Site icon Vistara News

Shani Vakri 2023 : ಇಂದಿನಿಂದ ಶನಿ ವಕ್ರೀ ಸಂಚಾರ; ಈ ನಾಲ್ಕು ರಾಶಿಯವರಿಗೆ ಅಶುಭ ಫಲ!

saturn retrograde 2023

#image_title

ಶನಿ ಕರ್ಮಫಲದಾತ. ಅತ್ಯಂತ ನಿಧಾನವಾಗಿ ಸಂಚರಿಸುವ ಗ್ರಹ. ಚಂದ್ರನಿಗೆ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಹೋಗಲು ಎರಡೂವರೆ ದಿನ ಸಾಕಾದರೆ ಶನಿಗೆ ಎರಡೂ ವರೆ ವರ್ಷ ಬೇಕಾಗುತ್ತದೆ. ಹೀಗಾಗಿ ಶನೈಶ್ಚರ ಎಂದು ಕರೆಯುತ್ತಾರೆ. ಇಲ್ಲಿ ʼಶನೈಹಿʼ ಎಂದರೆ ನಿಧಾನವಾಗಿ “ಚರತಿʼ ಎಂದರೆ ಚಲಿಸುವವನು “ಶನೈಹಿ ಚರತಿ ಯಃʼ ಎಂದರೆ “ಶನೈಶ್ಚರʼ ಎಂದು. ಈಗ ಶನಿಯು ವಕ್ರೀ ಸಂಚಾರ (Shani Vakri 2023) ಆರಂಭಿಸಿದ್ದಾನೆ.

ಶನಿಯು ಕಳೆದ ಜನವರಿ 17 ರಂದು ಕುಂಭ ರಾಶಿಗೆ ಸಂಚಾರ ನಡೆಸಿದ್ದ. (Shani Gochar 2023). 2025ರ ಏಪ್ರಿಲ್‌ 30 ರವರೆಗೆ ಕುಂಭ ರಾಶಿಯಲ್ಲಿಯೇ ಇನ್ನು ಶನಿ ಇರುತ್ತಾನೆ. ಆದರೆ ಈಗ ಅಂದರೆ ಜೂನ್‌ 19 ರಿಂದ ಶನಿಯ ವಕ್ರೀ ಸಂಚಾರ ಆರಂಭವಾಗಿದೆ. ಈ ಸಂಚಾರದಿಂದ ದ್ವಾದಶ ರಾಶಿಗಳ ಮೇಲೆ ಪರಿಣಾಮ ಇದ್ದೇ ಇರುತ್ತದೆ. ಜನ್ಮ ಲಗ್ನ, ಜನ್ಮ ರಾಶಿಯನ್ನು ನೋಡಿಕೊಂಡು ಯಾವ ರಾಶಿಯ ಮೇಲೆ ಏನು ಪರಿಣಾಮ ಎಂದು ಹೇಳಬಹುದು.

ಶನಿಯ ಹಿಮ್ಮುಖ ಸಂಚಾರದಿಂದ ಷಡಷ್ಟಕ ಯೋಗ ಮತ್ತು ಮಂಗಳ-ಶನಿಯ ಯೋಗದ ಜೊತೆಗೆ ಗುರು ರಾಹುವಿನ ಚಾಂಡಾಲ ಯೋಗವು ಸೃಷ್ಟಿಯಾಗಿದೆ. ಇದನ್ನು ಬಹಳ ಅಶುಭ ಎಂದು ಪರಿಗಣಿಸಲಾಗುತ್ತದೆ. ಇದರಿಂದಾಗಿ ವಾತಾವರಣದಲ್ಲಿ ಹಲವು ಬದಲಾವಣೆಗಳಾಗಲಿವೆ. ಈ ವಕ್ರೀ ಸಂಚಾರವು ನವೆಂಬರ್‌ 4 ರಂದು ಅಂತ್ಯಗೊಳ್ಳಲಿದೆ.

ಯಾವ ರಾಶಿಗಳವರಿಗೆ ಅಶುಭ ಫಲ?

ಶನಿಯ ವಕ್ರೀ ಸಂಚಾರವು ಕುಂಭ, ಸಿಂಹ, ವೃಶ್ಚಿಕ ಮತ್ತು ಮೀನ ರಾಶಿಗಳ ಮೇಲೆ ತೀವ್ರ ಪರಿಣಾಮ ಬೀರದಲಿದೆ. ಈ ರಾಶಿಗಳವರು ತೀವ್ರ ನಷ್ಟವನ್ನು ಅನುಭವಿಸುವ ಸಾಧ್ಯತೆ ಇದೆ. ಇತರ ರಾಶಿಗಳ ಮೇಲೆ ಇದರ ಪ್ರಭಾವವು ಸಾಮಾನ್ಯವಾಗಿರುತ್ತದೆ. ಈ ವಕ್ರೀ ಸಂಚಾರದಿಂದ ಸೃಷ್ಟಿಯಾಗುವ ಷಡಷ್ಟಕ ಯೋಗವು ಜುಲೈ 1 ರಂದು ಕೊನೆಗೊಂಡಾಗ, ಕುಂಭ ರಾಶಿಯವರಿಗೆ ನಂತರ ಸಾಕಷ್ಟು ಸಮಾಧಾನಸಿಗುತ್ತದೆ. ಆದರೆ ಉಳಿದ ಮೂರು ರಾಶಿಯವರ ಮೇಲೆ ಸಾಕಷ್ಟು ಪರಿಣಾಮಗಳಿರಲಿವೆ.

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

ಸಿಂಹ : ಶನಿಯ ಹಿಮ್ಮುಖ ಸಂಚಾರವು ಸಿಂಹ ರಾಶಿಯವರಿಗೆ ಹಲವು ರೀತಿಯಲ್ಲಿ ತೊಂದರೆಯನ್ನುಂಟು ಮಾಡುತ್ತದೆ. ಉದ್ಯೋಗದಲ್ಲಿ ಮತ್ತು ವೈಯಕ್ತಿಕ ಜೀವನದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಿ ಬರಹುದು. ಆರ್ಥಿಕ ನಷ್ಟ ಉಂಟಾಗಬಹುದು. ನೀವು ಮಾನಸಿಕವಾಗಿಯೂ ತೊಂದರೆಗೊಳಗಾಗುತ್ತೀರಿ. ಹೊಸ ಕೆಲಸವನ್ನು ಪ್ರಾರಂಭಿಸುವ ತಪ್ಪನ್ನು ಈ ಸಂದರ್ಭದಲ್ಲಿ ಮಾಡಬೇಡಿ, ಇಲ್ಲದಿದ್ದರೆ ನೀವು ಭಾರೀ ನಷ್ಟವನ್ನು ಎದುರಿಸಬೇಕಾಗಬಹುದು. ಪರಿಹಾರಕ್ಕಾಗಿ ಪ್ರತಿನಿತ್ಯ ದಶರಥ ವಿರಚಿತ ಶನಿಸ್ತೋತ್ರ ಪಾರಾಯಣ ಮಾಡಿ.

ವೃಶ್ಚಿಕ: ಶನಿಯ ಹಿಮ್ಮುಖ ಸಂಚಾರದಿಂದಾಗಿ ವೃಶ್ಚಿಕ ರಾಶಿಯವರಿಗೆ ಆರ್ಥಿಕ ಸಂಕಷ್ಟ ಎದುರಾಗಬಹುದು. ಆದ್ದರಿಂದ ಖರ್ಚು ಮಾಡುವಾಗ ಯೋಚಿಸಿ ಖರ್ಚು ಮಾಡಿ. ಉದ್ಯೋಗದಲ್ಲಿಯೂ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ನಷ್ಟ ಉಂಟಾಗಬಹುದು. ಸಂಗಾತಿಯೊಂದಿಗಿನ ಸಂಬಂಧವೂ ಹದಗೆಡಬಹುದು. ಕುಟುಂಬದಲ್ಲಿ ಕಲಹ ಉಂಟಾಗದಂತೆ ಎಚ್ಚರಿಕೆ ವಹಿಸಿ. ಪರಿಹಾರಕ್ಕಾಗಿ ಪ್ರತಿನಿತ್ಯ ಶನಿಬೀಜ ಮಂತ್ರವನ್ನು ಪಠಿಸಿ.

ಮೀನ: ಶನಿಯ ಹಿಮ್ಮುಖ ಚಲನೆಯು ಮೀನ ರಾಶಿಯವರಿಗೆ ಧನ ನಷ್ಟವನ್ನು ಉಂಟುಮಾಡಬಹುದು. ಆದಾಯವು ಸಾಮಾನ್ಯವಾಗಿದ್ದರೂ ಅಥವಾ ಉತ್ತಮವಾಗಿದ್ದರೂ ಸಹ, ಅನಗತ್ಯ ವೆಚ್ಚಗಳು ನಿಮ್ಮನ್ನು ತೊಂದರೆಗೆ ಸಿಕ್ಕಿ ಹಾಕಿಕೊಳ್ಳುವಂತೆ ಮಾಡುತ್ತವೆ. ಮಾನಸಿಕ ಯಾತನೆಯನ್ನೂ ಅನುಭವಿಸಬೇಕಾಗಬಹುದು. ಸಂಗಾತಿಯೊಂದಿಗೆ ಜಗಳವಾಗಬಹುದು, ಜಾಗರೂಕರಾಗಿರಿ. ಪರಿಹಾರಕ್ಕಾಗಿ ಸೋಮವಾರ ಅಥವಾ ಶನಿವಾರದಂದು ಏಳು ಮುಖಿ ರುದ್ರಾಕ್ಷವನ್ನು ಧರಿಸುವುದರಿಂದ ಶನಿಗ್ರಹದ ತೊಂದರೆಗಳು ದೂರವಾಗುತ್ತವೆ.

ಇದನ್ನೂ ಓದಿ : Shani Gochar 2023 | ಮಕರದಿಂದ ಕುಂಭಕ್ಕೆ ಶನಿ ಸಂಚಾರ; ದ್ವಾದಶ ರಾಶಿಗಳ ಮೇಲೆ ಪರಿಣಾಮವೇನು? ಪರಿಹಾರವೇನು?

ಉಳಿದ ರಾಶಿಯವರಿಗೇನು ಫಲ?

ಈ ಸಂಚಾರದಿಂದ ದ್ವಾದಶ ರಾಶಿಗಳ ಮೇಲೆ ಪರಿಣಾಮ ಇದ್ದೇ ಇರುತ್ತದೆ. ಆದರೆ ಬಹುತೇಕ ರಾಶಿಗಳವರ ಮೇಲೆ ಹೆಚ್ಚಿನ ಪರಿಣಾಮಗಳಿರುವುದಿಲ್ಲ. ನಿಮ್ಮ ಜನ್ಮ ಕುಂಡಲಿಯಲ್ಲಿ ಶನಿಯು ಶುಭ ಸ್ಥಾನದಲ್ಲಿದ್ದರೆ, ಶನಿಯ ಹಿಮ್ಮುಖ ಚಲನೆಯ ಸಮಯದಲ್ಲಿಯೂ ನೀವು ಶುಭ ಫಲಿತಾಂಶಗಳನ್ನು ಪಡೆಯಬಹುದು. ಮತ್ತೊಂದೆಡೆ, ಶನಿಯು ನ್ಯಾಯಾಯುತವಾಗಿ, ಸತ್ಯ ನಿಷ್ಠ ವ್ಯಕ್ತಿಗೆ ಹಾನಿ ಮಾಡುವುದಿಲ್ಲ. ಶನಿಯು ಜನರಿಗೆ ಅವರ ಕಾರ್ಯಗಳಿಗೆ ಅನುಗುಣವಾಗಿ ಫಲವನ್ನು ನೀಡುತ್ತಾನೆಯೇ ಹೊರತು, ಅನಾವಶ್ಯಕವಾಗಿ ಯಾರಿಗೂ ತೊಂದರೆ ನೀಡುವುದಿಲ್ಲ.

ಇದನ್ನೂ ಓದಿ : Mithuna Sankranti 2023 : ಸೂರ್ಯನ ಈ ಸಂಚಾರ‌, ಕೆಲವರ ಬದುಕಲ್ಲಿ ಬಂಗಾರ!

Exit mobile version