ಮೇಷ: ಆಕರ್ಷಕ ಮಾತುಗಳಿಂದ ಗೆಲುವು
ಧೈರ್ಯ ಮತ್ತು ಆಕರ್ಷಕ ಮಾತುಗಳಿಂದ ಎಲ್ಲವನ್ನೂ ಗೆಲ್ಲಬಲ್ಲಿರಿ. ಆದರೂ ಕೆಲವು ಸಲ ಕ್ವಚಿತ್ತಾಗಿ ಉಂಟಾಗುವ ಪ್ರಮಾದಗಳಿಂದ ತಪ್ಪು ಸಂದೇಶಗಳು ರವಾನೆಯಾಗಬಲ್ಲದು. ಯಾರನ್ನೇ ಆಗಲಿ ಮೂರ್ಖರನ್ನಾಗಿಸುವ ಪ್ರಯತ್ನಗಳು ಬೇಡ. ಕಾರ್ಕೋಟಕ ಸರ್ಪದೋಷ ವೈಫಲ್ಯಗಳನ್ನೇ ಉಂಟು ಮಾಡಬಹುದಾಗಿದೆ. ಗಣಪತಿಯನ್ನು ಆರಾಧಿಸಿ. ವಿವಾಹಾಪೇಕ್ಷಿಗಳಿಗೆ ಸೂಕ್ತ ಸಂಗಾತಿ ಸಿಗಲು ಇದರಿಂದ ಸಹಾಯ. ಬಹು ಕಾಂತಿಯುಕ್ತನಾದ ರವಿಯ ಮೇಷ ಪ್ರವೇಶದಿಂದ (ದಿನಾಂಕ: 14-03-23 ರಂದು) ಮಕ್ಕಳಿಗೆ ಒಳಿತು ಸಂಭವಿಸಲು ಅವಕಾಶ ಸಾಧ್ಯ.
ಶುಭ ಸಂಖ್ಯೆ : 6 ಶುಭ ದಿಕ್ಕು: ಆಗ್ನೇಯ
ವೃಷಭ: ಶಾಂತಿ ಸಮಾಧಾನದಿಂದ ಕಾರ್ಯ ಸಾಫಲ್ಯ
ಸಂಭವನೀಯವಾದ ವಿಜಯವು ಹಾಗೆ ಸುಲಭದ ಕೈ ತುತ್ತಾಗಲು ಕುಜ ಗ್ರಹವು ಬಿಡಲಾರದು. ಸಕ್ಕರೆ ಬೆರೆಸಿದ ಕಡಲೆ ಹಿಟ್ಟನ್ನು ಅಳಿಲುಗಳು ಬರುವಲ್ಲಿ ಚೆಲ್ಲಿ. ಇದರಿಂದ ಕಿನ್ನರ ಕಿಂಪುರುಷ ದಿವ್ಯ ಶಕ್ತಿಗಳು ನಿಮ್ಮ ಜೀವನದ ಅನೇಕ ರೀತಿಯ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ದಾರಿಯನ್ನು ನಿರ್ದೇಶಿಸಬಲ್ಲರು. ಹಿರಿಯರ ಜತೆ ಮನಸ್ತಾಪ ಬರಬಹುದು. ಅನಾವಶ್ಯಕವಾದ ಚರ್ಚೆಗೆ ಅವಕಾಶ ಕೊಡಲೇಬೇಡಿ. ಮನಸ್ಸಿನ ಶಾಂತಿ ಉಳಿಸಿಕೊಳ್ಳಿ. ಶಾಂತಿಯಿಂದ ಹಿಮಾಲಯವನ್ನೂ ಏರಿ ಕಾರ್ಯ ಸಾಫಲ್ಯ ಮಾಡಿಕೊಳ್ಳಬಲ್ಲಿರಿ.
ಶುಭ ಸಂಖ್ಯೆ : 9 ಶುಭ ದಿಕ್ಕು: ಉತ್ತರ
ಮಿಥುನ: ಸೂರ್ಯನ ಬೆಂಬಲ ನಿಮಗಿದೆ!
ಮಿತ್ರತಾರೆಯ ಶಕ್ತಿಯನ್ನು ಸಂವರ್ಧಿಸಿಕೊಳ್ಳಲು ಭೈರವ ಸ್ತುತಿಯನ್ನು ಸಂಕಲ್ಪದೀಕ್ಷೆಯೊಂದಿಗೆ ಮಾಡಿ. ಶತ್ರು ಸ್ಥಳದಲ್ಲಿ ಬುಧ ಇದ್ದರೂ ಅನೇಕಾನೇಕ ಲಾಭಗಳನ್ನು ಸಂಪಾದಿಸಿಕೊಳ್ಳಲು ನಿಮಗೆ ಅನುಕೂಲವಾದ ಸಮಯವಾಗಿದೆ ಇದು. ದಿಗ್ಬಲದ ರವಿಯು ಈ ವಾರದ ನಾಲ್ಕೈದು ದಿನಗಳ ಮಟ್ಟಿಗೆ ಕೆಲವು ಕಿರಿಕಿರಿ ಸ್ವರೂಪದ ಕೆಲಸದ ಸ್ಥಳದಲ್ಲಿನ ಒತ್ತಡಗಳಿಂದ ಹೊರತಂದು ಹೊಸದೇ ಆನಂದದಾಯಕ ವರ್ತಮಾನ ಒದಗಿಸಲು ಬೆಂಬಲಿಸುತ್ತಾನೆ. ಸೂರ್ಯ ಕವಚ ಓದಿ.
ಶುಭ ಸಂಖ್ಯೆ : 3 ಶುಭ ದಿಕ್ಕು: ಈಶಾನ್ಯ
ಕಟಕ: ಆಶಾದಾಯಕ ಮನಸ್ಸು ನಿಮಗಿರಲಿ
ದಿಢೀರಾಗಿ ಆರೋಗ್ಯದ ವಿಚಾರದಲ್ಲಿ ಕೆಲ ಏರುಪೇರುಗಳು ಉಂಟಾಗಬಹುದು. ಅತ್ಯುಗ್ರ ಅಸಮತೋಲನ ಅಥವಾ ದುರಿತ ದಳ್ಳುರಿ ಮನೋ ಕ್ಲೇಶಗಳನ್ನು ನಿವಾರಿಸಿಕೊಳ್ಳಲು ಪ್ರಳಯ ಕಾಲದಲ್ಲೂ ಪ್ರಜ್ವಲನಾದ ಮಾರುತಿಯನ್ನು ಆರಾಧಿಸಿ. ವಿಭೂತಿಯನ್ನು ತೀರಾ ತೆಳು ರೂಪದಲ್ಲಿ ಹಣೆಗೆ ಸವರಿಕೊಂಡು ಶನಿ ಮಹಾರಾಜನ, ಚಂದ್ರನ ರಣ ಕೇಕೆಗಳನ್ನು ದೂರ ಮಾಡಿಕೊಳ್ಳಲು ಮುಂದಾಗಿ. ಅಷ್ಟಮ ಶನಿಕಾಟ ನಿಮ್ಮ ಯಶಸ್ಸಿನ ಓಟಕ್ಕೆ ಬ್ರೇಕ್ ಹಾಕುತ್ತಿದೆ. ಮನಸ್ಸು ಸಂಧಿಗ್ಧವಾಗುತ್ತಿದೆ. ಆಶಾದಾಯಕ ಮನಸ್ಸು ಹೊಂದಿರಿ.
ಶುಭ ಸಂಖ್ಯೆ : 1 ಶುಭ ದಿಕ್ಕು: ಪೂರ್ವ
ಸಿಂಹ: ಧೈರ್ಯದಿಂದ ಇದ್ದರೆ ಒಳಿತು
ವಾರದ ಮೊದಲ ಐದು ದಿನಗಳು ಸೂರ್ಯನ ಪ್ರಭಾಮಯವಾದ ಕಿರಗಣಗಳು ನಿಮ್ಮನ್ನು ಅತ್ಯುಚ್ಚಪ್ರಮಾಣದಲ್ಲಿ ಸಂವೇದಿಸಲು ವಿಫಲವಾಗುವುದರಿಂದ ಚಿಕ್ಕಪುಟ್ಟ ಸಂಗತಿಗಳೂ ಕ್ಲಿಷ್ಟವೇ ಆದಾವು. ಬಲಗೈಯಲ್ಲಿ ನೀರು ಇಟ್ಟುಕೊಂಡು ʻಓಂ ಶ್ರೀರವ್ಯಾಯನಮಃʼ ಎಂದು 21ಬಾರಿ ಸ್ತುತಿಸಿ, ಆ ನೀರನ್ನು ಶಿರೋಧಾರಣೆ ಮಾಡಿಕೊಳ್ಳಿ. ಸಂಕಲ್ಪಿತ ಕಾರ್ಯ ಸಿದ್ಧಿಗೆ, ಇದು ಅತ್ಯುತ್ತಮವಾದ ರೀತಿಯಲ್ಲಿ ನಿಮ್ಮ ಲವಲವಿಕೆಗೆ ಕಾರಣ ಮಾಡಿಕೊಡಬಹುದಾಗಿದೆ. ಧೈರ್ಯವಿರಲಿ. ಕೆಲಸಗಳು ನೇರವೇರುವ ವರ್ತಮಾನ ಲಭ್ಯವಾಗುತ್ತದೆ.
ಶುಭ ಸಂಖ್ಯೆ : 7 ಶುಭ ದಿಕ್ಕು: ಉತ್ತರ
ಕನ್ಯಾ: ಸಂತೋಷ ಸಂಪಾದಿಸಿಕೊಳ್ಳುವ ಕಾಲ
ʻʻಶ್ವೇತಾಶ್ವ ರಥಮಾರೂಡ ಬುಧ ಗ್ರಹಾಯ ನಮಃʼʼ ಎಂದು ಇಪ್ಪತ್ತೇಳು ಬಾರಿ ಪ್ರತಿದಿನ ಸ್ನಾನದ ನಂತರ ಸ್ತುತಿಸಿ. ಬೌದ್ಧಿಕವಾದ ಹರಿತಕ್ಕೆ , ಬುದ್ಧಿ ಸಂವರ್ಧನೆಗೆ, ಯಶಸ್ಸಿನ ಹೆಜ್ಜೆಗಳಿಗೆ ಇದರಿಂದ ಶಕ್ತಿ ಲಭ್ಯ. ರಾಹು ಪೀಡಿತನಾಗಿರುವುದರಿಂಧ ಬುಧನು ಮನಸ್ಸಿಗೆ ತುಸು ಮಂಕುತನವನ್ನು ತರಬಹುದಾಗಿದೆ. ಆದರೆ ಭುಜಗಶಯನಾದ ಶ್ರೀಹರಿಯನ್ನು ಧ್ಯಾನಿಸಿ, ಮನದ ಅಭೀಪೆಗಳನ್ನು ಸಾಧಿಸಿ ಸಂತೋಷ ಸಂಪಾದಿಸಿಕೊಳ್ಳಲು ಕಾಲ ನಿಮಗೆ ಈಗ ಅನುಕೂಲಕರವಾಗಿದೆ ಎಂಬುದು ನಿಶ್ಚಿತ.
ಶುಭ ಸಂಖ್ಯೆ : 9 ಶುಭ ದಿಕ್ಕು: ಪಶ್ಚಿಮ
ತುಲಾ: ವಿಧಿಯನ್ನು ಬುದ್ಧಿವಂತಿಕೆಯಿಂದ ಗೆಲ್ಲಿ!
ಹಲವು ವಿಧದ ಮಾನಸಿಕ ಕಿರಿಕಿರಿಗಳಿಗೆ ಈಗ ದಾರಿ. ಆದರೂ ತಾಳ್ಮೆ ಕಳಕೊಳ್ಳದಿರಿ. ಹೇಳಲೇಬೇಕಾದ ವಿಚಾರವನ್ನು ತಪ್ಪದೇ ಹೇಳಿ. ಆದರೆ ನಯವಾಗಿ ಹೇಳಿ. ಚರ್ಚೆ ಅಥವಾ ವಾಗ್ವಾದ ಬೇಡ. ಉದ್ವಿಗ್ನತೆ ಇದ್ದರೂ ತೋರಿಸಿಕೊಳ್ಳಬೇಡಿ. ಸುಡುವ ಮರಳಿನ ಮೇಲೆ ಪಾದರಕ್ಷೆ ಇರದೆ ನಡೆದಾಡಬೇಕಾದ ಸಂದರ್ಭವಾಗಿದೆ. ವಿಧಿಯನ್ನು ಬುದ್ಧಿವಂತಿಕೆಯಿಂದ ಗೆಲ್ಲಿ. ಆದಷ್ಟು ಹಳೆಯ ಕಡತ, ಕಬ್ಬಿಣದ ನಿರುಪಯುಕ್ತ ವಸ್ತುಗಳು, ಉಪಯೋಗಕ್ಕೆ ಬಾರದ ಪುಸ್ತಕಗಳನ್ನು ವಿಲೇವಾರಿ ಮಾಡಿ. ಪ್ರಸನ್ನ ಮನಸ್ಸಿನಿಂದ ರಾಮಧ್ಯಾನ ಮಾಡಿ, ಕ್ಷೇಮವಿದೆ.
ಶುಭ ಸಂಖ್ಯೆ : 5 ಶುಭ ದಿಕ್ಕು: ದಕ್ಷಿಣ
ವೃಶ್ಚಿಕ: ಧನ ಲಾಭಕ್ಕೆ ದಾರಿ ಇದೆ
ʻʻಭಕ್ತಪಾಲನ ತತ್ಪರಾಯ ನಮಃʼʼ ಎಂದು ಕುಜನನ್ನು ಆರಾಧಿಸಿ. 108 ಬಾರಿ ಪಠಿಸಿ. ಉತ್ತಮವಾದ ಫಲಾವಳಿಗಳನ್ನು ಕೊಡುತ್ತಾನೆ. ಧನ ಲಾಭಕ್ಕೆ ದಾರಿ ಇದೆ. ಆರೋಗ್ಯವನ್ನು ಆಲಕ್ಷಿಸದಿರಿ. ನೀರಿನ ಸೇವನೆಯನ್ನು ಯುಕ್ತವಾಗಿ ಮಾಡಿ. ಮತ್ಸ್ಯೋದ್ಯಮಿಗಳಿಗೆ ಉತ್ತಮ ಲಾಭದ ಕಾಲ. ವೈದ್ಯರುಗಳಿಗೂ ಉತ್ತಮವೇ ಆದ ವರ್ತಮಾನ. ರಾಜಕಾರಣಿಗಳು, ಟೆಕ್ಕಿಗಳು ವಿನಾಕಾರಣವಾದ ಆಕ್ರೋಶವನ್ನು ಎದುರಿಸಬೇಕಾಗುತ್ತದೆ. ವಾಂಛಾ ಗಣಪತಿಯನ್ನು, ಸುಬ್ರಹ್ಮಣ್ಯನನ್ನು ಆರಾಧಿಸಿ. ಅಪರೂಪದ ಪ್ರಾಪ್ತಿಗೆ, ಲಾಭಕ್ಕೆ ಇದರಿಂದ ದಾರಿ ಇದೆ.
ಶುಭ ಸಂಖ್ಯೆ : 7 ಶುಭ ದಿಕ್ಕು: ಈಶಾನ್ಯ
ಧನಸ್ಸು: ಪ್ರಮೋಷನ್ ಪಡೆಯುವ ಕಾಲ
ಇರುವ ಕೆಲಸದಲ್ಲೇ ಪ್ರಮೋಷನ್ ಸಿಗಲು ಕಾಲ ಬೆಂಬಲಕ್ಕಿದೆ. ಹೊಸ ಕೆಲಸದ ಕುರಿತೂ ಕಾಲ ಸಹಕರಿಸಲು ಪ್ರಸನ್ನತೆಯಲ್ಲಿದೆ. ಮಕ್ಕಳ ಬಗೆಗೆ ಮೃದು ಧೋರಣೆ ಇರಲಿ. ಆದರೆ ಸೂಕ್ತವಾದ ನಿಯಂತ್ರಣ ಇರಲಿ. ಪ್ರವಾಸಕ್ಕೆ ಅನಿರೀಕ್ಷತ ಅವಕಾಶ ಒದಗಿಬರಬಹುದು. ಮಂಗಳವಾರದ ದಿವಸ ಪ್ರವಾಸದ ಕುರಿತು ನಿರ್ಣಯ ತಾಳುವುದಾದರೆ ಶನಿವಾರದಂದು ಪ್ರವಾಸ ಇರಿಸಿಕೊಳ್ಳದಿರಿ. ಬಿಳಿ ಹಾಳೆಯಲ್ಲಿ ದತ್ತ ನಾಮವನ್ನು ಪ್ರತಿದಿನ 108 ಬಾರಿ ಬರೆಯಿರಿ. ಕಗ್ಗಂಟಾದ ಕಾರ್ಯವು ನೆರವೇರಲು ಇದರಿಂದ ಅನುಗ್ರಹ ಲಭ್ಯ.
ಶುಭ ಸಂಖ್ಯೆ : 2 ಶುಭ ದಿಕ್ಕು: ವಾಯುವ್ಯ
ಜ್ಯೋತಿಷ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಮಕರ: ಅವಸರ ಪಟ್ಟರೆ ತೊಂದರೆ
ʻರುದ್ರಂ ರೌದ್ರಾವತಾರಂ ಹನುಮಂತ ನಯನಂʼ ಎಂದು ಸಂಕೀರ್ತಿಸಲ್ಪಡುವ ರುದ್ರನನ್ನು ಆರಾಧಿಸಿ. ಸ್ವ ಕ್ಷೇತ್ರ ಸ್ಥಿತನಾದ ಶನೈಶ್ವರ ಸ್ವಾಮಿಯು ಕಾಟದ ಸ್ವಾಮಿಯಾಗಿದ್ದಾನೆ. ಆದರೆ ರುದ್ರ ಧ್ಯಾನದಿಂದ ಶನೈಶ್ವರನು ಸಂಪ್ರೀತನಾಗುತ್ತಾನೆ. ಚಂದ್ರನೂ ಸಂಪ್ರೀತನಾಗುತ್ತಾನೆ. ಸಾಡೇಸಾತಿ ಕಾಟದ ತೊಂದರೆಗಳು ಗಮನಾರ್ಹವಾಗಿ ಕಡಿಮೆ ಆಗಲಿದು ಸುಲಭದ ದಾರಿ. ದೊಡ್ಡದಾದ ಬಂಡವಾಳ ತೊಡಗಿಸಿ ಬಿಸ್ನೆಸ್ ಹಿಗ್ಗಿಸಲು ಸರ್ರನೆ ಮುಂದಾಗದಿರಿ. ನಿಮ್ಮ ಅನುಭವ ಜನ್ಯ ಮಹತ್ವದ ಬಲ ಇದ್ದಲ್ಲಿ ಮಾತ್ರ ಮುಂದಾಗಿ. ಅವಸರಗಳಿಂದ ತೊಂದರೆ ಇದ್ದೇ ಇದೆ.
ಶುಭ ಸಂಖ್ಯೆ : 1 ಶುಭ ದಿಕ್ಕು: ಉತ್ತರ
ಕುಂಭ: ಹಣಕಾಸಿನ ವಿಚಾರದಲ್ಲಿ ಎಚ್ಚರವಿರಲಿ
ಮೂಲ ತ್ರಿಕೋಣ ಸ್ಥಿತ ಶನೈಶ್ವರನು ಗೆಲುವಿನ ದಾರಿಯನ್ನು ಕಾಣಿಸುತ್ತಾನೆ. ಆದರೆ ತಾಳ್ಮೆ ಹಾಗೂ ಶಿಸ್ತಿನಿಂದ ನೀವು ಈ ವಿಷಯದಲ್ಲಿ ವ್ಯವಹರಿಸಿ. ಮಾನಸಿಕ ಶಾಂತಿ ದುರ್ಲಭವೇ. ವಿನಾಕಾರಣ ವಿರೋಧಿಗಳು ಉರಿಯುತ್ತಿರುತ್ತಾರೆ. ಚಾಣಾಕ್ಷರಾದ ನೀವು ನಯ ವಂಚಕರನ್ನು ನೇರವಾಗಿ ನಿಯಂತ್ರಿಸಲು ಹೋಗಬೇಡಿ. ಈ ನಯ ವಂಚಕರ ದುರ್ಬಲತೆ ಏನೆಂಬುದನ್ನು ಸೂಕ್ತವಾಗಿ ತಿಳಿದು ನಿಯಂತ್ರಿಸಿ. ಏಕಾಏಕಿ ಯಾವ ನಿರ್ಧಾರಕ್ಕೂ ಬರಡಬೇಡಿ. ಹಣಕಾಸಿನ ವಿಚಾರ ತೀರಾ ಎಚ್ಚರದಿಂದ ಸಾಗಲಿ. ರಾಮರಕ್ಷ ಸ್ತೋತ್ರ ಓದಿ.
ಶುಭ ಸಂಖ್ಯೆ : 1 ಶುಭ ದಿಕ್ಕು: ನೈಋತ್ಯ
ಮೀನ: ಏಕಾಗ್ರತೆಯಿಂದ ಮಾಡಿದ ಕೆಲಸದಲ್ಲಿ ಯಶಸ್ಸು
ಮುಖ್ಯವಾಗಿ ಎಲುಬು, ಸ್ನಾಯು ಸೆಳೆತ, ವಾಯು ಸಂಬಂಧಿ ಪೀಡೆಗಳ ಬಗೆಗೆ ನಿರ್ಲಕ್ಷಿಸದಿರಿ. ಪ್ರತಿದಿನ ಸ್ನಾನಾನಂತರ ದಶರಥ ಮಹಾರಾಜ ವಿರಚಿತ ಶನೈಶ್ವರ ಸ್ತ್ರೋತ್ರ ಪಠಿಸಿ. ಹೊಸದೇ ಆದ ತೇಜಸ್ಸು ಹಾಗೂ ಧೀ ಶಕ್ತಿ ಶನಿ ಕಾಟದ ಕತ್ತಲ ಕೂಪದಲ್ಲಿ ಬೆಳಕನ್ನು ಒದಗಿಸುತ್ತದೆ. ತುಲಾ ರಾಶಿಯಲ್ಲಿ ಕುಳಿತ ಕೇತುವಿನ ಕಿರಿಕಿರಿ ತಪ್ಪಿಸಲು ಗಣಪತಿ ಅಷ್ಟೋತ್ತರ ಪಠಿಸಿ. ಹೆಚ್ಚಿನ ಏಕಾಗ್ರತೆಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು, ಕೆಲಸದ ಸಂದರ್ಶನಗಳನ್ನು ಎದುರಿಸಿ. ಕಿರು ಸ್ವರೂಪದ ಚುರುಕು ಉತ್ತರಗಳಿಂದ ಜಯವಿದೆ.
ಶುಭ ಸಂಖ್ಯೆ : 4 ಶುಭ ದಿಕ್ಕು: ಪೂರ್ವ
ಎಂ.ಎಂ.ಕೆ. ಶರ್ಮ, ಬೆಂಗಳೂರು
ಮೊಬೈಲ್ ನಂ.: 9632980996
ಇದನ್ನೂ ಓದಿ : Astrology: ನಿಮ್ಮ ರಾಶಿಗೆ ಸಾಡೇಸಾತಿ ಮತ್ತು ಶನಿ ದೆಸೆ ಯಾವಾಗ ಇದೆ ಗೊತ್ತೆ?