Site icon Vistara News

Dina Bhavishya : ಕುಟುಂಬದಲ್ಲಿ ಕಲಹ; ಈ ರಾಶಿಯವರು ನಾಲಿಗೆಗೆ ಹಾಕಿ ಲಗಾಮು

Dina Bhavishya

ಚಂದ್ರನು ಭಾನುವಾರವೂ ಧನಸ್ಸು ರಾಶಿಯಲ್ಲೇ ನೆಲಸಲಿದ್ದಾನೆ. ಹೀಗಾಗಿ ವೃಶ್ಚಿಕ, ಮಿಥುನ, ಕನ್ಯಾ, ವೃಶ್ಚಿಕ, ಮಕರ, ಕುಂಭ ರಾಶಿಯವರಿಗೆ ಚಂದ್ರನ ಬಲ ಸಿಗಲಿದೆ. ಇಂದಿನ ದಿನ ಭವಿಷ್ಯವನ್ನು (Kannada Dina Bhavishya) ನೋಡುವುದಾದರೆ, ಮೇಷ ರಾಶಿಯವರು ನಿಮ್ಮ ವೈಯಕ್ತಿಕ ಜೀವನದಲ್ಲಿ ಇತರರು ಹಸ್ತಕ್ಷೇಪ ಮಾಡದಂತೆ ಎಚ್ಚರಿಕೆ ವಹಿಸಿ. ಅನೇಕ ವಿಚಾರಗಳು ಮಾನಸಿಕ ಒತ್ತಡ ತರುವ ಸಾಧ್ಯತೆ ಇದೆ. ಆರೋಗ್ಯದ ಕುರಿತು ಕಾಳಜಿ ವಹಿಸಿ. ವೃಷಭ ರಾಶಿಯವರು ಬಹಳ ದಿನಗಳ ಕನಸು, ಭೂ ಸಂಬಂಧಿ ವ್ಯವಹಾರದಲ್ಲಿ ಯಶಸ್ಸು ಸಿಗಲಿದೆ. ಇಂದು ಉದ್ಯೋಗದ ಸ್ಥಳದಲ್ಲಿ ಪ್ರಶಂಸೆ, ಪ್ರೋತ್ಸಾಹ ಸಿಗಲಿದೆ. ಆರೋಗ್ಯದ ಬಗೆಗೆ ಕಾಳಜಿ ಇರಲಿ. ಕುಟುಂಬದಲ್ಲಿ ವಿನಾಕಾರಣ ಕಲಹಗಳು ನಡೆಯದಂತೆ ಎಚ್ಚರಿಕೆ ವಹಿಸಿ. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (31-03-2024)

ಶ್ರೀ ಶಕೇ 1945, ಶೋಭಕೃತ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣ ಪಕ್ಷ.
ತಿಥಿ: ಷಷ್ಠಿ 21:30 ವಾರ: ಭಾನುವಾರ
ನಕ್ಷತ್ರ: ಜೇಷ್ಠಾ 22:55 ಯೋಗ: ವ್ಯತಿಪಾತ 21:51
ಕರಣ: ಗರಜ 09:26 ಅಮೃತ ಕಾಲ: ಮಧ್ಯಾಹ್ನ 01:49 ರಿಂದ 03:29ರ ವರೆಗೆ
ದಿನ ವಿಶೇಷ: ಈಸ್ಟರ್‌ ಸಂಡೇ, ಹರದನಹಳ್ಳಿ ದಿವ್ಯಲಿಂಗೇಶ್ವರ ರಥ, ಮೈಸೂರು ಹೆಬ್ಬಾಳ ಲಕ್ಷ್ಮೀಕಾಂತರ ರಥ

ಸೂರ್ಯೋದಯ : 06:16   ಸೂರ್ಯಾಸ್ತ : 06:31

ರಾಹುಕಾಲ : ಸಂಜೆ 4.30 ರಿಂದ 6.00
ಗುಳಿಕಕಾಲ: ಮಧ್ಯಾಹ್ನ 3.00 ರಿಂದ 4.30
ಯಮಗಂಡಕಾಲ: ಮಧ್ಯಾಹ್ನ 12.00 ರಿಂದ 1.30

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

ಮೇಷ: ನಿಮ್ಮ ವೈಯಕ್ತಿಕ ಜೀವನದಲ್ಲಿ ಇತರರು ಹಸ್ತಕ್ಷೇಪ ಮಾಡದಂತೆ ಎಚ್ಚರಿಕೆ ವಹಿಸಿ. ಅನೇಕ ವಿಚಾರಗಳು ಮಾನಸಿಕ ಒತ್ತಡ ತರುವ ಸಾಧ್ಯತೆ ಇದೆ. ಆರೋಗ್ಯದ ಕುರಿತು ಕಾಳಜಿ ವಹಿಸಿ. ಹಣಕಾಸು ವ್ಯವಹಾರದಲ್ಲಿ ಸಾಧರಣವಾಗಿರಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 7

ವೃಷಭ: ಬಹಳ ದಿನಗಳ ಕನಸು, ಭೂ ಸಂಬಂಧಿ ವ್ಯವಹಾರದಲ್ಲಿ ಯಶಸ್ಸು ಸಿಗಲಿದೆ. ಇಂದು ಉದ್ಯೋಗದ ಸ್ಥಳದಲ್ಲಿ ಪ್ರಶಂಸೆ, ಪ್ರೋತ್ಸಾಹ ಸಿಗಲಿದೆ. ಆರೋಗ್ಯದ ಬಗೆಗೆ ಕಾಳಜಿ ಇರಲಿ. ಕುಟುಂಬದಲ್ಲಿ ವಿನಾಕಾರಣ ಕಲಹಗಳು ನಡೆಯದಂತೆ ಎಚ್ಚರಿಕೆ ವಹಿಸಿ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 6

ಮಿಥುನ: ಅತ್ಯಂತ ಉತ್ಸಾಹದ ದಿನವಿದು. ಆತುರದಲ್ಲಿ ಹಣ ಹೂಡಿಕೆ ಮಾಡುವುದು ಬೇಡ. ಆರೋಗ್ಯ ಉತ್ತಮವಾಗಿರಲಿದೆ. ಮಕ್ಕಳ ಕುರಿತಾಗಿ ಚಿಂತಿಸಿ ಉತ್ಸಾಹ ಕಳೆದುಕೊಳ್ಳುವುದು ಬೇಡ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4

ಕಟಕ: ಅನಾವಶ್ಯಕ ಒತ್ತಡ ತೆಗೆದುಕೊಳ್ಳುವುದು ಬೇಡ. ಮನೆಯಲ್ಲಿನ ಕಲಹಗಳಿಗೆ ನೀವು ಧ್ವನಿಯಾಗುವುದು ಬೇಡ. ಪ್ರತಿಭೆಗೆ ತಕ್ಕ ಪ್ರೋತ್ಸಾಹ ಸಿಗುವುದು. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ಸಂಗಾತಿಯ ಬೆಂಬಲ ಸಿಗಲಿದೆ.
ಅದೃಷ್ಟ ಸಂಖ್ಯೆ: 8

ಸಿಂಹ: ಪಾಲುದಾರಿಕೆ ವ್ಯವಹಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿ ಆಗುವ ಸಾಧ್ಯತೆ ಇದೆ, ಎಚ್ಚರವಹಿಸಿ. ಹಿರಿಯರ ಮಾರ್ಗದರ್ಶನ ಪಡೆಯಿರಿ. ಅತಿಯಾದ ಆತ್ಮವಿಶ್ವಾಸದ ಭರದಲ್ಲಿ ದೂಡುಕುವುದು ಬೇಡ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 6

ಕನ್ಯಾ: ವ್ಯಾಪಾರ ವ್ಯವಹಾರಗಳಲ್ಲಿ ಕಾರ್ಯ ಸಿದ್ಧಿ. ಪ್ರಯಾಣದಿಂದ ಲಾಭ ಇರಲಿದೆ. ತಾಳ್ಮೆಯಿಂದ ಕಾಯ್ದು ಕೊಂಡಿರುವ ಕೆಲಸವು ಫಲ ನೀಡುವುದು. ಆರೋಗ್ಯ ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 5

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

ತುಲಾ: ಪ್ರಶಂಸೆ ಪ್ರೋತ್ಸಾಹ ಸಿಗುವುದು. ನಿಮ್ಮ ಸಭ್ಯ ನಡವಳಿಕೆ ಮೆಚ್ಚುಗೆ ಪಡೆಯುತ್ತದೆ. ಆರ್ಥಿಕ ಸಮಸ್ಯೆಗಳು ಪರಿಹಾರ ಆಗುವಾಗಲಿದೆ. ಆದರೂ ಯಾವುದಾದರೂ ಒಂದು ಕೊರತೆ ಕಾಡುವುದು. ಆಧ್ಯಾತ್ಮದ ಹಾದಿಯಲ್ಲಿ ಹೆಜ್ಜೆ ಹಾಕಿ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 7

ವೃಶ್ಚಿಕ: ಅತಿಯಾದ ಮಾನಸಿಕ ಒತ್ತಡ ನಿಮ್ಮನ್ನು ಜರ್ಜರಿತ ರನ್ನಾಗಿ ಮಾಡಬಹುದು, ಅದರಿಂದ ಹೊರ ಬನ್ನಿ. ಮನೆಯಲ್ಲಿ ಮಾತಿಗೆ ಮಾತು ಬೆಳೆದು ಕಲಹವಾಗುವ ಸಾಧ್ಯತೆ ಇದೆ. ಮೌನದಿಂದ ಕಾರ್ಯ ಸಾಧಿಸಿ.
ಅದೃಷ್ಟ ಸಂಖ್ಯೆ: 9

ಧನಸ್ಸು: ದೀರ್ಘಕಾಲದ ಅನಾರೋಗ್ಯ ನಿಮ್ಮನ್ನು ಹಿಂಸೆಗೆ ಗುರಿ ಮಾಡಬಹುದು. ವಿಶ್ವಾಸದಿಂದ ಕಾರ್ಯ ಸಾಧನೆ ಮಾಡಿ ಶುಭವಾಗುವುದು. ಆರ್ಥಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 6

ಮಕರ: ಅತಿಯಾದ ಭರವಸೆಯಿಂದ ದುಡುಕುವುದು ಬೇಡ. ಆರ್ಥಿಕ ಪ್ರಗತಿ ಉತ್ತಮವಾಗಿರಲಿದೆ. ನಿಮ್ಮ ಪ್ರತಿ ಸ್ಪರ್ಧಿಗಳು ಕೆಟ್ಟದನ್ನು ಮಾಡಬಹುದು. ಆರೋಗ್ಯವು ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ:6

ಕುಂಭ: ಭೂ ವ್ಯವಹಾರದಲ್ಲಿ ಅನುಕೂಲತೆ ಇರಲಿದೆ. ಸಂಬಂಧಿಕರು ಮತ್ತು ಸ್ನೇಹಿತರಿಂದ ಅನಿರೀಕ್ಷಿತ ಉಡುಗೊರೆಗಳು ದೊರೆಯಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 4

ಮೀನ: ಮಕ್ಕಳ ಆರೋಗ್ಯದ ಬಗ್ಗೆ ಗಮನ ಹರಿಸಿ. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ಉದ್ಯೋಗದ ಸ್ಥಳದಲ್ಲಿ ಪ್ರಶಂಸೆ ಸಿಗುವುದು.
ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Exit mobile version