Site icon Vistara News

Astrology Answers | ನನ್ನ ಆರೋಗ್ಯ ಮತ್ತು ಆರ್ಥಿಕ ಪರಿಸ್ಥಿತಿ ಸರಿಯಾಗಿಲ್ಲ, ಏನು ಮಾಡಬೇಕು ಗುರೂಜಿ?

ಭವಿಷ್ಯ ಪ್ರಶ್ನೋತ್ತರ rajaguru

rajaguru

ಪ್ರಶ್ನೆ: ನನ್ನ ಆರೋಗ್ಯ ಮತ್ತು ಆರ್ಥಿಕ ಪರಿಸ್ಥಿತಿಯು ಸರಿಯಾಗಿಲ್ಲ. ಈ ಕುರಿತು ತಿಳಿಸಿ ಗುರೂಜಿ.
ಜನ್ಮದಿನಾಂಕ : 05-04-1981 ನಕ್ಷತ್ರ: ರೇವತಿ

ಪರಿಹಾರ: ನೀವು ನೀಡಿದ ಮಾಹಿತಿಯ ಪ್ರಕಾರ ನಿಮ್ಮದು ರೇವತಿ ನಕ್ಷತ್ರ, ಮೀನ ರಾಶಿ. ಲಗ್ನದಲ್ಲಿ ರಾಹು ಇದ್ದಾನೆ. ಐದು ಗ್ರಹಗಳು ಮೀನ ರಾಶಿಯಲ್ಲಿವೆ. ಇನ್ನೇನು ಶನಿ ಹನ್ನೆರಡನೇ ಮನೆಗೆ ಬರುತ್ತಿದ್ದಾನೆ. ಚಂದ್ರ ದಶಾ ಶನಿ ಭುಕ್ತಿ ನಡೆಯುತ್ತಿದೆ. ನಿಮಗೆ 2022ರ ಮಧ್ಯಭಾಗದವರೆಗೂ ದಿನಗಳು ಚೆನ್ನಾಗಿಯೇ ಇದ್ದವು. ನೀವು ಮೈಮರೆತಿದ್ದರಿಂದಾಗಿ ಗುರಿಯಿಲ್ಲದೆ ನಡೆದಿದ್ದೀರಿ. ದೇವರು ಕೊಟ್ಟ ಒಳ್ಳೆಯ ಸಮಯವನ್ನು ಸದುಪಯೋಗ ಪಡಿಸಿಕೊಂಡಿಲ್ಲ. ನಿಮಗೆ ಸರಿಯಾದ ಗುರುವೂ ಇಲ್ಲ, ಗುರಿಯೂ ಇಲ್ಲದಿರುವ ಕಾರಣದಿಂದ ಈ ಸಂಕಷ್ಟ ಬಂದಿದೆ.

ಮೀನ ರಾಶಿಗೆ ಗುರುವು ಎರಡನೇ ಮನೆಗೆ ಹೋಗುತ್ತಾನೆ. ಗುರುವನ್ನು ಅಚಲವಾಗಿ ನಂಬಿ. ಗುರು ಎಂದರೆ ಈಶ್ವರ ಸ್ವರೂಪ. ಉಮಾಮಹೇಶ್ವರನನ್ನು ಪ್ರತಿನಿತ್ಯ ಪೂಜೆ ಮಾಡಿ. “ದಾರಿದ್ರ್ಯ ದಹನ ಶಿವ ಸ್ತೋತ್ರಂʼʼ ಪಾರಾಯಣ ಮಾಡಿ. ಏಳುವರೆ ವರ್ಷದ ಶನಿ ಆರಂಭವಾಗುತ್ತಿದೆ. ಈ ಬಗ್ಗೆ ಭಯ ಪಡಬೇಡಿ. ಗುರುವು ನಿಮಗೆ ತೊಂದರೆ ಮಾಡಲು ಬಿಡುವುದಿಲ್ಲ. ನಿಮ್ಮ ತಂದೆ-ತಾಯಿರನ್ನೇ ಪಾರ್ವತಿ ಪರಮೇಶ್ವರರು ಎಂದು ಭಾವಿಸಿ, ಪ್ರತಿ ನಿತ್ಯ ಅವರಿಗೆ ನಮಸ್ಕರಿಸಿ, ಅವರ ಆಶೀರ್ವಾದ ಪಡೆಯಿರಿ, ಒಳ್ಳೆಯದಾಗುತ್ತದೆ.

ನೀವೂ ಪ್ರಶ್ನೆ ಕೇಳಬಹುದು…
ಇದು ವಿಸ್ತಾರನ್ಯೂಸ್‌ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್‌. ದ್ವಾರಕನಾಥ್‌ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ಇ-ಮೇಲ್‌ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕೇಳಲು ನಮ್ಮ ಇ-ಮೇಲ್‌ ವಿಳಾಸ: janasamparka@vistaranews.com

ಇದನ್ನೂ ಓದಿ | Weekly Horoscope | ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ?

Exit mobile version