Site icon Vistara News

ಗುರು ಗ್ರಹ ನೀಡುವ ಭಾವಫಲಗಳ ಬಗ್ಗೆ ಮಾಹಿತಿ ಇದೆಯೇ?

ಜ್ಯೋತಿಷ ಶಾಸ್ತ್ರದಲ್ಲಿ ಗುರು ಗ್ರಹ ನಾಲ್ಕನೇಯದ್ದು. ಹಾಗೆಯೇ ಬಹಳ ಪ್ರಾಮುಖ್ಯತೆ ಹೊಂದಿರುವ ಗ್ರಹ. ಈ ಗುರು ಲಗ್ನದಲ್ಲಿದ್ದರೆ ಪ್ರಬಲ. ಬುಧ ಗ್ರಹ ಅನೇಕ ಶುಭಫಲಗಳನ್ನು ಪ್ರಾಪ್ತಿಸುತ್ತದೆ. ವಿವಿಧ ಸ್ಥಾನಗಳಲ್ಲಿ ವಿವಿಧ ಫಲಗಳನ್ನು ನೀಡುತ್ತಾನೆ. ಗುರುವಿನ ಭಾವಫಲದ ಬಗ್ಗೆ ಮಾಹಿತಿ ಇಲ್ಲಿದೆ:

ಭಾವಶ್ರಿತ ರಾಶಿಫಲ:

ಗುರುವು ಲಗ್ನದಲ್ಲಿ ಬಲಿಷ್ಠ. ಈ ಜಾತಕದವರು ಸುಂದರವಾಗಿರುತ್ತಾರೆ ಹಾಗೂ ಭಾಗ್ಯಶಾಲಿಯಾಗಿರುತ್ತಾರೆ. ಇವರಿಗೆ ಸಂತತಿಯ ಸುಖ ಪ್ರಾಪ್ತವಾಗಲಿದೆ. ಈ ಜಾತಕದವರು ಧೈರ್ಯವಂತರು ಹಾಗೂ ನಿರ್ಭಯವಾಗಿರುತ್ತಾರೆ.

ದ್ವಿತೀಯ ಭಾವದಲ್ಲಿ ಗುರುವಿದ್ದ ಜಾತಕದವರಿಗೆ ವಾಕ್ಚಾತುರ್ಯವಿರುತ್ತದೆ. ಇವರು ಧನವಂತನು ಮತ್ತು ಸಕಲಶಾಸ್ತ್ರ ಪಾರಂಗತರು ಆಗುತ್ತಾರೆ. ತೇಜಸ್ವಿಯಾಗಿ ಇತರರ ಮೇಲೆ ಪ್ರಭಾವ ಬೀರುವ ಸಾಮರ್ಥ್ಯ ಇವರಿಗುರತ್ತದೆ. ಉತ್ತಮ ಭೋಜನ ಇವರಿಗೆ ಪ್ರಿಯವಾಗಿರುತ್ತದೆ. .

ತೃತೀಯ ಭಾವದಲ್ಲಿ ಗುರುವಿರುವ ಜಾತಕದವರು ಕೃಪಣ ಹಾಗೂ ಪರಾಕ್ರಮಿಯಾಗಿದ್ದರೂ ಸಮಸ್ಯೆಗೆ ಸಿಲುಕಿಕೊಳ್ಳಬಹುದಾಗಿದೆ. ಇವರ ಪಾಪಕರ್ಮ ಮತ್ತು ದುರ್ಬುದ್ಧಿ ಇವರನ್ನು ಇತರರು ತಿರಸ್ಕೃತ ದೃಷ್ಟಿಯಿಂದ ನೋಡುತ್ತಾರೆ. ಇವರು ಅಪಖ್ಯಾತಿಯುಳ್ಳ ಇನ್ನೋರ್ವ ಸಹೋದರ ಹೊಂದಿರುತ್ತಾರೆ.

ಗುರುವು ಚತುರ್ಥಭಾವದಲ್ಲಿದ್ದರೆ, ಇವರಿಗೆ ತಾಯಿ, ಪತ್ನಿ-ಸುತರಿಂದೊಡಗೂಡಿ ಸುಖವಾಗಿ ಬಾಳುವ ಸಂದರ್ಭವಿರುತ್ತದೆ. ಈ ಜಾತಕದವರು ಧನ ಧಾನ್ಯಗಳಿಂದ ಸಂಪನ್ನರಾಗಿ ಸುಖಮಯ ಜೀವನವ್ನು ಸಾಗಿಸುತ್ತಾರೆ.

ಪಂಚಮದಲ್ಲಿ ಗುರುವು ಸಾಧಾರಣ ಫಲವನ್ನು ಪ್ರಾಪ್ತಿಸುತ್ತಾನೆ. ಈ ಜಾತಕದವರು ಬುದ್ಧಿವಂತರು ಮತ್ತು ರಾಜನ ಸಚಿವರಾಗುವ ಸೌಭಾಗ್ಯ ಹೊಂದಿರುತ್ತಾರೆ. ಆದರೆ, ಇವರಿಗೆ ಪುತ್ರರ ಕಾರಣದಿಂದಾಗಿ ದುಃಖವನ್ನು ಅನುಭವಿಸುವ ಸಂದರ್ಭ ಎದುರಾಗುತ್ತದೆ.

ಷಷ್ಟಮ ಭಾವದಲ್ಲಿ ಗುರುವಿದ್ದರೆ ಆಲಸ್ಯ ಆವರಿಸುತ್ತದೆ. ಆದರೆ, ಈ ಜಾತಕದವರು ಶತ್ರುಗಳನ್ನು ದಮನ ಮಾಡುವ ಸಾಮರ್ಥ್ಯ ಹೊಂದಿರುತ್ತಾರೆ. ಮಾಟ ಮಂತ್ರಾದಿ ಅಭಿಚಾರ ಕಾರ್ಯನಿರತರಾಗಿರುತ್ತಾರೆ. ಇವರು ಸಾಮನ್ಯವಾಗಿ ಅವಮಾನಕ್ಕೀಡಾಗಿ ತಿರಸ್ಕೃತರು ಆಗಿರುತ್ತಾರೆ.

ಗುರುವು ಸಪ್ತಮ ಭಾವದಲ್ಲಿರುವ ಜಾತಕದವರು ಬಹುತೇಜಸ್ವಿಯಾಗಿರುತ್ತಾರೆ. ಇವರಿಗೆ ಸುಂದರ ಪತ್ನಿ-ಪುತ್ರವುಳ್ಳುತ್ತಾರೆ.ಇವರು ತನ್ನ ಪೂರ್ವಜರಿಗಿಂತಲೂ ಅಧಿಕ ಉದಾರತೆ ತೋರುವವರಾಗಿರುತ್ತಾರೆ.

ಗುರುವು ಅಷ್ಟಮದಲ್ಲಿರುವಾಗ, ಜಾತಕದವರು ದೀನರಾಗಿರುತ್ತಾರೆ. ಜೀವನೋಪಾಯಕ್ಕಾಗಿ ಸೇವೆ ಮಾಡುತ್ತಾರೆ, ಆದರೆ ಪಾಪಾತ್ಮರಾಗಿರುತ್ತರೆ. ಇವರಿಗೆ ದೀರ್ಘಾಯುವು ಪ್ರಾಪ್ತವಾಗಿರುತ್ತದೆ.

ಗುರುವು ನವಮದಲ್ಲಿರುವ ಜಾತಕದವರು ಪ್ರಖ್ಯಾತ ಮಂತ್ರಿಯಾಗಿ ಬಾಳುತ್ತಾರೆ. ಸನ್ಮಾರ್ಗದಿಂದ ಆರ್ಜಿತ ಧನಸಂಪತ್ತನ್ನೂ ಹೊಂದುತ್ತಾರೆ. ಇವರಿಗೆ ಪುತ್ರ ಸಂಪತ್ತು ಪ್ರಾಪ್ತಿಸಲಿದೆ ಹಾಗೂ ಇವರು ಧಾರ್ಮಿಕ ಆಚರಣೆಯನ್ನು ಪಾಲಿಸುವವರಾಗಿರುತ್ತಾರೆ.

ದಶಮ ಭಾವದಲ್ಲಿ ಗುರುವಿರುವ ಜಾತಕದವರು ಸದಾಚಾರಿಯಾಗಿರುತ್ತಾರೆ. ಇವರು ಅತ್ಯಂತ ಧನವಂತರಾಗಿರುತ್ತಾರೆ. ಇವರ ಸದ್ಗುಣದಿಂದ ರಾಜನ ಪ್ರೀತಿಗೆ ಪಾತ್ರರಾಗುತ್ತಾರೆ.

ಗುರುವು ಏಕಾದಶ ಭಾವದಲ್ಲಿದ್ದರೆ ಧನಸಂಪತ್ತು ಪ್ರಾಪ್ತವಾಗುತ್ತದೆ. ಈ ಜಾತಕದವರು ನಿರ್ಭಯವವಾಗಿರುತ್ತಾರೆ. ಆದರೆ, ಇವರು ಅಲ್ಪಸಂತತಿಯುಳ್ಳವವರಾಗಿರುತ್ತಾರೆ. ಇವರು ದೀರ್ಘಾಯುವಾಗಿರುತ್ತಾರೆ ಹಾಗೂ ವಾಹನಸುಖ ಸಂಪನ್ನರಾಗಿರುತ್ತಾರೆ.

ದ್ವಾದಶದಲ್ಲಿ ಗುರುವಿದ್ದರೆ, ಇವರು ಅನ್ನದಿಂದ ದ್ವೇಷಿಸಲ್ಪಡುವವರಾಗಿರುತ್ತಾರೆ. ಈ ಜಾತಕದವರು ಅವಾಚ್ಯ ಮಾತುಗಳನ್ನಾಡುವವರಯ, ಪಾಪಕರ್ಮ ಹೊಂದಿರುವವಾರಾಗಿರುತ್ತಾರೆ. ಹೀನ ಕರ್ಮಗಳನ್ನು ಮಾಡುತ್ತ ಬದುಕುವವರು, ಆಲಸಿಯು ಹಾಗೂ ಸಂತತಿಹೀನರಾಗುತ್ತಾರೆ.

ಇದನ್ನೂ ಓದಿ: ಬಹುತೇಕ ಶುಭಫಲಗಳನ್ನೇ ನೀಡುವ ಬುಧನ ಭಾವಫಲಗಳು ಹೀಗಿವೆ

Exit mobile version