ಪ್ರಶ್ನೆ: ನಾನು ಸದ್ಯ ಸ್ನಾತಕೋತ್ತರ ಪದವಿ (ಗಣಿತಶಾಸ್ತ್ರ ) ಓದುತ್ತಿದ್ದೇನೆ. ನನಗೆ ಮುಂದೆ ಯಾವ ವೃತ್ತಿಗೆ ಹೋಗಬೇಕು ಎಂದು ಸ್ಪಷ್ಟವಾಗಿ ನಿರ್ಧಾರ ಮಾಡಲು ಸಾಧ್ಯವಾಗುತ್ತಿಲ್ಲ. ನನಗೆ ಸರ್ಕಾರಿ ಕೆಲಸ ಯೋಗ ಇದೆಯೇ? ದಯಮಾಡಿ ತಿಳಿಸಿಕೊಡಿ ಗುರೂಜಿ.
ಜನ್ಮದಿನಾಂಕ : 26-12-1968 ನಕ್ಷತ್ರ: ಉತ್ತರಾಭಾದ್ರ
ಪರಿಹಾರ: ನಿಮ್ಮದು ಅನುರಾಧ ನಕ್ಷತ್ರ. ಇದು ಮಹಾ ನಕ್ಷತ್ರ. ಹೀಗಾಗಿ ನಿಮಗೆ ಇಂದಿನ ಚಿಂತೆ ಬೇಡ. ನೀವು ಸಾಧನೆ ಮಾಡುವ ಕುರಿತು ಯೋಚಿಸಿ. ಈಗ ನೀವು ಓದನ್ನು ಶ್ರದ್ಧೆಯಿಂದ ಮುಂದುವರಿಸಿ. ಒಳ್ಳೆಯ ಸಾಧನೆ ಮಾಡುವ ಮೂಲಕ ನಿಮ್ಮ ಗುರುಗಳಿಗೆ, ಶಿಕ್ಷಣ ಸಂಸ್ಥೆಗೆ ಕೀರ್ತಿಯನ್ನು ತನ್ನಿ. ಗುರು ವಾಕ್ಯವನ್ನು ಪರಿಪಾಲನೆ ಮಾಡಿ. ಮುಂದೆ ನಿಮಗೆ ಸರ್ಕಾರಿ ಸಿಗುವುದು ಕಷ್ಟವೇನಲ್ಲ. ಒಳ್ಳೆಯದಾಗಲಿ.
ನೀವೂ ಪ್ರಶ್ನೆ ಕೇಳಬಹುದು…
ಇದು ವಿಸ್ತಾರನ್ಯೂಸ್ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್. ದ್ವಾರಕನಾಥ್ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ಇ-ಮೇಲ್ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕೇಳಲು ನಮ್ಮ ಇ-ಮೇಲ್ ವಿಳಾಸ: janasamparka@vistaranews.com
ಇದನ್ನೂ ಓದಿ | Weekly Horoscope | ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ?