Site icon Vistara News

Dina Bhavishya : ಈ ರಾಶಿಯವರಿಗೆ ಇಂದು ಮುಂಗೋಪವೇ ಶತ್ರು!

dina bhavishya read your daily horoscope predictions for April 11 2024

ಚಂದ್ರನು ಗುರುವಾರ ಮಿಥುನ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದರಿಂದಾಗಿ ವೃಷಭ, ಕಟಕ, ಸಿಂಹ, ವೃಶ್ಚಿಕ, ಧನು ಹಾಗೂ ಮೀನ ರಾಶಿಯವರಿಗೆ ಚಂದ್ರನ ಬಲ ಸಿಗಲಿದೆ. ಇಂದಿನ ದಿನ ಭವಿಷ್ಯವನ್ನು (Kannada Dina Bhavishya) ನೋಡುವುದಾದರೆ, ಸಿಂಹ ರಾಶಿಯವರಿಗೆ ಮುಂಗೋಪದಿಂದ ಕೆಲಸ ಕಾರ್ಯದಲ್ಲಿ ಹಾನಿ ಉಂಟಾಗುವ ಸಂಭವ ಇದೆ. ಮಾತುಗಳು ಕುಟುಂಬದ ವಾತಾವರಣ ಕೆಡಿಸಬಹುದು. ಹೀಗಾಗಿ ಮಾತಿನಲ್ಲಿ ಎಚ್ಚರಿಕೆ ಇರಲಿ. ಆರ್ಥಿಕವಾಗಿ ಪ್ರಗತಿ ಸಾಧಿಸುವಿರಿ. ಸಂಬಂಧಿಗಳೊಂದಿಗೆ ಕಾಲ ಕಳೆಯುವ ಸಾಧ್ಯತೆ ಇದೆ. ಸಹೋದ್ಯೋಗಿಗಳಿಂದ ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (11-04-2024)

ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷ.
ತಿಥಿ: ತದಿಗೆ 15:02 ವಾರ: ಗುರುವಾರ
ನಕ್ಷತ್ರ: ಕೃತ್ತಿಕಾ 25:37 ಯೋಗ: ಪ್ರೀತಿ 07:17
ಕರಣ: ಗರಜ 15:02 ಅಮೃತ ಕಾಲ: ರಾತ್ರಿ 11:23 ರಿಂದ 12:53ರ ವರೆಗೆ
ದಿನದ ವಿಶೇಷ: ಮತ್ಸ್ಯ ಜಯಂತಿ, ಕುತುಬ್‌-ಎ-ರಂಜಾನ್‌

ಸೂರ್ಯೋದಯ : 06:09   ಸೂರ್ಯಾಸ್ತ : 06:32

ರಾಹುಕಾಲ : ಮಧ್ಯಾಹ್ನ 1.30 ರಿಂದ 3.00
ಗುಳಿಕಕಾಲ: ಬೆಳಗ್ಗೆ 9.00 ರಿಂದ 10.30
ಯಮಗಂಡಕಾಲ: ಬೆಳಗ್ಗೆ 6.00 ರಿಂದ 7.30

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

ಮೇಷ: ಉದ್ಯೋಗಿಗಳಿಗೆ ಬಡ್ತಿ, ವೇತನ ಹೆಚ್ಚಳವಾಗುವ ಸಾಧ್ಯತೆ ಇದೆ. ಅತಿರೇಕದ ಮಾತುಗಳು ಜಗಳವನ್ನುಂಟು ಮಾಡಬಹುದು. ಮಾತಿನಲ್ಲಿ ಹಿಡಿತವಿರಲಿ. ಯಾವುದಾದರೂ ಮೂಲದಿಂದ ಆರ್ಥಿಕ ಲಾಭ ಆಗಲಿದೆ. ಆರೋಗ್ಯದಲ್ಲಿ ಕೊಂಚ ಮಟ್ಟಿಗೆ ಏರುಪೇರು ಉಂಟಾಗುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1

ವೃಷಭ: ಭಾವನಾತ್ಮಕ ವಿಷಯಗಳಿಂದ ಮಾನಸಿಕ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ದಿನದ ಮಟ್ಟಿಗೆ ಖರ್ಚು ಹೆಚ್ಚಾಗಲಿದೆ. ಆರೋಗ್ಯದ ಕುರಿತು ವಿಶೇಷ ಕಾಳಜಿ ವಹಿಸಬೇಕು. ಉದ್ಯೋಗಿಗಳಿಗೆ ಹಾಗೂ ಕೌಟುಂಬಿಕವಾಗಿ ಶುಭ ಫಲ ಇರಲಿದೆ.
ಅದೃಷ್ಟ ಸಂಖ್ಯೆ: 1

ಮಿಥುನ: ಏಕಪಕ್ಷೀಯ ವ್ಯಾಮೋಹದಿಂದ ಒತ್ತಡದ ಸಾಧ್ಯತೆ ಕಡಿಮೆ ಮಾಡಿಕೊಳ್ಳಿ. ಉತ್ಸಾಹದ ಮನಸ್ಥಿತಿಯು ನಿಮ್ಮದಾಗಿರಲಿದೆ. ಇದರಿಂದ ಭರವಸೆಯ ಹೊಸ ಅವಕಾಶಗಳು ಸಿಗುವ ಸಾಧ್ಯತೆ ಇದೆ. ಆರ್ಥಿಕ ಪ್ರಗತಿ ಮಧ್ಯಮವಾಗಿರಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಶುಭ ಫಲ ಇದೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 8

ಕಟಕ: ಅತ್ಯಂತ ಪ್ರಭಾವಿ ಜನರ ಬೆಂಬಲ ನಿಮ್ಮ ನೈತಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ವ್ಯಾಪಾರ – ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ. ಅತಿರೇಕದಲ್ಲಿ ಯಾವುದೇ ಮಾತುಗಳು ಅಪಾಯವನ್ನು ತರಬಹುದು. ಉದ್ಯೋಗಿಗಳಿಗೆ ಒತ್ತಡ ಹೆಚ್ಚಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಮಿಶ್ರ ಫಲ ನಿಮ್ಮದಾಗಲಿದೆ.
ಅದೃಷ್ಟ ಸಂಖ್ಯೆ: 2

ಸಿಂಹ: ಮುಂಗೋಪದಿಂದ ನಿಮ್ಮ ಕೆಲಸ ಕಾರ್ಯದಲ್ಲಿ ಹಾನಿ ಉಂಟಾಗುವ ಸಂಭವ ಇದೆ. ಆರ್ಥಿಕವಾಗಿ ಪ್ರಗತಿ ಸಾಧಿಸುವಿರಿ. ಸಂಬಂಧಿಗಳೊಂದಿಗೆ ಕಾಲ ಕಳೆಯುವ ಸಾಧ್ಯತೆ ಇದೆ. ಹೇಳಿಕೆಯ ಮಾತುಗಳು ಕುಟುಂಬದ ವಾತಾವರಣ ಕೆಡಿಸಬಹುದು. ಹೀಗಾಗಿ ಮಾತಿನಲ್ಲಿ ಎಚ್ಚರಿಕೆ ಇರಲಿ. ಸಹೋದ್ಯೋಗಿಗಳಿಂದ ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 1

ಕನ್ಯಾ: ಮನರಂಜನೆಗಾಗಿ ಸಮಯ ಕಳೆಯುವ ಸಾಧ್ಯತೆ ಇದೆ. ಆಪ್ತರೊಂದಿಗೆ ಮಾತುಕತೆ ನಡೆಸುವಿರಿ. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ಪಾಲುದಾರಿಕೆಯಲ್ಲಿ ಹೂಡಿಕೆ ವ್ಯವಹಾರವನ್ನು ಮಾಡುವುದು ಬೇಡ. ಉದ್ಯೋಗಿಗಳಿಗೆ ಕಿರಿಕಿರಿ ಉಂಟಾಗಲಿದೆ. ನಂಬಿದ ವ್ಯಕ್ತಿಗಳು ನಿಮ್ಮನ್ನು ಮೋಸಗೊಳಿಸಬಹುದು. ತಪ್ಪು ತಿಳಿವಳಿಕೆ ಉಂಟಾಗುವ ಸಾಧ್ಯತೆ ಇದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 8

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

ತುಲಾ:

ಸಕಾರಾತ್ಮಕ ಆಲೋಚನೆಗಳಿಂದ ಕಾರ್ಯದಲ್ಲಿ ಯಶಸ್ಸು ನಿಮ್ಮದಾಗಲಿದೆ. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ಹಳೆಯ ವಿಚಾರಗಳನ್ನು ಕೆದಕಿ ಮನಸ್ಸಿಗೆ ಘಾಸಿ ಮಾಡಿಕೊಳ್ಳುವುದು ಬೇಡ. ಆರೋಗ್ಯ ಮಧ್ಯಮವಾಗಿರಲಿದೆ. ಉದ್ಯೋಗಿಗಳಿಗೆ ಮಿಶ್ರ ಫಲ ಉಂಟಾಗಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 1

ವೃಶ್ಚಿಕ: ದೀರ್ಘಕಾಲದ ಅನಾರೋಗ್ಯಕ್ಕೆ ಪರಿಹಾರ ಸಿಗಲಿದೆ. ಹೂಡಿಕೆ, ವ್ಯಾಪಾರ ವ್ಯವಹಾರಗಳಲ್ಲಿ ಆರ್ಥಿಕ ಪ್ರಗತಿ ಕಾಣುವಿರಿ. ಉದ್ಯೋಗಿಗಳಿಗೆ ಹೊಸ ಭರವಸೆ ಮೂಡಲಿದೆ. ಅಮೂಲ್ಯ ವಸ್ತುಗಳು ಕೈಗೆ ಸಿಗುವುದರಿಂದ ಸಂತಸ ನಿಮ್ಮದಾಗಲಿದೆ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 3

ಧನಸ್ಸು: ಭೂಮಿ ಸಂಬಂಧಿ ವ್ಯವಹಾರ, ಹಣಕಾಸು ವ್ಯವಹಾರದಲ್ಲಿ ಲಾಭ ಆಗಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಸಹೋದ್ಯೋಗಿಗಳಿಂದ ಸಹಕಾರ ಸಿಗಲಿದೆ. ವಿವಾಹ ಅಪೇಕ್ಷಿತರಿಗೆ ಕಂಕಣ ಬಲ ಕೂಡಿ ಬರಲಿದೆ. ಕೌಟುಂಬಿಕವಾಗಿ ಶುಭ ಫಲ ಇರಲಿದೆ.
ಅದೃಷ್ಟ ಸಂಖ್ಯೆ: 9

ಮಕರ: ಭರವಸೆಯ ಹೊಸ ಜೀವನ ಶುರುವಾಗಲಿದೆ. ದೀರ್ಘಕಾಲದ ಹೂಡಿಕೆ ವ್ಯವಹಾರದಲ್ಲಿ ಆರ್ಥಿಕ ಪ್ರಗತಿ ನಿಮ್ಮದಾಗಲಿದೆ. ನೀವು ಮಾಡಿದ ಕೆಲಸ ಕಾರ್ಯಗಳ ಶ್ರೇಯಸ್ಸನ್ನು ಬೇರೆಯವರು ತೆಗೆದುಕೊಂಡು ಪ್ರಶಂಸೆ ಪಡೆಯುವ ಸಾಧ್ಯತೆ ಇದೆ. ಹೀಗಾಗಿ ಈ ಬಗ್ಗೆ ತುಸು ಎಚ್ಚರಿಕೆ ವಹಿಸಿ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 9

ಕುಂಭ: ಬಾಕಿ ಇರುವ ಕೆಲಸ ಕಾರ್ಯಗಳು ಪೂರ್ಣವಾಗಲಿವೆ. ಅವಶ್ಯಕ ವಸ್ತುಗಳ ಖರೀದಿ ನಿಮ್ಮದಾಗಲಿದೆ. ಅಷ್ಟೇ ಆರ್ಥಿಕ ಲಾಭ ಉಂಟಾಗಲಿದೆ. ಕುಟುಂಬದಲ್ಲಿ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ ಇದೆ. ಯಾರೊಂದಿಗೂ ಮಾತು ಬೆಳೆಸುವುದು ಬೇಡ. ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆ ಇದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7

ಮೀನ: ಹಳೆಯ ನೋವು ಉಲ್ಬಣಗೊಳ್ಳುವ ಸಾಧ್ಯತೆ ಇದೆ. ಆರೋಗ್ಯದ ಕಡೆಗೆ ಗಮನ ಇರಲಿ. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ಅಗತ್ಯ ವಸ್ತುಗಳ ಖರೀದಿಯಿಂದ ಖರ್ಚು ಹೆಚ್ಚಾಗಲಿದೆ. ಸಂಬಂಧಿಗಳೊಂದಿಗೆ ಮಾತುಕತೆ ನಡೆಸುವಿರಿ. ಉದ್ಯೋಗಿಗಳಿಗೆ ಒತ್ತಡ ಉಂಟಾಗಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 5

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Exit mobile version