ಪ್ರಶ್ನೆ: ನನ್ನ ಜಾತಕದ ಪ್ರಕಾರ ನನಗೆ ಭೂಮಿಯ ಯೋಗ ಇದೆಯೇ ಎಂದು ತಿಳಿಸಿ? ಇದ್ದರೆ ಯಾವ ವಯಸ್ಸಿನಲ್ಲಿ ಹೇಳಿ ಗುರೂಜಿ?
ಜನ್ಮದಿನಾಂಕ : 17-11-1991 ನಕ್ಷತ್ರ: ಪೂರ್ವಭಾದ್ರ
ಪರಿಹಾರ: ಪೂರ್ವಭಾದ್ರ ನಕ್ಷತ್ರದ 4ನೇ ಪಾದದಲ್ಲಿ ಹುಟ್ಟಿದ ನಿಮಗೆ ದ್ವಾದಶಕ್ಕೆ ಶನಿ ಬಂದಿದ್ದಾನೆ. ಏಕಾದಶದಲ್ಲಿ ಶನಿ ಇದ್ದಾಗ ನೀವು ಪ್ರಯತ್ನ ಮಾಡಿದ್ದರೆ ಖಂಡಿತವಾಗಿಯೂ ಭೂಮಿಯನ್ನು ಕೊಳ್ಳಬಹುದಿತ್ತು. ಅರಸೀಕೆರೆ ಹತ್ತಿರ ಇರುವ ಭೂವರಾಹ ಸ್ವಾಮಿ ದೇವಸ್ಥಾನದಲ್ಲಿ ಪ್ರಾರ್ಥನೆ ಇಟ್ಟು ಬನ್ನಿ. ದೇವರು ಒಲಿದರೆ ಕ್ಷಣಾರ್ಧದಲ್ಲಿ ಜಾಗವು ಸಿಕ್ಕಿ ಮನೆ ಕಟ್ಟಲು ಅನುಕೂಲಮಾಡಿಕೊಡುತ್ತಾನೆ. ನೀವು ಸುಂದರವಾದ ಮನೆ ಕಟ್ಟಬಹುದು. ಶನಿಯು ದ್ವಾದಶದಲ್ಲಿರುವುದರಿಂದ ಅಪಾಯವನ್ನು ಉಪಾಯದಿಂದ ದಾಟಬೇಕು. ಸಾಲ-ಸೂಲವನ್ನು ಮೈಮೇಲೆ ಎಳೆದುಕೊಳ್ಳಬಾರದು. ಏಳುವರೆ ವರ್ಷ ಶನಿಯ ಸಂಚಾರ ಮುಗಿಯುವವರೆಗೆ ಎಚ್ಚರವಾಗಿರಬೇಕು. ಮನೆ ದೇವರ ಪ್ರಾರ್ಥನೆ ಇರಲಿ. ಭೂಮಿಗೆ ಒಡೆಯನಾದ ಆದಿಶೇಷನನ್ನು, ಸುಬ್ರಹ್ಮಣ್ಯನನ್ನು ಪ್ರಾರ್ಥಿಸಿ. ಇಷ್ಟಾರ್ಥ ನೆರವೇರಿಸಿಕೊಳ್ಳಿ.
ನೀವೂ ಪ್ರಶ್ನೆ ಕೇಳಬಹುದು…
ಇದು ವಿಸ್ತಾರನ್ಯೂಸ್ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್. ದ್ವಾರಕನಾಥ್ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ಇ-ಮೇಲ್ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕೇಳಲು ನಮ್ಮ ಇ-ಮೇಲ್ ವಿಳಾಸ: janasamparka@vistaranews.com
ಗಮನಿಸಿ: ಜನ್ಮದಿನಾಂಕ, ರಾಶಿ, ನಕ್ಷತ್ರದ ಬಗ್ಗೆ ಸರಿಯಾದ ಮಾಹಿತಿ ನೀಡದಿರುವ, ಪ್ರಶ್ನೆ ನಿಖರವಾಗಿರದೇ ಇದ್ದಲ್ಲಿ ಉತ್ತರಿಸಲಾಗುವುದಿಲ್ಲ.
ಇದನ್ನೂ ಓದಿ | Weekly Horoscope | ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ?