ಇಂದಿನ ಪಂಚಾಂಗ (23-06-2023)
ಶ್ರೀ ಶಕೇ 1945, ಶೋಭಕೃತ್ ನಾಮ ಸಂವತ್ಸರ, ಉತ್ತರಾಯಣ,
ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ.
ತಿಥಿ: ಪಂಚಮಿ 19:53 ವಾರ: ಶುಕ್ರವಾರ
ನಕ್ಷತ್ರ: ಮಘಾ 31:17 ಯೋಗ: ವಜ್ರ 28:29
ಕರಣ: ಭವ 06:40 ಇಂದಿನ ವಿಶೇಷ: ಆಷಾಢ ಶುಕ್ರವಾರ, ಅಮೃತಲಕ್ಷ್ಮೀ ವ್ರತ
ಅಮೃತಕಾಲ: ಶನಿವಾರ ಬೆಳಗಿನ ಜಾವ 04 ಗಂಟೆ 36 ನಿಮಿಷದಿಂದ ಬೆಳಗ್ಗೆ 06 ಗಂಟೆ 25 ನಿಮಿಷದವರೆಗೆ.
ಸೂರ್ಯೋದಯ : 05:55 ಸೂರ್ಯಾಸ್ತ : 06:49
ರಾಹುಕಾಲ : ಬೆಳಗ್ಗೆ 10.30 ರಿಂದ 12.00
ಗುಳಿಕಕಾಲ: ಬೆಳಗ್ಗೆ 7.30 ರಿಂದ 9.00
ಯಮಗಂಡಕಾಲ: ಮಧ್ಯಾಹ್ನ 3.00 ರಿಂದ 4.30
ಮೇಷ: ಸ್ವಯಂ ಸುಧಾರಣೆಯ ಯೋಜನೆಗಳು ಒಂದಕ್ಕಿಂತ ಹೆಚ್ಚು ರೀತಿಯಲ್ಲಿ ಫಲ ನೀಡುತ್ತವೆ. ಭವಿಷ್ಯದ ಯೋಜನೆ ಕುರಿತು ಚರ್ಚೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವ ಸಾಧ್ಯತೆ. ಆರೋಗ್ಯ ಮಧ್ಯಮ. ಆರ್ಥಿಕ ಸದೃಢತೆ. ಉದ್ಯೋಗಿಗಳಿಗೆ ಕಿರಿಕಿರಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 6
ವೃಷಭ: ಕುಟುಂಬದಲ್ಲಿ ಇತರರ ಹಸ್ತಕ್ಷೇಪ ಮಾಡುವ ಸಾಧ್ಯತೆ. ತಾಳ್ಮೆಯಿಂದ ವರ್ತಿಸಿ. ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಲಾಭದಾಯಕವಾಗಬಹುದು. ಆರೋಗ್ಯ ಪರಿಪೂರ್ಣವಾಗಿ ಇರಲಿದೆ. ಆರ್ಥಿಕ ವ್ಯವಹಾರಗಳಲ್ಲಿ ಯಶಸ್ಸು. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 5
ಮಿಥುನ: ಅಗತ್ಯ ವಸ್ತುಗಳ ಖರೀದಿ ಮಾಡುವಿರಿ. ಆರೋಗ್ಯ ಪರಿಪೂರ್ಣವಾಗಿ ಇರಲಿದೆ. ಹಣಕಾಸು ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ. ಉದ್ಯೋಗಿಗಳಿಗೆ ಭರವಸೆಯ ಹೊಸ ಅವಕಾಶಗಳು ತೆರೆದುಕೊಳ್ಳಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ:3
ಕಟಕ: ಮಕ್ಕಳ ಸಾಧನೆ ಸಂತಸ ನೀಡಲಿದೆ. ಹಣಕಾಸಿನ ಸಮಸ್ಯೆಗಳು ಇಂದು ತಲೆದೋರಬಹುದು. ಬುದ್ಧಿವಂತಿಕೆಯ ಕಾರ್ಯ ಯೋಜನೆ ಸಫಲತೆ ತಂದು ಕೊಡಲಿದೆ. ಆರೋಗ್ಯ ಪರಿಪೂರ್ಣ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ:7
ಸಿಂಹ: ಉದ್ಯೋಗ ಅಪೇಕ್ಷಿತರಿಗೆ ಇಂದು ಉದ್ಯೋಗದ ಭರವಸೆ ದೊರೆಯಲಿದೆ. ಆರ್ಥಿಕವಾಗಿ ಪ್ರಗತಿ. ಪರಿಶ್ರಮಕ್ಕೆ ತಕ್ಕ ಪ್ರತಿ ಫಲ ಸಿಗುವುದು. ಮನೆಯವರ ಪ್ರೀತಿ ಸಹಕಾರ ಸಿಗಲಿದೆ. ಕುಟುಂಬದಲ್ಲಿ ನೆಮ್ಮದಿ.
ಅದೃಷ್ಟ ಸಂಖ್ಯೆ: 3
ಕನ್ಯಾ: ಮನೆಯಲ್ಲಿ ಪರಸ್ಪರರ ಮಧ್ಯೆ ಕಲಹದಿಂದ ವಾತಾವರಣ ಹದಗೆಡಡಬಹುದು. ಉದ್ಯೋಗದಲ್ಲಿ ಹಿರಿಯರಿಂದ ಒತ್ತಡ, ಎಚ್ಚರಿಕೆ ವಹಿಸಿ. ಆರ್ಥಿಕ ಪ್ರಗತಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 1
ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ
ತುಲಾ: ತರಾತುರಿಯಲ್ಲಿ ನಿರ್ಧಾರ ಕೈಗೊಂಡು ಯಾವುದೇ ಹೂಡಿಕೆ ಮಾಡುವುದು ಬೇಡ. ಬಂಧು ಮಿತ್ರರಿಂದ ಸಹಕಾರ ಸಿಗಲಿದೆ. ಆರೋಗ್ಯದಲ್ಲಿ ಉತ್ತಮ. ಮನೆಯಲ್ಲಿ ಸಂತೋಷದ ದಿನ.
ಅದೃಷ್ಟ ಸಂಖ್ಯೆ: 4
ವೃಶ್ಚಿಕ: ಮಿತ್ರರಿಂದ ಸಹಕಾರ ಸಿಗಲಿದೆ. ಆರ್ಥಿಕವಾಗಿ ಪ್ರಗತಿ ಹೊಂದಲು ಹಿರಿಯರು ಮಾರ್ಗದರ್ಶನ ಮಾಡುವರು. ಧೈರ್ಯದಿಂದ ಕಾರ್ಯದಲ್ಲಿ ಮುನ್ನುಗ್ಗಿ, ಯಶ ಸಿಗುವುದು. ಕುಟುಂಬದಲ್ಲಿ ನೆಮ್ಮದಿ.
ಅದೃಷ್ಟ ಸಂಖ್ಯೆ: 5
ಧನಸ್ಸು: ಕುಟುಂಬ ಸದಸ್ಯರ ಆರೋಗ್ಯ ಸಂಬಂಧಿ ವಿಷಯಗಳು ತಮಗೆ ಒತ್ತಡ ಉಂಟುಮಾಡಬಹುದು. ಉದಾಸೀನತೆ ಮಾಡುವುದು ಬೇಡ. ಆಶಾವಾದಿಗಳಾಗಿರಿ ಕುಲದೇವರನ್ನು ಸ್ಮರಿಸಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 2
ಮಕರ: ಉದ್ಯೋಗದಲ್ಲಿ ಅಧಿಕಾರಿಗಳ ಕಿರಿಕಿರಿ ಒತ್ತಡ ಉಂಟುಮಾಡುವ ಸಾಧ್ಯತೆ. ಆಲಸ್ಯದಿಂದ ದೂರವಿದ್ದು ಕಾರ್ಯ ಪೂರ್ಣ ಮಾಡಿ. ಕೆಲಸದ ಒತ್ತಡದಿಂದ ಮನೆಯ ಸದಸ್ಯರ ಮೇಲೆ ಹಾಕಿ, ವಾತಾವರಣ ಹದಗೆಡಲು ಕಾರಣವಾಗಬೇಡಿ. ಗುರುಗಳ ಆರಾಧನೆ ಮಾಡಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 2
ಕುಂಭ: ಭೂ ಸಂಬಂಧಿ ವ್ಯವಹಾರದಲ್ಲಿ ಪ್ರಗತಿ. ಬಹಳ ದಿನಗಳ ಕನಸು ನನಸಾಗುವ ಕಾಲ ಕೂಡಿ ಬರುವುದು. ಅನ್ಯರು ಆಡುವ ಕುಹುಕದ ಮಾತುಗಳಿಗೆ ತಲೆಕೆಡಿಸಿಕೊಳ್ಳಬೇಡಿ. ಕುಟುಂಬದಲ್ಲಿ ನೆಮ್ಮದಿ.
ಅದೃಷ್ಟ ಸಂಖ್ಯೆ: 9
ಮೀನ: ನಿಮ್ಮ ಮಹತ್ವಾಕಾಂಕ್ಷೆಯ ಕೆಲಸ ಕಾರ್ಯಗಳು ಕುಂಠಿತವಾಗುವ ಸಾಧ್ಯತೆ. ಗೌಪ್ಯ ವಿಷಯಗಳು ಬಹಿರಂವಾಗದಿರಲಿ. ಆರ್ಥಿಕ ನಷ್ಟ ತಪ್ಪಿಸಿಕೊಳ್ಳಿ. ಸಂಗಾತಿಯ ಮಾತುಗಳು ಹಿತವೆನಿಸುದು. ಕುಟುಂಬದಲ್ಲಿ ನೆಮ್ಮದಿ.
ಅದೃಷ್ಟ ಸಂಖ್ಯೆ: 7
ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು
M: 9481854580 | pnaveenshastri@gmail.com
ಇದನ್ನೂ ಓದಿ : Vastu Tips : ಮನೆ ಮಂದಿಯ ಆರೋಗ್ಯ ಮತ್ತು ಸಂಪತ್ತು ವೃದ್ಧಿಗೆ ಕನ್ನಡಿ ಕಾರಣ!