ಇಂದಿನ ಪಂಚಾಂಗ (06-03-2023)
ಶ್ರೀ ಶಕೇ 1944, ಶುಭಕೃತ ನಾಮ ಸವತ್ಸರ, ಉತ್ತರಾಯಣ,
ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ
ತಿಥಿ: ಚತುರ್ದಶಿ 16:16 ವಾರ: ಸೋಮವಾರ
ನಕ್ಷತ್ರ: ಮಘಾ 24:03 ಯೋಗ: ಸುಕರ್ಮ 20:52
ಕರಣ: ವಣಿಜ 16:16 ಇಂದಿನ ವಿಶೇಷ: ಹೋಳಿಯ ಕಾಮದಹನ
ಅಮೃತಕಾಲ: ರಾತ್ರಿ 09 ಗಂಟೆ 25 ನಿಮಿಷದಿಂದ ರಾತ್ರಿ 11 ಗಂಟೆ 12 ನಿಮಿಷದವರೆಗೆ.
ಸೂರ್ಯೋದಯ : 06:33 ಸೂರ್ಯಾಸ್ತ : 06:29
ರಾಹುಕಾಲ : ಬೆಳಗ್ಗೆ 7.30 ರಿಂದ 9.00
ಗುಳಿಕಕಾಲ: ಮಧ್ಯಾಹ್ನ 1.30 ರಿಂದ 3.00
ಯಮಗಂಡಕಾಲ: ಬೆಳಗ್ಗೆ 10.30 ರಿಂದ 12.00
ದ್ವಾದಶ ರಾಶಿ ಭವಿಷ್ಯ (Horoscope Today)
ಮೇಷ: ಮಾನಸಿಕ ಒತ್ತಡದಿಂದ ಹೊರಬರಲು ಆಧ್ಯಾತ್ಮಿಕ ವ್ಯಕ್ತಿಗಳನ್ನು ಭೇಟಿ ಮಾಡುವ ಸಾಧ್ಯತೆ. ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಆಲೋಚಿಸಿ. ಆಪ್ತ ವ್ಯಕ್ತಿಗಳಿಗೆ ಸಹಾಯ ಮಾಡುವಿರಿ. ಮನೆಯಲ್ಲಿ ಕಲಹಗಳಿಗೆ ಆಸ್ಪದ ಕೊಡಬೇಡಿ. ಆರೋಗ್ಯ ಪರಿಪೂರ್ಣ. ಉದ್ಯೋಗಿಗಳಿಗೆ ಕಿರಿಕಿರಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 4
ವೃಷಭ: ಯಾವುದೇ ವಿಚಾರದ ಕುರಿತಾದರೂ ಮಾತನಾಡುವ ಮುನ್ನ ಯೋಚಿಸಿ. ನಿಮಗೆ ತಿಳಿಯದೇ ನಿಮ್ಮ ಅಭಿಪ್ರಾಯಗಳು ಬೇರೊಬ್ಬರ ಭಾವನೆಗಳಿಗೆ ಧಕ್ಕೆಯುಂಟು ಮಾಡಬಹುದು. ದಿನದ ಮಟ್ಟಿಗೆ ಖರ್ಚು ಹೆಚ್ಚು. ಉದ್ಯೋಗಿಗಳಿಗೆ ಶುಭ ಫಲ. ಕುಟಂಬದಲ್ಲಿ ನೆಮ್ಮದಿ.
ಅದೃಷ್ಟ ಸಂಖ್ಯೆ: 3
ಮಿಥುನ: ಆರೋಗ್ಯ ಪರಿಪೂರ್ಣವಾಗಿರಲಿದೆ. ಸ್ನೇಹಿತರಿಗೆ ಸಹಾಯ ಮಾಡುವ ಸಾಧ್ಯತೆ. ಆರ್ಥಿಕ ಪ್ರಗತಿ ಸಾಧಾರಣ. ಸಕರಾತ್ಮಕ ಆಲೋಚನೆಗಳು ನಿಮ್ಮ ಕೆಲಸಗಳಿಗೆ ಪುಷ್ಟಿ ನೀಡುತ್ತವೆ. ಉದ್ಯೋಗಿಗಳಿಗೆ ಸ್ವಲ್ಪ ಕಿರಿಕಿರಿಯ ದಿನ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 1
ಕಟಕ : ಕೆಲಸ ಕಾರ್ಯಗಳಲ್ಲಿ ಒತ್ತಡ ಉಂಟುಮಾಡುವ ವಿಚಾರಗಳಿಂದ ದೂರ ಇರಿ. ತಾಳ್ಮೆ ಇರಲಿ. ಅಗತ್ಯಕ್ಕಾಗಿ ಯಾರಾದರೂ ಹಣದ ಸಹಾಯ ಬೇಡುವ ಸಾಧ್ಯತೆ, ಆಲೋಚಿಸಿ ಮುಂದುವರಿಯಿರಿ. ಆರೋಗ್ಯದ ಬಗೆಗೆ ಕಾಳಜಿ ಇರಲಿ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 5
ಸಿಂಹ: ಇತರರು ನಿಮ್ಮ ಕಾರ್ಯಗಳಿಗೆ ಪ್ರಶಂಸೆ ವ್ಯಕ್ತಪಡಿಸುವರು. ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ. ಆರ್ಥಿಕ ಪ್ರಗತಿ ಸಾಧಾರಣ. ಉದ್ಯೋಗದಲ್ಲಿ ಯಶಸ್ಸು ಕಾಣುವಿರಿ. ಆರೋಗ್ಯ, ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 3
ಕನ್ಯಾ: ನಿಮ್ಮ ಒತ್ತಡವನ್ನು ಇತರರ ಮೇಲೆ ಹಾಕಿ ಕೋಪಗೊಳ್ಳುವುದು ಬೇಡ. ಸಮಾಧಾನದಿಂದ ಎಲ್ಲ ಕೆಲಸಗಳನ್ನು ನಿರ್ವಹಿಸಿ. ಆರ್ಥಿಕವಾಗಿ ಸಾಧಾರಣ ಫಲ. ಆರೋಗ್ಯದ ಕುರಿತು ಹೆಚ್ಚು ಕಾಳಜಿ ವಹಿಸಿ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿಯೂ ಶುಭ ಫಲ.
ಅದೃಷ್ಟ ಸಂಖ್ಯೆ: 2
ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ
ತುಲಾ: ಆಪ್ತರೊಂದಿಗೆ ಬಾಲ್ಯದ ನೆನಪು ಹಂಚಿಕೊಳ್ಳುವಿರಿ. ಮನಸ್ಸಿನ ಒತ್ತಡ ಈ ಮೂಲಕ ಕಡಿಮೆ ಮಾಡಿಕೊಳ್ಳುವಿರಿ. ಆರೋಗ್ಯ ಮಧ್ಯಮ. ಹೂಡಿಕೆ, ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಫಲಿತಾಂಶ. ಯಾವುದೇ ಕಾರ್ಯದಲ್ಲಿ ನಿಧಾನ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4
ವೃಶ್ಚಿಕ: ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯಲಿದೆ. ಆರ್ಥಿಕವಾಗಿ ಪ್ರಗತಿ ಕಾಣುವಿರಿ. ನಿಮ್ಮ ನಿರೀಕ್ಷೆಗೆ ತಕ್ಕಂತೆ ಪ್ರತಿಫಲ ಸಿಗುವುದು. ಆರೋಗ್ಯ ಪರಿಪೂರ್ಣ. ಉದ್ಯೋಗಿಗಳಿಗೆ ಕಿರಿಕಿರಿ ಸಾಧ್ಯತೆ. ಈ ಹಿಂದೆ ನಿಮ್ಮನ್ನು ದ್ವೇಷಿಸುತ್ತಿದ್ದ ಜನರು ನಿಮ್ಮೊಂದಿಗೆ ಪ್ರೀತಿಯಿಂದ ವರ್ತಿಸುವ ಸಾಧ್ಯತೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 6
ಧನಸ್ಸು: ಚುರುಕು ತನದಿಂದ ಕಾರ್ಯದಲ್ಲಿ ಯಶಸ್ಸು ಸಿಗಲಿದೆ. ಹಣಕಾಸು ಹೂಡಿಕೆ ವ್ಯವಹಾರದಲ್ಲಿ ಲಾಭ. ಹೊಸ ಸ್ನೇಹಿತರ ಪರಿಚಯ ಆಗಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ.
ಕುಟುಂಬದ ಸದಸ್ಯರ ಬೆಂಬಲ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 3
ಮಕರ: ಸಮಯ ವ್ಯರ್ಥಮಾಡಿ ಕೊರಗುವುದು ಬೇಡ. ಅನಗತ್ಯವಾಗಿ ಖರ್ಚು ಮಾಡುವ ಸಾಧ್ಯತೆ. ಉತ್ತಮ ಆಲೋಚನೆಗಳು ಇರಲಿ. ಹಳೆಯ ನೆನಪುಗಳು ಮಾನಸಿಕ ಒತ್ತಡ ಉಂಟುಮಾಡುವ ಸಾಧ್ಯತೆ. ದೈಹಿಕ ಆರೋಗ್ಯ ಉತ್ತಮ. ವಿನಾಕಾರಣ ಕುಟುಂಬದ ಸದಸ್ಯರೊಂದಿಗೆ ಕಲಹಗಳು ಸೃಷ್ಟಿ ಆಗುವ ಸಾಧ್ಯತೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 3
ಕುಂಭ: ಅಧಿಕ ಶ್ರಮದಿಂದ ಆರೋಗ್ಯ ಕೊಂಚ ಹದಗೆಡುವ ಸಾಧ್ಯತೆ, ಕಾಳಜಿ ಇರಲಿ. ಸಾಂಕ್ರಮಿಕ ರೋಗದ ಭಾದ್ಯತೆ, ಆದಷ್ಟು ಮುಂಜಾಗ್ರತೆ ವಹಿಸುವುದು ಒಳ್ಳೆಯದು. ಸ್ನೇಹಿತರ ಸಹಕಾರ ಸಿಗಲಿದೆ. ಸಂಗಾತಿಯೊಂದಿಗೆ ಮಾತು ಬೆಳೆಸುವುದು ಬೇಡ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 9
ಮೀನ: ಅಗತ್ಯ ವಸ್ತುಗಳ ಖರೀದಿಯಿಂದ ಖರ್ಚು. ಆರೋಗ್ಯ ಪರಿಪೂರ್ಣ. ಕುಟುಂಬದಲ್ಲಿ ಕಲಹಗಳಿಗೆ ಅವಕಾಶ ಮಾಡಿಕೊಡಬೇಡಿ. ಉದ್ಯೋಗದಲ್ಲಿ ಹೊಸ ಭರವಸೆ ಮೂಡಲಿದೆ. ಮನಸ್ಸಿನ ಒತ್ತಡದಿಂದ ಹೊರಬರಲು ಆಧ್ಯಾತ್ಮಿಕ ಸಾಧನೆ ಮಾಡಿ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 7
ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು
M: 9481854580 | pnaveenshastri@gmail.com
ಇದನ್ನೂ ಓದಿ: Weekly Horoscope : ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ?