ಪ್ರಶ್ನೆ : ಹೊಸ ವ್ಯಾಪಾರ ಪ್ರಾರಂಭ ಮಾಡಬೇಕೆಂದುಕೊಂಡಿದ್ದೇನೆ. ಈಗ ಶುರು ಮಾಡಬಹುದೇ ಗುರೂಜಿ?
ರಾಶಿ: ಮಕರ ನಕ್ಷತ್ರ: ಶ್ರವಣ
ಪರಿಹಾರ: ಖಂಡಿತವಾಗಿಯೂ ಬೇಡ! ಸದ್ಯಕ್ಕೆ ಹೊಸ ವ್ಯಾಪಾರದ ಪ್ರಯತ್ನ ಮಾಡಬೇಡಿ. ಶನಿ ಸಂಚಾರ ಮುಗಿದ ಮೇಲೆ, ಕೆಲಸದಲ್ಲಿಯೇ ಇದ್ದುಕೊಂಡು ನಿರ್ಧಾರ ತೆಗೆದುಕೊಂಡರೆ ಉತ್ತಮ. ಇಲ್ಲವಾದರೆ ಧನದ ಗಂಟನ್ನು ಹಾಗೂ ಮಾಡುವ ಕೆಲಸದಿಂದ ಸಂಬಂಧವನ್ನೂ ಕಳೆದುಕೊಳ್ಳ ಬೇಕಾಗುತ್ತದೆ. ಶನಿ ಮೀನ ರಾಶಿ ಮುಟ್ಟುವವರೆಗೆ ಗಣಪತಿಯನ್ನು ಪ್ರತಿನಿತ್ಯ ಪೂಜಿಸಿ, ಪ್ರಾರ್ಥಿಸಿ. ಶನಿ ಅಷ್ಟೋತ್ತರ ಪಾರಾಯಣ ಮಾಡಿ. ನಿಮ್ಮ ಚಂಚಲ ಮನಸ್ಸನ್ನು ಕಟ್ಟಿ ಹಾಕಿ, ಇದ್ದ ಉದ್ಯೋಗದಲ್ಲಿ ಮುಂದುವರಿದು, ಅಲ್ಲಿಯ ಮಾಲೀಕರಿಗೆ ಸತ್ಯವಾಗಿ ನಡೆದರೆ ದೇವರೇ ಮೆಚ್ಚುತ್ತಾನೆ. ಶಾಂತಿ, ಸಂಯಮದಿಂದ ವರ್ತಿಸಿ. ಮುಂದೆ ನೀವೇ ಹೊಸ ವ್ಯಾಪಾರ ಆರಂಭಿಸುವ ಕಾಲ ಕೂಡಿ ಬರಲಿದೆ. ಶುಭವಾಗಲಿ.
ನೀವೂ ಪ್ರಶ್ನೆ ಕೇಳಬಹುದು…
ಇದು ವಿಸ್ತಾರನ್ಯೂಸ್ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್. ದ್ವಾರಕನಾಥ್ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ಇ-ಮೇಲ್ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕೇಳಲು ನಮ್ಮ ಇ-ಮೇಲ್ ವಿಳಾಸ: janasamparka@vistaranews.com
ಗಮನಿಸಿ: ಜನ್ಮದಿನಾಂಕ, ರಾಶಿ, ನಕ್ಷತ್ರದ ಬಗ್ಗೆ ಸರಿಯಾದ ಮಾಹಿತಿ ನೀಡದಿರುವ, ಪ್ರಶ್ನೆ ನಿಖರವಾಗಿರದೇ ಇದ್ದಲ್ಲಿ ಉತ್ತರಿಸಲಾಗುವುದಿಲ್ಲ.
ಇದನ್ನೂ ಓದಿ: Weekly Horoscope : ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ?