Site icon Vistara News

Astrology Answers | ನನ್ನ ಎರಡನೇ ಮದುವೆ ಬಗ್ಗೆ ತಿಳಿಸಿ ಗುರೂಜಿ

ಭವಿಷ್ಯ ಪ್ರಶ್ನೋತ್ತರ rajaguru

rajaguru

ಪ್ರಶ್ನೆ: ಮೊದಲನೇ ಮದುವೆ ಡಿವೋರ್ಸ್‌ ಆಗಿದೆ, ಎರಡನೇ ಮದುವೆ ಬಗ್ಗೆ ಮತ್ತು ಮುಂದಿನ ಜೀವನದ ಬಗ್ಗೆ ಹೇಳಿ ಗುರುಗಳೇ.
ಜನ್ಮದಿನಾಂಕ : 27-02-1990 ನಕ್ಷತ್ರ: ಉತ್ತರಾಭಾದ್ರ

ಪರಿಹಾರ: ಉತ್ತರಾ ಭಾದ್ರ ಮೀನ ರಾಶಿಯ ನಿಮಗೆ ಶುಕ್ರದಶಾ ರವಿ ಭುಕ್ತಿ ನಡೆಯುತ್ತಿದೆ. ಹನ್ನೆರಡನೇ ಮನೆಯಲ್ಲಿ ಗುರು, ಲಗ್ನದಲ್ಲಿ ಕೇತು ಇದ್ದಾನೆ. ನಿಮ್ಮ ಮೊದಲನೇ ಮದುವೆ ಮುರಿದು ಬೀಳಲು ನೀವು ಮಾತ್ರ ಕಾರಣರಲ್ಲ. ಕೇತು ಕೂಡ ಕಾರಣ. ನೀವು ದುಡುಕಿನ ನಿರ್ಧಾರ ತೆಗೆದುಕೊಳ್ಳುತ್ತಿದ್ದೀರಿ. ಸಂಸಾರ ನಡೆಸಲು ಸಂಯಮ ಮುಖ್ಯ. ಕೋಪ ತಾಪ ಬಿಟ್ಟು ಹೊಂದಾಣಿಕೆ ಕಲಿಯಿರಿ. ಏಳನೇ ಮನೆಯಲ್ಲಿ ಶನಿ ಇರುವುದರಿಂದ ನೀವು ಎಚ್ಚರಿಕೆಯಿಂದಿರಬೇಕು. ನಿಮಗೆ ಮತ್ತೊಂದು ಮದುವೆಯಾಗಲು “ಸರ್ವಮಂಗಳ ಮಾಂಗಲ್ಯೆʼʼ ಮಂತ್ರದಿಂದ ಚಂಡಿಕಾ ಪಾರಾಯಣ ಮಾಡಿಸಿ. ನೀವು ಕೂಡ ಪ್ರತಿನಿತ್ಯ ದುರ್ಗಾ ಅಷ್ಟೋತ್ತರ ಓದಿ. ಒಳ್ಳೆಯ ವಧು ಸಿಕ್ಕಿ ನಿಮ್ಮ ಮದುವೆ ನೆರವೇರುತ್ತದೆ. ಒಳ್ಳೆಯದಾಗಲಿ.

ನೀವೂ ಪ್ರಶ್ನೆ ಕೇಳಬಹುದು…
ಇದು ವಿಸ್ತಾರನ್ಯೂಸ್‌ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್‌. ದ್ವಾರಕನಾಥ್‌ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ಇ-ಮೇಲ್‌ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕೇಳಲು ನಮ್ಮ ಇ-ಮೇಲ್‌ ವಿಳಾಸ: janasamparka@vistaranews.com

ಗಮನಿಸಿ: ಜನ್ಮದಿನಾಂಕ, ರಾಶಿ, ನಕ್ಷತ್ರದ ಬಗ್ಗೆ ಸರಿಯಾದ ಮಾಹಿತಿ ನೀಡದಿರುವ, ಪ್ರಶ್ನೆ ನಿಖರವಾಗಿರದೇ ಇದ್ದಲ್ಲಿ ಉತ್ತರಿಸಲಾಗುವುದಿಲ್ಲ.

ಇದನ್ನೂ ಓದಿ | Weekly Horoscope | ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ?

Exit mobile version