Site icon Vistara News

Horoscope Today : ಇಂದು ಕಟಕ ರಾಶಿಯವರ ಅದೃಷ್ಟ ಸಂಖ್ಯೆ 2; ನಿಮ್ಮ ಅದೃಷ್ಟ ಸಂಖ್ಯೆ ಎಷ್ಟು?

Horoscope Today daily horoscope

Horoscope Today

ಇಂದಿನ ಪಂಚಾಂಗ (11-03-2023)

ಶ್ರೀ ಶಕೇ 1944, ಶುಭಕೃತ ನಾಮ ಸಂವತ್ಸರ, ಉತ್ತರಾಯಣ,
ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣ ಪಕ್ಷ.

ತಿಥಿ: ಚತುರ್ಥಿ 22:05 ವಾರ: ಶನಿವಾರ
ನಕ್ಷತ್ರ: ಚಿತ್ತಾ 07:09 ಯೋಗ: ಧ್ರುವ 19:49
ಕರಣ: ಭವ 09:56 ಇಂದಿನ ವಿಶೇಷ : ಶ್ರೀ ವ್ಯಾಸರಾಜರ ಆರಾಧನೆ
ಅಮೃತಕಾಲ: ರಾತ್ರಿ 10 ಗಂಟೆ 54 ನಿಮಿಷದಿಂದ ಮಧ್ಯರಾತ್ರಿ 12 ಗಂಟೆ 33 ನಿಮಿಷದವರೆಗೆ.

ಸೂರ್ಯೋದಯ : 06:30 ಸೂರ್ಯಾಸ್ತ : 06:30

ರಾಹುಕಾಲ : ಬೆಳಗ್ಗೆ 9.00 ರಿಂದ 10.30
ಗುಳಿಕಕಾಲ: ಬೆಳಗ್ಗೆ 6.00 ರಿಂದ 7.30
ಯಮಗಂಡಕಾಲ: ಮಧ್ಯಾಹ್ನ 1.30 ರಿಂದ 3.00

ದ್ವಾದಶ ರಾಶಿ ಭವಿಷ್ಯ (Horoscope Today)

ಮೇಷ: ನಿಮ್ಮ ಅತಿರೇಕದ ಮಾತುಗಳು ಜಗಳ ಉಂಟುಮಾಡಬಹುದು. ಯಾವುದಾದರೂ ಮೂಲದಿಂದ ಆರ್ಥಿಕ ಲಾಭ. ಉದ್ಯೋಗಿಗಳಿಗೆ ಬಡ್ತಿ, ವೇತನ ಹೆಚ್ಚಳವಾಗುವ ಸಾಧ್ಯತೆ. ಆರೋಗ್ಯದಲ್ಲಿ ಕೊಂಚ ಮಟ್ಟಿಗೆ ಏರುಪೇರು ಉಂಟಾಗುವ ಸಾಧ್ಯತೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1

ವೃಷಭ: ಭಾವನಾತ್ಮಕ ವಿಷಯಗಳಿಂದ ಮಾನಸಿಕ ಒತ್ತಡ ಹೆಚ್ಚಾಗುವ ಸಾಧ್ಯತೆ. ದಿನದ ಮಟ್ಟಿಗೆ ಖರ್ಚು. ಕುಟುಂಬದ ಆಪ್ತರಿಂದ ಶುಭ ಕಾರ್ಯಕ್ಕೆ ಆಮಂತ್ರಣ. ಆರೋಗ್ಯದ ಕುರಿತು ವಿಶೇಷ ಕಾಳಜಿ ಅವಶ್ಯ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿಯೂ ಶುಭ ಫಲ.
ಅದೃಷ್ಟ ಸಂಖ್ಯೆ: 1

ಮಿಥುನ: ವ್ಯಾಮೋಹದಿಂದಾಗಿ ಒತ್ತಡ ಸಾಧ್ಯತೆ. ಇಂದು ನೀವು ಅಹ್ಲಾದಕರ ಮನಸ್ಥಿತಿಯಲ್ಲಿರುತ್ತೀರಿ. ಭರವಸೆಯ ಹೊಸ ಅವಕಾಶಗಳು ಸಿಗುವ ಸಾಧ್ಯತೆ. ಆರ್ಥಿಕ ಪ್ರಗತಿ ಮಧ್ಯಮ ಸ್ಥಿತಿಯಲ್ಲಿರುತ್ತದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 8

ಕಟಕ: ಅತ್ಯಂತ ಪ್ರಭಾವಿ ಜನರ ಬೆಂಬಲ ನಿಮ್ಮ ನೈತಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಆರ್ಥಿಕ ಪ್ರಗತಿ ಸಾಧಾರಣ. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ. ಅತಿರೇಕದಿಂದ ಯಾವುದೇ ಮಾತುಗಳನ್ನಾಡುವುದು ಅಪಾಯ ತರಬಹುದು. ಉದ್ಯೋಗಿಗಳಿಗೆ ಹೆಚ್ಚಿದ ಒತ್ತಡ. ಆರೋಗ್ಯ ಪರಿಪೂರ್ಣ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 2

ಸಿಂಹ: ಮೂಗಿನ ಮೇಲೆ ಸಿಟ್ಟಿನ ನಿಮ್ಮ ಸ್ವಭಾವದಿಂದ ಕಾರ್ಯದಲ್ಲಿ ಹಾನಿ. ಆರ್ಥಿಕ ಪ್ರಗತಿ ಚೆನ್ನಾಗಿರುತ್ತದೆ. ಸಂಬಂಧಿಗಳೊಂದಿಗೆ ಕಾಲ ಕಳೆಯುವ ಸಾಧ್ಯತೆ. ಬೇಜವಾಬ್ದಾರಿಯ ಮಾತುಗಳು ಕುಟುಂಬದ ವಾತಾವರಣ ಕೆಡಿಸುವುದು, ಎಚ್ಚರಿಕೆ ಇರಲಿ. ಸಹದ್ಯೋಗಿಗಳಿಂದ ಕಿರಿಕಿರಿ. ಆರೋಗ್ಯದ ಕಾಳಜಿ ಇರಲಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 1

ಕನ್ಯಾ: ಮನರಂಜನೆಗಾಗಿ ಸಮಯ ವಿನಿಯೋಗಿಸುವ ಸಾಧ್ಯತೆ. ಆಪ್ತರೊಂದಿಗೆ ಮಾತುಕತೆ. ಆರ್ಥಿಕ ಪ್ರಗತಿ ಸಾಧಾರಣ. ಪಾಲುದಾರಿಕೆ ಹೂಡಿಕೆ ವ್ಯವಹಾರದಲ್ಲಿ ತೊಡಗುವುದು ಬೇಡ. ಉದ್ಯೋಗಿಗಳಿಗೆ ಕಿರಿಕಿರಿ. ನಂಬಿದ ವ್ಯಕ್ತಿಗಳು ನಿಮ್ಮನ್ನು ಮೋಸಗೊಳಿಸಬಹುದು. ತಪ್ಪು ತಿಳುವಳಿಕೆ ಉಂಟಾಗುವ ಸಾಧ್ಯತೆ. ಆರೋಗ್ಯ ಪರಿಪೂರ್ಣ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 8

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

ತುಲಾ: ಸಕಾರಾತ್ಮಕ ಆಲೋಚನೆಗಳಿಂದ ಕಾರ್ಯದಲ್ಲಿ ಯಶಸ್ಸು. ಆರ್ಥಿಕ ಪ್ರಗತಿ ಸಾಧಾರಣ. ಹಳೆಯ ವಿಚಾರಗಳನ್ನು ಕೆದಕಿ ಮನಸ್ಸಿಗೆ ಘಾಸಿ ಮಾಡಿಕೊಳ್ಳುವುದು ಬೇಡ. ಆರೋಗ್ಯ ಮಧ್ಯಮ. ಉದ್ಯೋಗಿಗಳಿಗೆ ಮಿಶ್ರ ಫಲ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 1

ವೃಶ್ಚಿಕ: ಧೀರ್ಘಕಾಲದ ಅನಾರೋಗ್ಯಕ್ಕೆ ಪರಿಹಾರ ಸಿಗಲಿದೆ. ಹೂಡಿಕೆ, ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿ. ಉದ್ಯೋಗಿಗಳಿಗೆ ಹೊಸ ಭರವಸೆ ಮೂಡಲಿದೆ. ಅಮೂಲ್ಯ ವಸ್ತುಗಳು ಕೈಗೆ ಸಿಗುವುದರಿಂದ ಸಂತಸ. ನೀವಂದುಕೊಂಡಿದ್ದನ್ನು ಸಾಧಿಸುವ ಸಮಯ ಬಂದಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 3

ಧನಸ್ಸು: ಭೂಮಿ ಸಂಬಂಧಿ ವ್ಯವಹಾರ, ಹಣಕಾಸು ವ್ಯವಹಾರದಲ್ಲಿ ಲಾಭ. ಪ್ರಯಾಣ ಮಾಡುವ ಸಾಧ್ಯತೆ. ಆರೋಗ್ಯ ಪರಿಪೂರ್ಣ. ಸಹದ್ಯೋಗಿಗಳಿಂದ ಸಹಕಾರ ಸಿಗಲಿದೆ. ವಿವಾಹ ಅಪೇಕ್ಷಿತರಿಗೆ ಕಂಕಣ ಬಲ ಕೂಡಿ ಬರಲಿದೆ. ಕುಟುಂಬದಲ್ಲಿ ಹೊಸ ಭರವಸೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 9

ಮಕರ: ಭರವಸೆಯ ಹೊಸ ಜೀವನವನ್ನು ನೀವಿಂದು ಆರಂಭಿಸುವಿರಿ. ದೀರ್ಘಕಾಲದ ಹೂಡಿಕೆ ವ್ಯವಹಾರದಲ್ಲಿ, ಆರ್ಥಿಕ ಪ್ರಗತಿ. ನೀವು ಮಾಡಿದ ಕೆಲಸ ಕಾರ್ಯಗಳ ಫಲವನ್ನು ಬೇರೆಯವರು ಕಬಳಿಸಿ, ಪ್ರಶಂಸೆ ಪಡುವ ಸಾಧ್ಯತೆ, ಎಚ್ಚರಿಕೆ ಇರಲಿ. ಆರೋಗ್ಯ ಪರಿಪೂರ್ಣ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 9

ಕುಂಭ: ಬಾಕಿ ಇರುವ ಕೆಲಸ ಕಾರ್ಯಗಳು ಪೂರ್ಣವಾಗುವವು. ಅವಶ್ಯಕ ವಸ್ತುಗಳ ಖರೀದಿ. ಅಷ್ಟೇ ಆರ್ಥಿಕ ಲಾಭ. ಕುಟುಂಬದಲ್ಲಿ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ, ಮಾತು ಬೆಳೆಸುವುದು ಬೇಡ. ಸಾಮಜಿಕ ಕಾರ್ಯದಲ್ಲಿ ತೊಡಗುವ ಸಾಧ್ಯತೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7

ಮೀನ: ಹಳೆಯ ನೋವು ಉಲ್ಭಣಗೊಳ್ಳವ ಸಾಧ್ಯತೆ, ಆರೋಗ್ಯದ ಕಡೆಗೆ ಗಮನ ಇರಲಿ. ಆರ್ಥಿಕ ಪ್ರಗತಿ ಸಾಧಾರಣ. ಅಗತ್ಯ ವಸ್ತುಗಳ ಖರೀದಿಯಿಂದ ಖರ್ಚು. ಸಂಬಂಧಿಗಳೊಂದಿಗೆ ಮಾತುಕತೆ. ಉದ್ಯೋಗಿಗಳಿಗೆ ಒತ್ತಡ ಹೆಚ್ಚು. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 5

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

ಇದನ್ನೂ ಓದಿ: Astro Tips : ಯಾವ ದಿಕ್ಕಿಗೆ ತಲೆಹಾಕಿ ಮಲಗಿದರೆ ಒಳ್ಳೆಯದು? ವಾಸ್ತು ಶಾಸ್ತ್ರ ಹೇಳುವುದೇನು?

Exit mobile version