Astrology Answers | ನಾನು ನೀಟ್‌ ಪರೀಕ್ಷೆಯಲ್ಲಿ ಒಳ್ಳೆಯ ರ‍್ಯಾಂಕ್‌ ಪಡೆಯುತ್ತೇನೆಯೇ ಗುರೂಜಿ? - Vistara News

ಪ್ರಮುಖ ಸುದ್ದಿ

Astrology Answers | ನಾನು ನೀಟ್‌ ಪರೀಕ್ಷೆಯಲ್ಲಿ ಒಳ್ಳೆಯ ರ‍್ಯಾಂಕ್‌ ಪಡೆಯುತ್ತೇನೆಯೇ ಗುರೂಜಿ?

ಇದು ಜ್ಯೋತಿಷ್ಯದ ಹೊಸ ಅಂಕಣ (Astrology Answers). ಇಲ್ಲಿ ನಮ್ಮ ಓದುಗರು ಕೇಳುವ ಪ್ರಶ್ನೆಗಳಿಗೆ ರಾಜಗುರು ಬಿ. ಎಸ್‌. ದ್ವಾರಕನಾಥ್‌ ಅವರು ಉತ್ತರಿಸಲಿದ್ದಾರೆ, ಪರಿಹಾರ ಸೂಚಿಸಲಿದ್ದಾರೆ. ಇಲ್ಲಿ ನೀವೂ ಪ್ರಶ್ನೆ ಕೇಳಬಹುದು.

VISTARANEWS.COM


on

ಭವಿಷ್ಯ ಪ್ರಶ್ನೋತ್ತರ rajaguru
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪ್ರಶ್ನೆ: ನಾನು ಪಿಯುಸಿ ಸೈನ್ಸ್ ಓದುತ್ತಿದ್ದೇನೆ. ವಿಷಯಗಳು ಸರಿಯಾಗಿ ಅರ್ಥವಾಗುತ್ತಿಲ್ಲ. ನೀಟ್‌ ಪರೀಕ್ಷೆ ಬರೆಯ ಬೇಕೆಂದುಕೊಂಡಿದ್ದೇನೆ. ನಾನು ಈ ಪರೀಕ್ಷೆಯಲ್ಲಿ ಚೆನ್ನಾಗಿ ರ‍್ಯಾಂಕ್‌ ಪಡೆಯುತ್ತೇನೆಯೇ?. ಮೆಡಿಕಲ್‌ ಸೀಟು ಪಡೆಯಲು ನನ್ನಿಂದ ಸಾಧ್ಯವಾಗುತ್ತದೆಯೇ? ದಯವಿಟ್ಟು ತಿಳಿಸಿ ಗುರೂಜಿ.
ಜನ್ಮದಿನಾಂಕ : 16-7-2004 ನಕ್ಷತ್ರ: ಆರಿದ್ರಾ

ಪರಿಹಾರ: ಆರಿದ್ರಾ ನಕ್ಷತ್ರ ಮಿಥುನ ರಾಶಿಯವರಿಗೆ ಈಗ ತಾತ್ಕಾಲಿಕವಾಗಿ ಎಂಟರಲ್ಲಿ ಶನಿ, ಹತ್ತರಲ್ಲಿ ಗುರು ಇದ್ದಾನೆ. ಸಮಯ ಅಷ್ಟು ಅನುಕೂಲಕರವಾಗಿಲ್ಲ. ಶನಿಯು ಮೇಷ ರಾಶಿಗೆ ಬಂದಾಗ ಅಂದರೆ ಹನ್ನೊಂದನೇ ಮನೆಗೆ ಬಂದಾಗ ನಿಮಗೆ ಒಳ್ಳೆಯ ಕಾಲ ಬರಲಿದೆ. ಯುಗಾದಿಯ ನಂತರ ನೀವು ಅಂದುಕೊಂಡಿದ್ದೆಲ್ಲಾ ಸಾಧ್ಯವಾಗುತ್ತದೆ. ಇದಕ್ಕಾಗಿ ನೀವು ನಿತ್ಯ ಗಣಪತಿಗೆ ಗರಿಕೆ ಇಷ್ಟು, ಪೂಜೆ ಮಾಡಿ. ಗಣಪತಿ ಅಷ್ಟೋತ್ತರ ಪಠಿಸಿ. ಕ್ಷಿಪ್ರ ಫಲಕ್ಕಾಗಿ ಪಾರ್ವತಿ ಅಥವಾ ದುರ್ಗೆಗೆ ಪೂಜೆ ಮಾಡಿ, ದುರ್ಗಾ ಅಷ್ಟೋತ್ತರ ಪಠಿಸಿ, ಒಳ್ಳೆಯದಾಗುತ್ತದೆ. ಈ ಎಲ್ಲ ಪೂಜೆಯ ಜತೆ ಜತೆಗೆ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಓದುವುದನ್ನು ಮರೆಯಬೇಡಿ.

ನೀವೂ ಪ್ರಶ್ನೆ ಕೇಳಬಹುದು…
ಇದು ವಿಸ್ತಾರನ್ಯೂಸ್‌ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್‌. ದ್ವಾರಕನಾಥ್‌ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ಇ-ಮೇಲ್‌ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕೇಳಲು ನಮ್ಮ ಇ-ಮೇಲ್‌ ವಿಳಾಸ: janasamparka@vistaranews.com

ಇದನ್ನೂ ಓದಿ | Finance Horoscope 2023 | ಜನವರಿಯಲ್ಲಿ ಯಾವೆಲ್ಲಾ ರಾಶಿಯವರಿಗೆ ಆರ್ಥಿಕವಾಗಿ ಶುಭ ಫಲಗಳಿವೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Yuzvendra Chahal : ​ ಚಾಹಲ್ ಕೈಬಿಟ್ಟಿರುವುದರ ಹಿಂದಿನ ಕಾರಣ ಬಹಿಂಗ ಮಾಡಿದ ಆರ್​ಸಿಬಿ ಮಾಜಿ ಡೈರೆಕ್ಟರ್​

Yuzvendra Chahal: ಐಪಿಎಲ್ ಹರಾಜಿನಲ್ಲಿ ಫ್ರಾಂಚೈಸಿ ಅವರನ್ನು ಮತ್ತೆ ಖರೀದಿಸುತ್ತದೆ ಎಂದು ಅವರಿಗೆ ಸೂಚನೆ ನೀಡಿತ್ತು ಎಂಬ ವರದಿಗಳೂ ಇದ್ದವು. ಆದಾಗ್ಯೂ, ಅವರ ಹೆಸರು ಬಿಡ್ಡಿಂಗ್​​ಗೆ ಬಂದಾಗ, ಆರ್​ಸಿಬಿ ಆಡಳಿತ ಬಗ್ಗೆ ಯಾವುದೇ ಆಸಕ್ತಿ ತೋರಿಸಿರಲಿಲ್ಲ. ಹೀಗಾಗಿ ಉದ್ದೇಶಪೂರ್ವಕ ಕೆಲಸ ಎಂಬುದು ಬಹಿರಂಗಗೊಂಡಿತು.

VISTARANEWS.COM


on

Yuzvendra Chahal
Koo

ನವದೆಹಲಿ: ಐಪಿಎಲ್ 2022 ರ ಹರಾಜಿಗೆ ಮೊದಲು ರಾಯಲ್ ಚಾಲೆಂಜರ್ಸ್​ ಬೆಂಗಳೂರು (RCB)​ ಫ್ರಾಂಚೈಸಿಯು ಯುಜ್ವೇಂದ್ರ ಚಾಹಲ್ ಅವರನ್ನು ಬಿಡುಗಡೆ ಮಾಡಿದ್ದಕ್ಕೆ ಹಾಗೂ ಆ ಮೇಲೆ ಖರೀದಿ ಮಾಡದಿರುವುದಕ್ಕೆ ಆರ್​ಸಿಬಿಯ ಮಾಜಿ ಮುಖ್ಯ ಕೋಚ್ ಮತ್ತು ಕ್ರಿಕೆಟ್ ನಿರ್ದೇಶಕ ಮೈಕ್ ಹೆಸನ್ ಇದೀಗ ಕಾರಣಕೊಟ್ಟಿದ್ದಾರೆ. ಯಜ್ವೇಂದ್ರ ಚಹಲ್ (Yuzvendra Chahal) 2014ರಿಂದ 2021ರ ಅವಧಿಯಲ್ಲಿ ಆರ್​​ಸಿಬಿ ಪರ 139 ವಿಕೆಟ್​ಗಳನ್ನು ಪಡೆದು ಅತ್ಯಂತ ಯಶಸ್ವಿ ಬೌಲರ್ ಆಗಿದ್ದ ಹೊರತಾಗಿಯೂ ತಂಡದಲ್ಲಿ ಉಳಿದಿರುವ ವಿಚಾರವನ್ನು ತಿಳಿಸಿದ್ದಾರೆ.

ಐಪಿಎಲ್ 2022 ರ ಮೆಗಾ ಹರಾಜಿಗೆ ಮುಂಚಿತವಾಗಿ, ಆರ್​​ಸಿಬಿ ಫ್ರಾಂಚೈಸಿ ಯುಜ್ವೇಂದ್ರ ಚಹಲ್ ಅವರನ್ನು ಉಳಿಸಿಕೊಳ್ಳದಿದ್ದಾಗ ಅಭಿಮಾನಿಗಳು ಆಶ್ಚರ್ಯಚಕಿತರಾಗಿದ್ದರು. ತನ್ನನ್ನು ಉಳಿಸಿಕೊಳ್ಳಲಾಗುವುದಿಲ್ಲ ಎಂದು ಫ್ರಾಂಚೈಸಿಯಿಂದ ಫೋನ್ ಕರೆ ಅಥವಾ ಮಾಹಿತಿಯೂ ಸ್ವೀಕರಿಸಿಲ್ಲ ಎಂದು ಸ್ಪಿನ್ನರ್​ ನಂತರ ಬಹಿರಂಗಪಡಿಸಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು ಹಾಗೂ ಈಗಲೂ ಅಭಿಮಾನಿಗಳಿಗೆ ಬೇಸರವಿದೆ.

ಐಪಿಎಲ್ ಹರಾಜಿನಲ್ಲಿ ಫ್ರಾಂಚೈಸಿ ಅವರನ್ನು ಮತ್ತೆ ಖರೀದಿಸುತ್ತದೆ ಎಂದು ಅವರಿಗೆ ಸೂಚನೆ ನೀಡಿತ್ತು ಎಂಬ ವರದಿಗಳೂ ಇದ್ದವು. ಆದಾಗ್ಯೂ, ಅವರ ಹೆಸರು ಬಿಡ್ಡಿಂಗ್​​ಗೆ ಬಂದಾಗ, ಆರ್​ಸಿಬಿ ಆಡಳಿತ ಬಗ್ಗೆ ಯಾವುದೇ ಆಸಕ್ತಿ ತೋರಿಸಿರಲಿಲ್ಲ. ಹೀಗಾಗಿ ಉದ್ದೇಶಪೂರ್ವಕ ಕೆಲಸ ಎಂಬುದು ಬಹಿರಂಗಗೊಂಡಿತು.

ಇದನ್ನೂ ಓದಿ: Match Fixing : ಇರ್ಫಾನ್​ ಪಠಾಣ್​, ಸುರೇಶ್ ರೈನಾ ಪಾಲ್ಗೊಂಡಿದ್ದ ​ ಕ್ರಿಕೆಟ್ ಲೀಗ್​ನಲ್ಲಿ ಮ್ಯಾಚ್​ ಫಿಕ್ಸಿಂಗ್?

2019 ರಿಂದ 2023 ರವರೆಗೆ ಫ್ರಾಂಚೈಸಿಯ ಕ್ರಿಕೆಟ್ ವ್ಯವಹಾರಗಳ ನೇತೃತ್ವ ವಹಿಸಿದ್ದ ಮೈಕ್​ ಹೆಸ್ಸನ್, ಚಾಹಲ್ ನಿರ್ಗಮನದ ಹಿಂದಿನ ತಾರ್ಕಿಕತೆಯನ್ನು ಬಹಿರಂಗಪಡಿಸಿದ್ದಾರೆ. ಚಾಹಲ್ ಅವರನ್ನು ಉಳಿಸಿಕೊಳ್ಳದಿರುವುದು ಆರ್​​ಸಿಬಿಗೆ ಹೆಚ್ಚುವರಿ ಆರ್ಥಿಕ ಒತ್ತಡ ಕಡಿಮೆ ಮಾಡುತ್ತದೆ. ಚಹಲ್ ಮತ್ತು ವೇಗಿ ಹರ್ಷಲ್ ಪಟೇಲ್ ಇಬ್ಬರನ್ನೂ ಹರಾಜಿನಲ್ಲಿ ಭದ್ರಪಡಿಸುವ ಗುರಿಯನ್ನು ಹೊಂದಿತ್ತು. ಆದರೆ ಅದು ಸಾಧ್ಯವಾಗಿಲ್ಲ ಎಂದಿದೆ.

ನಾವು ಚಾಹಲ್ ಅವರನ್ನು ಉಳಿಸಿಕೊಳ್ಳಲಿಲ್ಲ. ಏಕೆಂದರೆ ಕೇವಲ ಮೂವರು ಆಟಗಾರರನ್ನು ಬಿಡುಗಡೆ ಮಾಡಿ ಹೆಚ್ಚುವರಿ ನಾಲ್ಕು ಕೋಟಿ ರೂಪಾಯಿ ಮೂಲಕ ಅವರನ್ನು ವಾಪಸ್​ ಕರೆಸಬೇಕಾಗಿತ್ತು. ಅದರ ಮೂಲಕ ನಾವು ಚಹಲ್ ಮತ್ತು ಹರ್ಷಲ್ ಪಟೇಲ್ ಇಬ್ಬರನ್ನೂ ಮರಳಿ ಖರೀದಿಸುವ ಗುರಿ ಹೊಂದಿದ್ದೆವು”ಎಂದು ಹೆಸನ್ ಜಿಯೋ ಸಿನೆಮಾದಲ್ಲಿ ಬಹಿರಂಗಪಡಿಸಿದರು.

ತಡವಾಗಿ ಬಂದ ಹೆಸರು

ಹರಾಜಿನಲ್ಲಿ ಚಾಹಲ್ ಹೆಸರು ತಡವಾಗಿ ಬಂತು. ಈ ವೇಳೆ ಆರ್​ಸಿಬಿ ತನ್ನ ಯೋಜನೆಗಳಲ್ಲಿ ಬಿಕ್ಕಟ್ಟನ್ನು ಎದುರಿಸಿತು. ಇದು ಶ್ರೀಲಂಕಾದ ಸ್ಪಿನ್ ಆಲ್ರೌಂಡರ್ ವನಿಂದು ಹಸರಂಗ ಅವರನ್ನು ತೆಗೆದುಕೊಳ್ಳುವ ಮೂಲಕ ಅವಕಾಶ ನಷ್ಟವಾಯಿತು ಎಂದು ಹೇಳಿದರು.

ಚಹಲ್​ಗಿಂತ ಮೊಲದೇ ಹರಾಜಿನಲ್ಲಿ ಹಸರಂಗ ಅವರ ಹೆಸರು ಕಾಣಿಸಿಕೊಂಡಾಗ ಆರ್​ಸಿಬಿ ಅವರಿಗೆ ಆದ್ಯತೆ ನೀಡಿತು. ಅಜಾಗರೂಕತೆಯಿಂದಾಗಿ ಚಾಹಲ್ ಅವರನ್ನು ಕಳೆದುಕೊಂಡಿತು ಎಂದು ಹೆಸ್ಸಾನ್ ಹೇಳಿದ್ದಾರೆ.

“ನಾನು ನನ್ನ ವೃತ್ತಿಜೀವನವನ್ನು ಮುಗಿಸುವವರೆಗೂ ಮತ್ತು ಬಹುಶಃ ಅದರಾಚೆಗೂ ಯೂಜಿ (ಚಾಹಲ್) ಅವರನ್ನು ಕಳೆದುಕೊಂಡಿರುವುದಕ್ಕೆ ನಾನು ನಿರಾಶೆಗೊಳ್ಳುತ್ತೇನೆ. ಅವರು ಅತ್ಯುತ್ತಮ ಬೌಲರ್, “ಎಂದು ಹೆಸ್ಸನ್ ಸಂದರ್ಶನದಲ್ಲಿ ಹೇಳಿದ್ದಾರೆ.

ಐಪಿಎಲ್​ನಲ್ಲಿ 200 ವಿಕೆಟ್ ಪಡೆದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಚಾಹಲ್ ಪಾತ್ರರಾಗಿದ್ದಾರೆ. ಇದರಲ್ಲಿ ಆರು ನಾಲ್ಕು ವಿಕೆಟ್ ಸಾಧನೆ ಮತ್ತು ಐದು ವಿಕೆಟ್ ಸಾಧನೆಗಳು ಸೇರಿವೆ. ಇರದಲ್ಲೊಂದು ಹ್ಯಾಟ್ರಿಕ್​ ಸಾಧನೆಯೂ ಇದೆ.

Continue Reading

ಕರ್ನಾಟಕ

Yadgir News: ಕೆರೆಯಲ್ಲಿ ಈಜಾಡಲು ಹೋಗಿ ಮೂವರು ಬಾಲಕರ ದುರ್ಮರಣ

Yadgir News: ಸುರಪುರ ತಾಲೂಕಿನ ನಗನೂರು ಗ್ರಾಮದಲ್ಲಿ ಬೇಸಿಗೆ ಹಿನ್ನೆಲೆಯಲ್ಲಿ ಬಿಸಿಲಿನ ತಾಪ ತಾಳಲಾರದೆ ಮೂವರು ಸ್ನೇಹಿತರು ಕೆರೆಗೆ ಈಜಾಡಲು ತೆರಳಿದ್ದರು. ಈ ವೇಳೆ ನೀರು ಪಾಲಾಗಿದ್ದಾರೆ.

VISTARANEWS.COM


on

Three boys drown
Koo

ಯಾದಗಿರಿ: ಕೆರೆಯಲ್ಲಿ ಈಜಾಡಲು ಹೋಗಿ ಮೂವರು ಬಾಲಕರು ದುರ್ಮರಣ ಹೊಂದಿರುವ ಘಟನೆ ಜಿಲ್ಲೆಯ (Yadgir News) ಸುರಪುರ ತಾಲೂಕಿನ ನಗನೂರು ಗ್ರಾಮದಲ್ಲಿ ನಡೆದಿದೆ. ಬೇಸಿಗೆ ಹಿನ್ನೆಲೆಯಲ್ಲಿ ಬಿಸಿಲಿನ ತಾಪ ತಾಳಲಾರದೆ ಮೂವರು ಸ್ನೇಹಿತರು ಕೆರೆಗೆ ಈಜಾಡಲು ತೆರಳಿದ್ದರು. ಈ ವೇಳೆ ಮೂವರೂ ನೀರು ಪಾಲಾಗಿದ್ದಾರೆ. ಹೈಯಾಳಪ್ಪ (11), ಶರಣಬಸವ (10) ಹಾಗೂ ಅನಿಲ್ (10) ಮೃತ ದುರ್ದೈವಿಗಳು. ಬಾಲಕರ ಮೃತದೇಹಗಳನ್ನು ಸ್ಥಳೀಯರು ಹೊರೆ ತೆಗೆದಿದ್ದಾರೆ.

ಇದನ್ನೂ ಓದಿ | Smuggling Case: ಬ್ಯಾಂಕಾಕ್‌ನಿಂದ ಸ್ಮಗ್ಲಿಂಗ್‌ ಮಾಡುತ್ತಿದ್ದ 10 ಹಳದಿ ಅನಕೊಂಡ ವಶಕ್ಕೆ, ಆರೋಪಿ ಬಂಧನ

ಮಿಡ್‌ನೈಟ್‌ನಲ್ಲಿ ರಸ್ತೆ ಕಾಣದೆ ಡಿವೈಡರ್‌ಗೆ ಬೈಕ್‌ ಡಿಕ್ಕಿ; ಹಾರಿ ಬಿದ್ದ ಸವಾರ ಸ್ಥಳದಲ್ಲೇ ಸಾವು

Road Accident

ಉಡುಪಿ: ಬೈಕ್ ಪಲ್ಟಿ ಹೊಡೆದು ಸವಾರ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಉಡುಪಿಯ ರಾಷ್ಟ್ರೀಯ ಹೆದ್ದಾರಿ 66ರ ಕೋಟ ಮಸೀದಿ ಸಮೀಪ (Road Accident) ನಡೆದಿದೆ. ವಿಕಾಸ್ ಆಚಾರ್ಯ (22) ಅಪಘಾತದಲ್ಲಿ ಮೃತಪಟ್ಟ ಯುವಕ.

ಕೋಟ ಮಣೂರು ಸುರೇಶ್ ಆಚಾರ್ಯ ಅವರ ಪುತ್ರ ವಿಕಾಸ್ ಸೋಮವಾರ ಮಧ್ಯರಾತ್ರಿ 1:30 ರ ಸುಮಾರಿಗೆ ಸಾಸ್ತಾನದಿಂದ ಕೋಟ ಕಡೆ ಬರುತ್ತಿದ್ದ. ಕೋಟ ಗುಜರಿ ಅಂಗಡಿ ಸಮೀಪ ಬರುವಾಗ ವಿಕಾಸ್‌ಗೆ ಬೈಕ್‌ನ ನಿಯಂತ್ರಣ ತಪ್ಪಿ ಹೆದ್ದಾರಿಯ ಡಿವೈಡರ್‌ಗೆ ಡಿಕ್ಕಿಯಾಗಿದೆ.

ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‌ ಪಲ್ಟಿಯಾಗಿ ಗಂಭೀರ ಗಾಯಗೊಂಡ ವಿಕಾಸ್‌ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗ ರವಾನಿಸಿದ್ದಾರೆ. ಕೋಟ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ನೀರು ತರುತ್ತಿದ್ದ ಹನುಮ ಮಾಲಾಧಾರಿಗಳಿಗೆ ಬೊಲೆರೋ ಡಿಕ್ಕಿ, 3 ಸಾವು

ರಾಯಚೂರು: ಹನುಮ ಮಾಲಾಧಾರಿಗಳಿಗೆ (Hanuman Devotees) ಬೊಲೇರೋ ವಾಹನ (Bolero Hit) ಡಿಕ್ಕಿಯಾಗಿ ಸ್ಥಳದಲ್ಲಿಯೇ (Road Accident) ಮೂರು ಜನ ಸಾವಿಗೀಡಾಗಿದ್ದಾರೆ. ಇಬ್ಬರಿಗೆ ಗಂಭೀರ ಗಾಯಗಳಾಗಿವೆ.

ರಾಯಚೂರಿನ ಶಕ್ತಿನಗರದ ಯಾದವ ನಗರ ಕ್ರಾಸ್ ಬಳಿ ಘಟನೆ ನಡೆದಿದೆ. ಹನುಮಮಾಲಾಧಾರಿಗಳು ಹನುಮಜಯಂತಿ ಪ್ರಯುಕ್ತ ಕೃಷ್ಣಾ ನದಿಗೆ ನೀರು ತರಲು ಬಂದಾಗ ಘಟನೆ ನಡೆದಿದೆ. ಬೆಳಗಿನ ಜಾವ 5 ಗಂಟೆ ಸುಮಾರಿಗೆ ಯಮಸ್ವರೂಪಿ ಬೊಲೆರೋ ಮಾಲಾಧಾರಿಗಳಿಗೆ ಡಿಕ್ಕಿ ಹೊಡೆದಿದೆ.

ಇದನ್ನೂ ಓದಿ: Kidnap Case : ಅಖಂಡೇಶ್ವರ ಜಾತ್ರೆಗೆ ಹೋದ ಅತಿಥಿ ಶಿಕ್ಷಕಿಯನ್ನು ಅಪಹರಿಸಿದ ಮುಸ್ಲಿಂ ಯುವಕ

ಅಯ್ಯನಗೌಡ (28) ಮಹೇಶ (22), ಉದಯಕುಮಾರ (28) ಮೃತ ದುರ್ದೈವಿಗಳು. ರಮೇಶ ಭೂಷಣ ಎಂಬ ಇಬ್ಬರಿಗೆ ಗಂಭೀರ ಗಾಯವಾಗಿದೆ. ಎಲ್ಲರೂ ರಾಯಚೂರಿನ ಹೆಗಸನಹಳ್ಳಿ ನಿವಾಸಿಗಳು. ಕೋಳಿ ತುಂಬಿಕೊಂಡು ಬರುತ್ತಿದ್ದ ಬುಲೇರೋ ವಾಹನ ಚಾಲಕ ನಿರ್ಲಕ್ಷ್ಯದಿಂದ ಹಾಗೂ ವೇಗವಾಗಿ ಚಲಾಯಿಸಿ ಅಪಘಾತಕ್ಕೆ ಕಾರಣನಾಗಿದ್ದಾನೆ. ಘಟನಾ ಸ್ಥಳಕ್ಕೆ ಶಕ್ತಿ ನಗರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Continue Reading

Lok Sabha Election 2024

LoK Sabha Election 2024: ಚೊಂಬು ಆರೋಪಕ್ಕೆ ಚಿಪ್ಪು ಕೊಟ್ಟ ಬಿಜೆಪಿ! ಪಿಕ್‌ ಪಾಕೆಟ್‌ ಕಾಂಗ್ರೆಸ್‌ ಪೋಸ್ಟರ್‌ ಬಿಡುಗಡೆ!

LoK Sabha Election 2024: ಕೇಂದ್ರ ಸರ್ಕಾರ ಬರ ಪರಿಹಾರ ನೀಡಲು ಚುನಾವಣಾ ಆಯೋಗದ ಅನುಮತಿ ಕೇಳಿತ್ತು, ಅದನ್ನೇ ಜಯವೆಂದು ಸಿಎಂ ಸಿದ್ದರಾಮಯ್ಯ ಸುಳ್ಳು ಹೇಳಿದ್ದಾರೆ. ವಿಧಾನಸೌಧ ದುರ್ಬಳಕೆ ಮಾಡಿಕೊಳ್ಳಲಾಗಿದ್ದು, ಈ ಬಗ್ಗೆ ಮುಖ್ಯ ಕಾರ್ಯದರ್ಶಿ ವಿರುದ್ಧ ದೂರು ನೀಡಲಾಗಿದೆ. ಇನ್ನು ನೇಹಾ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ವಿಧಾನಸಭಾ ಪ್ರತಿಪಕ್ಷ ನಾಯಕ ಆರ್. ಅಶೋಕ್‌ ಆಗ್ರಹಿಸಿದ್ದಾರೆ.

VISTARANEWS.COM


on

Lok Sabha Election 2024 BJP released Pick pocket Congress poster
Koo

ಬೆಂಗಳೂರು: ಲೋಕಸಭಾ ಚುನಾವಣೆ (LoK Sabha Election 2024) ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಮಧ್ಯೆ ಆರೋಪ – ಪ್ರತ್ಯಾರೋಪಗಳು ಜೋರಾಗಿಯೇ ಇವೆ. ಕೇಂದ್ರ ಸರ್ಕಾರ ಬರ ಪರಿಹಾರ (Drought Relief) ನೀಡಲು ಚುನಾವಣಾ ಆಯೋಗದ (Election Commission) ಅನುಮತಿ ಕೇಳಿದ್ದು, ಇದನ್ನೇ ನ್ಯಾಯಾಲಯದಲ್ಲಿ ತಿಳಿಸಲಾಗಿದೆ. ಈ ವಿಷಯವನ್ನು ತಮಗೆ ಸಿಕ್ಕಿದ ಜಯ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಸುಳ್ಳನ್ನು ಬಿಂಬಿಸುತ್ತಿದ್ದಾರೆ. ಇನ್ನು ರಾಜ್ಯದಲ್ಲಿ ಜನರ ಕೈಗೆ ಚಿಪ್ಪು ಕೊಟ್ಟಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್‌ (R Ashok) ಕಿಡಿಕಾರಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್‌. ಅಶೋಕ್, ಕೇಂದ್ರ ಸರ್ಕಾರ (Central Government) ಬರ ಪರಿಹಾರ ಬಿಡುಗಡೆಗೆ ಅನುಮತಿಗಾಗಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿತ್ತು. ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್‌ ಈ ಕುರಿತು ತಿಳಿಸಿದ್ದರು. ಸುಪ್ರೀಂ ಕೋರ್ಟ್‌ನಲ್ಲಿ (Supreme Court) ನಡೆಯುತ್ತಿರುವ ಪ್ರಕರಣದ ವಿಚಾರಣೆ ವೇಳೆಯೂ ಇದನ್ನು ತಿಳಿಸಲಾಗಿದೆ. ಆದರೆ, ಕಾಂಗ್ರೆಸ್‌ ನಾಯಕರು (Congress Leaders) ಜಯ ಸಿಕ್ಕಿದೆ ಎಂದು ಹೇಳುತ್ತಿದ್ದಾರೆ. ಕೇಂದ್ರ ಸರ್ಕಾರ ಹಣ ಬಿಡುಗಡೆಗಾಗಿಯೇ ಅನುಮತಿ ಕೇಳಿರುವಾಗ, ಕಾಂಗ್ರೆಸ್‌ ಪಾತ್ರ ಇದರಲ್ಲಿ ಏನೂ ಇಲ್ಲ. ಜಯ ಸಿಗಲು ಕಾಂಗ್ರೆಸ್‌ನ ವಕೀಲರು ಏನೂ ವಾದ ಮಾಡಿಲ್ಲ ಎಂದರು.

ಮಲ್ಲಿಕಾರ್ಜುನ ಖರ್ಗೆ ಹಾಗೂ ಸುರ್ಜೇವಾಲಾ ಅವರು ಯಾವ ಮುಖ ಇಟ್ಟುಕೊಂಡು ಬೆಂಗಳೂರಿಗೆ ಬರುತ್ತಾರೆ? ಇಲ್ಲಿ ಬಾಂಬ್‌ ಸ್ಫೋಟ ಆಗಿರುವಾಗ ನಿಮಗೆ ಮತ ಕೇಳಲು ಯಾವ ಅಧಿಕಾರ ಇದೆ? ಕೇಂದ್ರ ಸರ್ಕಾರ ಕ್ರಮ ವಹಿಸಿದ್ದರಿಂದಲೇ ಬರ ಪರಿಹಾರ ಹಲವಾರು ರಾಜ್ಯಗಳಿಗೆ ದೊರೆಯುತ್ತಿದೆ. ಈಗಾಗಲೇ ಬರ ಪರಿಹಾರವನ್ನು ರಾಜ್ಯ ಸರ್ಕಾರದ ವತಿಯಿಂದ ನೀಡಬೇಕಿತ್ತು. ಎಸ್‌ಡಿಆರ್‌ಎಫ್‌ನಿಂದ 700 ಕೋಟಿ ರೂ. ಹಣವನ್ನು ಕೇಂದ್ರ ಸರ್ಕಾರ ನೀಡಿದೆ. ಆದರೆ ರಾಜ್ಯ ಸರ್ಕಾರವೇ ನೀಡಿದಂತೆ ಸಿಎಂ ಸಿದ್ದರಾಮಯ್ಯ ಹೇಳಿಕೊಳ್ಳುತ್ತಿದ್ದಾರೆ ಎಂದು ಆರ್.‌ ಅಶೋಕ್‌ ಕಿಡಿಕಾರಿದರು.

Lok Sabha Election 2024 BJP released Pick pocket Congress poster

2013-14 ರಲ್ಲಿ ಬರ ಪರಿಹಾರ ನೀಡಲು ಸಿಎಂ ಸಿದ್ದರಾಮಯ್ಯ 9 ತಿಂಗಳು ತೆಗೆದುಕೊಂಡಿದ್ದರು. ಕೇಂದ್ರದಲ್ಲೀಗ ಬಿಜೆಪಿ ಇದೆ ಎಂಬ ಕಾರಣಕ್ಕೆ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ. ಮೋದಿ ಸರ್ಕಾರ 7,940 ಕೋಟಿ ರೂ. ಪರಿಹಾರ ನೀಡಿದ್ದರೆ, ಮನಮೋಹನ್‌ ಸಿಂಗ್‌ ಸರ್ಕಾರ 3,000 ಕೋಟಿ ರೂ. ನೀಡಿದೆ. ಗ್ಯಾರಂಟಿಗಳಿಂದಾಗಿ ರಾಜ್ಯ ಸರ್ಕಾರದ ಬಳಿ ಹಣವಿಲ್ಲ. ಈ ಕಾರಣಕ್ಕಾಗಿಯೇ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡಲಾಗುತ್ತಿದೆ ಎಂದು ಆರ್.‌ ಅಶೋಕ್‌ ಹೇಳಿದರು.

ಸಿಬಿಐಗೆ ತನಿಖೆ ವಹಿಸಿ

ಕಾಂಗ್ರೆಸ್‌ ಸರ್ಕಾರ ಪಾಪರ್‌ ಆಗಿ ಬೀದಿಗೆ ಬಂದಿದ್ದು, ಮುಂದೆ ಸಂಬಳ ಕೊಡಲು ಹಣ ಇರುವುದಿಲ್ಲ. ಕಾಂಗ್ರೆಸ್‌ ವಿರುದ್ಧ ಹಿಂದೂಗಳು ಕೆರಳುತ್ತಿದ್ದಾರೆ. ಹಿಂದೂಗಳ ರಕ್ತವನ್ನು ಮತಾಂಧರು ಹರಿಸುತ್ತಿದ್ದು, ಇದನ್ನು ಮರೆಮಾಚಿಸಲು ಈ ರೀತಿ ಪ್ರತಿಭಟನೆ ಮಾಡುತ್ತಿದ್ದಾರೆ. ನೇಹಾ ಹತ್ಯೆಯ ತನಿಖೆಯನ್ನು ಸಿಬಿಐಗೆ ಕೊಡದೆ ಸಿಐಡಿಗೆ ನೀಡಿ ಮುಚ್ಚಿಹಾಕುವ ಕೆಲಸ ಮಾಡುತ್ತಿದ್ದಾರೆ. ಅವರ ತಂದೆಯೇ ಲವ್‌ ಜಿಹಾದ್‌ ಹೇಳಿದ್ದಾರೆ. ಈ ಪ್ರಕರಣವನ್ನು ಸೂಕ್ತವಾಗಿ ತನಿಖೆ ಮಾಡಲು ಸಿಬಿಐಗೆ ವಹಿಸಬೇಕು ಎಂದು ಆರ್.‌ ಅಶೋಕ್‌ ಆಗ್ರಹಿಸಿದರು.

“ಪಿಕ್ ಪಾಕೆಟ್ ಕಾಂಗ್ರೆಸ್” ಮತ್ತು “ಕನ್ನಡಿಗರ ಕೈಗೆ ಚಿಪ್ಪು” ಪೋಸ್ಟರ್ ಬಿಡುಗಡೆ

ಕೇಂದ್ರ ಸರ್ಕಾರದಿಂದ ಅನುದಾನ ತಾರತಮ್ಯ ನೀತಿಯನ್ನು ಅನುಸರಿಸಲಾಗುತ್ತಿದೆ ಎಂದು ಆರೋಪಿಸುತ್ತಾ ಬಂದಿದ್ದ ಕಾಂಗ್ರೆಸ್‌ “ಕರ್ನಾಟಕಕ್ಕೆ ಕೇಂದ್ರ ಸರ್ಕಾರದಿಂದ ಚೊಂಬು” ಎಂಬ ಜಾಹೀರಾತನ್ನು ಕೊಟ್ಟಿತ್ತು. ಈಗ ಇದಕ್ಕೆ ಪ್ರತಿಯಾಗಿ ಬಿಜೆಪಿ ಎರಡು ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿದ್ದು, ಸತ್ಯ ಸಂಗತಿ ಮರೆಮಾಚಿ ಜನರನ್ನು ವಂಚಿಸುತ್ತಿರುವ ಕಾಂಗ್ರೆಸ್ ಮುಖವಾಡ ಬಯಲು ಮಾಡಲಾಗುತ್ತಿದೆ ಎಂದು ಹೇಳಿದೆ. ಈ ಸಂಬಂಧ “ಪಿಕ್ ಪಾಕೆಟ್ ಕಾಂಗ್ರೆಸ್” ಮತ್ತು “ಕನ್ನಡಿಗರ ಕೈಗೆ ಚಿಪ್ಪು” ಪೋಸ್ಟರ್‌ಗಳನ್ನು ಆರ್.‌ ಅಶೋಕ್ ಬಿಡುಗಡೆ ಮಾಡಿದರು.

ಕಾಂಗ್ರೆಸ್‌ ಸರ್ಕಾರ ಚಿಪ್ಪು ಕೊಟ್ಟಿದೆ ಎಂಬ ಹಾಡು ಬಿಡುಗಡೆ ಮಾಡಿರುವ ಬಿಜೆಪಿ; ಇಲ್ಲಿದೆ ವಿಡಿಯೊ

ಇದನನೂ ಓದಿ: CM Siddaramaiah: ಕೇಂದ್ರದ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ; ಮೋದಿ, ಅಮಿತ್ ಶಾಗೆ ಗೋ ಬ್ಯಾಕ್‌ ಘೋಷಣೆ

ಚುನಾವಣಾ ಆಯೋಗಕ್ಕೆ ದೂರು

ವಿಧಾನಸೌಧದಲ್ಲಿ ಕಾಂಗ್ರೆಸ್‌ ಪ್ರತಿಭಟನೆಗೆ ಅವಕಾಶ ನೀಡಿದ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಪ್ರತಿಭಟಿಸಿದ ಕಾಂಗ್ರೆಸ್‌ ನಾಯಕರ ವಿರುದ್ಧ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ವಿಧಾನಸೌಧದ ಒಳಗೆ ಪಕ್ಷ ಸೇರ್ಪಡೆ ಕಾರ್ಯಕ್ರಮವನ್ನು ವಿರೋಧಿಸಿ ಚುನಾವಣಾ ಆಯೋಗಕ್ಕೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಈಗ ವಿಧಾನಸೌಧದ ಮುಂಭಾಗ ಕಾಂಗ್ರೆಸ್‌ ನಾಯಕರು ಪ್ರತಿಭಟಿಸಲು ಅವಕಾಶ ಕೊಟ್ಟ ಮುಖ್ಯ ಕಾರ್ಯದರ್ಶಿಯ ವಿರುದ್ಧ ಕ್ರಮ ಕೈಗೊಳ್ಳಲು ಚುನಾವಣಾ ಆಯೋಗಕ್ಕೆ ದೂರ ನೀಡಲಾಗಿದೆ. ವಿಧಾನಸೌಧವನ್ನು ಈಗಾಗಲೇ ಮೂರು ನಾಲ್ಕು ಬಾರಿ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರ್‌.ಅಶೋಕ ದೂರಿದರು.

Continue Reading

ಕ್ರೀಡೆ

Match Fixing : ಇರ್ಫಾನ್​ ಪಠಾಣ್​, ಸುರೇಶ್ ರೈನಾ ಪಾಲ್ಗೊಂಡಿದ್ದ ​ ಕ್ರಿಕೆಟ್ ಲೀಗ್​ನಲ್ಲಿ ಮ್ಯಾಚ್​ ಫಿಕ್ಸಿಂಗ್?

Match Fixing: ಲೆಜೆಂಡ್ಸ್ ಕ್ರಿಕೆಟ್ ಟ್ರೋಫಿ 2024 ರ ಸಂದರ್ಭದಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಸಲಾಗಿದೆ ಎಂಬ ದೂರುಗಳು ಕೇಳಿ ಬಂದಿವೆ. ಅವರ ವಿರುದ್ಧ ಅಟಾರ್ನಿ ಜನರಲ್ ಇಲಾಖೆ ಕೊಲಂಬೊ ಹೈಕೋರ್ಟ್​ನಲ್ಲಿ ದೋಷಾರೋಪಗಳ ಪಟ್ಟಿ ಸಲ್ಲಿಸಿದೆ. ವಿಶ್ವದಾದ್ಯಂತದ ಕೆಲವು ಪ್ರಮುಖ ನಿವೃತ್ತ ಅಂತರರಾಷ್ಟ್ರೀಯ ಕ್ರಿಕೆಟಿಗರನ್ನು ಒಳಗೊಂಡ ಲೆಜೆಂಡ್ಸ್ ಕ್ರಿಕೆಟ್ ಟ್ರೋಫಿಯ ಬಗ್ಗೆ ಅನುಮಾನಗಳು ವ್ಯಕ್ತಗೊಂಡಿವೆ.

VISTARANEWS.COM


on

Match Fixing
Koo

ಬೆಂಗಳೂರು: ಹಿರಿಯ ಕ್ರಿಕೆಟಿಗರನ್ನು ಒಳಗೊಂಡಿರುವ ಲೆಜೆಂಡ್ಸ್​ ಕ್ರಿಕೆಟ್​ಲೀಗ್​ನಲ್ಲಿ ಮ್ಯಾಚ್​ ಫಿಕ್ಸಿಂಗ್ (Match Fixing) ನಡೆಸಿರುವ ಆರೋಪವೊಂದು ಕೇಳಿ ಬಂದಿದೆ. ಲೆಜೆಂಡ್ಸ್ ಕ್ರಿಕೆಟ್ ಲೀಗ್ 2024 ರ ತಂಡದ ವ್ಯವಸ್ಥಾಪಕ ಯೊನಿ ಪಟೇಲ್ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ ಹೊರಿಸಲಾಗಿದೆ. ಶ್ರೀಲಂಕಾದ ಕೊಲಂಬೊ ಹೈಕೋರ್ಟ್​​ನಲ್ಲಿ ಈಬಗ್ಗೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ನ್ಯೂಜಿಲೆಂಡ್​ನ ಮಾಜಿ ಆಟಗಾರ ನೀಲ್ ಬ್ರೂಮ್ ಮತ್ತು ಶ್ರೀಲಂಕಾದ ಮಾಜಿ ಆಟಗಾರ ಉಪುಲ್ ತರಂಗ ನೀಡಿದ ದೂರಿನ ನಂತರ ಈ ತನಿಖೆ ಆರಂಭಗೊಂಡಿದೆ.

ಲೆಜೆಂಡ್ಸ್ ಕ್ರಿಕೆಟ್ ಟ್ರೋಫಿ 2024 ರ ಸಂದರ್ಭದಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಸಲಾಗಿದೆ ಎಂಬ ದೂರುಗಳು ಕೇಳಿ ಬಂದಿವೆ. ಅವರ ವಿರುದ್ಧ ಅಟಾರ್ನಿ ಜನರಲ್ ಇಲಾಖೆ ಕೊಲಂಬೊ ಹೈಕೋರ್ಟ್​ನಲ್ಲಿ ದೋಷಾರೋಪಗಳ ಪಟ್ಟಿ ಸಲ್ಲಿಸಿದೆ. ವಿಶ್ವದಾದ್ಯಂತದ ಕೆಲವು ಪ್ರಮುಖ ನಿವೃತ್ತ ಅಂತರರಾಷ್ಟ್ರೀಯ ಕ್ರಿಕೆಟಿಗರನ್ನು ಒಳಗೊಂಡ ಲೆಜೆಂಡ್ಸ್ ಕ್ರಿಕೆಟ್ ಟ್ರೋಫಿಯ ಬಗ್ಗೆ ಅನುಮಾನಗಳು ವ್ಯಕ್ತಗೊಂಡಿವೆ.

ಮಾರ್ಚ್ 8 ರಿಂದ ಮಾರ್ಚ್ 19 ರವರೆಗೆ ಪಲ್ಲೆಕೆಲೆ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಏಳು ತಂಡಗಳನ್ನು ಒಳಗೊಂಡ ಪಂದ್ಯಾವಳಿ ನಡೆದಿತ್ತು. ಬ್ರೂಮ್ ಪಂಜಾಬ್ ರಾಯಲ್ಸ್ ತಂಡವನ್ನು ಪ್ರತಿನಿಧಿಸಿದರೆ, ಉಪುಲ್​ ತರಂಗ ಕ್ಯಾಂಡಿ ಸ್ಯಾಂಪ್ ಆರ್ಮಿ ತಂಡದ ಭಾಗವಾಗಿದ್ದರು. ಪಂದ್ಯಗಳನ್ನು ಫಿಕ್ಸ್ ಮಾಡುವಂತೆ ಯೊನಿ ಪಟೇಲ್ ತಮ್ಮ ಮೇಲೆ ಒತ್ತಡ ಹೇರಿದ್ದಾರೆ ಎಂದು ಇಬ್ಬರೂ ಆರೋಪಿಸಿದ್ದಾರೆ.

ಮ್ಯಾಚ್ ಫಿಕ್ಸಿಂಗ್ ಪ್ರಕರಣವನ್ನು ಕೊಲಂಬೊ ಮುಖ್ಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಕೈಗೆತ್ತಿಕೊಂಡಾಗ ಅಟಾರ್ನಿ ಜನರಲ್ ಪರವಾಗಿ ಹಾಜರಾದ ಹಿರಿಯ ರಾಜ್ಯ ವಕೀಲರು ಈ ವಿಷಯವನ್ನು ಬಹಿರಂಗಪಡಿಸಿದರು. ಲೆಜೆಂಡ್ಸ್ ಕ್ರಿಕೆಟ್ ಟ್ರೋಫಿ 2024 ರ ತಂಡದ ವ್ಯವಸ್ಥಾಪಕ ಯೊನಿ ಪಟೇಲ್ ವಿರುದ್ಧ ದೋಷಾರೋಪ ಸಲ್ಲಿಕೆಯಾಗಿದೆ.

ಉದ್ಘಾಟನೆ ಮತ್ತು ಫೈನಲ್ ಹೊರತುಪಡಿಸಿ, ಪ್ರತಿ ದಿನವೂ ಡಬಲ್ ಹೆಡರ್ ಆಗಿತ್ತು. ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ರಾಜಸ್ಥಾನ್ ಕಿಂಗ್ಸ್, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ನ್ಯೂಯಾರ್ಕ್ ಸೂಪರ್ ಸ್ಟಾರ್ ಸ್ಟ್ರೈಕರ್ಸ್ ತಂಡವನ್ನು 20 ರನ್ ಗಳಿಂದ ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು.

ಇದನ್ನೂ ಓದಿ ವಿಸ್ತಾರ ಸಂಪಾದಕೀಯ: ತಂತ್ರಜ್ಞಾನ ಕಾಲದಲ್ಲೂ ಐಪಿಎಲ್​ ಅಂಪೈರ್ ಗಳ ಸೋಮಾರಿತನ ಆಕ್ಷೇಪಾರ್ಹ

ಈ ಪಂದ್ಯಾವಳಿಯಲ್ಲಿ ಯುವರಾಜ್ ಸಿಂಗ್, ಸುರೇಶ್ ರೈನಾ, ಕ್ರಿಸ್ ಗೇಲ್, ರಾಸ್ ಟೇಲರ್, ಯೂಸುಫ್ ಪಠಾಣ್, ಇರ್ಫಾನ್ ಪಠಾಣ್, ಮ್ಯಾಟ್ ಪ್ರಿಯರ್, ಕಾಲಿನ್ ಡಿ ಗ್ರ್ಯಾಂಡ್ಹೋಮ್, ಡೇನಿಯಲ್ ಕ್ರಿಶ್ಚಿಯನ್ ಮತ್ತು ಮೊಹಮ್ಮದ್ ಇರ್ಫಾನ್ ಅವರಂತಹ ಅಂತರರಾಷ್ಟ್ರೀಯ ಕ್ರಿಕೆಟ್​​ನ ಪ್ರಮುಖರು ಭಾಗವಹಿಸಿದ್ದರು.

ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸಮಯದಲ್ಲಿ ಏನಾಯಿತು?

ತನಿಖೆಯ ಪ್ರಕಾರ, ಫಿಕ್ಸರ್ ಕಳಪೆ ಪ್ರದರ್ಶನ ನೀಡಲು ಮತ್ತು ಪಂದ್ಯದ ಫಲಿತಾಂಶವನ್ನು ಮಾರ್ಪಡಿಸಲು ಹಣದ ಪ್ರಸ್ತಾಪಗಳೊಂದಿಗೆ ಆಟಗಾರರನ್ನು ಸಂಪರ್ಕಿಸಿದ್ದ ಏತನ್ಮಧ್ಯೆ, ಯೊನಿ ಮತ್ತು ಎಲ್​​ಇಎಲ್​​ನ ಮತ್ತೊಬ್ಬ ತಂಡದ ವ್ಯವಸ್ಥಾಪಕ ಪಿ ಆಕಾಶ್ ಶ್ರೀಲಂಕಾವನ್ನು ತೊರೆಯದಂತೆ ಈಗಾಗಲೇ ಪ್ರಯಾಣ ನಿರ್ಬಂಧಿಸಲಾಗಿದೆ.

ಲೆಜೆಂಡ್ಸ್ ಕ್ರಿಕೆಟ್ ಲೀಗ್ ಬಗ್ಗೆ

ಪಂದ್ಯಾವಳಿಯಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾ, ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್​​ನ ಏಳು ತಂಡಗಳು ಭಾಗವಹಿಸಿದ್ದವು. ಎಲ್ಲಾ ಪಂದ್ಯಗಳು ಮಾರ್ಚ್ 8 ರಿಂದ 19 ರವರೆಗೆ ಕ್ಯಾಂಡಿಯ ಪಲ್ಲೆಕೆಲೆ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದವು.

Continue Reading
Advertisement
Yuzvendra Chahal
ಪ್ರಮುಖ ಸುದ್ದಿ23 mins ago

Yuzvendra Chahal : ​ ಚಾಹಲ್ ಕೈಬಿಟ್ಟಿರುವುದರ ಹಿಂದಿನ ಕಾರಣ ಬಹಿಂಗ ಮಾಡಿದ ಆರ್​ಸಿಬಿ ಮಾಜಿ ಡೈರೆಕ್ಟರ್​

Three boys drown
ಕರ್ನಾಟಕ30 mins ago

Yadgir News: ಕೆರೆಯಲ್ಲಿ ಈಜಾಡಲು ಹೋಗಿ ಮೂವರು ಬಾಲಕರ ದುರ್ಮರಣ

Fraud case
ಬೆಂಗಳೂರು34 mins ago

Fraud Case : ಗುಜರಿ ಅಂಗಡಿ ಮಾಲೀಕನಿಗೆ ಬೆದರಿಸಿ ಹಣ ಪೀಕಿದ ಪೊಲೀಸ್‌ ಹಾಗೂ ಇನ್ಫಾರ್ಮರ್

Uttarakaanda Movie
ಸಿನಿಮಾ35 mins ago

Uttarakaanda Movie: ʼಉತ್ತರಕಾಂಡʼ ಚಿತ್ರಕ್ಕೆ ನಾಯಕಿ ಎಂಟ್ರಿ; ಮೋಹಕ ತಾರೆ ರಮ್ಯಾ ಜಾಗಕ್ಕೆ ಕಾಲಿವುಡ್‌ ನಟಿ

Lok Sabha Election 2024 BJP released Pick pocket Congress poster
Lok Sabha Election 202446 mins ago

LoK Sabha Election 2024: ಚೊಂಬು ಆರೋಪಕ್ಕೆ ಚಿಪ್ಪು ಕೊಟ್ಟ ಬಿಜೆಪಿ! ಪಿಕ್‌ ಪಾಕೆಟ್‌ ಕಾಂಗ್ರೆಸ್‌ ಪೋಸ್ಟರ್‌ ಬಿಡುಗಡೆ!

Match Fixing
ಕ್ರೀಡೆ48 mins ago

Match Fixing : ಇರ್ಫಾನ್​ ಪಠಾಣ್​, ಸುರೇಶ್ ರೈನಾ ಪಾಲ್ಗೊಂಡಿದ್ದ ​ ಕ್ರಿಕೆಟ್ ಲೀಗ್​ನಲ್ಲಿ ಮ್ಯಾಚ್​ ಫಿಕ್ಸಿಂಗ್?

Ballari lok sabha constituency congress candidate e Tukaram election campaign in Ballari city
ಬಳ್ಳಾರಿ50 mins ago

Lok Sabha Election 2024: ಪಂಚ ಗ್ಯಾರಂಟಿ ಜಾರಿ ಮಾಡಿ ನುಡಿದಂತೆ ನಡೆದಿದ್ದು ಕಾಂಗ್ರೆಸ್ ಸರ್ಕಾರ: ಈ.ತುಕಾರಾಂ

Murugha Seer
ಕರ್ನಾಟಕ53 mins ago

Murugha Seer: ಪೋಕ್ಸೊ ಕೇಸ್‌ನಲ್ಲಿ ಮುರುಘಾ ಶ್ರೀಗೆ ಮತ್ತೆ ಸಂಕಷ್ಟ; 4 ತಿಂಗಳು ಜೈಲಿಗೆ

T20 World Cup 2024
ಕ್ರಿಕೆಟ್1 hour ago

T20 World Cup 2024: ಟಿ20 ವಿಶ್ವಕಪ್​ಗೆ ಭಾರತ ತಂಡ ಪ್ರಕಟಿಸಲು ಮುಹೂರ್ತ ಫಿಕ್ಸ್‌​; ಈ ದಿನ ಘೋಷಣೆ

BrahMos Missiles
ಪ್ರಮುಖ ಸುದ್ದಿ1 hour ago

BrahMos Missiles: ಫಿಲಿಪ್ಪೀನ್ಸ್‌ಗೆ ನಾಲ್ಕನೇ ಬ್ರಹ್ಮೋಸ್‌ ಕ್ಷಿಪಣಿ ಬ್ಯಾಟರಿ ಕಳುಹಿಸಲು ಭಾರತ ಸಜ್ಜು

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ12 hours ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು23 hours ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ1 day ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು1 day ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು1 day ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ1 day ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ2 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ3 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20243 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Modi in Karnataka Here live video of Modi rally in Chikkaballapur
Lok Sabha Election 20243 days ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

ಟ್ರೆಂಡಿಂಗ್‌