ಮೇಷ: ಸುಖ, ಸಮೃದ್ಧಿಯ ಕಾಲ
ಹೊಸದೇ ರೀತಿಯ ವಿಧಾನದಲ್ಲಿ ಬದುಕಿನ ಸಂದರ್ಭವನ್ನು ಪರಿವರ್ತನಗೊಳಿಸಿಕೊಳ್ಳಲು ಮನಸ್ಸು ಮಾಡಿದ್ದರೆ ಅಗತ್ಯವಾಗಿ ಈ ಕುರಿತು ಸೂಕ್ತವಾದ ನಿರ್ಧಾರ ರೂಪಿಸಿಕೊಳ್ಳಿ. ಚಂದ್ರನ ಸುಹಾಸಕರ ಓಡಾಟದ ಅವಧಿಗಳು ನಿಮಗೆ ಪರಿಪೂರ್ಣ ಮನೋಶಾಂತಿ, ಸುಖ, ಸಮೃದ್ಧಿ ತರಲು ಸೂಕ್ತವಾಗಿವೆ. ತಿಳಿದಿರದ ಯಾವುದೇ ವಿಚಾರವನ್ನು ವಿದ್ಯುತ್ ಉಪಕರಣಗಳ ಸಂಬಂಧವಾಗಿ ಮಾಡಲು ಮುಂದಾದಿರಿ, ಅಪಾಯವನ್ನು ಆಹ್ವಾನಿಸಿಕೊಳ್ಳದಿರಿ. ತಿಳಿದವರಿಂದ ಸಹಾಯ ಪಡೆಯಿರಿ. ಮಹಾ ವಿಷ್ಣುವನ್ನು ಸ್ತುತಿಸಿ.
ಶುಭ ಸಂಖ್ಯೆ: 3 ಶುಭ ದಿಕ್ಕು: ನೈಋತ್ಯ
ವೃಷಭ : ಲಾಭ ತಂದು ಕೊಡುವ ವಾರ
ಪರಿಣಾಮಕಾರಿಯಾದ ಲಾಭದ ವಿಚಾರದಲ್ಲಿ ದೈವಾನುಗ್ರಹ ನಿಮ್ಮ ನೆರವಿಗೆ ಬರಲಿದೆ. ನಿಮ್ಮ ಕುಲ ಕಸುಬಿನ ವಿಚಾರದಲ್ಲೂ ಉತ್ತಮವಾದ ಫಲ ಪಡೆಯಲು ಕಾಲ ಉತ್ತಮವೇ ಆಗಿದೆ. ಯಾರೋ ಅಮಾಯಕರ ಬಳಿ ಒರಟಾಗಿ ವರ್ತನೆ ತೋರದಿರಿ. ಬಿಕ್ಕಟ್ಟುಗಳು ಎದುರಾಗುವ ಸಂಭಾವ್ಯತೆಗಳು ಜಾಸ್ತಿ. ಮನೆಯಲ್ಲಿ ಸದಸ್ಯರೆಲ್ಲರ ವಿಶ್ವಾಸವನ್ನು ಪಡೆದೇ ನಿಮ್ಮ ಕೆಲಸ ಕಾರ್ಯಗಳನ್ನು ನಡೆಸಿ. ಬೆಳ್ಳಿ ಹೂಗಳ ಜತೆ ತುಸು ಅರಿಷಿಣ, ಕುಂಕುಮ, ಅಕ್ಷತೆ ಸೇರಿಸಿ ಶ್ರೀದೇವಿ ದುರ್ಗಾಳನ್ನು ಆರಾಧಿಸಿ, ಕ್ಷೇಮವಿದೆ.
ಶುಭ ಸಂಖ್ಯೆ : 8 ಶುಭ ದಿಕ್ಕು: ಪಶ್ಚಿಮ
ಮಿಥುನ : ವಿದೇಶಿ ಪ್ರವಾಸಕ್ಕೆ ಅವಕಾಶವಿದೆ!
ಭಾಗ್ಯದ ವಿಚಾರ ನಿಮ್ಮ ಮನಸ್ಸಿನ ಲೆಕ್ಕಾಚಾರದಂತೆ ನಡೆಯಲು ಈಗ ನಿಮಗೆ ಉತ್ತಮ ಕಾಲ. ಮಕ್ಕಳನ್ನು ವಿಶ್ವಾಸಕ್ಕೆ ಪಡೆಯಿರಿ. ಕುಜನ ಸಂಬಂಧವಾದ ಕಿರಿಕಿರಿಯ ಪರಿಣಾಮವಾಗಿ ಕೇತುವು ಮಕ್ಕಳ ವಿಚಾರದಲ್ಲಿ ಕೆಲ ಬಿಕ್ಕಟ್ಟುಗಳನ್ನು ಸೃಷ್ಟಿಸಲು ಸಾಧ್ಯ. ವಿದೇಶ ಪ್ರವಾಸಕ್ಕೂ ಅವಕಾಶ. ಅವಕಾಶದ ಸಂದರ್ಭದಲ್ಲಿ ವ್ಯಾಪಾರ, ವ್ಯವಹಾರ ವಿಷಯಗಳ ಕರಾರುವಕ್ಕಾದ ವಿಷಯ ಸೂಚಿಗಳೊಂದಿಗಿನ ವೇಳಾಪಟ್ಟಿಯಿಂದ ಉತ್ತಮ ಯಶಸ್ಸು ಮನಃ ಸಂಕಲ್ಪದಂತೆ ಸಾಧ್ಯವಾಗುತ್ತದೆ. ದುರ್ಗಾ ಸ್ತುತಿ ಉತ್ತಮ.
ಶುಭ ಸಂಖ್ಯೆ : 7 ಶುಭ ದಿಕ್ಕು: ಈಶಾನ್ಯ
ಕಟಕ : ರಾಜಕಾರಣಿಗಳಿಗೆ ಹೆಚ್ಚಿನ ಸ್ಪರ್ಧೆ
ಬಿಸಿಲು ಎದ್ದೇಳುತ್ತಿರುವ ಸುಡು ಸೂರ್ಯನ ಹೊತ್ತು ಇದಾಗಿದೆ. ಪರದಾಟವಾಗಿದೆ ದಿನ ಮಾನ ಎಂಬ ಅರಿವು ನಿಧಾನವಾಗಿ ಬರೆಹರಿಯದ ತೊಡಕಾಗಿ ನಿಂತಿದೆ ನಿಮ್ಮಲ್ಲಿ. ಬೇಗುದಿಯ ಹೊರೆ ಹೊತ್ತ ಚಂದ್ರನು ಅಷ್ಟಮದಲ್ಲಿ ಸ್ಥಿತನಾದ ಶನೈಶ್ವರನ ಬಾಧೆಯಿಂದ ಅಸಹಾಯಕನಾಗಿದ್ದಾನೆ. ನಿಮ್ಮ ವರ್ಚಸ್ಸು, ತೇಜಸ್ಸು, ಉತ್ಸಾಹ, ಲವಲವಿಕೆಗಳ ವಿಚಾರದಲ್ಲಿ ಜಾಗೃತರಾಗಿರಿ. ಇದೀಗ ಕಗ್ಗಂಟುಗಳನ್ನು ನಿರ್ಮಿಸಿ ಇನ್ನೂ ಹೆಚ್ಚಿನ ಬಾಧೆ ನಿರ್ಮಿಸಬಹುದು ಎಚ್ಚರ. ರಾಜಕಾರಣಿಗಳಿಗೆ ಹೆಚ್ಚಿನ ಸರ್ಧೆ, ತಾಕಲಾಟಗಳಿವೆ. ಮಾರುತಿಯನ್ನು ಆರಾಧಿಸಿ.
ಶುಭ ಸಂಖ್ಯೆ : 5 ಶುಭ ದಿಕ್ಕು: ನೈಋತ್ಯ
ಸಿಂಹ: ಗಣಪತಿಯಿಂದ ನಿಮಗೆ ಶುಭವಾರ
ಗಣೇಶನ ಮೂಲಕವಾಗಿ ಸಿದ್ಧಿ, ಯಶ್ಸು, ಧೈರ್ಯ, ಲವಲವಿಕೆ ಹೊಂದಲು ಅನುಕೂಲಕರ ಸಮಯ ಇದು. ರಾಹು ಸಂಬಂಧವಾದ ಅಥವಾ ಶುಕ್ರನ ಸಂಬಂಧವಾದ ದೋಷ ಪರಿಹಾರಕ್ಕೆ ಮುಂದಾಗಿ ಶಕ್ತಿಯನ್ನು ವಿಸ್ತರಿಸಿಕೊಳ್ಳಿ. ರಾಜಕೀಯ ನಾಯಕರುಗಳಿಗೆ, ರಾಜಕೀಯ ಧುರೀಣರಿಗೆ ಸಿಂಹ ಬಲ ಒದಗಿ ಬಂದರೆ ಪೂರ್ಣ ಮಟ್ಟದ ರಾಜಕೀಯ ವರ್ಚಸ್ಸು, ಅಧಿಕಾರ ಸಂಪಾದಿಸಿಕೊಳ್ಳಲು ಮುಖ್ಯವಾಗಿ ಶ್ರೀದೇವಿ ಲಲಿತಾ ಮಾತೆಯ ಅನುಗ್ರಹವಿದೆ. ಚೈತನ್ಯರೂಪಿಯಾದ ದತ್ತಾತ್ರೇಯನನ್ನು ಸ್ತುತಿಸಿ.
ಶುಭ ಸಂಖ್ಯೆ : 9 ಶುಭ ದಿಕ್ಕು: ಉತ್ತರ
ಕನ್ಯಾ: ಅವಸರ ಅಪಘಾತಕ್ಕೆ ಕಾರಣ
ಯಾವುದೇ ನಿಮ್ಮ ಕೆಲಸ ಕಾರ್ಯಗಳ ವಿಷಯದಲ್ಲಿ ಬಾಳ ಸಂಗಾತಿಯೊಡನೆ ಚರ್ಚೆ, ಮಾತುಕತೆ, ಸಲಹೆ, ಸೂಚನೆಗಳು ಯಶಸ್ಸಿಗೆ ದಾರಿ ನಿರ್ಮಾಣ ಮಾಡಿಕೊಡುತ್ತವೆ. ಎಂಜಿನಿಯರ್, ಡಾಕ್ಟರ್ ಹಾಗೂ ಷೇರ್ ಪತ್ರ ವಹಿವಾಟುದಾರರಿಗೆ ರವಿ ಬುಧರು ಬೆಂಬಲ ನೀಡುವ ವಿಚಾರದಲ್ಲಿ ಅವಕಾಶ ಜಾಸ್ತಿ. ಆದರೆ ಅವಸರವನ್ನು ಮಾಡದಿರಿ. ತೀರಾ ವಿಳಂಬದ ನಿರ್ಣಯಗಳೂ ಬೇಡ. ವಿವಾಹಾಪೇಕ್ಷಿಗಳಿಗೆ ಸೂಕ್ತ ಸಂಗಾತಿ ಒದಗಿ ಬರಲು ಅವಕಾಶವಿದೆ. ಶಿವನನ್ನು ಧ್ಯಾನಿಸಿ, ಸ್ತುತಿಸಿ, ಗೆಲ್ಲಿ.
ಶುಭ ಸಂಖ್ಯೆ : 5 ಶುಭ ದಿಕ್ಕು: ಆಗ್ನೇಯ
ತುಲಾ: ಅತಿಯಾದ ಆತ್ಮ ವಿಶ್ವಾಸ ಬೇಡ
ಆತ್ಮ ವಿಶ್ವಾಸ ಬೇಕೇ ಬೇಕು. ಆದರೆ ಅತಿಯಾದ ಆತ್ಮವಿಶ್ವಾಸವನ್ನು ಸದ್ಯ ಹೊಂದದಿರಿ. ನೀವು ಬುದ್ಧಿವಂತರೇ ಆದರೂ ಕೆಲವು ವಿಷಮ ಪರಿಸ್ಥಿತಿಯ ಒತ್ತಡದಿಂದಾಗಿ ಚಾಣಾಕ್ಷವಾದ ನಿರ್ಧಾರ ರೂಪಿಸಿಕೊಳ್ಳಲು ಅನುಕೂಲವಾಗದು. ರಾಜಕಾರಣಿಗಳು, ಟೆಕ್ಕಿಗಳು, ಆಯಾತ- ನಿರ್ಯಾತ ವಹಿವಾಟುದಾರರು ವಿಶ್ಸುತಾ ಸೂಕ್ತ ಭವಾನಿ ಹಾಗೂ ಶಕ್ತಿ ಮಾರುತಿಯ ಆರಾಧನೆ ಅಥವಾ ವಿಶೇಷ ಧ್ಯಾನ, ಜಪ, ತಪ ಮಂತ್ರಾದಿಗಳಿಂದ ಸ್ತುತಿಗಳ ಮೂಲಕವೇ ಯುಕ್ತ, ಪ್ರಬಲ ಯಶ ಸಂಪಾದಿಸಬೇಕು.
ಶುಭ ಸಂಖ್ಯೆ : 6 ಶುಭ ದಿಕ್ಕು: ವಾಯವ್ಯ
ವೃಶ್ಚಿಕ: ಮಹಾಲಕ್ಷ್ಮೀ ಆರಾಧನೆಯಿಂದ ಉತ್ತಮ ಫಲ
ವಿಶೇಷವಾದ ಶ್ರೀ ಮಹಾಲಕ್ಷ್ಮೀ ಆರಾಧನೆಯಿಂದ ಧನ, ಧಾನ್ಯ, ಸಮೃದ್ಧಿ, ಜನರ ಒಲವು, ಬೆಂಬಲ, ರಾಜಕೀಯ ಮಹತ್ವಾಕಾಂಕ್ಷೆಗಳಿಗೆ ಬೇಕಾದ ಸಿದ್ಧಿ ಸಂಪಾದಿಸಲು ಸಾಧ್ಯ. ಸಿನಿಮಾ ರಂಗವೇ ಆಗಿರಲಿ, ಹಲವು ರೀತಿಯ ಕೈಗಾರಿಕೆ ಅಥವಾ ಸಗಟು ವ್ಯಾಪಾರ, ವ್ಯವಹಾರ ಹೊಂದಿದ ಜನರಿಗೆ ದತ್ತಾತ್ರಯನ ಆರಾಧನೆಯಿಂದ ಸಿದ್ಧಿ ಇದೆ. ಹೊಸ ಕೆಲಸ ಅರಸುತ್ತಿರುವ ಮಂದಿ ದಾಸವಾಳದ ಹೂವು ಮತ್ತು ಸೇವಂತಿಗೆ ಹೂಗಳಿಂದ ಗಣಪತಿ, ಇಲ್ಲ ನರಸಿಂಹ ದೇವರನ್ನು ಸ್ತುತಿಸಿ. ಚಿನ್ನಾಭರಣ ವ್ಯಾಪಾರಿಗಳು ಮಾತ್ರ ಹುಷಾರಾಗಿರಿ.
ಶುಭ ಸಂಖ್ಯೆ : 2 ಶುಭ ದಿಕ್ಕು: ಉತ್ತರ
ಧನಸ್ಸು: ಉನ್ನತ ವ್ಯಾಸಂಗಕ್ಕೆ ಸೂಕ್ತ ಸಮಯ
ಸಮಾಧಾನದ ವಿಚಾರವಾಗಿ ಮಕ್ಕಳ ಪ್ರಗತಿ ನಿಮ್ಮನ್ನು ಖುಷಿಯಲ್ಲಿರಿಸುತ್ತದೆ. ನಿಮಗೂ ಹೆಚ್ಚಿನ ವ್ಯಾಸಂಗಕ್ಕೆ ಕಾಲ ಕೂಡಿ ಬರಲು ಈಗ ಸೂಕ್ತ ಅವಕಾಶಗಳು ಲಭ್ಯ. ಹಣದ ವಿಚಾರದಲ್ಲಿ ಕೆಲವು ಅದೃಷ್ಟಕಾರಕ ಬೆಳವಣಿಗೆಗಳನ್ನು ನೀವು ಕಾಣಬಲ್ಲಿರಿ. ಕೋರ್ಟ್ ವಿಚಾರವೇ ನಿಮ್ಮ ಸಮಾಧಾನವನ್ನು ಕೆಲ ಮಟ್ಟಿಗೆ ವ್ಯಾಕುಲತೆಯಲ್ಲಿ ಇಡಬಹುದು. ತುಸು ತಡವಾದರೂ ನ್ಯಾಯದಲ್ಲಿ ನಂಬಿಕೆ ಇಟ್ಟ ನೀವು ನಿರ್ಣಯಕವಾದ ಗುರಿ ತಲುಪಬಲ್ಲಿರಿ. ಶ್ರೀ ಗುರುರಾಯರ ಆರಾಧನೆ ನಡೆಸಿ ರಕ್ಷೆ ಇದೆ.
ಶುಭ ಸಂಖ್ಯೆ : 4 ಶುಭ ದಿಕ್ಕು: ಪಶ್ಚಿಮ
ಜ್ಯೋತಿಷ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಮಕರ: ತಾಳಿದವನು ಬಾಳಿಯಾನು!
ಒತ್ತಡ, ಒತ್ತಡ, ಒತ್ತಡ ಎಂಬ ಸ್ಥಿತಿ ಇದೆ. ಹಣಕಾಸಿನ ವಿಚಾರವೇ ಒತ್ತಡವನ್ನು ನಿರ್ಮಿಸುತ್ತಿದೆ. ಇಲ್ಲಾ ಹಣ, ಸಂಬಳ, ಪ್ರಾಪ್ತಿ, ಲಾಭ ಇದ್ದರೂ ಒತ್ತಡದಿಂದಾಗಿ ಕೆಲಸ ಮಾಡುವ ಸ್ಥಳದಲ್ಲಿ, ಮನೆಯಲ್ಲಿ ತಾಳ್ಮೆ ತಪ್ಪಿ ಹೋಗುತ್ತಿದೆ. ಕಿರುಚುವಿಕೆ, ಕೈಯೊಳಗಿನ ವಸ್ತುಗಳನ್ನು ಕೋಪದಿಂದ ಎಸೆಯುವ ಪ್ರವೃತ್ತಿ ನಿಗ್ರಹಿಸಿಕೊಳ್ಳಿ. ಚಂದ್ರನ ವ್ಯತ್ಯಸ್ಥ ಸ್ಥಿತಿ, ಬಲಾಢ್ಯ ಶನೈಶ್ವರನನ್ನೂ ಗಡಗಡನೆ ನಡುಗುವ ಸ್ಥಿತಿಗೆ ತಳ್ಳುತ್ತದೆ, ನೆನಪಿಡಿ. ಶ್ರೀ ರಾಮ ರಕ್ಷಾ ಸ್ತೋತ್ರ ಓದಿ. ಸಮಾಧಾನ ಹೊಂದಿರಿ.
ಶುಭ ಸಂಖ್ಯೆ : 3 ಶುಭ ದಿಕ್ಕು: ದಕ್ಷಿಣ
ಕುಂಭ: ಆರ್ಥಿಕ ವಿಚಾರದಲ್ಲಿ ಪರದಾಟಗಳಿಲ್ಲ
ಮೆಚ್ಚುವಂತೆ ಮಾತನಾಡಬಲ್ಲಿರಿ. ಆರ್ಥಿಕ ವಿಚಾರದಗಳ ದಿಕ್ಕಲ್ಲೂ ಪರದಾಟವಾಗಲಾರದು. ನಿಮ್ಮ ಸಮಸ್ಯೆ ಮನಸ್ಸನ್ನು ಕಳವಳಕ್ಕೆ ದೂಡಿ, ಎಂತದೋ, ಯಾವುದೋ, ವಿಭಿನ್ನ ಸನ್ನಿವೇಶದಲ್ಲಿ ಧೈರ್ಯ ಕಳಕೊಳ್ಳುವ ಸ್ಥಿತಿ ಎದುರಾಗುವ ವರ್ತಮಾನವನ್ನು ನಿಯಂತ್ರಿಸಲು ವಿಫಲವಾಗುವುದು. ಹನುಮಾನ್ ಚಾಲೀಸ್ ಪಠಿಸಿ, ಪ್ರತಿಯೊಂದು ಹೊಸ ಯೋಜನೆ ರೂಪಿಸುವಾಗಲೂ ನಿಖರವಾದ ಕಾರ್ಯಕ್ರಮ ಪಟ್ಟಿ, ಸಂಭಾವ್ಯ ಖರ್ಚು ವೆಚ್ಚಗಳ ಬಗ್ಗೆ ತಿಳಿದಿರಿ. ಏನೊಂದೂ ತಯಾರಿ ಇರದೆ ಹೆಜ್ಜೆ ಇಡದಿರಿ. ಪಂಚಮುಖಿ ಹನುಮನನ್ನು ಆರಾಧಿಸಿ.
ಶುಭ ಸಂಖ್ಯೆ : 6 ಶುಭ ದಿಕ್ಕು: ಆಗ್ನೇಯ
ಮೀನ : ಹುಂಬುತನದ ಧೈರ್ಯ ಬೇಡ
ʻʻಧೈರ್ಯಂ ಸರ್ವತ್ರ ಸಾಧನಂʼʼ ಎಂಬುದು ಸತ್ಯವಾದರೂ ಹುಂಬುತನದ ಧೈರ್ಯ ಬೇಡ. ನೀವು ಬುದ್ಧಿವಂತರು ಎಂಬುದು ಸತ್ಯ. ಆದರೆ ಏಕಾಏಕಿ ನಿಯಂತ್ರಣ ತಪ್ಪಿ ವಸ್ತುಸ್ಥಿತಿ ನಿಮ್ಮದಾದ ವಿಶ್ವಾಸವನ್ನು ಬುಡ ಸಹಿತ ಅಲ್ಲಾಡಿಸಲು ಸಾಧ್ಯ. ಗೊತ್ತು ಗುರಿ ಇರದೆ ಯಾರನ್ನೋ ನಂಬಿ ಮುಂದಾಗುವ ಎಡಬಿಡಂಗಿತನ ಬೇಡ. ಸಿನಿಮಾ ರಂಗದ ಚಿನ್ನ, ಬೆಳ್ಳಿ, ರತ್ನ, ಮುತ್ತು ವ್ಯಾಪಾರಿಗಳು ರಿಯಲ್ ಎಸ್ಟೇಟ್‌ನಲ್ಲಿ ತೊಡಗಿಕೊಂಡವರು ತಾಳ್ಮೆಯ, ಜಾಣ್ಮೆಯ ಹೆಜ್ಜೆ ಇಡಿ. ಶ್ರೀ ಲಲಿತಾ ಸ್ತುತಿ ಕ್ಷೇಮ.
ಶುಭ ಸಂಖ್ಯೆ :1 ಶುಭ ದಿಕ್ಕು: ಪೂರ್ವ
ಎಂ.ಎಂ.ಕೆ. ಶರ್ಮ, ಬೆಂಗಳೂರು
ಮೊಬೈಲ್ ನಂ.: 9632980996
ಇದನ್ನೂ ಓದಿ : Astrology: ನಿಮ್ಮ ರಾಶಿಗೆ ಸಾಡೇಸಾತಿ ಮತ್ತು ಶನಿ ದೆಸೆ ಯಾವಾಗ ಇದೆ ಗೊತ್ತೆ?