Site icon Vistara News

Chandra Grahan 2022 | ಇಂದು ಚಂದ್ರ ಗ್ರಹಣ; ಯಾವ ರಾಶಿಯ ಮೇಲೆ ಏನು ಪರಿಣಾಮ?

Chandra Grahan 2022

ಬೆಂಗಳೂರು: ನವೆಂಬರ್‌ 8 ರಂದು ಎಂದರೆ ಕಾರ್ತಿಕ ಮಾಸ ಶುಕ್ಲ ಪಕ್ಷದ ಹುಣ್ಣಿಮೆಯಂದು ಮಂಗಳವಾರ ಭರಣಿ ನಕ್ಷತ್ರದ ಮೇಷ ರಾಶಿಯಲ್ಲಿ ಚಂದ್ರನಿಗೆ ರಾಹುಗ್ರಸ್ತ ಪೂರ್ಣಗ್ರಾಸಗ್ರಸ್ತೋದಯ ಗ್ರಹಣವು (Chandra Grahan 2022) ಸಂಭವಿಸಲಿದೆ.

ಈ ಖಗೋಳ ವಿಸ್ಮಯವು ಜ್ಯೋತಿಷದ ಪ್ರಕಾರ ಬಹಳ ಮಹತ್ವ ಪಡೆದಿದೆ. ಆದರೆ ಇತ್ತೀಚೆಗೆ ಸಂಭವಿಸಿದ ಸೂರ್ಯ ಗ್ರಹಣದಷ್ಟು ಈ ಚಂದ್ರ ಗ್ರಹಣವು ದ್ವಾದಶ ರಾಶಿಗಳ ಮೇಲೇನು ಪರಿಣಾಮ ಬೀರುವುದಿಲ್ಲ ಎಂದು ಜ್ಯೋತಿಷ ಶಾಸ್ತ್ರ ಹೇಳಿದೆ.

ಭರಣಿ ನಕ್ಷತ್ರ ಮೇಷರಾಶಿಯಲ್ಲಿ ಚಂದ್ರನಿಗೆ ರಾಹುಗ್ರಸ್ತ ಪೂರ್ಣಗ್ರಾಸ ಗ್ರಸ್ತೋದಯಗ್ರಹಣವಾಗುತ್ತಿರುವುದರಿಂದ ಆ ನಕ್ಷತ್ರ, ರಾಶಿಯವರಿಗೆ ವಿಶೇಷ ದೋಷವಿರಲಿದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಈ ಚಂದ್ರಗ್ರಹಣದಿಂದ ಮೇಷ, ವೃಷಭ, ಕನ್ಯಾ ಮತ್ತು ಕುಂಭ ರಾಶಿಯವರಿಗೆ ಅನಿಷ್ಟಫಲವಿದೆ. ಸಿಂಹ, ತುಲಾ, ಧನು, ಮೀನ ರಾಶಿಯವರಿಗೆ ಮಿಶ್ರ ಫಲವಿರಲಿದೆ. ಮಿಥುನ, ಕರ್ಕ, ವೃಶ್ಚಿಕ ಮತ್ತು ಮಕರ ರಾಶಿಯವರಿಗೆ ಶುಭ ಫಲವಿದೆ.

ಗ್ರಹಣದ ದೋಷವಿರುವ ನಕ್ಷತ್ರ ಅಥವಾ ರಾಶಿಯವರು ಈ ಕೆಳಗಿನ ಶ್ಲೋಕವನ್ನು ಪಠಿಸಬಹುದು;

ಯೋ ಸೌ ವಜ್ರಧರೋ ದೇವಃ ಆದಿತ್ಯಾನಾಂ ಪ್ರಭುರ್ಮತಃ |
ಸೂರ್ಯ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು || 1 ||

ಯೋ ಸೌ ದಂಡಧರೋ ದೇವಃ ಯಮೋ ಮಹಿಷವಾಹನಃ |
ಸೂರ್ಯ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು || 2 ||

ಯೋ ಸೌ ಶೂಲಧರೋ ದೇವಃ ಪಿನಾಕೀ ವೃಷವಾಹನಃ |
ಸೂರ್ಯ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು || 3 ||  ‌

ಗ್ರಹಣದ ಸ್ಪರ್ಶ-ಮೋಕ್ಷ ಎಷ್ಟು ಹೊತ್ತಿಗೆ?
ಗ್ರಹಣ ಸ್ಪರ್ಶ : ಮಧ್ಯಾಹ್ನ 02-39
ಗ್ರಹಣ ಮಧ್ಯಕಾಲ : ಸಂಜೆ 04-29
ಸೂರ್ಯಾಸ್ತ ಸಂಜೆ : 05-58
ಚಂದ್ರೋದಯ : ಸಂಜೆ 6.00
ಸಂಮ್ಮಿಲನ : ಮಧ್ಯಾಹ್ನ 06-20, ಉನ್ಮಿಲನ : ಸಂಜೆ 05-12
ಗ್ರಹಣ ಆದ್ಯಂತ ಪುಣ್ಯ ಕಾಲ: 19 ನಿಮಿಷಗಳು ಮಾತ್ರ ( ಸಂಜೆ 6-00 ಗಂಟೆಯಿಂದ 6-19 ನಿಮಿಷಗಳವರೆಗೆ ಪರ್ವಪುಣ್ಯಕಾಲ)
ದೃಶ್ಯ ಪುಣ್ಯಕಾಲ 0-22 ನಿಮಿಷ, ಗ್ರಹಣ ಮೋಕ್ಷ: 6-20
ಗಮನಿಸಿ: ಆಯಾಯಾ ಊರಿನ ಸೂರ್ಯಾಸ್ತದ ಪ್ರಕಾರ ಗ್ರಹಣದ ಮತ್ತು ಅನುಷ್ಠಾನದ ಸಮಯ ಸ್ವಲ್ಪ ಬದಲಾಗಲಿದೆ.
ಬೆಂಗಳೂರಿನಲ್ಲಿ ಭಾಗಶಃ ಚಂದ್ರ ಗ್ರಹಣವು ಸಂಜೆ 05-53 ಕ್ಕೆ ಆರಂಭವಾಗಿ 6-18ಕ್ಕೆ ಕೊನೆಗೊಳ್ಳಲಿದೆ ಎಂದು ಖಗೋಳ ಶಾಸ್ತ್ರಜ್ಞರು ತಿಳಿಸಿದ್ದಾರೆ.

ಇದನ್ನೂ ಓದಿ | Chandra Grahan 2022 | ಚಂದ್ರ ಗ್ರಹಣ ಎಷ್ಟು ಹೊತ್ತಿಗೆ ಸಂಭವಿಸಲಿದೆ? ಆಹಾರ ಸೇವನೆ ಯಾವಾಗ?

Exit mobile version