ಚಂದ್ರನು ವೃಶ್ಚಿಕ ರಾಶಿಯಿಂದ ಶನಿವಾರ ಬೆಳಗ್ಗೆ 08:56ಕ್ಕೆ ಧನಸ್ಸು ರಾಶಿಗೆ ಪ್ರವೇಶಿಸುತ್ತಾನೆ. ಇದರಿಂದ ವೃಷಭ, ಮಿಥುನ, ಕನ್ಯಾ, ವೃಶ್ಚಿಕ, ಮಕರ, ಕುಂಭ ರಾಶಿಯವರಿಗೆ ಚಂದ್ರನ ಬಲ ಸಿಗಲಿದೆ. ಮೇಷ ರಾಶಿಯವರಿಗೆ ಬಳಗದಲ್ಲಿ ಯಾವುದಾದರೂ ದುಃಖದ ಸನ್ನಿವೇಶ ನಡೆಬಹುದು. ವೃಷಭ ರಾಶಿಯವರು ಆಂತರಿಕ ಭಯ ನಿಮ್ಮ ಸಂತೋಷವನ್ನು ಹಾಳುಗೆಡವಬಹುದು. ನಕಾರಾತ್ಮಕ ಆಲೋಚನೆಗಳನ್ನು ಮಾಡದಿರಿ. ಮಿಥುನ ರಾಶಿಯವರು ಬೇರೆಯವರ ಮಾತನ್ನು ಕೇಳಿಕೊಂಡು ನಿಮ್ಮನ್ನು ಪ್ರೀತಿಯಿಂದ ಕಾಣುವ ವ್ಯಕ್ತಿಗಳನ್ನು ದ್ವೇಷಿಸುವುದು ಬೇಡ. ಇತರರ ಸಮಸ್ಯೆಗಳನ್ನು ಪರಿಹರಿಸಲು ನೀವು ಮಧ್ಯಪ್ರವೇಶ ಮಾಡುವ ಸಾಧ್ಯತೆ ಇದೆ. ಇವೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ (Kannada Dina Bhavishya) ಎಂಬುದನ್ನು ತಿಳಿಯೋಣ.
ಇಂದಿನ ಪಂಚಾಂಗ (kannada panchanga) (02-03-2024)
ಶ್ರೀ ಶಕೇ 1945, ಶೋಭಕೃತ (ಶೋಭನ) ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ
ತಿಥಿ: ಷಷ್ಠಿ 07:53 ವಾರ: ಶನಿವಾರ
ನಕ್ಷತ್ರ: ವಿಶಾಖ 14:41 ಯೋಗ: ವ್ಯಾಘಾತ 18:04
ಕರಣ: ವಣಿಜ 07:53 ಅಮೃತ ಕಾಲ: ಭಾನುವಾರ ಬೆಳಗಿನ ಜಾವ 04:59ರಿಂದ 06:40ರವರೆಗೆ
ದಿನದ ವಿಶೇಷ:
ಸೂರ್ಯೋದಯ : 6:35 ಸೂರ್ಯಾಸ್ತ : 06:29
ಮೇಷ: ದೈಹಿಕ ಹಾಗೂ ಮಾನಸಿಕವಾಗಿ ಕುಗ್ಗುವ ಸಾಧ್ಯತೆ ಇದೆ. ಬ್ಯಾಂಕ್ ವ್ಯವಹಾರಗಳಲ್ಲಿ ಕಾಳಜಿ ವಹಿಸಬೇಕು. ನಿಮ್ಮ ಬಳಗದಲ್ಲಿ ಯಾವುದಾದರೂ ದುಃಖದ ಸನ್ನಿವೇಶ ನಡೆಬಹುದು. ನಿಮ್ಮ ಶ್ರಮ ಮತ್ತು ಸಮರ್ಪಣೆ ನಿಮ್ಮ ಪರವಾಗಿ ಮಾತನಾಡುತ್ತವೆ ಮತ್ತು ನಿಮಗೆ ವಿಶ್ವಾಸ ಮತ್ತು ಬೆಂಬಲ ಗಳಿಸಿ ಕೊಡುತ್ತವೆ.
ಅದೃಷ್ಟ ಸಂಖ್ಯೆ: 1
ವೃಷಭ: ಆಂತರಿಕ ಭಯ ನಿಮ್ಮ ಸಂತೋಷವನ್ನು ಹಾಳುಗೆಡವಬಹುದು. ನಕಾರಾತ್ಮಕ ಆಲೋಚನೆಗಳನ್ನು ಮಾಡದಿರಿ. ದಿನ ಕೊನೆಯ ಭಾಗದಲ್ಲಿ ಯಾವುದಾದರೂ ಶುಭ ಸುದ್ದಿ ಕೇಳುವ ಸಾಧ್ಯತೆ ಇದೆ. ಆರೋಗ್ಯ ಕೊಂಚಮಟ್ಟಿಗೆ ಏರುಪೇರಾಗಲಿದೆ. ಆರ್ಥಿಕವಾಗಿ ಪ್ರಗತಿ. ಅದೃಷ್ಟ ಸಂಖ್ಯೆ: 9
ಮಿಥುನ: ಬೇರೆಯವರ ಮಾತನ್ನು ಕೇಳಿಕೊಂಡು ನಿಮ್ಮನ್ನು ಪ್ರೀತಿಯಿಂದ ಕಾಣುವ ವ್ಯಕ್ತಿಗಳನ್ನು ದ್ವೇಷಿಸುವುದು ಬೇಡ. ಇತರರ ಸಮಸ್ಯೆಗಳನ್ನು ಪರಿಹರಿಸಲು ನೀವು ಮಧ್ಯಪ್ರವೇಶ ಮಾಡುವ ಸಾಧ್ಯತೆ ಇದೆ. ದಿಢೀರ್ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಅನಾವಶ್ಯಕ ಖರ್ಚು ಇರಲಿದೆ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7
ಕಟಕ: ಅನಿವಾರ್ಯ ಪ್ರಸಂಗಗಳು ನಿಮಗೆ ಕೋಪವನ್ನು ತರಿಸುವ ಸಾಧ್ಯತೆ ಇದೆ. ಭಾವನೆಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡರೆ ಉತ್ತಮ. ಕಠಿಣ ಪರಿಶ್ರಮ ನಿಮಗೆ ಫಲ ನೀಡಲಿದೆ. ಸಂಗಾತಿಯ ಸಂಪೂರ್ಣ ಬೆಂಬಲ ಸಿಗಲಿದೆ. ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ. ಆರ್ಥಿಕವಾಗಿ ಲಾಭ ಇರಲಿದೆ. ಉದ್ಯೋಗದ ಸ್ಥಳದಲ್ಲಿ ಒತ್ತಡ ಹೆಚ್ಚಾಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1
ಸಿಂಹ: ನಿಮ್ಮ ಸಭ್ಯ ನಡವಳಿಕೆ ಇತರರಿಂದ ಮೆಚ್ಚುಗೆ ಪಡೆಯುತ್ತದೆ. ಅನೇಕ ಜನರು ನಿಮ್ಮನ್ನು ಹೊಗಳುತ್ತಾರೆ. ದಿನದ ಆರಂಭದಲ್ಲಿ ಇಂದು ನೀವು ಯಾವುದೇ ಆರ್ಥಿಕ ನಷ್ಟವನ್ನು ಹೊಂದಬಹುದು. ಇದರಿಂದ ನಿಮ್ಮ ಪೂರ್ತಿ ದಿನ ಹದಗೆಡಬಹುದು. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಭರವಸೆಯ ಹೊಸ ಅವಕಾಶ ಸಿಗಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 9
ಕನ್ಯಾ: ಒತ್ತಡದಿಂದ ವಿಮುಕ್ತಿ ಹೊಂದಿ, ವಿರಾಮದ ಸಂತೋಷವನ್ನು ಅನುಭವಿಸಲಿದ್ದೀರಿ. ದೀರ್ಘಕಾಲದ ದೃಷ್ಟಿಕೋನದಿಂದ ಮಾಡಿದ ಹೂಡಿಕೆಯಿಂದ ಲಾಭ ಇರಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕುಟುಂಬದ ಸಂಪೂರ್ಣ ಸಹಕಾರ ಸಿಗಲಿದೆ. ಉದ್ಯೋಗಿಗಳಿಗೆ ಅದೃಷ್ಟ ಖುಲಾಯಿಸಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7
ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ
ತುಲಾ: ದಿಢೀರ್ ಧನಾಗಮನದಿಂದ ಸಂತೋಷ ಇಮ್ಮಡಿಯಾಗಲಿದೆ. ಅನೇಕ ಸಮಸ್ಯೆಗಳು ಇಂದು ಪರಿಹಾರವಾಗುವುದು. ಆರೋಗ್ಯ ಪರಿಪೂರ್ಣವಾಗಿ ಇರಲಿದೆ. ಬಹಳ ದಿನಗಳಿಂದ ಕಂಡ ಕನಸು ನನಸಾಗಲಿದೆ. ಉದ್ಯೋಗಿಗಳಿಗೆ ಶುಭ ಫಲ.
ಅದೃಷ್ಟ ಸಂಖ್ಯೆ: 1
ವೃಶ್ಚಿಕ: ಇಂದು ಪ್ರಮುಖ ನಿರ್ಧಾರಗಳಿಂದಾಗಿ ಮಾನಸಿಕವಾಗಿ ನೀವು ಬಳಲುವ ಸಾಧ್ಯತೆ ಇದೆ. ಅನಾವಶ್ಯಕ ಖರ್ಚು ಮಾಡಿ ಕೊರಗುವ ಸಾಧ್ಯತೆ ಇದೆ. ಆದಷ್ಟು ನಿಯಂತ್ರಣದಲ್ಲಿರಿ. ಸಂಗಾತಿಯ ಆರೋಗ್ಯದ ಕುರಿತು ಕಾಳಜಿ ಇರಲಿ. ಉದ್ಯೋಗಿಗಳಿಗೆ ಶುಭಫಲ, ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 2
ಧನಸ್ಸು: ಆರೋಗ್ಯದ ಸಂಬಂಧ ಆರೈಕೆ ಇಂದು ಅಗತ್ಯವಿದೆ. ಆಪ್ತರೊಂದಿಗೆ ಸೇರಿಕೊಂಡು ಮಾಡುವ ವ್ಯಾಪಾರ ನಷ್ಟ ತಂದಿತು, ಆದಷ್ಟು ಎಚ್ಚರಿಕೆಯಿಂದ ಹೆಜ್ಜೆ ಇಡಿ. ನಿಮ್ಮ ಆಂತರಿಕ ಶಕ್ತಿ ದಿನದ ಕೆಲಸವನ್ನು ಉತ್ತಮಗೊಳಿಸುವಲ್ಲಿ ನಿಮ್ಮನ್ನು ಬೆಂಬಲಿಸುತ್ತದೆ. ಉದ್ಯೋಗಿಗಳಿಗೆ ಮಧ್ಯಮ ಫಲ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 8
ಮಕರ: ಆಹಾರ ಕ್ರಮದ ವ್ಯತ್ಯಾಸದಿಂದಾಗಿ ಆರೋಗ್ಯದಲ್ಲಿ ಕೊಂಚ ಏರುಪೇರು ಸಾಧ್ಯತೆ ಇದೆ. ಆದಷ್ಟು ಆಹಾರ ನಿಯಂತ್ರಣ ಮಾಡಿ. ಅನಿವಾರ್ಯ ಕಾರಣಗಳಿಂದ ಖರ್ಚು ಹೆಚ್ಚಾಗಲಿದೆ. ಕುಟುಂಬ ಸದಸ್ಯರ ಮಧ್ಯೆ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ ಇದೆ ಆದಷ್ಟು ಮಾತಿನಲ್ಲಿ ಹಿಡಿತವಿರಲಿ. ದಿಢೀರ್ ಪ್ರಯಾಣ ಬೆಳೆಸಬೇಕಾದಿತು. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 8
ಕುಂಭ: ನಿಮ್ಮ ಸಾಧನೆಗೆ ಇಂದು ಪ್ರೋತ್ಸಾಹ ಸಿಗಲಿದೆ. ಅನೇಕ ಹಣಕಾಸಿನ ಸಮಸ್ಯೆಗಳು ಪರಿಹಾರವಾಗಲಿವೆ. ವ್ಯಾಪಾರದ ಉದ್ದೇಶಕ್ಕಾಗಿ ಕೈಕೊಂಡ ಪ್ರಯಾಣ ಲಾಭವನ್ನು ತಂದುಕೊಡಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಮಿಶ್ರ ಫಲ ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 6
ಮೀನ: ಅನಗತ್ಯ ಆಲೋಚನೆಗಳು ನಿಮ್ಮ ಮನಸ್ಸನ್ನು ಆವರಿಸಬಹುದು. ಆದಷ್ಟು ಸಕಾರಾತ್ಮಕವಾಗಿ ಆಲೋಚಿಸಿ. ಆರೋಗ್ಯದ ಕುರಿತು ಕಾಳಜಿ ಇರಲಿ. ಆರ್ಥಿಕವಾಗಿ ಪ್ರಗತಿ. ನಿಮ್ಮ ಸಹೋದ್ಯೋಗಿಗಳು ನಿಮ್ಮನ್ನು ಟೀಕಿಸುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4
ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು
M: 9481854580 | pnaveenshastri@gmail.com