Site icon Vistara News

Dina Bhavishya : ನೂತನ ಸಂವತ್ಸರದಲ್ಲಿ ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಶುಭ ಸುದ್ದಿ

Dina Bhavishya

ಚಂದ್ರನು ಮೇಷ ರಾಶಿಯಿಂದ ಮಂಗಳವಾರ ಬೆಳಗ್ಗೆ 07:23ಕ್ಕೆ ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದಾಗಿ ಮೇಷ, ಮಿಥುನ, ಕಟಕ, ತುಲಾ, ವೃಶ್ಚಿಕ, ಕುಂಭ ರಾಶಿಯವರಿಗೆ ಚಂದ್ರನ ಬಲ ಸಿಗಲಿದೆ. ಇಂದಿನ ದಿನ ಭವಿಷ್ಯವನ್ನು (Kannada Dina Bhavishya) ನೋಡುವುದಾದರೆ, ಮೇಷ ರಾಶಿಯವರು ನಿಮ್ಮ ಒರಟು ವರ್ತನೆನಿಂದ ನಿಮ್ಮ ಸ್ನೇಹಿತರಿಗೆ ಸ್ವಲ್ಪ ಸಮಸ್ಯೆ ಉಂಟುಮಾಡಬಹುದು. ಹಣಕಾಸಿನ ಪರಿಸ್ಥಿತಿ ಸಾಧಾರಣವಾಗಿರಲಿದೆ. ಕಟಕ ರಾಶಿಯವರು ಹಿರಿಯರಿಂದ ಹಣಕಾಸಿನ ನೆರವು ಸಿಗಲಿದೆ. ವಿವಾಹ ಅಪೇಕ್ಷಿತರಿಗೆ ಶುಭ ಸುದ್ದಿ ಸಿಗಲಿದೆ. ನಿಮ್ಮ ಸೃಜನಶೀಲತೆ ನಿಮ್ಮನ್ನು ಎತ್ತರದ ಸ್ಥಾನದಲ್ಲಿ ನಿಲ್ಲಿಸಲಿದೆ. ಅತಿಯಾದ ಶ್ರಮ ದೈಹಿಕವಾಗಿ ನಿಮ್ಮನ್ನು ಜರ್ಜರಿತನ್ನಾಗಿ ಮಾಡಬಹುದು, ಕೊಂಚ ಕಾಳಜಿ ವಹಿಸಿ. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (9-04-2024)

ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷ.
ತಿಥಿ: ಯುಗಾದಿ ಪಾಡ್ಯ ವಾರ: ಮಂಗಳವಾರ
ನಕ್ಷತ್ರ: ರೇವತಿ ಯೋಗ: ವೈಧೃತಿ
ಕರಣ: ಕಿಂಸ್ತುಘ್ನ ಅಮೃತ ಕಾಲ: 9ರ ರಾತ್ರಿ 10:38ರಿಂದ ಮಧ್ಯ ರಾತ್ರಿ 12:04
ದಿನದ ವಿಶೇಷ: ನೂತನ ಸಂವತ್ಸರಾಂಭ, ಚಾಂದ್ರಮಾನ ಯುಗಾದಿ, ಅಲ್ಲಮಪ್ರಭು ಜಯಂತಿ

ಸೂರ್ಯೋದಯ : 06:11   ಸೂರ್ಯಾಸ್ತ : 06:32

ರಾಹುಕಾಲ : ಮಧ್ಯಾಹ್ನ 3:26 ರಿಂದ 4:59
ಗುಳಿಕಕಾಲ: ಮಧ್ಯಾಹ್ನ 12.21 ರಿಂದ 1:54
ಯಮಗಂಡಕಾಲ: ಬೆಳಗ್ಗೆ 9:16 ರಿಂದ 10.48

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

ಮೇಷ: ನಿಮ್ಮ ಒರಟು ವರ್ತನೆನಿಂದ ನಿಮ್ಮ ಸ್ನೇಹಿತರಿಗೆ ಸ್ವಲ್ಪ ಸಮಸ್ಯೆ ಉಂಟುಮಾಡಬಹುದು. ಹಣಕಾಸಿನ ಪರಿಸ್ಥಿತಿ ಸಾಧಾರಣವಾಗಿರಲಿದೆ.ನಿಮ್ಮ ಕುಟುಂಬದ ಕಾಳಜಿ ಅರ್ಥವಾಗಲಿದೆ. ಈ ದಿನ ನಿಮಗೆ ಉತ್ತಮವಾಗಿರಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲಗಳು ದೊರೆಯಲಿವೆ.
ಅದೃಷ್ಟ ಸಂಖ್ಯೆ: 1

ವೃಷಭ: ಇಂದು ನಿಮ್ಮ ಆಕರ್ಷಕ ವ್ಯಕ್ತಿತ್ವ ಇತರನ್ನು ಗಮನ ಸೆಳೆಯುವಂತೆ ಮಾಡಲಿದೆ. ದಿನದ ಕೊನೆಯಲ್ಲಿ ಅನಿವಾರ್ಯ ಕಾರಣದಿಂದ ಖರ್ಚು ಇರಲಿದೆ. ಮಾನಸಿಕ ಒತ್ತಡಗೊಳಗಾಗಬಹುದು.ಕೌಟುಂಬಿಕವಾಗಿ ಶುಭಫಲವಿರಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ.
ಅದೃಷ್ಟ ಸಂಖ್ಯೆ: 9

ಮಿಥುನ: ಹಿಂದಿನ ದಿನಕ್ಕಿಂತ ಹೆಚ್ಚಿನ ಸಂತಸ ಇಂದು ಕಾಣುವಿರಿ. ಹಣಕಾಸಿನ ಯೋಜನೆ ಕುರಿತು ಚಿಂತನೆ ಮಾಡುವಿರಿ. ಆರ್ಥಿಕ ಪ್ರಗತಿ ಇರಲಿದೆ. ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ಇರಲಿದೆ. ಸ್ನೇಹಿತರ ಸಮಸ್ಯೆಗಳಿಗೆ ಪರಿಹಾರ ಸೂಚಿಸಿ ಸಹಾಯ ಮಾಡುವ ಸಾಧ್ಯತೆ ಇದೆ.ಆರೋಗ್ಯ ಪರಿಪೂರ್ಣ ಇರಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7

ಕಟಕ: ಹಿರಿಯರಿಂದ ಹಣಕಾಸಿನ ನೆರವು ಸಿಗಲಿದೆ. ವಿವಾಹ ಅಪೇಕ್ಷಿತರಿಗೆ ಶುಭ ಸುದ್ದಿ ಸಿಗಲಿದೆ. ನಿಮ್ಮ ಸೃಜನಶೀಲತೆ ನಿಮ್ಮನ್ನು ಎತ್ತರದ ಸ್ಥಾನದಲ್ಲಿ ನಿಲ್ಲಿಸಲಿದೆ. ಅತಿಯಾದ ಶ್ರಮ ದೈಹಿಕವಾಗಿ ನಿಮ್ಮನ್ನು ಜರ್ಜರಿತನ್ನಾಗಿ ಮಾಡಬಹುದು, ಕೊಂಚ ಕಾಳಜಿ ವಹಿಸಿ. ಹಣಕಾಸು ವ್ಯವಹಾರದಲ್ಲಿ ಲಾಭ ಇರಲಿದೆ. ಆರ್ಥಿಕ ಪ್ರಗತಿ ಇರಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ:2

ಸಿಂಹ: ದೈಹಿಕ ಹಾಗೂ ಮಾನಸಿಕ ಆರೋಗ್ಯ ಪರಿಪೂರ್ಣವಾಗಿರಲಿದೆ. ಆತ್ಮವಿಶ್ವಾಸ ಕಾರ್ಯವನ್ನು ಸಿದ್ಧಿಸಿ ಕೊಡಲಿದೆ. ಆರ್ಥಿಕವಾಗಿ ಲಾಭ ಇರಲಿದೆ. ವ್ಯಾಪಾರ ವ್ಯವಹಾರದಲ್ಲಿ ಚೇತರಿಕೆ ಕಾಣುವಿರಿ. ಕೌಟುಂಬಿಕವಾಗಿ ಶುಭ ಫಲ ಇರಲಿದೆ.
ಅದೃಷ್ಟ ಸಂಖ್ಯೆ:9

ಕನ್ಯಾ: ಅನಿರೀಕ್ಷಿತ ಮೂಲಗಳಿಂದ ಹಣಕಾಸಿನ ನೆರವು ಸಿಗಲಿದೆ. ನಿಮ್ಮ ಪ್ರೀತಿ ಪಾತ್ರರೊಂದಿಗೆ ವಾದಕ್ಕೆ ಇಳಿಯುವ ಪ್ರಸಂಗ ಬರಬಹುದು. ಆದರಿಂದ ಮಾತಿನಲ್ಲಿ ಹಿಡಿತವಿರಲಿ. ಆರೋಗ್ಯ ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ ಇರಲಿದೆ.
ಅದೃಷ್ಟ ಸಂಖ್ಯೆ:7

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

ತುಲಾ: ನಿಮ್ಮ ಆಕರ್ಷಕ ವ್ಯಕ್ತಿತ್ವ ಹೊಸ ಸ್ನೇಹಿತರನ್ನು ಪರಿಚಯಿಸಲಿದೆ. ಆತ್ಮ ವಿಶ್ವಾಸದ ಭರದಲ್ಲಿ ಮಾತು ಕೊಟ್ಟು ಕೊರಗುವುದು ಬೇಡ. ನೈಜತೆ ಇರಲಿ.ಆರ್ಥಿಕ ಸ್ಥಿತಿ ಕೊಂಚ ಸಾಧಾರಣವಾಗಿ ಇರಲಿದೆ. ಕೌಟುಂಬಿಕವಾಗಿ ಶುಭ ಫಲ. ಆರೋಗ್ಯ ಪರಿಪೂರ್ಣವಾಗಿರಲಿದೆ. ಅದೃಷ್ಟ ಸಂಖ್ಯೆ:1

ವೃಶ್ಚಿಕ: ಆಪ್ತರ ಸಹಾಯದಿಂದ ಆರ್ಥಿಕ ಸ್ಥಿತಿ ಸುಧಾರಣೆ ಆಗಲಿದೆ. ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ಸಿಗಲಿದೆ. ಇಂದು ಅತಿಯಾದ ಸಲುಗೆಯಿಂದ ಯಾರೊಂದಿಗೂ ವರ್ತಿಸುವುದು ಸರಿಯಲ್ಲ, ಮುಖಭಂಗ ಆಗುವ ಸಾಧ್ಯತೆ ಇದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ:3

ಧನಸ್ಸು: ನಿಮ್ಮ ಬಲವಾದ ದೃಢತೆ ಮತ್ತು ನಿರ್ಭಯತೆ ನಿಮ್ಮ ಮಾನಸಿಕ ಶಕ್ತಿ ವರ್ಧಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಇದು ನಿಮಗೆ ಯಾವುದೇ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿರಿಸಿಕೊಳ್ಳಲು ಉತ್ತೇಜಿಸುವುದರಿಂದ ಇದನ್ನು ಕಾಯ್ದುಕೊಳ್ಳಿ. ಆಧ್ಯಾತ್ಮಿಕ ವ್ಯಕ್ತಿಗಳ ಭೇಟಿ ಮಾಡುವಿರಿ. ಕೌಟುಂಬಿಕವಾಗಿ ಮಿಶ್ರ ಫಲ. ಆರೋಗ್ಯದ ಕುರಿತು ಕೊಂಚ ಕಾಳಜಿ ವಹಿಸಿ.
ಅದೃಷ್ಟ ಸಂಖ್ಯೆ: 9

ಮಕರ: ಭವಿಷ್ಯದ ಬಗೆಗೆ ಚಿಂತಿಸಿ ಕಾಲ ಹರಣ ಮಾಡುವ ಬದಲು ಆತ್ಮ ವಿಶ್ವಾಸದಿಂದ ಕಾರ್ಯದಲ್ಲಿ ಮುನ್ನುಗ್ಗಿ ಜಯ ಸಿಗಲಿದೆ.ಮನೆಯಲ್ಲಿ ಮಕ್ಕಳ ಆರೋಗ್ಯದ ಕುರಿತು ಕಾಳಜಿ ಇರಲಿ.ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ:9

ಕುಂಭ: ಪ್ರಮುಖ ಯೋಜನೆಗಳು ಕಾರ್ಯಗತಗೊಳ್ಳಲಿವೆ. ವಾಹನ ಚಾಲನೆ ಮಾಡುವಾಗ ಆದಷ್ಟು ಎಚ್ಚರಿಕೆ ಇರಲಿ. ನೆರೆ-ಹೊರೆಯವರೊಂದಿಗೆ ವಿನಾ ಕಾರಣ ವಾದಕ್ಕಿಳಿಯುವುದು ಬೇಡ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಶುಭ ಇರಲಿದೆ.
ಅದೃಷ್ಟ ಸಂಖ್ಯೆ:6

ಮೀನ: ಸ್ನೇಹಿತರ ಮಾತುಗಳು ನಿಮ್ಮನ್ನು ಪ್ರಭಾವಗೊಳಿಸಲಿವೆ. ಆರೋಗ್ಯ ಪರಿಪೂರ್ಣ ಇರಲಿದೆ. ಆರ್ಥಿಕ ಚಟುವಟಿಕೆಗಳು ಗರಿಗೆದರಲಿವೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 5

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Exit mobile version