ಪ್ರಶ್ನೆ: ನನ್ನ ಮೊದಲ ಮದುವೆ ಮುರಿದು ಬಿದ್ದಿದೆ. ಹೀಗಾಗಿ ಮತ್ತೊಂದು ಮದುವೆಯಾಗಬೇಕೆಂದು ಮನೆಯವರು ಒತ್ತಾಯಿಸುತ್ತಿದ್ದಾರೆ. ಮರು ಮದುವೆ ಆಗಬಹುದೇ?
ರಾಶಿ: ತುಲಾ ನಕ್ಷತ್ರ: ವಿಶಾಖ
ಪರಿಹಾರ: ಸಂಘ ಜೀವಿಯಾದ ಮನುಷ್ಯನಿಗೆ ಒಂಟಿಯಾಗಿ ಬದುಕುವುದು ಬಹಳ ಕಷ್ಟ. ಹೀಗಾಗಿ ನೀವು ಮರು ಮದುವೆಗೆ ತೀರ್ಮಾನಿಸಿರುವುದು ಸರಿಯಾಗಿದೆ. ತುಲಾ ರಾಶಿಯವರಿಗೆ ಪಂಚಮದಲ್ಲಿ ಶನಿ ಇರುವುದರಿಂದ ವಿವಾಹದ ವಿಷಯದಲ್ಲಿ ನೀವು ಎಚ್ಚರಿಕೆಯಿಂದ ಸಾಗಬೇಕು. ಮದುವೆಗೆ ಸಂಬಂಧ ಕೂಡಿ ಬರುವುದು ಕೊಂಚ ತಡವಾದರೂ ಯೋಗ್ಯವಾದ ಕನ್ಯೆಯನ್ನು ಪಡೆಯುತ್ತೀರಿ. ನಿಮ್ಮ ಕುಲ ದೇವರನ್ನು ಮತ್ತು ಕುಲ ಗುರುಗಳನ್ನು ಆರಾಧಿಸಿ. ಮದುವೆಯ ನಂತರ ಹೆಂಡಂತಿಯೊಡನೆ ಗಿರಿಜಾ ಕಲ್ಯಾಣ ಮಾಡಿಸುತ್ತೇನೆಂದು ಕುಲ ದೇವರಲ್ಲಿ ಪ್ರಾರ್ಥನೆಯನ್ನು ಇರಿಸಿ. ಬೇಗನೆ ಸಂಬಂಧ ಕೂಡಿ ಬರಲಿದೆ. ಶುಭವಾಗಲಿ.
ನೀವೂ ಪ್ರಶ್ನೆ ಕೇಳಬಹುದು…
ಇದು ವಿಸ್ತಾರನ್ಯೂಸ್ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್. ದ್ವಾರಕನಾಥ್ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ವಾಟ್ಸ್ ಆ್ಯಪ್ ಸಂಖ್ಯೆ ಅಥವಾ ಇ-ಮೇಲ್ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕಳುಹಿಸಲು ವಾಟ್ಸ್ ಆ್ಯಪ್ ಸಂಖ್ಯೆ: 9481024181, ಇ-ಮೇಲ್ ವಿಳಾಸ: janasamparka@abhilashbc
ಗಮನಿಸಿ: ಜನ್ಮದಿನಾಂಕ, ರಾಶಿ, ನಕ್ಷತ್ರದ ಬಗ್ಗೆ ಸರಿಯಾದ ಮಾಹಿತಿ ನೀಡದಿರುವ, ಪ್ರಶ್ನೆ ನಿಖರವಾಗಿರದೇ ಇದ್ದಲ್ಲಿ ಉತ್ತರಿಸಲಾಗುವುದಿಲ್ಲ.
ಇದನ್ನೂ ಓದಿ: Ugadi Horoscope 2023 : ಯುಗಾದಿ ಭವಿಷ್ಯ; ಹೊಸ ಸಂವತ್ಸರದಲ್ಲಿ ಯಾವೆಲ್ಲಾ ರಾಶಿಗಳಿಗೆ ಶುಭಾಶುಭ ಫಲಗಳಿವೆ?