ugadi horoscope 2023 shobhakruth nama samvatsara rashi phala in kannadaUgadi Horoscope 2023 : ಯುಗಾದಿ ಭವಿಷ್ಯ; ಹೊಸ ಸಂವತ್ಸರದಲ್ಲಿ ಯಾವೆಲ್ಲಾ ರಾಶಿಗಳಿಗೆ ಶುಭಾಶುಭ ಫಲಗಳಿವೆ? - Vistara News

ಪ್ರಮುಖ ಸುದ್ದಿ

Ugadi Horoscope 2023 : ಯುಗಾದಿ ಭವಿಷ್ಯ; ಹೊಸ ಸಂವತ್ಸರದಲ್ಲಿ ಯಾವೆಲ್ಲಾ ರಾಶಿಗಳಿಗೆ ಶುಭಾಶುಭ ಫಲಗಳಿವೆ?

Ugadi Horoscope 2023 : ಹೊಸ ಸಂವತ್ಸರ ಬಂದಿದೆ. ಈ ಶೋಭಕೃತು ನಾಮ ಸಂವತ್ಸರದಲ್ಲಿ ನಿಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆಗಳಾಗಲಿವೆ? ನಿಮ್ಮ ರಾಶಿಗಿರುವ ಶುಭಾಶುಭ ಫಲಗಳೇನು? ತಿಳಿಯಲು ಇಲ್ಲಿ ಓದಿ.

VISTARANEWS.COM


on

ugadi horoscope 2023 shobhakruth nama samvatsara rashi phala in kannada
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೋಭಕೃತು ನಾಮ ಸಂವತ್ಸರ ಆರಂಭವಾಗಿದೆ (Ugadi Horoscope 2023). ಮುಂದಿನ ವರ್ಷದ ಅಂದರೆ 2024ರ ಏಪ್ರಿಲ್ 8ರ ವರೆಗೆ ಈ ಸಂವತ್ಸರ ಇರಲಿದೆ. ಈ ನವ ಸಂವತ್ಸರದಲ್ಲಿ ಶನಿ ಗ್ರಹವು ಯುಗಾದಿ ಆರಂಭದಿಂದ ಸಂವತ್ಸರದ ಅಂತ್ಯದ ತನಕ ಈಗಿರುವ ಕುಂಭ ರಾಶಿಯಲ್ಲಿಯೇ ಸಂಚಾರ ಮುಂದುವರಿಸಲಿದೆ. ಇನ್ನು ಗುರು ಗ್ರಹವು ಇದೇ ಏಪ್ರಿಲ್ 22 ತನಕ ಮೀನ ರಾಶಿಯಲ್ಲಿದ್ದು, ಏಪ್ರಿಲ್ 22 ನಂತರ ಈ ಸಂವತ್ಸರದ ಅಂತ್ಯದ ತನಕ ಮೇಷ ರಾಶಿಯಲ್ಲಿ ಸಂಚಾರ ನಡೆಸಲಿದೆ.

ಯುಗಾದಿ ಆರಂಭದಿಂದ ಅಕ್ಟೋಬರ್ 30ರವರೆಗೆ ರಾಹು ಮೇಷದಲ್ಲಿ, ತುಲಾದಲ್ಲಿ ಕೇತು ಇದ್ದು, ಅಕ್ಟೋಬರ್ 30 ರಿಂದ ಸಂವತ್ಸರದ ಕೊನೆ ತನಕ ಮೀನದಲ್ಲಿ ರಾಹು, ಕನ್ಯಾದಲ್ಲಿ ಕೇತು ಸಂಚಾರ ನಡೆಸಲಿವೆ. ಈ ಸಂವತ್ಸರದಲ್ಲಿ ಮೇಷದಿಂದ ಮೀನದ ತನಕ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿರುತ್ತದೆ ಎಂಬುದನ್ನು ನೋಡೋಣ;

ಮೇಷ: ಸ್ವತಂತ್ರ ಗುರುವಿನಿಂದ ರಕ್ಷಣೆ

ugadi horoscope 2023

ಮೇಷ ರಾಶಿಯವರಿಗೆ ಗುರು ದ್ವಾದಶದಲ್ಲಿದ್ದು, ಏಕಾದಶ ಶನಿ ಇದ್ದಾನೆ. ಏಪ್ರಿಲ್ 21ನಂತರ ಗುರು ವೃಷಭಕ್ಕೆ ಹೋದಾಗ ಬೃಹಸ್ಪತಿ ಸಂಧಿ (ರಾಹು ದಶೆಯು ಮುಗಿದು ಗುರು ದಶೆಯು ಶುರುವಾಗಿದ್ದರಿಂದ ರಾಹು- ಬೃಹಸ್ಪತಿ ಸಂಧಿ) ಸಂಭವಿಸುತ್ತದೆ. ಈ ಸಂದರ್ಭದಲ್ಲಿ ನೀವು ಎಚ್ಚರ ವಹಿಸದಿದ್ದರೆ ಕಾರ್ಯದಲ್ಲಿ ಅಲ್ಪ ತೊಡಕು, ವಿಘ್ನ ಉಂಟಾಗುವ ಸಾಧ್ಯತೆ ಇರುತ್ತದೆ. ಮೇ15ರವರೆಗೂ ಎಚ್ಚರಿಕೆಯಿಂದ ಹೆಜ್ಜೆ ಹಾಕಿ. ಸ್ವತಂತ್ರ ಗುರುವು ನಿಮ್ಮನ್ನು ಸಂರಕ್ಷಣೆ ಮಾಡುತ್ತಾನೆ. ಮಾತಿನಲ್ಲಿ ಎಚ್ಚರ ಇರಲಿ. ಗುರು -ರಾಹುವಿಗಾಗಿ ನಾಡಿನ ಅತ್ಯಂತ ಪ್ರಸಿದ್ಧ ದೇವರಾದ ಕುಕ್ಕೆ ಸುಬ್ರಹ್ಮಣ್ಯನನ್ನು ಆರಾಧಿಸಿ ಬನ್ನಿ. ಈ ಸಂವತ್ಸರದಲ್ಲಿ ನೀವು ಸಮನಾದ ಶುಭ-ಅಶುಭ ಫಲಗಳನ್ನು ಪಡೆಯುತ್ತೀರಿ.

ವೃಷಭ: ಆರೋಗ್ಯದ ಕಡೆ ಗಮನ ನೀಡಿ

ugadi horoscope 2023

ಹತ್ತನೇಯ ಮನೆಯಲ್ಲಿ ಶನಿ ಇದ್ದಾನೆ. ದ್ವಾದಶಕ್ಕೆ ಗುರು ಏಪ್ರಿಲ್ 21ರಿಂದ ಬರುತ್ತಾನೆ. ಈ ಸಂದರ್ಭದಲ್ಲಿ ಸುಲಭ ನಡೆ ಇಲ್ಲ. ಎಚ್ಚರಿಕೆಯಿಂದ ಹೆಜ್ಜೆ ಹಾಕಬೇಕು. ಗುರುವಿನ ಗುಲಾಮರಾಗದೇ ನಿಮಗೆ ತೊಂದರೆ ತಪ್ಪದು. ಗುರು ಸಮಾನರಾದ ಮಾತಾಪಿತೃ ಹಾಗೂ ಗುರವರ್ಯರನ್ನು ಪೂಜಿಸಿ, ಅವರ ಮಾರ್ಗದರ್ಶನವನ್ನು ಅನುಸರಿಸಿ ನಡೆದರೆ ಒಳ್ಳೆಯದು. ದುರ್ಗೆಯನ್ನು ಪೂಜಿಸಿದರೆ ಸಮಾಧಾನವಾಗಿ ನಿಮ್ಮೆಲ್ಲ ಕಷ್ಟಗಳು ದೂರವಾಗುತ್ತವೆ. ಈ ಸಂವತ್ಸರದಲ್ಲಿ ನೀವು ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕು. ಏಕೆಂದರೆ ಆರೋಗ್ಯಕ್ಕೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ದುಷ್ಟರಿಂದ ದೂರವಿರಿ. ಹನ್ನೆರಡರಲ್ಲಿ ಸಂಚರಿಸುವ ರಾಹು, ಆರನೇ ಮನೆಯಲ್ಲಿ ಕೇತು ಆದಾಯ- ವ್ಯಯದ ವಿಷಯದಲ್ಲಿ ನಿಮ್ಮ ಲೆಕ್ಕಾಚಾರವನ್ನು ಬುಡಮೇಲು ಮಾಡಬಹುದು. ಕೊಲ್ಲೂರು ಮೂಕಾಂಬಿಕೆ, ಶೃಂಗೇರಿಯ ಶಾರದೆಯ ದರ್ಶನ ಮಾಡಿ, ಒಳ್ಳೆಯ ಫಲಗಳನ್ನು ಪಡೆಯಬಹುದು.

ಮಿಥುನ : ಸುಬ್ರಹ್ಮಣ್ಯನನ್ನು ಅನನ್ಯವಾಗಿ ಪ್ರಾರ್ಥಿಸಿ

ugadi horoscope 2023

ಎಂಟನೇ ಮನೆಯಲ್ಲಿ ಶನಿ ಹಾಗೂ ಹನ್ನೊಂದನೇ ಮನೆಯಲ್ಲಿ ಗುರು ಸಂಚಾರವಿರುತ್ತದೆ. ಏಕಾದಶದ ಗುರುವಿಗೆ ರಾಹು ಸಂಪರ್ಕವಿರುವುದರಿಂದ ಸದಾಕಲಾ ಸುಬ್ರಹ್ಮಣ್ಯನನ್ನು ಪ್ರಾರ್ಥಿಸುವುದರಿಂದ, ನಿಮ್ಮ ಬುದ್ಧಿಯನ್ನು ನೆಟ್ಟಗಿಟ್ಟು, ಆತನೇ ನಿಮಗೆ ಮಾರ್ಗದರ್ಶನ ನೀಡುತ್ತಾನೆ. ನಿಮ್ಮ ಕಷ್ಟಗಳನ್ನು ದೂರಮಾಡುತ್ತಾನೆ. ಹಾನಿಯುಂಟು ಮಾಡದ ವಿಷಯಗಳಲ್ಲಿ ಅನಾವಶ್ಯಕವಾಗಿ ನಿಮ್ಮ ತಲೆ ತೂರಿಸಲು ಹೋಗಬೇಡಿ. ನಿಮ್ಮೆಲ್ಲಾ ಕೆಲಸಗಳು ನಡೆಯ ಬೇಕಾದರೆ 11ರ ರಾಹುವಿಗಾಗಿ ಚಂಡಿಕಾ ಪರಮೇಶ್ವರಿಯನ್ನು ಪೂಜಿಸಿ. ಶತ್ರು ಕಾಟ ತಪ್ಪಿಸಲು ಭಗಳಮುಖಿ ಸಂದರ್ಶಿಸಿ. ಅಕ್ಟೋಬರ್ ತಿಂಗಳ ನಂತರದಲ್ಲಿ ರಾಹು ಹತ್ತನೇ ಮನೆಗೆ, ಕೇತು ನಾಲ್ಕನೇ ಮನೆಗೆ ಬರುತ್ತಾರೆ. ಆ ನಂತರ ಉದ್ಯೋಗದಲ್ಲಿ ಮತ್ತು ಕೆಲಸ ಕಾರ್ಯಗಳಲ್ಲಿ ಎಚ್ಚರಿಕೆ ವಹಿಸಿ.

ಕಟಕ: ದೇವತಾನುಗ್ರಹದಿಂದ ಮಾತ್ರ ಕಷ್ಟ ದೂರ

ugadi horoscope 2023

ಶನಿಯು ಎಂಟನೇ ಮನೆಯಲ್ಲಿ ಸಂಚರಿಸುವುದರಿಂದ ಹೆಚ್ಚಿನ ಎಚ್ಚರಿಕೆ ಅಗತ್ಯ. ಅಕ್ಟೋಬರ್ ತನಕ ರಾಹು ಹತ್ತನೇ ಮನೆಯಲ್ಲಿ, ಕೇತು ನಾಲ್ಕನೇ ಮನೆಯಲ್ಲಿ ಸಂಚರಿಸುವಾಗ ಉದ್ಯೋಗ ಸ್ಥಳದಲ್ಲಿ ಕೂಡ ನೀವು ಎಚ್ಚರಿಕೆ ವಹಿಸಬೇಕಾಗುತ್ತದೆ. ಸಂಸಾರದಲ್ಲಿ ಒಡಹುಟ್ಟಿದವರೊಂದಿಗೆ ಅಸಮಾಧನ ಉಂಟಾಗಲಿದೆ. ಇದು ನಿಮ್ಮ ಮೆದುಳಿಗೆ ಸಾಕಷ್ಟು ಕೆಲಸವನ್ನು ಕೊಡಲಿದೆ. ನಿಮ್ಮ ದೇವತಾನುಗ್ರಹದಿಂದ ನೀವು ನಿಮ್ಮೆಲ್ಲ ಕಷ್ಟಗಳಿಂದ ಪಾರಾಗಬಹುದು. ಒಂಬತ್ತರ ಗುರುವು ದಶಮಕ್ಕೆ ಬರುತ್ತಾನೆ. ಗುರು ಬಲವು ತಪ್ಪಿದ ಸಂದರ್ಭ ಇದಾಗಿದೆ. ಸಾಕ್ಷಾತ್‌ ಪಾರ್ವತಿ ಪರಮೇಶ್ವರರೇ ಗುರುವೆಂದು ಭಾವಿಸಿ, ಅವರನ್ನು ಪೂಜಿಸದೇ, ಹಿರಿಯರನ್ನು, ಮನೆಯ ಯಜಮಾನರನ್ನು ಕೇಳದೇ ಯಾವ ಕೆಲಸವನ್ನೂ ಮಾಡಬೇಡಿ. ಈ ಸಂವತ್ಸರದಲ್ಲಿ ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳಿ. ಸಂವತ್ಸರ ದೇವತೆಯಾದ ಕರ್ಕಾಟಕ ರಾಶಿಯಲ್ಲಿ ಜನಿಸಿದ ಶ್ರೀ ರಾಮಚಂದ್ರನನ್ನು ಪೂಜಿಸಿ, ಒಂದು ಸಂವತ್ಸರದ ಕಾಲ ಸುಂದರಕಾಂಡವನ್ನು ಪಾರಾಯಣ ಮಾಡಿ. ಜೀವನವನ್ನು ಜಯಿಸಿ, ಗುರುವು ಏಕದಶಕ್ಕೆ ಬಂದಾಗ ನಿಮ್ಮೆಲ್ಲ ಕೋರಿಕೆ ಈಡೇರಲಿದೆ.

ಸಿಂಹ: ಒಳ್ಳೆಯ ಹೆಸರು ಮಾಡುವ ಸಮಯ

ugadi horoscope 2023

ಏಳನೇ ಮನೆಯಲ್ಲಿ ಶನಿ ಸಂಚರಿಸುವಾಗ ನಿಮ್ಮ ಜೀವನವನ್ನು ದೇವರೇ ಪರೀಕ್ಷಿಸುತ್ತಿದ್ದಾನೆ ಎಂದು ಭಾವಿಸಬೇಕು. ಮಕ್ಕಳು ಪರೀಕ್ಷೆಗೆ ಓದುವಾಗ ಪಾಠವನ್ನು ಅರ್ಥೈಸಿಕೊಳ್ಳುವಂತೆ, ನೀವು ಜೀವನ ಪಾಠವನ್ನು ಅರ್ಥೈಸಿಕೊಂಡು, ಸನ್ನಿವೇಶ, ಸಂದರ್ಭಗಳಿಗೆ ತಕ್ಕಂತೆ, ವಿಚಾರ ಧಾರೆಗಳನ್ನು ಬದಲಾಯಿಸಿಕೊಂಡು, ಯಾರಿಗೂ ಹಾನಿಯಾಗದಂತೆ, ಯಾರ ಮನಸ್ಸಿಗೂ ನೋವುಂಟಾಗದಂತೆ ಮುನ್ನೆಡೆಯಬೇಕು. ಒಂಬತ್ತರ ಗುರುವು ಬಾಗಿಲು ತಟ್ಟಿ ಬಂದು ನಿಮಗೆ ಒಳ್ಳೆಯದನ್ನು ಮಾಡುತ್ತಾನೆ. ಒಂಬತ್ತನೇ ಮನೆಯಲ್ಲಿರುವ ರಾಹು ಮತ್ತು ಮೂರನೇ ಮನೆಯಲ್ಲಿರುವ ಕೇತು ಅಕ್ಟೋಬರ್‌ 30ರ ನಂತರ ನಿಮ್ಮೆಲ್ಲಾ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಕೀರ್ತಿ ತರುತ್ತಾರೆ. ನೀವು ಒಳ್ಳೆಯ ಹೆಸರು ಸಂಪಾದನೆ ಮಾಡುವ ಕಾಲ ಈ ಸಂವತ್ಸರ. ಆರೋಗ್ಯದ ಕಡೆಗೆ ಹೆಚ್ಚು ಗಮನ ನೀಡಿ. ನಿತ್ಯವೂ ಸರಸ್ವತಿ ಪೂಜೆ, ಆರೋಗ್ಯಕ್ಕಾಗಿ ಶನಿ ಪ್ರಾರ್ಥನೆ ಇರಲಿ.

ಕನ್ಯಾ : ಶನಿಯಿಂದ ಸಂಪತ್ತು, ಸೌಕರ್ಯ ಲಭ್ಯ

ugadi horoscope 2023

ಇದೇ ಏಪ್ರಿಲ್‌ನಲ್ಲಿ ಅಷ್ಟಮಕ್ಕೆ ಬರುವ ಗುರುವು ರಾಹುವಿನ ಜತೆಗೂಡಿ, ನೀವು ಇದುವರೆಗೆ ಮಾಡಿದ ಪುಣ್ಯ-ಪಾಪಗಳಿಗೆ ತಕ್ಕ ಪ್ರತಿಫಲ ನೀಡುತ್ತಾರೆ. ʻಗುರುದ್ರೋಹಂ ಕುಲ ನಾಶನಂʼ ಎಂಬ ಮಾತಿನಂತೆ ನೀವು ಗುರುಗಳಿಗೆ ದ್ರೋಹ ಮಾಡಿದ್ದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ. ಆರನೇ ಮನೆಯಲ್ಲಿರುವ ಶನಿಯು ನಿಮಗೆ ಈ ಸಂವತ್ಸರದಲ್ಲಿ ಸಾಕಷ್ಟು ಸಂಪತ್ತು, ಸೌಕಯರ್ಯಗಳನ್ನು ಒದಗಿಸುತ್ತಾನೆ. ಆದರೆ ನಿಮಗೆ ಶಾಶ್ವತವಾಗಿ ಇವೆಲ್ಲವೂ ದೊರೆಯಬೇಕಾದರೆ ಗುರು ವೊಬ್ಬನೇ ಕಾರಣಕರ್ತನು. ಅವನ ಕೃಪೆ ಇರಲೇಬೇಕು. ಗುರು ರಾಹು ಸಂಪರ್ಕದಿಂದ ಜಟರದಲ್ಲಿ ತೊಂದರೆ ಕಾಣಿಸಿಕೊಳ್ಳಬಹುದು. ಸೂಕ್ತ ವೈದ್ಯರ ಮಾರ್ಗದರ್ಶನ ಪಡೆದು ಮುಂದುವರಿಯಿರಿ. ಅಷ್ಟಮ ಗುರುವು ಆರೋಗ್ಯ ದೃಷ್ಟಿಯಿಂದ ಹಿತಕರ ಸೂಚನೆ ಕೊಡುವುದಿಲ್ಲ. ಹೀಗಾಗಿ ಶ್ರೀ ಗುರು ದತ್ತಾತ್ರೇಯನನ್ನು, ನಂಜನ ಗೂಡಿನ ಶ್ರೀ ನಂಜುಂಡೇಶ್ವರನನ್ನು ಅನನ್ಯವಾಗಿ ಪೂಜಿಸಿ.

ತುಲಾ: ಮಾತಿನ ಮೇಲೆ ಹಿಡಿತವಿರಲಿ

ugadi horoscope 2023

ರಾಶಿಯವರಿಗೆ ಸಪ್ತಮದಲ್ಲಿ ಗುರು ಹಾಗೂ ಪಂಚಮದಲ್ಲಿ ಶನಿ ಇರುತ್ತಾರೆ. ಸ್ವಕ್ಷೇತ್ರದಲ್ಲಿ ಶನಿ ಇದ್ದಾನೆ. ತುಲಾ ರಾಶಿಯ ಅಧಿಪತಿಯ ಕಾರಣಕ್ಕೆ ಆತ ಕಷ್ಟಕಾರ್ಪಣ್ಯಗಳನ್ನು ನೀಡುವುದಿಲ್ಲ. ಸಂತೋಷವನ್ನು, ಅದ್ಭುತವಾದ ವಿಚಾರಗಳಲ್ಲಿ ಜಯವನ್ನು ಹಾಗೂ ಅದ್ದೂರಿಯಾದ ಜೀವನವನ್ನು ಕೊಟ್ಟು ಸಹಕರಿಸುತ್ತಾನೆ. ಜನ್ಮ ರಾಶಿಯಲ್ಲಿಯೇ ಕೇತು ಇರುವುದರಿಂದ ನಿಮ್ಮ ಮಾತು ಹರಿತವಾದ ಚಾಕುವಿನಂತಹ ಆಯುಧವಾಗದಿರಲಿ. ಮಾತಿನ ಮೇಲೆ ಹಿಡಿತವಿರಲಿ. ಸೌಮ್ಯತೆಯಿಂದ ಕೂಡಿರಲಿ. ಮಾತಿನಿಂದ ಯಾರನ್ನೂ ಗೆಲ್ಲಬಹುದು. ಅದೇ ನಿಮ್ಮ ಜೀವನದ ಅಡಿಪಾಯವಾಗಿರಲಿ. ಗುರುವು ಕನ್ಯಾ ರಾಶಿಗೆ ಹೋದ ಮೇಲೆ ಸ್ವತಂತ್ರ ಗುರುವು ನಿಮ್ಮ ಜೀವನದಲ್ಲಿ ಮತ್ತಷ್ಟು ಶೋಭೆಯನ್ನು, ಲಾಭವನ್ನು, ಧೈರ್ಯವನ್ನು, ಕೀರ್ತಿಯನ್ನು ತಂದುಕೊಂಡುತ್ತಾನೆ. ನೆನಪಿರಲಿ ನಿಮ್ಮದು ತಕ್ಕಡಿಯ ರಾಶಿ. ನಿಮ್ಮ ತುಲಭಾರ ಮಾಡುವವರು ಪರಮಾತ್ಮನ ಸ್ವರೂಪಿಯಾದ ನಿಮ್ಮ ತಂದೆ-ತಾಯಿಯರು. ಅವರನ್ನು ಅನುಗ್ರಹವನ್ನು, ಆಶೀರ್ವಾದವನ್ನು ಪಡೆದರೆ, ಜಗತ್ತನ್ನೇ ಗೆದ್ದು, ಕೀರ್ತಿವಂತರಾಗಿ ಬದುಕಬಹುದು. ಕೋರ್ಟ್‌, ಕಚೇರಿ, ವ್ಯವಹಾರ, ಸಂಧಾನ ಎಲ್ಲದರಲ್ಲಿಯೂ ನಿಮಗೆ ಜಯ ಸಿಗುತ್ತದೆ.

ವೃಶ್ಚಿಕ : ಭಕ್ತಿಯಿಂದ ಜೀವನ ಗೆಲ್ಲಿ!

ugadi horoscope 2023

ಈ ಸಂವತ್ಸರದಲ್ಲಿ ನಾಲ್ಕರಲ್ಲಿ ಶನಿ ಸಂಚಾರ ಇರುತ್ತದೆ. ಹಾಗೆಯೇ ಸಂವತ್ಸರದ ಆರಂಭದಲ್ಲಿ ಗುರು ಬಲವು ಸಂಪೂರ್ಣವಾಗಿದ್ದು, ಅದೃಷ್ಟವನ್ನು ನೀಡುತ್ತಾನೆ. ಸರಿಯಾದ ಪ್ರಯತ್ನವನ್ನು ಮಾಡಿದಲ್ಲಿ, ಸರಿಯಾದ ಮಾರ್ಗದಲ್ಲಿ ಹೋದರೆ ಏನನ್ನು ಬೇಕಾದರೂ ಸಾಧಿಸಬಹುದು. ಪರಮಾತ್ಮನು ಕಣ್ಣು ಬಿಟ್ಟರೆ ಒಂದೇ ಕ್ಷಣದಲ್ಲಿ ನಿಮ್ಮ ಜೀವನದಲ್ಲಿ ಯಾವ ರೀತಿಯ ಬದಲಾವಣೆಯನ್ನಾದರೂ ತರಬಲ್ಲನು. ಭಕ್ತಿಯೊಂದಿದ್ದರೆ ಜೀವನವನ್ನೇ ಗೆಲ್ಲಬಹುದು. ಶತ್ರುಗಳನ್ನು ಕೂಡ ಗೆದ್ದು ಯಶಸ್ಸಿನ ಮೆಟ್ಟಿಲೇರಹುದು. ಏಪ್ರಿಲ್‌ 21 ರ ನಂತರ ಗುರುವು ಆರನೇ ಮನೆಯಲ್ಲಿ ಸಂಚಾರ ನಡೆಸಲಿದ್ದು, ಈ ಸಂದರ್ಭದಲ್ಲಿ ಉದ್ಯೋಗದಲ್ಲಿ, ವ್ಯವಹಾರದಲ್ಲಿ ಎಚ್ಚರಿಕೆ ವಹಿಸಬೇಕಿರುತ್ತದೆ. ಹನ್ನೆರಡನೇ ಮನೆ ಕೇತು ವ್ಯಯಕ್ಕೆ ಕಾರಣನಾದರೂ ದೈವ ಭಕ್ತಿಯನ್ನು ಮೂಡಿಸುತ್ತಾನೆ. ನಾಲ್ಕನೆ ಮನೆಯ ಶನಿ ಸಂಚಾರದಿಂದಾಗಿ ಆರೋಗ್ಯದಲ್ಲಿ ಏರು ಪೇರು ಉಂಟಾಗಬಹುದು. ಆದರೆ ಶುದ್ಧ ಮನಸ್ಸು ನೀಡುತ್ತಾನೆ. ಒಟ್ಟಾರೆಯಾಗಿ ಈ ಸಂವತ್ಸರದಲ್ಲಿ ಈ ರಾಶಿಯವರಿಗೆ ಶೇ. 50 ರಷ್ಟು ಶುಭ ಫಲವಿದ್ದರೆ, ಶೇ. 50ರಷ್ಟು ಅಶುಭ ಫಲಗಳನ್ನು ಕಾಣಬಹುದು.

ಧನಸ್ಸು: ಸುಖ ಸಂತೋಷದ ಸಮಯ

ugadi horoscope 2023

ಏಳೂವರೆ ವರ್ಷ ನಿಮ್ಮನ್ನು ಕಾಡಿದ ಸಾಡೇಸಾತ್ ಶನಿ ದೋಷವು ಸಂಪೂರ್ಣವಾಗಿ ನಿಮ್ಮಿಂದ ದೂರವಾಗುವ ಸಮಯ ಇದು. ಈ ಸಂವತ್ಸರದಲ್ಲಿ ಮೂರನೇ ರಾಶಿಯಲ್ಲಿ ಶನಿ ಸಂಚಾರ ಇರಲಿದೆ. ಹೀಗಾಗಿ ಆರ್ಥಿಕವಾಗಿ ಒಳ್ಳೆಯ ಫಲಗಳನ್ನು ನೀವು ಪಡೆದುಕೊಳ್ಳಬಹುದು. ಹೊಸ ವ್ಯಾಪಾರ-ವ್ಯವಹಾರ ಶುರು ಮಾಡಬಹುದು. ಗುರುವು ಸಂವತ್ಸರದ ಮೊದಲ ಒಂದು ತಿಂಗಳು, ಮೀನಾ ರಾಶಿಯಲ್ಲಿರುವಾಗ ಮನೆ ಕಟ್ಟುವ, ವಾಹನ ಕೊಳ್ಳುವ ಯೋಗವಿದೆ. ಏಪ್ರಿಲ್‌ನಲ್ಲಿ ಗುರುವು ಐದನೇ ಮನೆಗೆ ಹೋಗುತ್ತಾನೆ. ಆಗಲೂ ನಿಮಗೆ ಲಾಭದ ಸಂದರ್ಭವಿದೆ. ಈ ಸಂವತ್ಸರದಲ್ಲಿ ನೀವು ಸುಖ-ಸಂತೋಷವನ್ನು ಕಾಣಬಹುದು. ನಿಮಗೆ ಅಕಸ್ಮಿಕವಾಗಿ ಧನಲಾಭವಾದರೆ ಆರ್ಥಿಕ ವಿಷಯದಲ್ಲಿ ಮಿಂಚಿನಂತೆ ಓಡುವ ಕಾಲವಿದು.

ಮಕರ: ಪಾಪ-ಪುಣ್ಯಗಳಿಗೆ ತಕ್ಕ ಫಲ

ugadi horoscope 2023

ಈ ಸಂವತ್ಸರದಲ್ಲಿ ಕುಂಭದಲ್ಲಿನ ಶನಿ ಎರಡನೇ ಮನೆಯಲ್ಲಿ ಹಾಗೂ ಯುಗಾದಿಯಿಂದ ಒಂದು ತಿಂಗಳ ತನಕ ಗುರು ಮೂರನೇ ಮನೆಯಲ್ಲಿ ಮತ್ತು ಆ ನಂತರ ಸಂವತ್ಸರದ ಕೊನೆಯ ತನಕ ನಾಲ್ಕನೇ ಮನೆಯಲ್ಲಿ ಸಂಚಾರ ಮಾಡಲಿವೆ. ಸಾಡೇಸಾತಿ ಶನಿ ಸಂಚಾರವು ಕೊನೆಯ ಹಂತದಲ್ಲಿದ್ದು, ನಿಮ್ಮನ್ನು ಬಿಡುವ ಕಾಲ ಇದು. ನಾವು ಮಾಡಿದ ಪಾಪ-ಪುಣ್ಯಗಳಿಗೆ ತಕ್ಕ ಪ್ರತಿಫಲವನ್ನು ಪಡೆಯುತ್ತೇವೆ. ನೀವು ವ್ಯಾಕುಲ ಬುದ್ಧಿಯನ್ನು ಬಿಟ್ಟು, ಮನಸ್ಸನ್ನು ಬಿಗಿಯಾಗಿ ಹತೋಟಿಯಲ್ಲಿಟ್ಟುಕೊಂಡರೆ ಅಂದುಕೊಂಡಿದ್ದನ್ನು ಸಾಧಿಸಬಹುದು. ನಾಲ್ಕನೇ ಮನೆಯಲ್ಲಿ ಗುರುವಿನೊಂದಿಗೆ ರಾಹು ಕೂಡ ಇರುವುದು ಅಷ್ಟು ಶುಭಕರವಲ್ಲ. ಹೀಗಾಗಿ ಗುರು ದಕ್ಷಿಣಾಮೂರ್ತಿಯನ್ನು ಪೂಜಿಸಿ. ಪ್ರತಿ ಗುರುವಾರ ಕಡಲೆಬೆಳೆಯನ್ನು ದಾನ ಮಾಡಿ. ಸಾಧ್ಯವಾಗದೇ ಇದ್ದರೆ, ಕಡಲೆಬೆಳೆಯ ಕೋಸಂಬರಿ ಮಾಡಿ ದೇವರಿಗೆ ನೈವೇದ್ಯ ಮಾಡಿ, ಸುಖವನ್ನು ಕಾಣಬಹುದು. ನೀವು ಕಷ್ಟಪಡುತ್ತಿರುವ ಕೆಲವು ಕೆಲಸಗಳು ತನ್ನಿಂದ ತಾನೇ ವೇಗವನ್ನು ಪಡೆದು, ಮುಕ್ತಾಯದ ಹಂತಕ್ಕೆ ಬರುತ್ತವೆ. ಹತ್ತನೇ ಮನೆಯಲ್ಲಿ ಕೇತು ಇರುವುದರಿಂದ ಉದ್ಯೋಗ, ವ್ಯಾಪಾರ, ವಹಿವಾಟುಗಳಲ್ಲಿ ನೀವು ನಿರೀಕ್ಷೆ ಮಾಡಿರಿದ ತಿರುವುಗಳನ್ನು ಎದುರಿಸಬೇಕಾಗಿ ಬರಬಹುದು.

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

ಕುಂಭ : ಗುರು ಚರಿತ್ರೆಯ ಪಾರಾಯಣ ಮಾಡಿ

ugadi horoscope 2023

ಈ ಸಂವತ್ಸರದಲ್ಲಿ ದ್ವಾದಶದಿಂದ ಜನ್ಮ ರಾಶಿಗೆ, ಸ್ವಕ್ಷೇತ್ರಕ್ಕೆ ಶನಿ ಗ್ರಹವು ಬಂದಿರುವುದರಿಂದ ಸಾಡೇಸಾತ್ ಎರಡನೇ ಹಂತವು ಆರಂಭ ಆಗುತ್ತದೆ. ಎರಡರಲ್ಲಿರುವ ಗುರು ಶನಿಯ ಈ ಸಂಚಾರದಿಂದ ಯಾವುದೇ ರೀತಿಯ ತೊಂದರೆಯಾಗದಂತೆ ನಿಮ್ಮನ್ನು ಸಂರಕ್ಷಿಸಿದ್ದಾನೆ. ಏಪ್ರಿಲ್‌ನಲ್ಲಿ ಗುರುವು ಮೂರನೇ ಮನೆಗೆ ಸಂಚಾರ ನಡೆಸಿ, ಅಲ್ಲಿ ರಾಹು ಸಂಪರ್ಕಕ್ಕೆ ಬಂದನಂತರ ನಿಮಗೆ ಗುರುಬಲವು ತನ್ನಿಂದ ತಾನೇ ಕುಗ್ಗುತ್ತದೆ. ಈ ಸಂವತ್ಸರದಲ್ಲಿ ನೀವು ಗುರು ಚರಿತ್ರೆಯ 14 ಮತ್ತು 18 ನೇ ಅಧ್ಯಯನವನ್ನು ನಿತ್ಯ ಪರಾಯಣ ಮಾಡುವುದರಿಂದ ಶನಿಯ ಅವಕೃಪೆಯಿಂದ ಪಾರಾಗಬಹದು ಹಾಗೂ ದೈವಕೃಪೆಯೂ ದೊರೆಯುತ್ತದೆ. ನಿಮಗೆ ರಕ್ಷಣೆ ದೊರೆಯುತ್ತದೆ. ಅಧಿಕವಾದ ವೆಚ್ಚಗಳನ್ನು ಮಾಡಿ, ಮನೆ ಇತ್ಯಾದಿ ವ್ಯಪಾರಗಳಲ್ಲಿ ಹಣವನ್ನು ಹೂಡದೇ ಜೋಪಾನವಾಗಿ ಸಾಗಿರಿ. ಒಂಬತ್ತರ ಕೇತುವಿನಿಂದಾಗಿ ಅಕ್ಟೋಬರ್ ನಂತರದಲ್ಲಿ ಎಷ್ಟೇ ಹಣ ಬಂದರೂ ಉಳಿತಾಯ ಮಾಡಲಾಗದು. ಇಡೀ ಸಂವತ್ಸರದಲ್ಲಿ ಆಂಜನೇಯನನ್ನು ಪೂಜಿಸಿ.

ಮೀನ: ಮೊಂಡುತನ ಬಿಟ್ಟರೆ ಗೆಲ್ಲಬಹುದು!

ugadi horoscope 2023

ಶನಿ ಸಂಚಾರ ನಿಮ್ಮ ವ್ಯಯ ಸ್ಥಾನದಲ್ಲಿ, ಅಂದರೆ ಹನ್ನೆರಡನೇ ಮನೆಯಲ್ಲಿ ಇರಲಿದೆ. ಸಂವತ್ಸರದ ಮೊದಲ ಒಂದು ತಿಂಗಳ ನಂತರ ಗುರುವು ದ್ವಿತೀಯಕ್ಕೆ ಬರುತ್ತಾನೆ. ಆ ನಂತರ ನಿಮಗೆ ಗುರುಬಲವು ಚೆನ್ನಾಗಿದ್ದರೂ, ನಿಮ್ಮ ಕೆಟ್ಟ ಸ್ವಭಾವ, ಮೊಂಡುತನವನ್ನು ಬಿಡಬೇಕು. ನಾನು ಹೇಳಿದಂತೆಯೇ ಎಲ್ಲವೂ ನಡೆಯಬೇಕು ಎಂಬುದನ್ನು ಬಿಟ್ಟು ಎಲ್ಲರ ಅಭಿಪ್ರಾಯಗಳಿಗೆ ಗೌರವ ನೀಡಿದರೆ ಗುರುವು ನಿಮ್ಮನ್ನು ಮುನ್ನೆಡೆಸುತ್ತಾನೆ. ಗುರುವಿಗೆ ರಾಹುವಿನಿಂದ ಗ್ರಹಣ ಉಂಟಾಗಿ, ರಾಹು-ಬೃಹಸ್ಪತಿ ಸಂಧಿಕಾಲದಲ್ಲಿ ಸಿಕ್ಕಿಹಾಕಿಕೊಂಡು ಪರಿಪೂರ್ಣವಾದ ಯಾವ ಕೆಲಸವನ್ನೂ ಮಾಡುವುದಿಲ್ಲ. ಆರೋಗ್ಯಕ್ಕೂ ತೊಂದರೆ ಇಲ್ಲ. ಆದರೆ ವಿಶಾಲವಾದ ಮನಸ್ಸಿರಬೇಕು, ದೇವತಾರಾಧನೆಯಿರಬೇಕು, ನೀವು ಈವರೆಗೆ ಮಾಡಿದ ತಪ್ಪುಗಳನ್ನು ತಿದ್ದುಕೊಂಡಲ್ಲಿ ಎರಡನೇ ಗುರುವು ನಿಮ್ಮನ್ನು ಇಡೀ ಸಂವತ್ಸರ ಸಂರಕ್ಷಿಸುತ್ತಾನೆ. ರಾಹುಗೆ ಸುಬ್ರಹ್ಮಣ್ಯ ದೇವರನ್ನು ಪೂಜಿಸಿ, ಗುರು ಮೇಷರಾಶಿಯಲ್ಲಿರುವುದರಿಂದ ಈಶ್ವರನ ಪುತ್ರನಾದ ಷಣ್ಮುಖನನ್ನು ಪ್ರಾರ್ಥಿಸಿದರೆ ಎಲ್ಲವೂ ಕೈ ಸೇರಿ ಸಂತೋಷ ಉಂಟಾಗುತ್ತದೆ.

ನಮ್ಮ ಆರಾಧ್ಯದೈವ ಸುಬ್ರಹ್ಮಣ್ಯ ದೇವರನ್ನು ಪ್ರಾರ್ಥಿಸಿ, ಶ್ರೀ ಗುರು ದತ್ತತ್ರೇಯ ದೇವರಿಗೆ ನಮಿಸಿ, ನಮ್ಮ ಕುಲಗುರುಗಳಾದ ಜಗದ್ಗುರು ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳು, ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳಿಗೆ ವಂದಿಸಿ ಈ ರಾಶಿ ಫಲವನ್ನು ಇಲ್ಲಿ ದಾಖಲಿಸಿದ್ದೇನೆ.

ಎಲ್ಲರಿಗೂ ಈ ನವ ಸಂತ್ಸರವು ಶುಭವನ್ನು, ಸುಖವನ್ನು, ಸಂಭ್ರಮವನ್ನು ಎಲ್ಲದಕ್ಕಿಂತ ಮುಖ್ಯವಾಗಿ ಆರೋಗ್ಯವನ್ನು ಕೊಡಲಿ ಎಂದು ಪ್ರಾರ್ಥಿಸುತ್ತೇನೆ.

ಇದನ್ನೂ ಓದಿ: Ugadi 2023 : ಜಗದ ಆದಿ ಈ ಯುಗಾದಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದಕ್ಷಿಣ ಕನ್ನಡ

NIA Raid : ಸುಳ್ಯದಲ್ಲೂ ಎನ್‌ಐಎ ದಾಳಿ; 2 ದಿನದ ಹಿಂದೆ ಕೇರಳದಿಂದ ಬಂದಿದ್ದವ ವಶಕ್ಕೆ

NIA Raid : ಅವನು ಕೇವಲ ಎರಡು ದಿನಗಳ ಹಿಂದಷ್ಟೇ ಸುಳ್ಯದ ಆ ಜಾಗಕ್ಕೆ ಬಂದಿದ್ದ. ಬಾಡಿಗೆ ಮನೆ ಹಿಡಿದ ಎರಡನೇ ದಿನವೇ ಆತನನ್ನು ಎನ್‌ಐಎ ಅಧಿಕಾರಿಗಳು ಬೆನ್ನಟ್ಟಿ ವಿಚಾರಣೆ ನಡೆಸಿದ್ದಾರೆ.

VISTARANEWS.COM


on

NIA Rait Enmuru
Koo

ಮಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ನಡೆದ ಬಾಂಬ್‌ ಸ್ಫೋಟ (Blast in Bengaluru) ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (National Investigation agency) ವಹಿಸಿಕೊಂಡಿದೆ. ಈ ಪ್ರಕರಣವೂ ಸೇರಿದಂತೆ ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವ ಎನ್‌ಐಎ (NIA Raid) ಕರ್ನಾಟಕ ಮತ್ತು ತಮಿಳುನಾಡು ಸೇರಿದಂತೆ ದೇಶದಲ ಏಳು ರಾಜ್ಯಗಳಲ್ಲಿ ಮಂಗಳವಾರ ದಾಳಿ ನಡೆಸಿದೆ. ಇದರ ಭಾಗವಾಗಿ ದಕ್ಷಿಣ ಕನ್ನಡ ಜಿಲ್ಲೆಯ (Dakshina Kannada news) ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಎಣ್ಮೂರಿನಲ್ಲೂ ದಾಳಿ ನಡೆದಿದೆ.

ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎನ್‌ಐಎ ತುಂಬಾ ಸಕ್ರಿಯವಾಗಿದ್ದು ಎಲ್ಲ ಕಡೆ ಮಾಹಿತಿ ದಾರರನ್ನು ಇಟ್ಟು ಚಟುವಟಿಕೆಗಳನ್ನು ಹದ್ದುಗಣ್ಣಿನಿಂದ ಕಾಯುತ್ತಿದೆ. ಅದರಿಂದ ಪಡೆದ ಮಾಹಿತಿಯನ್ನೂ ಆಧರಿಸಿಯೇ ಅದು ಇಲ್ಲಿಗೆ ಲಗ್ಗೆ ಇಟ್ಟಿದೆ ಎನ್ನಲಾಗಿದೆ. ಕೇವಲ ಎರಡು ದಿನಗಳ ಹಿಂದಷ್ಟೇ ಎಣ್ಮೂರಿಗೆ ಬಂದು ಬಾಡಿಗೆ ಮನೆಯೊಂದನ್ನು ಹಿಡಿದಿದ್ದ ವ್ಯಕ್ತಿಯೊಬ್ಬನನ್ನು ಅದು ವಿಚಾರಿಸಿದ್ದು ಸ್ವತಃ ಊರಿನ ಜನರಿಗೇ ಅಚ್ಚರಿ ಮೂಡಿಸಿದೆ.

ಎನ್.ಐ.ಎ ಅಧಿಕಾರಿಗಳ ತಂಡ ಪ್ರಕರಣವೊಂದರ ಸಂಬಂಧ ಮಾ.5ರಂದು ಬೆಳ್ಳಾರೆ ಠಾಣಾ ವ್ಯಾಪ್ತಿಯ ಎಣ್ಣೂರಿನ ಕುಲಾಯಿತೋಡು ಎಂಬಲ್ಲಿನ ಬಾಡಿಗೆ ಮನೆ ಮೇಲೆ ಬೆಳಗ್ಗೆ ಎನ್ ಐ ಎ ಅಧಿಕಾರಿಗಳು ದಾಳಿ ಮಾಡಿ ಮನೆಯಲ್ಲಿ ನಡೆಸಿದರು. ಅಲ್ಲಿ ವಾಸವಾಗಿದ್ದ ಕೇರಳ ಮೂಲದ ಬಿಜು ಎಂಬಾತನಿಗೆ ಸಮನ್ಸ್ ನೀಡಿ ಮೊಬೈಲ್ ಫೋನ್ ವಶಕ್ಕೆ ಪಡೆದು ತೆರಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ನಿಂತಿಕಲ್ಲು ಬಳಿಯ ಕಲ್ಮಡ್ಕ ನಿವಾಸಿ ಚಿದಾನಂದ ಎಂಬವರ ಬಾಡಿಗೆ ಮನೆ ಮೇಲೆ ಬೆಂಗಳೂರು ಬ್ರಾಂಚ್ ನ ಎನ್.ಐ.ಎ ಅಧಿಕಾರಿಗಳಾದ ಡಿವೈಎಸ್ಪಿ ರಾಜನ್ ಪಿ.ವಿ, ಸಬ್ ಇನ್ಸೆಕ್ಟರ್ ಮಂಜಪ್ಪ,
ಕಾನ್ಸ್ಟೇಬಲ್ ಸುರೇಶ್.ಸಿ ನೇತೃತ್ವದ ಮೂರು ಜನರ ತಂಡ ದಾಳಿ ಮಾಡಿ ಮನೆಯನ್ನು ಪರಿಶೀಲನೆ ನಡೆಸಿದೆ.

ಇದನ್ನೂ ಓದಿ: Blast in Bengaluru : ರಾಮೇಶ್ವರಂ ಕೆಫೆ ಸ್ಫೋಟ; ಚೆನ್ನೈಯಲ್ಲಿ NIA ದಾಳಿ, ಐವರು ಕ್ರಿಮಿಗಳ ಸೆರೆ

ಯಾರಿವನು ಬಿಜು‌, ಯಾವ ಪ್ರಕರಣ?

25-10-2023 & RC- 28/2023/NIA/DLI ಯಲ್ಲಿ 120B,121,121A&122 ಜೊತೆಗೆ 3,25 ಆರ್ಮ್ 13,18 ಮತ್ತು UA(P) ಅಡಿಯಲ್ಲಿ ದಾಖಲಾದ ಪ್ರಕರಣ ಸಂಬಂಧಿಸಿದಂತೆ ಬೆಳ್ಳಾರೆಯ ಚಿದಾನಂದ ಎಂಬವರ ಬಾಡಿಗೆ ಮನೆಯಲ್ಲಿ ಎರಡು ದಿನದ ಹಿಂದೆ ಬಂದ ಕೇರಳ ರಾಜ್ಯದ ಇಡುಕ್ಕಿಯ ಬಿಜು ಅಬ್ರಾಹಂ @ ಬಿಜು ಎಮ್.ಎ (45) ಎಂಬಾತನ ವಾಸವಾಗಿದ್ದ. ಈ ಮನೆಗೆ ಎನ್.ಐ.ಎ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ ನಂತರ ಬಿಜುಗೆ ಸಮನ್ಸ್ ನೀಡಿದ್ದಾರೆ ಎಂದು ತಿಳಿದುಬಂದಿದೆ.

Continue Reading

ಚಾಮರಾಜನಗರ

Veerappan Case : ಪೊಲೀಸರ ಹತ್ಯೆ; ವೀರಪ್ಪನ್‌ ಗ್ಯಾಂಗ್‌ನಲ್ಲಿದ್ದ ಸ್ಟೆಲ್ಲಾ ಮೇರಿಗೆ ಖುಲಾಸೆ

veerappan Case : ಕುಖ್ಯಾತ ಕಾಡುಗಳ್ಳ ವೀರಪ್ಪನ್‌ ರಾಮಾಪುರಂ ಪೊಲೀಸ್‌ ಠಾಣೆ ಮೇಲೆ ದಾಳಿ ಮಾಡಿ ಪೊಲೀಸರನ್ನು ಕೊಂದು ಹಾಕಿದ ವೇಳೆ ತಂಡದಲ್ಲಿದ್ದಳು ಎನ್ನಲಾದ ಅಂದಿನ ಬಾಲಕಿಯನ್ನು ಈಗ ದೋಷಮುಕ್ತಗೊಳಿಸಲಾಗಿದೆ. ಯಾರು ಈ ಸ್ಟೆಲ್ಲಾ ಮೇರಿ?

VISTARANEWS.COM


on

Veerappan Case Stella Mary
Koo

ಚಾಮರಾಜನಗರ: ಕುಖ್ಯಾತ ಕಾಡುಗಳ್ಳ ನರಹಂತಕ ವೀರಪ್ಪನ್‌ ಗ್ಯಾಂಗ್‌ (Veerappan Case) 1992ರ ಮೇ ತಿಂಗಳಲ್ಲಿ ತಮಿಳುನಾಡಿನ ರಾಮಾಪುರಂ ಪೊಲೀಸ್‌ ಠಾಣೆಯ ಮೇಲೆ ದಾಳಿ (Ramapuram Police station attack) ಮಾಡಿ ಐವರು ಸಿಬ್ಬಂದಿಯನ್ನು ಕೊಲೆ ಮಾಡಿ ಶಸ್ತ್ರಾಸ್ತ್ರಗಳೊಂದಿಗೆ ಪರಾರಿಯಾಗಿತ್ತು. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪ ಹೊತ್ತಿದ್ದ ಅಂದು ಅಪ್ರಾಪ್ತ ಬಾಲಕಿಯಾಗಿದ್ದ ಮಹಿಳೆಯೊಬ್ಬರಿಗೆ ಕ್ಲೀನ್‌ ಚಿಟ್‌ (Clean chit to Stella Mary) ಸಿಕ್ಕಿದೆ. ಹೀಗೆ ಪೊಲೀಸ್‌ ಠಾಣೆ ದಾಳಿ ಪ್ರಕರಣದಲ್ಲಿ ದೋಷಮುಕ್ತರಾದವರು ಕೊಳ್ಳೇಗಾಲ ತಾಲೂಕಿನ ಜಾಗೇರಿ ನಿವಾಸಿಯಾಗಿರುವ ಸ್ಟೆಲ್ಲಾ ಮೇರಿ (Stella Mary)!

ರಾಮಾಪುರ ಪೊಲೀಸ್ ಠಾಣೆ ಮೇಲೆ ದಾಳಿ ಪ್ರಕರಣದಲ್ಲಿ ಆರೋಪಿಯಾಗಿದ್ದ ಸ್ಟೆಲ್ಲಾ ಮೇರಿ ಅವರನ್ನು ಚಾಮರಾಜನಗರದ ಬಾಲ ನ್ಯಾಯ ಮಂಡಳಿ ಖುಲಾಸೆಗೊಳಿಸಿದೆ. ಪಾಲಾರ್ ಬಾಂಬ್ ಸ್ಫೋಟದ ಆರೋಪಿಯೂ ಆಗಿದ್ದ ಸ್ಟೆಲ್ಲಾ ಮೇರಿಯನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿ ಬಾಲ ನ್ಯಾಯಮಂಡಳಿ ಆದೇಶ ಹೊರಡಿಸಿದೆ.

Veerappan Case Ramapuram Police station

ಏನಿದು ಪ್ರಕರಣ, ಯಾರು ಈ ಸ್ಟೆಲ್ಲಾ ಮೇರಿ?

ವೀರಪ್ಪನ್‌ ತನ್ನ ಕ್ರೌರ್ಯದ ಉತ್ತುಂಗದಲ್ಲಿ ಹಲವಾರು ಪೊಲೀಸ್‌ ಠಾಣೆಗಳ ಮೇಲೆ ದಾಳಿ ಮಾಡಿದ್ದ. 1992ರ ಆಸುಪಾಸಿನಲ್ಲಿ ನಡೆದ ಕೃತ್ಯಗಳಲ್ಲಿ ಸ್ಟೆಲ್ಲಾ ಮೇರಿ ಕೂಡಾ ಭಾಗಿಯಾದ ಆರೋಪ ಎದುರಾಗಿತ್ತು. ಆದರೆ, ಸ್ಟೆಲ್ಲಾ ಮೇರಿಯ ಬಂಧನವಾಗಿದ್ದು 2020ರ ಫೆಬ್ರವರಿಯಲ್ಲಿ. ಅಂದು ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪವಿದ್ದರೂ ಅಂದು ಆಕೆಯ ಬಂಧನ ನಡೆದಿರಲಿಲ್ಲ. ಆಕೆಯನ್ನು ಪೊಲೀಸ್‌ ಇಲಾಖೆ ಮರೆತೇ ಬಿಟ್ಟಂತಿತ್ತು. ಹಳೆ ಕೇಸುಗಳ ಪರಿಶೀಲನೆ ಸಂದರ್ಭದಲ್ಲಿ ಅದು ಮರಳಿ ಮೇಲೆ ಬಂದಿತ್ತು.

2020ರಲ್ಲಿ ಬಂಧನಕ್ಕೆ ಒಳಗಾದ ಬಳಿಕ ಆಕೆಯ ಮೇಲೆ ಟಾಡಾ, ಶಸ್ತ್ರಾಸ್ತ್ರ ಕಾಯ್ದೆ, ಸ್ಫೋಟಕ ಕಾಯ್ದೆ ಸೇರಿದಂತೆ ವಿವಿಧ ಆರೋಪಗಳಡಿ ಪ್ರಕರಣ ದಾಖಲಾಗಿತ್ತು. ಸ್ಟೆಲ್ಲಾ ಮೇರಿ ಬಂಧನ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಮೇರಿ ಪರವಾಗಿ ಮಾನವ ಹಕ್ಕುಗಳ ಸಂಘಟನೆಗಳು ನಿಂತಿದ್ದವು.

1992ರಲ್ಲಿ ರಾಮಾಪುರ ಪೊಲೀಸ್‌ ಠಾಣೆ ಮೇಲೆ ದಾಳಿ ಮಾಡಿದಾಗ ಸ್ಟೆಲ್ಲಾ ಮೇರಿ ಇನ್ನೂ 13 ವರ್ಷದ ಹುಡುಗಿಯಾಗಿದ್ದಳು. ಅಪ್ರಾಪ್ತ ಬಾಲಕಿಯಾಗಿದ್ದಳು. ಹೀಗಾಗಿ ಆಕೆಯ ವಿಚಾರಣೆಯನ್ನು ಬಾಲ ನ್ಯಾಯಮಂಡಳಿಯಲ್ಲಿ ನಡೆಸಬೇಕು ಎಂದು ಕೇಳಿಕೊಳ್ಳಲಾಗಿತ್ತು. ಇದರಂತೆ ಚಾಮರಾಜನಗರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಪ್ರಕರಣವನ್ನು ಬಾಲ ನ್ಯಾಯಮಂಡಳಿಗೆ ವಹಿಸಿತ್ತು.

ಆರೋಪ ಮುಕ್ತಗೊಳಿಸಲು ಕಾರಣವಾದ ಅಂಶ ಯಾವುದು?

ಸ್ಟೆಲ್ಲಾ ಮೇರಿ ವೀರಪ್ಪನ್‌ ಗ್ಯಾಂಗ್‌ನಲ್ಲಿ ಇದ್ದಿದ್ದು ನಿಜ. ಆಕೆ ರಾಮಾಪುರ ಪೊಲೀಸ್‌ ಠಾಣೆ ದಾಳಿಯಲ್ಲಿ ಭಾಗಿಯಾಗಿರಲಿಲ್ಲ. ಸ್ಟೆಲ್ಲಾ ಮೇರಿಯನ್ನು ಆಗ ಅಪಹರಣ ಮಾಡಿ ಗ್ಯಾಂಗ್‌ ಗೆ ಸೇರಿಸಲಾಗಿತ್ತು. ಆಗ ಅವಳು ಸಣ್ಣ ಬಾಲಕಿ. ಸ್ಟೆಲ್ಲಾ ಮೇರಿಯನ್ನು ವೀರಪ್ಪನ್ ಸಹಚರ ಸುಂಡವಲಿಯಾರ್ ಅಪಹರಿಸಿ ಮದುವೆಯಾಗಿದ್ದ. (ಆತ ಬಳಿಕ ಪೊಲೀಸ್ ಎನ್​ಕೌಂಟರ್‌ನಲ್ಲಿ ಬಲಿಯಾಗಿದ್ದ). ಹೀಗಾಗಿ ಈ ಪ್ರಕರಣದಲ್ಲಿ ಸ್ಟೆಲ್ಲಾ ಮೇರಿಯ ಪಾತ್ರವಿಲ್ಲ, ಆಕೆ ಅಪರಾಧಿಯಲ್ಲ ಎಂದು ಸ್ಟೆಲ್ಲಾ ಪರವಾಗಿ ವಾದ ಮಾಡಲಾಗಿದೆ. ಇದನ್ನು ಒಪ್ಪಿದ ಕೋರ್ಟ್‌ ಆಕೆಯನ್ನು ದೋಷಮುಕ್ತಗೊಳಿಸಿದೆ.

ಈ ಕುರಿತು ಕಕ್ಷಿದಾರರ ಪರವಾಗಿ ವಾದಿಸಿದ ವಕೀಲ ಪಿ.ಪಿ.ಬಾಬುರಾಜ್‌ ಪ್ರತಿಕ್ರಿಯಿಸಿ, ವೀರಪ್ಪನ್ ಗ್ಯಾಂಗ್ ನಿಂದ ಅಪಹರಣಕ್ಕೊಳಗಾಗಿ ಬಳಿಕ ಪೊಲೀಸರ ಕಣ್ತಪ್ಪಿನಿಂದ ಪ್ರಕರಣಗಳಲ್ಲಿ ಈಕೆಯ ಹೆಸರು ಸೇರಿತ್ತು. ಸಾಕ್ಷ್ಯಾಧಾರಗಳ ಕೊರತೆಯಿಂದ ಹಾಗೂ ಘಟನೆಗಳು ನಡೆದ ವೇಳೆ ಅಪ್ರಾಪ್ತೆಯಾಗಿದ್ದರಿಂದ ಬಾಲನ್ಯಾಯಮಂಡಲಿಯು ಎಲ್ಲಾ ಪ್ರಕರಣಗಳಿಂದ ಸ್ಟೆಲ್ಲಾ ಮೇರಿಯನ್ನು ಖುಲಾಸೆಗೊಳಿಸಿದೆ ಎಂದು ತಿಳಿಸಿದರು.

ಸ್ಟೆಲ್ಲಾ ಮೇರಿ ಪರವಾಗಿ ವಾದಿಸಿದ ವಕೀಲ ಪಿ ಪಿ ಬಾಬುರಾಜ್‌ ಅವರು, “ವೀರಪ್ಪನ್ ಗ್ಯಾಂಗ್ ನಿಂದ ಅಪಹರಣಕ್ಕೊಳಗಾಗಿ ಬಳಿಕ ಪೊಲೀಸರ ಕಣ್ತಪ್ಪಿನಿಂದ ಪ್ರಕರಣಗಳಲ್ಲಿ ಈಕೆಯ ಹೆಸರು ಸೇರಿತ್ತು. ಸಾಕ್ಷ್ಯಾಧಾರಗಳ ಕೊರತೆಯಿಂದ ಹಾಗೂ ಘಟನೆಗಳು ನಡೆದ ವೇಳೆ ಅಪ್ರಾಪ್ತೆಯಾಗಿದ್ದರಿಂದ ಬಾಲ ನ್ಯಾಯ ಮಂಡಳಿಯು ಎಲ್ಲ ಪ್ರಕರಣಗಳಿಂದ ಸ್ಟೆಲ್ಲಾ ಮೇರಿಯನ್ನು ಖುಲಾಸೆಗೊಳಿಸಿದೆ” ಎಂದು ಹೇಳಿದ್ದಾರೆ.

ಐವರು ಪೊಲೀಸರ ಹತ್ಯೆ ನಡೆದ ರಾಮಾಪುರಂ ಪೊಲೀಸ್‌ ಠಾಣೆ ಈಗ ಹೇಗಿದೆ?

Continue Reading

ಉತ್ತರ ಕನ್ನಡ

CM Siddaramaiah: ಶಿವರಾಂ ಹೆಬ್ಬಾರ್, ಎಸ್‌.ಟಿ. ಸೋಮಶೇಖರ್ ಪಕ್ಷದ ಸಿದ್ಧಾಂತ ಒಪ್ಪಿ ಬಂದರೆ ಸ್ವಾಗತ: ಸಿದ್ದರಾಮಯ್ಯ

CM Siddaramaiah: ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಶೀಘ್ರ ತೀರ್ಮಾನ ಕೈಗೊಳ್ಳಲಾಗುವುದು ಕಾಂಗ್ರೆಸ್‌ನಲ್ಲಿ ಯಾವುದೇ ಗೊಂದಲವಿಲ್ಲ. ಪಟ್ಟಿಯನ್ನು ಆದಷ್ಟು ಬೇಗ ಪ್ರಕಟಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

VISTARANEWS.COM


on

Shivaram Hebbar and ST Somashekar welcome if they agree with party ideology CM Siddaramaiah
Koo

ಶಿರಸಿ: ಶಾಸಕರಾದ ಎಸ್.ಟಿ. ಸೋಮಶೇಖರ್ (ST Somashekhar) ಹಾಗೂ ಶಿವರಾಂ ಹೆಬ್ಬಾರ್ (Shivaram Hebbar) ಅವರು ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು (Congress party ideology) ಒಪ್ಪಿ ಬಂದರೆ ಅವರನ್ನು ಸ್ವಾಗತಿಸಲಾಗುವುದು. ಹಿಂದೆ ಕಾಂಗ್ರೆಸ್ ನಲ್ಲಿದ್ದವರಿಗೆ ಬಿಜೆಪಿಯಿಂದ ಬೇಸರವಾಗಿದೆಯೆಂದು ತಿಳಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು.

ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿರುವ ಎಸ್.ಟಿ. ಸೋಮಶೇಖರ್‌ ಹಾಗೂ ಗೈರಾದ ಶಿವರಾಂ ಹೆಬ್ಬಾರ್‌ ಅವರ ಕಾಂಗ್ರೆಸ್‌ ಸೇರ್ಪಡೆ ಬಗ್ಗೆ ಹೀಗೆ ಪ್ರತಿಕ್ರಿಯೆ ನೀಡಿದರು.

ಇದನ್ನೂ ಓದಿ: Water Crisis: ಬೆಂಗಳೂರಲ್ಲಿ ಹಾಲಿನ ಟ್ಯಾಂಕರ್ ಮೂಲಕ ನೀರು ಪೂರೈಕೆ; ಬರದ ವಾಸ್ತವ ಬಿಚ್ಚಿಟ್ಟ ಎಚ್.ಡಿ. ದೇವೇಗೌಡ!

ಬಾಂಬ್ ಸ್ಫೋಟ ಪ್ರಕರಣದ ತನಿಖೆ ನಡೆಯುತ್ತಿದೆ

ತಮಗೆ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ಇ ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ನನಗೆ ಯಾವುದೇ ಬೆದರಿಕೆ ಬಂದಿಲ್ಲ. ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟವಾಗಿದೆ. ಇದರ ಬಗ್ಗೆ ಪೊಲೀಸರು, ಸಿಸಿಬಿ ಹಾಗೂ ಎನ್‌ಐಎ ಅಧಿಕಾರಿಗಳು ಸೂಕ್ತ ತನಿಖೆಯನ್ನು ನಡೆಸುತ್ತಿದ್ದಾರೆ. ಸ್ಫೋಟದ ಬಗ್ಗೆ ಕೆಲವು ಸುಳಿವುಗಳು ಸಿಕ್ಕಿದ್ದು, ಎನ್‌ಐಎ ಅಧಿಕಾರಿಗಳು ಐವರನ್ನು ಬಂಧಿಸಿರುವುದಾಗಿ ತಿಳಿದುಬಂದಿದೆ ಎಂದು ತಿಳಿಸಿದರು.

ದೇಶದ್ರೋಹಿಗಳು ಯಾರು?

ಪಾಕ್ ಪರ ಘೋಷಣೆ ಪ್ರಕರಣದ ಎಫ್‌ಎಸ್ಎಲ್ ವರದಿಯನ್ನು ಕಾಂಗ್ರೆಸ್ ಸರ್ಕಾರ ತಿಳಿಸುತ್ತಿಲ್ಲ ಎಂಬ ಬಿಜೆಪಿಯವರ ಟೀಕೆಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಪಾಕ್ ಪರ ಘೋಷಣೆಗಳನ್ನು ಕೂಗಿದ್ದರು. ಆಗ ಆ ಸರ್ಕಾರ ಪ್ರಕರಣವನ್ನೇ ವಜಾಗೊಳಿಸಿದ್ದರು. ಆ ಪ್ರಕರಣಕ್ಕೆ ಸಂಬಂಧಿಸಿದವರನ್ನು ಬಂಧಿಸಲಾಗಿದೆ. ಇದರಿಂದ ಯಾರು ದೇಶದ್ರೋಹಿಗಳು ಎಂಬುದು ತಿಳಿಯುತ್ತದೆ ಎಂದು ಹೇಳಿದರು.

ಲೋಕಸಭೆ ಚುನಾವಣಾ ಅಭ್ಯರ್ಥಿಗಳ ಪಟ್ಟಿ ಶೀಘ್ರ

ಲೋಕಸಭೆ ಚುನಾವಣಾ ಅಭ್ಯರ್ಥಿಗಳ ಘೋಷಣೆಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ಈ ಬಗ್ಗೆ ಶೀಘ್ರ ತೀರ್ಮಾನ ಕೈಗೊಳ್ಳಲಾಗುವುದು ಕಾಂಗ್ರೆಸ್‌ನಲ್ಲಿ ಯಾವುದೇ ಗೊಂದಲವಿಲ್ಲ. ಪಟ್ಟಿಯನ್ನು ಆದಷ್ಟು ಬೇಗ ಪ್ರಕಟಿಸಲಾಗುವುದು ಎಂದು ಹೇಳಿದರು.

ಇದನ್ನೂ ಓದಿ: HD Devegowda: 692 ರೈತರು ಆತ್ಮಹತ್ಯೆಯೇ ಸಿದ್ದರಾಮಯ್ಯ ಸಾಧನೆಯ ಕಿರುನೋಟ: ಎಚ್‌.ಡಿ. ದೇವೇಗೌಡ ವ್ಯಂಗ್ಯ

ಜಿಲ್ಲೆಗೆ ಮಲ್ಪಿಸ್ಪೆಷಾಲಿಟಿ ಆಸ್ಪತ್ರೆಗೆ ಬೇಡಿಕೆಯಿದ್ದು, ಈ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪವಿಲ್ಲದಿರುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ಮುಂದಿನ ದಿನಗಳಲ್ಲಿ ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದರು.

Continue Reading

ಕರ್ನಾಟಕ

Vande Bharat: ಮದುರೈನಿಂದ ಬೆಂಗಳೂರಿಗೆ ಶೀಘ್ರವೇ ವಂದೇ ಭಾರತ್‌ ರೈಲು; ಬೆಲೆ ಎಷ್ಟು?

Vande Bharat: ತಮಿಳುನಾಡಿನ ಮದುರೈ ಹಾಗೂ ಬೆಂಗಳೂರು ಮಧ್ಯೆ ಶೀಘ್ರವೇ ವಂದೇ ಭಾರತ್‌ ರೈಲು ಸೇವೆಗೆ ಚಾಲನೆ ನೀಡಲಾಗುತ್ತಿದೆ. ಇದರಿಂದ ಪ್ರಯಾಣಿಕರ ಸಮಯ ಉಳಿತಾಯವಾಗಲಿದೆ.

VISTARANEWS.COM


on

vande bharat train
Koo

ಬೆಂಗಳೂರು: ತಮಿಳುನಾಡಿನ ಮದುರೈನಿಂದ ಶೀಘ್ರದಲ್ಲೇ ವಂದೇ ಭಾರತ್‌ ರೈಲು (Vande Bharat) ಸಂಚಾರ ಆರಂಭವಾಗಲಿದೆ. ಇದರಿಂದಾಗಿ ಬೆಂಗಳೂರಿನಿಂದ ಮದುರೈಗೆ, ಮದುರೈನಿಂದ ಬೆಂಗಳೂರಿಗೆ ಸಂಚರಿಸುವ ಪ್ರಯಾಣಿಕರಿಗೆ ಭಾರಿ ಅನುಕೂಲವಾಗಲಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮದುರೈ-ಬೆಂಗಳೂರು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ (Madurai-Bengaluru Vande Bharat Express Train) ಮುಂದಿನ ವಾರ ಚಾಲನೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಇದು ಈಗ ಬೆಂಗಳೂರು ಹಾಗೂ ಮದುರೈ ನಿವಾಸಿಗಳಿಗೆ ಸಂತಸದ ಸುದ್ದಿಯಾಗಿದೆ.

ಕೇಸರಿ ಬಣ್ಣದ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳಿಗೆ ಮೋದಿ ಚಾಲನೆ ನೀಡಲಿದ್ದಾರೆ. ದಿಂಡಿಗಲ್‌, ಕರೂರ್‌, ಸೇಲಂ, ಧರ್ಮಪುರಿ ಹಾಗೂ ಹೊಸೂರಿನಲ್ಲಿ ರೈಲು ನಿಲುಗಡೆಯಾಗಲಿದೆ. ಎಂಟು ಬೋಗಿಗಳ ವಂದೇ ಭಾರತ್‌ ರೈಲು ಸಂಚಾರ ಆರಂಭವಾದರೆ, ಮದುರೈನಿಂದ ಕೇವಲ 6 ಗಂಟೆಗಳಲ್ಲಿಯೇ ಬೆಂಗಳೂರು ತಲುಪಬಹುದಾಗಿದೆ. ಇದರಿಂದ ಪ್ರಯಾಣಿಕರಿಗೆ ಹಚ್ಚಿನ ಸಮಯ ಉಳಿಯಲಿದೆ. ಈಗ ಮದುರೈನಿಂದ ಬೆಂಗಳೂರಿಗೆ ರೈಲಿನಲ್ಲಿ 8-10 ಗಂಟೆ ಬೇಕಾಗುತ್ತದೆ.

ಮದುರೈ-ಕೊಯಮತ್ತೂರು ರೈಲಿಗೆ ಚಾಲನೆ ನೀಡುವ ದಿನಾಂಕ ಹಾಗೂ ಟಿಕೆಟ್‌ ದರಗಳ ಕುರಿತು ಇದುವರೆಗೆ ಹಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಇದು ಕರ್ನಾಟಕಕ್ಕೆ ಸಂಪರ್ಕಿಸುವ ಆರನೇ ವಂದೇ ಭಾರತ್‌ ರೈಲು ಎನಿಸಲಿದೆ. ವರ್ಚ್ಯುವಲ್‌ ವೇದಿಕೆ ಮೂಲಕ ನರೇಂದ್ರ ಮೋದಿ ಅವರು ರೈಲಿಗೆ ಚಾಲನೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರು-ಕೊಯಮತ್ತೂರು ರೈಲು ಸಮಯ ಬದಲು

ಬೆಂಗಳೂರಿನಿಂದ ತಮಿಳುನಾಡಿನ ಕೊಯಮತ್ತೂರಿಗೆ ಸಂಚರಿಸುವ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಸಮಯ ಬದಲಾಯಿಸಲಾಗಿದೆ. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಬೆಂಗಳೂರು-ಕೊಯಮತ್ತೂರು ವಂದೇ ಭಾರತ್‌ ರೈಲಿಗೆ ಚಾಲನೆ ನೀಡಲಾಗಿದೆ. ಬೆಳಗ್ಗೆ 5 ಗಂಟೆಗೆ ಕೊಯಮತ್ತೂರಿನಿಂದ ಹೊರಡುವ ಬದಲು 7.30ಕ್ಕೆ ಹೊರಡಲಿದೆ. ಬೆಳಗ್ಗೆ 11.30ಕ್ಕೆ ಬೆಂಗಳೂರು ತಲುಪುವ ಬದಲು ಮಧ್ಯಾಹ್ನ 1.50ಕ್ಕೆ ತಲುಪಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: Vande Bharat Train: ವಂದೇ ಭಾರತ್ ರೈಲುಗಳ ಮೇಲೆ ಕಲ್ಲು ತೂರಾಟ​; ಒಂದೇ ದಿನ 2 ಟ್ರೈನ್‌ ಮೇಲೆ 3 ಕಡೆ ದಾಳಿ!

ಬೆಂಗಳೂರಿನಿಂದ ಬೆಳಗ್ಗೆ 11.30ಕ್ಕೆ ಹೊರಡುವ ಬದಲು ಮಧ್ಯಾಹ್ನ 2.20ಕ್ಕೆ ಹೊರಡಲಿದೆ. ರಾತ್ರಿ 8 ಗಂಟೆಗೆ ಕೊಯಮತ್ತೂರು ತಲುಪುವ ಬದಲು 8.45ಕ್ಕೆ ತಲುಪಲಿದೆ. ಪ್ರಯಾಣಿಕರ ಅನುಕೂಲದ ದೃಷ್ಟಿಯಿಂದಾಗಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಸಮಯ ಬದಲಾಯಿಸಲಾಗಿದೆ ಎಂದು ತಿಳಿದುಬಂದಿದೆ. ಕರ್ನಾಟಕದಲ್ಲಿ ಈಗ ಚೆನ್ನೈ, ಕೊಯಮತ್ತೂರು ಸೇರಿ ಐದು ನಗರಗಳಿಗೆ ವಂದೇ ಭಾರತ್‌ ರೈಲು ಸಂಪರ್ಕ ಇದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
NIA Rait Enmuru
ದಕ್ಷಿಣ ಕನ್ನಡ3 mins ago

NIA Raid : ಸುಳ್ಯದಲ್ಲೂ ಎನ್‌ಐಎ ದಾಳಿ; 2 ದಿನದ ಹಿಂದೆ ಕೇರಳದಿಂದ ಬಂದಿದ್ದವ ವಶಕ್ಕೆ

Uma Chetry
ಕ್ರೀಡೆ18 mins ago

WPL 2024: ಕನ್ನಡತಿ ವೃಂದಾ ದಿನೇಶ್ ಸ್ಥಾನಕ್ಕೆ ಬದಲಿ ಆಟಗಾರ್ತಿಯಾಗಿ ಉಮಾ ಚೆಟ್ರಿ ಆಯ್ಕೆ

Two days special casual leave for state government employees
ಕರ್ನಾಟಕ23 mins ago

Special Casual leave: ರಾಜ್ಯ ಸರ್ಕಾರಿ ನೌಕರರಿಗೆ ಎರಡು ದಿನ ವಿಶೇಷ ಸಾಂದರ್ಭಿಕ ರಜೆ

Veerappan Case Stella Mary
ಚಾಮರಾಜನಗರ24 mins ago

Veerappan Case : ಪೊಲೀಸರ ಹತ್ಯೆ; ವೀರಪ್ಪನ್‌ ಗ್ಯಾಂಗ್‌ನಲ್ಲಿದ್ದ ಸ್ಟೆಲ್ಲಾ ಮೇರಿಗೆ ಖುಲಾಸೆ

BJP MLA Shivaram Hebbar welcomes CM, Deputy CM by putting up flexes
ಕರ್ನಾಟಕ47 mins ago

Banavasi Kadambotsava: ಫ್ಲೆಕ್ಸ್‌ ಹಾಕಿ ಸಿಎಂ, ಡಿಸಿಎಂಗೆ ಭರ್ಜರಿ ಸ್ವಾಗತ ಕೋರಿದ ಬಿಜೆಪಿ ಶಾಸಕ ಶಿವರಾಂ ಹೆಬ್ಬಾರ್‌!

Shivaram Hebbar and ST Somashekar welcome if they agree with party ideology CM Siddaramaiah
ಉತ್ತರ ಕನ್ನಡ57 mins ago

CM Siddaramaiah: ಶಿವರಾಂ ಹೆಬ್ಬಾರ್, ಎಸ್‌.ಟಿ. ಸೋಮಶೇಖರ್ ಪಕ್ಷದ ಸಿದ್ಧಾಂತ ಒಪ್ಪಿ ಬಂದರೆ ಸ್ವಾಗತ: ಸಿದ್ದರಾಮಯ್ಯ

Abhishek Sharma
ಕ್ರಿಕೆಟ್1 hour ago

Abhishek Sharma: ಮಾಡೆಲ್ ಆತ್ಮಹತ್ಯೆ; ಪೊಲೀಸ್‌ ವಿಚಾರಣೆಗೆ ಹಾಜರಾದ ಕ್ರಿಕೆಟಿಗ ಅಭಿಷೇಕ್ ಶರ್ಮಾ

vande bharat train
ಕರ್ನಾಟಕ1 hour ago

Vande Bharat: ಮದುರೈನಿಂದ ಬೆಂಗಳೂರಿಗೆ ಶೀಘ್ರವೇ ವಂದೇ ಭಾರತ್‌ ರೈಲು; ಬೆಲೆ ಎಷ್ಟು?

Text book Revision Karnataka
ಬೆಂಗಳೂರು1 hour ago

Text Book Revision : ಸದ್ದಿಲ್ಲದೆ ಪಠ್ಯಪುಸ್ತಕ ಪರಿಷ್ಕರಣೆ ಮಾಡಿದ ಸರ್ಕಾರ, ಏನೇನು ಬದಲಾವಣೆ?

Shubman Gill
ಕ್ರೀಡೆ2 hours ago

Shubman Gill: 5ನೇ ಟೆಸ್ಟ್​ಗೂ ಮುನ್ನ ಬೌದ್ಧ ಸನ್ಯಾಸಿಗಳ ಆಶೀರ್ವಾದ ಪಡೆದ ಗಿಲ್

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

BJP JDS alliance to finalise seats for Lok Sabha polls this week HD DeveGowda
ರಾಜಕೀಯ1 day ago

HD Devegowda: ಈ ವಾರದಲ್ಲಿ ಲೋಕಸಭೆಗೆ ಬಿಜೆಪಿ-ಜೆಡಿಎಸ್‌ ಮೈತ್ರಿ ಸೀಟು ಅಂತಿಮ: ಎಚ್‌.ಡಿ. ದೇವೇಗೌಡ

Elephant attacks in Sakaleshpur workers escaped
ಹಾಸನ1 day ago

Elephant Attack : ಆನೆ ಅಟ್ಯಾಕ್‌ಗೆ ಬಾಯಿಗೆ ಬಂತು ಜೀವ; ಜಸ್ಟ್‌ ಎಸ್ಕೇಪ್‌ ಆಗಿದ್ದು ಹೀಗೆ..

dina bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರು ಇಂದು ಗಾಬರಿಯಲ್ಲೇ ದಿನ ಕಳೆಯುವಿರಿ

read your daily horoscope predictions for march 3rd 2024
ಭವಿಷ್ಯ3 days ago

Dina Bhavishya : ಈ ರಾಶಿಯವರು ಆತುರದಲ್ಲಿ ಇಂದು ಈ ನಿರ್ಧಾರವನ್ನು ತೆಗೆದುಕೊಳ್ಳಬೇಡಿ!

Rameswaram cafe bomb blast case Accused caught on CCTV
ಬೆಂಗಳೂರು3 days ago

Blast In Bengaluru: ಸನ್ನೆ ಮಾಡಿ ಪೊಲೀಸರಿಗೆ ಶಂಕಿತನ ಚಾಲೆಂಜ್! ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಏನು

Rameswaram Cafe Blast Suspected travels in BMTC Volvo bus
ಬೆಂಗಳೂರು3 days ago

Blast In Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ವೋಲ್ವೋ ಬಸ್‌ನಲ್ಲಿ ಬಾಂಬರ್ ಸಂಚಾರ, ಸಿಸಿಟಿವಿಯಲ್ಲಿ ಸೆರೆ

Blast in Bengaluru Time bomb planted in rameshwaram cafe Important evidence found
ಬೆಂಗಳೂರು4 days ago

Blast in Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ಹೋಟೆಲ್‌ನಲ್ಲಿಟ್ಟಿದ್ದು ಟೈಂ ಬಾಂಬ್‌? ಸಿಕ್ಕಿದೆ ಮಹತ್ವದ ಸಾಕ್ಷ್ಯ

rameshwaram cafe bengaluru incident
ಬೆಂಗಳೂರು4 days ago

Blast in Bengaluru : ರಾಮೇಶ್ವರಂ ಕೆಫೆ ಸ್ಫೋಟದ ಸ್ಥಳದಲ್ಲಿ ಬ್ಯಾಟರಿ ಪತ್ತೆ!

Elephants spotted in many places
ಹಾಸನ4 days ago

Elephant Attack: ಹಾಸನ, ರಾಮನಗರ, ಮೈಸೂರಲ್ಲಿ ಆನೆ ಬೇನೆ; ಬೆಳಗಾವಿಯಲ್ಲಿ ಬಿಂದಾಸ್‌ ಓಡಾಟ

read your daily horoscope predictions for march 1st 2024
ಭವಿಷ್ಯ5 days ago

Dina Bhavishya : ಈ ರಾಶಿಯವರು ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ

ಟ್ರೆಂಡಿಂಗ್‌