ್ಲ. 6 ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ, 4 ಸಮೀಕ್ಷೆಗಳು ಬಿಜೆಪಿ ಗೆಲುವಿನ ಭವಿಷ್ಯ ನುಡಿದಿವೆ. 2 ಸಮೀಕ್ಷೆಗಳು ಟಿಎಂಸಿಯೇ ಅಧಿಕಾರದಲ್ಲಿ ಮುಂದುವರಿಯಲಿದೆ ಎಂದು ಮುನ್ಸೂಚನೆ ನೀಡಿವೆ. ಪಿ-ಮಾರ್ಕ್‌, ಮಾಟ್ರಿಜ್‌, ಜೆವಿಸಿ, ಚಾಣಕ್ಯ ಈ ನಾಲ್ಕು ಸಮೀಕ್ಷೆಗಳಲ್ಲಿ ಬಿಜೆಪಿ ಸರಿಸುಮಾರು 150ಕ್ಕೂ ಅಧಿಕ ಸೀಟು ಗಳಿಸುವ ಸಾಧ್ಯತೆಗಳಿವೆ ಎಂದು ಹೇಳಿವೆ. ಪೀಪಲ್ಸ್‌ ಪಲ್ಸ್‌, ಜನಮತ ಪೋಲ್ಸ್‌ ಈ ಎರಡೂ ಸಮೀಕ್ಷೆಗಳ ಪ್ರಕಾರ ಟಿಎಂಸಿ 170ರಿಂದ 200 ಸೀಟು ಗೆದ್ದು ಅಧಿಕಾರದಲ್ಲಿ ಮುಂದುವರಿಯಲಿದೆ. ಅಂದ ಹಾಗೆ, 294 ಸದಸ್ಯ ಬಲದ ಪ.ಬಂಗಾಳ ಅಸೆಂಬ್ಲಿಯಲ್ಲಿ ಅಧಿಕಾರಕ್ಕೇರಲು 147 ಸೀಟುಗಳನ್ನು ಗೆಲ್ಲಲೇ ಬೇಕು.
ದ್ರಾವಿಡ ದಂಗಲ್‌ನಲ್ಲಿ ಅಚ್ಚರಿ ಫಲಿತಾಂಶ?:
ತಮಿಳುನಾಡಿನಲ್ಲಿ ಬಹುತೇಕ ಎಲ್ಲಾ ಎಕ್ಸಿಟ್‌ ಪೋಲ್‌ಗಳು ಡಿಎಂಕೆ ಅಧಿಕಾರದಲ್ಲಿ ಮುಂದುವರಿಯಲಿದೆ ಎಂದು ಭವಿಷ್ಯ ನುಡಿದಿವೆ. ಎಐಎಡಿಎಂಕೆ ನೇತೃತ್ವದ ಎನ್‌ಡಿಎ 50 ರಿಂದ 80 ಸ್ಥಾನಗಳನ್ನು ಗಳಿಸುವ ಸಾಧ್ಯತೆಗಳಿವೆ. ಆದರೆ, ಇಲ್ಲೊಂದು ಟ್ವಿಸ್ಟ್‌ ಇದೆ. ಆಕ್ಸಿಸ್‌ ಮೈ ಇಂಡಿಯಾ ಮಾತ್ರ ವಿಜಯ್‌ ನೇತೃತ್ವದ ಟಿವಿಕೆಗೆ ಬಹುಮತ ಸಿಗಲಿದೆ ಎಂದು ಹೇಳಿದೆ. ದಳಪತಿ ವಿಜಯ್‌ ನೇತೃತ್ವದ ಟಿವಿಕೆ ತನ್ನ ಚೊಚ್ಚಲ ಯತ್ನದಲ್ಲೇ 98ರಿಂದ 120 ಸ್ಥಾನ ಗಳಿಸುವ ಸಾಧ್ಯತೆಗಳಿವೆ ಎಂದು ಆಕ್ಸಿಸ್‌ ಮೈ ಇಂಡಿಯಾ ಹೇಳಿವೆ. 234 ಸದಸ್ಯಬಲದ ತಮಿಳುನಾಡು ಅಸೆಂಬ್ಲಿಯಲ್ಲಿ ಅಧಿಕಾರಕ್ಕೇರಲು 117 ಸೀಟುಗಳು ಬೇಕು.

Continue Reading

Latest

ತಮಿಳುನಾಡಿನಲ್ಲಿ ದಳಪತಿಯೇ ಅಧಿಪತಿ? ಎಂಜಿಆರ್‌ ಆಗ್ತಾರಾ ವಿಜಯ್‌?

VISTARANEWS.COM


on

ದ್ರಾವಿಡ ದಂಗಲ್‌ನಲ್ಲಿ ಅಚ್ಚರಿಯ ಫಲಿತಾಂಶದ ಸಾಧ್ಯತೆಯೊಂದನ್ನು ಎಕ್ಸಿಸ್‌ ಮೈ ಇಂಡಿಯಾ ಸಮೀಕ್ಷೆ ಪ್ರಕಟಿಸಿದೆ. ಆಕ್ಸಿಸ್‌ ಮೈ ಇಂಡಿಯಾ ಸಮೀಕ್ಷೆ ಪ್ರಕಾರ ಟಿವಿಕೆ ನಾಯಕ ವಿಜಯ್‌ ಮೊದಲ ಪ್ರಯತ್ನದಲ್ಲೇ ಅಭೂತಪೂರ್ವ ಯಶಸ್ಸು ಗಳಿಸಿದ್ದಾರೆ. ತಮಿಳುನಾಡಿನ ಎಲ್ಲಾ ಸಮೀಕ್ಷೆಗಳು ಡಿಎಂಕೆ ಅಧಿಕಾರಕ್ಕೇರಲಿದೆ ಎಂದು ಹೇಳುತ್ತಿರುವಾಗಲೇ, ಆಕ್ಸಿಸ್‌ ಮೈ ಇಂಡಿಯಾ ಮಾತ್ರ ಈ ಸಲ ವಿಜಯ್‌ ನಿಜವಾದ ಜನನಾಯಗನ್‌ ಎಂದಿದೆ.
ತಮಿಳುನಾಡಿನ ಸಾರಥ್ಯ ವಿಜಯ್‌ಗೆ?
ಆಕ್ಸಿಸ್‌ ಮೈ ಇಂಡಿಯಾ ಸಮೀಕ್ಷೆ ಪ್ರಕಾರ ಟಿವಿಕೆಗೆ 98 ರಿಂದ 120 ಸೀಟುಗಳು ಸಿಗಲಿವೆ. ಡಿಎಂಕೆ-ಕಾಂಗ್ರೆಸ್‌ ಮೈತ್ರಿಕೂಟಕ್ಕೆ 92ರಿಂದ 110 ಹಾಗೂ 22ರಿಂದ 32 ಕ್ಷೇತ್ರಗಳಲ್ಲಿ ಎನ್‌ಡಿಎ ಗೆಲ್ಲುವ ಸಾಧ್ಯತೆಗಳಿವೆ. 234 ಸದಸ್ಯಬಲದ ತಮಿಳುನಾಡು ಅಸೆಂಬ್ಲಿಯಲ್ಲಿ 117 ಸೀಟು ಗೆಲ್ಲುವ ಪಕ್ಷದ ನಾಯಕ ಮುಖ್ಯಮಂತ್ರಿ ಆಗ್ತಾರೆ. ಸಮೀಕ್ಷೆ ಪ್ರಕಾರ ಟಿವಿಕೆ ಗರಿಷ್ಠ 120 ಸೀಟು ಗೆಲ್ಲುವ ಸಾಧ್ಯತೆಗಳಿವೆ.̇̇̇
ವೋಟ್‌ ಶೇರ್‌ನಲ್ಲೂ ಟಿವಿಕೆ ದಿಗ್ವಿಜಯ?
ಆಕ್ಸಿಸ್‌ ಮೈ ಇಂಡಿಯಾ ವೋಟ್‌ ಶೇರ್‌ ಸಮೀಕ್ಷೆಯನ್ನೂ ಪ್ರಕಟಿಸಿದೆ. ಅದರ ಪ್ರಕಾರ ಟಿವಿಕೆಗೆ ಶೇಕಡಾ 35ರಷ್ಟು ಮತ ಸಿಗಲಿದೆ. ಸ್ಟಾಲಿನ್‌ ನೇತೃತ್ವದ ಡಿಎಂಕೆ-ಕಾಂಗ್ರೆಸ್‌ ಮೈತ್ರಿಕೂಟಕ್ಕೂ ಶೇ. 35ರಷ್ಟು ವೋಟ್‌ ಶೇರ್‌ ಸಿಗಲಿದೆ. ಎನ್‌ಡಿಎಗೆ 23 ಶೇಕಡಾ ಮತ ಸಿಗುವ ಸಾಧ್ಯತೆಗಳಿವೆ.
ಸಿಎಂ ಸ್ಥಾನಕ್ಕೆ ವಿಜಯ್‌ ಬೆಸ್ಟ್‌?
ಮುಖ್ಯಮಂತ್ರಿ ಸ್ಥಾನಕ್ಕೆ ಯಾರು ಉತ್ತಮ ಅಭ್ಯರ್ಥಿ ಎಂಬ ಪ್ರಶ್ನೆಯನ್ನೂ ಆಕ್ಸಿಸ್‌ ಮೈ ಇಂಡಿಯಾ ಜನರ ಮುಂದಿಟ್ಟಿದೆ. ಅದರ ಪ್ರಕಾರ ಶೇ. 37ರಷ್ಟು ಮತದಾರರು ವಿಜಯ್‌ ಪರ ಒಲವು ತೋರಿದ್ದಾರೆ. ಶೇ. 35ರಷ್ಟು ಮಂದಿ ಮಾತ್ರ ಸ್ಟಾಲಿನ್‌ ಬೆಸ್ಟ್‌ ಅಂದಿದ್ದಾರೆ.
ವಿಜಯ್‌ಗೆ ಯುವ ಸಮೂಹದ ಬೆಂಬಲ
ಸರ್ವೇ ಪ್ರಕಾರ ಶೇ. 68ರಷ್ಟು ಹೊಸ ವೋಟರ್ಸ್‌ ವಿಜಯ್‌ಗೆ ಬೆಂಬಲ ನೀಡಿದ್ದಾರೆ. 20ರಿಂದ 29 ವಯೋಮಾನದ ಶೇ. 59ರಷ್ಟು ಯುವಕರು ಟಿವಿಕೆಗೆ ಜೈ ಎಂದಿದ್ದಾರೆ. 30-39 ವಯೋಮಾನದ ಶೇ. 45 ಮಂದಿ ದಳಪತಿಯನ್ನು ದಡಮುಟ್ಟಿಸಿದ್ದಾರೆ ಎನ್ನುತ್ತಿದೆ ಸಮೀಕ್ಷೆ.

Continue Reading

Latest

ರಾಜ್ಯದಲ್ಲಿ ನಾಯಕತ್ವ ಗೊಂದಲ: “ಸದ್ಯಕ್ಕೆ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ” – ಖರ್ಗೆ ಸ್ಪಷ್ಟನೆ

VISTARANEWS.COM


on

ಸದ್ಯಕ್ಕೆ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳುವ ಮೂಲಕ ನಾಯಕತ್ವ ಗೊಂದಲಕ್ಕೆ ತೆರೆ ಎಳೆದಿದ್ದಾರೆ. ಕಲಬುರಗಿಯಲ್ಲಿ ಇಂದು ಮಾತನಾಡಿದ ಅವರು ಈಗಾಗಲೇ ರಾಜ್ಯದಲ್ಲಿ ಸಿಎಂ ಇದ್ದಾರೆ. ಹೀಗಾಗಿ ಸದ್ಯಕ್ಕೆ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ. ಭವಿಷ್ಯದಲ್ಲಿ ಅಂಥ ಪರಿಸ್ಥಿತಿ ಬಂದರೆ ನಾವು ಎಲ್ಲರೂ ಕೂಡಿ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. ಸಿಎಂ ಸ್ಥಾನಕ್ಕೆ ಸಂಬಂಧಿಸಿದಂತೆ ವಿವಿಧ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾರು ಏನು ಹೇಳುತ್ತಾರೆ ಎನ್ನುವುದಕ್ಕಿಂತ ಪಕ್ಷದ ಐಡಿಯಾಲಜಿ ಮತ್ತು ಹಲವು ವರ್ಷಗಳ ಪರಿಶ್ರಮ ಮುಖ್ಯ ಎಂದು ಹೇಳಿಕೆ ನೀಡಿದ್ದಾರೆ. ಪಕ್ಷದ ಮಹತ್ವದ ನಿರ್ಧಾರಗಳನ್ನು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರೊಂದಿಗೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.

Continue Reading
Advertisement
Latest1 hour ago

ಮರು ಮತ ಎಣಿಕೆಯಲ್ಲೂ ಜಯ ಸಾಧಿಸಿದ ಶಾಸಕ ಟಿ.ಡಿ ರಾಜೇಗೌಡ

Latest7 hours ago

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಬಾಂಗ್ಲಾದೇಶಕ್ಕೆ ಏಕೆ ಟೆನ್ಶನ್‌?

Latest8 hours ago

ಜೂನಿಯರ್‌ ಡಾಲಿ ಎಂಟ್ರಿ.. ಗಂಡು ಮಗುವಿಗೆ ಜನ್ಮ ನೀಡಿದ ಧನ್ಯತಾ

Latest1 day ago

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಭಾರೀ ಏರಿಕೆ: ಒಂದೇ ದಿನ 993 ರೂ ಹೆಚ್ಚಳ

Latest2 days ago

ಜನಪ್ರಿಯತೆಯಲ್ಲಿ ಪ್ರಧಾನಿ ಮೋದಿ ಈಗಲೂ ನಂ.1

Latest2 days ago

ಕುರ್ಚಿ ಕದನಕ್ಕೆ ಹೊಸ ಟ್ವಿಸ್ಟ್ : ದಲಿತ ಸಿಎಂ ಕೂಗು ಜೋರು

Latest2 days ago

ಟಿವಿಕೆ-ಎನ್‌ಡಿಎ ಮೈತ್ರಿ?, ತಮಿಳುನಾಡಿನಲ್ಲಿ ಸಂಚಲನ, ಸ್ಟಾಲಿನ್‌ ಸಭೆ

Latest2 days ago

ಎಕ್ಸಿಟ್‌ ಪೋಲ್‌: ಅಸ್ಸಾಂ, ಪುದುಚೇರಿ ಪ.ಬಂಗಾಳದಲ್ಲಿ ಬಿಜೆಪಿ, ತ.ನಾಡಲ್ಲಿ ಡಿಎಂಕೆ, ಕೇರಳಂನಲ್ಲಿ ಯುಡಿಎಫ್‌

Latest2 days ago

ತಮಿಳುನಾಡಿನಲ್ಲಿ ದಳಪತಿಯೇ ಅಧಿಪತಿ? ಎಂಜಿಆರ್‌ ಆಗ್ತಾರಾ ವಿಜಯ್‌?

Latest2 days ago

ಪಂಚರಾಜ್ಯ ಚುನಾವಣಾ ಫಲಿತಾಂಶ: “ಎಕ್ಸಿಟ್ ಪೋಲ್‌ಗಿಂತ ಉತ್ತಮ ಪ್ರದರ್ಶನ ನಿರೀಕ್ಷೆ” – ಖರ್ಗೆ

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌