ಮೇಷ: ದೈವದ ಕೃಪೆಯಿಂದ ಸುಖ
ಕೆಲಸದ ವಿಚಾರದಲ್ಲಿ ದೈವದ ಕೃಪೆ ಅಬಾಧಿತ. ಹಣಕಾಸಿನ ವಿಚಾರಗಳೂ ಕೂಡಾ ಉತ್ತಮವಾಗಿಯೇ ಇರುತ್ತದೆ. ಇಂತಹ ಉತ್ತಮ ಕಾಲದಲ್ಲಿ ಮಾತು ಅಥವಾ ನಡವಳಿಕೆಗಳಿಂದ ಎಡವಟ್ಟು ಮಾಡಿಕೊಳ್ಳದಿರಿ. ಸೂಕ್ಷ್ಮವಾಗಿ ಅವಲೋಕಿಸುವ ಜನ, ತಪ್ಪು ಹುಡುಕುವ ಗಂಡ ಮೊಸರಿನಲ್ಲಿ ಕಲ್ಲು ಹುಡುಕಿದ ಎಂಬಂತೆ ನಿಮ್ಮ ಮಾತುಗಳ ಮೇಲೆ ಕಣ್ಣಿಟ್ಟಿದ್ದಾರೆ. ಎಚ್ಚರ ಇರಲಿ. ದಾಂಪತ್ಯದ ವಿಚಾರ ಸರಳವಲ್ಲ. ಅರಿತು ನಡೆಯೆ ನಿಮ್ಮ ದಾರಿಯಲ್ಲಿ ಕಲ್ಲು ಮುಳ್ಳು ಬಾರದು. ಸುಖವೆ ನೂರು ವಿಧದಿ ಇರುವುದು. ಮಹಾ ವಿಷ್ಣುವಿನ ಧ್ಯಾನ ಮಾಡಿ.
ಶುಭ ಸಂಖ್ಯೆ:8 ಶುಭ ದಿಕ್ಕು: ಪೂರ್ವ
ವೃಷಭ : ಗಣೇಶನ ವಿಶೇಷ ಅನುಗ್ರಹ
ʻಧೈರ್ಯಂ ಸರ್ವತ್ರ ಸಾಧನಂʼ ಎಂಬುದನ್ನು ಮರೆಯದಿರಿ. ತುಂಬಾ ರೀತಿಯಲ್ಲಿ ಕೈ ಹಾಕಿದ ಕಡೆ ಹಣ ಕೂಡಿ ಬರಲು ಅವಕಾಶ ಇರುವ ಕಾಲ ಘಟ್ಟ ಇದು. ಗಣೇಶನ ವಿಶೇಷ ಅನುಗ್ರಹಕ್ಕೆ ಪಾತ್ರರಾಗಿರುವ ನೀವು ಪ್ರತಿ ದಿನ ಗಣಪತಿ ಸಂಕಷ್ಟ ನಿವಾರಣಾ ಸ್ತೋತ್ರ ಓದಿ. ಅನೇಕ ರೀತಿಯಲ್ಲಿ ನಿಮ್ಮದಾದ ಗುರುತರ ಜವಾಬ್ದಾರಿಯನ್ನು ಗುರಿ ತಲುಪಿಸುವ ನಾವಿಕನಾಗುತ್ತಾನೆ ಗಣೇಶ. ಕೆಲವು ರೀತಿಯ ವಿಶಿಷ್ಟ ಸನ್ನಿವೇಶಗಳು ನಿಮ್ಮ ಹಣವನ್ನು ಲಪಟಾಯಿಸುವ ಮೂರು ನಾಮ ಹಾಕುವವರಿಗೆ ಅನುಕೂಲವಾಗಬಹುದು. ನಿಮ್ಮದೇ ಆದ ಎಚ್ಚರ ಇರಲಿ.
ಶುಭ ಸಂಖ್ಯೆ : 2 ಶುಭ ದಿಕ್ಕು: ಆಗ್ನೇಯ
ಮಿಥುನ : ವಿದೇಶ ಪ್ರವಾಸ ಸದ್ಯ ಬೇಡ
ಉಲ್ಲಾಸಭರಿತ ದಿನಗಳೇ ಹೌದು. ಆದರೂ ಅಲರ್ಜಿ, ಚರ್ಮವ್ಯಾಧಿ, ಸೂಕ್ತ ಸಂದರ್ಭದಲ್ಲಿನ ಮರೆವು ನಿಮಗೆ ಕಿರಿಕಿರಿಯಾಗುವ ಲಕ್ಷಣಗಳು ಅಧಿಕವಾಗಿವೆ. ಧನ್ವಂತರಿಯನ್ನು ಆರಾಧಿಸಿ. ಉತ್ತರದ ಕಡೆಗೆ ಯಾರೂ ತುಳಿಯದ ಜಾಗದಲ್ಲಿ ತುಸು ಸಕ್ಕರೆ ಚೆಲ್ಲಿ, ಇರುವೆಗಳು ಸಕ್ಕರೆಗೆ ಬಂಧು ಭಕ್ಷಿಸುವ ವಿಚಾರ ನಿಮ್ಮ ದೇಹಿಗತ ವಿಷವನ್ನು ಮಹಾಕಾಲ ಭೈರವನು ನೀಗಿಸುವ ದಿವ್ಯಾನುಗ್ರಹಕ್ಕೆ ಇದರಿಂದ ಚಾಲನೆ ಸಿಗಲಿದೆ. ಸೂರ್ಯನು ಶನೈಶ್ವರನನ್ನು ಸುಡು ಕಾವಲ್ಲಿ ಇರಿಸಿದ್ದಾನೆ. ಹೀಗಾಗಿ ವಿದೇಶ ಪ್ರವಾಸ ಇದ್ದಲ್ಲಿ ತುಸು ಮುಂದೂಡಿ.
ಶುಭ ಸಂಖ್ಯೆ : 5 ಶುಭ ದಿಕ್ಕು: ಈಶಾನ್ಯ
ಕಟಕ : ತಾಳ್ಮೆಯಿಂದ ಎಲ್ಲವನ್ನೂ ಗೆಲ್ಲಿ
ಕೆಲಸದ ಸ್ಥಳದಲ್ಲಿ ಎಚ್ಚರ ಇರಲಿ. ಕೌಟುಂಬಿಕ ಸಮಸ್ಯೆಗಳನ್ನು ತಾಳ್ಮೆಯಿಂದ ಎದುರಿಸಿ. ʻನಹಿ ಜ್ಞಾನೇನ ಸದೃಶಂʼ ಎಂಬ ಮಾತು ನೆನಪಿಡಿ. ಜ್ಞಾನಕ್ಕೆ ಸಮಾನವಾದುದು ಯಾವುದೂ ಇಲ್ಲ. ಅದೃಷ್ಟದ ಬೆಂಬಲವು ಬೇಕೇ ಬೇಕು. ಸೇಫ್ಟಿ ಪಿನ್ನು ಒಂದನ್ನು ನಿಮ್ಮ ಮನೆಯ ಹೊರ ಆವರಣದ ದಕ್ಷಿಣ ಭಾಗದಲ್ಲಿ ಸುಮ್ಮನೆ ಮಣ್ಣಿನಿಂದ ಮುಚ್ಚಿ ಬಿಡಿ. ನೆನಪಿಡಿ ಶನಿವಾರದಂದು ಈ ವಿಷಯವನ್ನು ಮರೆಯದೇ ಮಾಡಿ. ಗಂಗಾಳ ಪಾದಗಳ ಆರಿಷ್ಟ ಶಕ್ತಿಯನ್ನು ನಿಯಂತ್ರಿಸಿ ಗೆಲ್ಲಲು ಇದರಿಂದ ಸಹಾಯ ಲಭ್ಯ. ಮಾರುತಿಯನ್ನು ಸ್ತುತಿಸಿ.
ಶುಭ ಸಂಖ್ಯೆ : 1 ಶುಭ ದಿಕ್ಕು: ಪಶ್ಚಿಮ
ಸಿಂಹ: ಈ ವಾರ ವಾಗ್ವಾದ ಬೇಡ
ಸಂದರ್ಭ ತುಸು ಒತ್ತಡದಲ್ಲಿ ಇಡುವ ವೈಚಿತ್ರ್ಯವನ್ನು ಪ್ರದರ್ಶಿಸುತ್ತಿರುತ್ತವೆ. ವಿವೇಕಿಗಳಾದ ನೀವು ಸಂದರ್ಭವನ್ನು ನಿಯಂತ್ರಿಸಬಹುದೆಂದುಕೊಂಡರೂ ಏನೋ ಒಂದು ಮಾತಿನ ಎಡವಟ್ಟು ಬಿಕ್ಕಟ್ಟನ್ನು ಸೃಷ್ಟಿಸಬಹುದು. ಕೂಡಲೇ ವಿಷಾದ ವ್ಯಕ್ತಪಡಿಸಿ, ಹೊರತೂ ವಾಗ್ವಾದ ಬೇಡ. ಇದು ಸಾಮಾಜಿಕ ಜೀವನದ ಸಂದರ್ಭವೇ ಇರಲಿ, ಕೌಟುಂಬಿಕ ವಿಚಾರಗಳ ಸಂಬಂಧವಾಗಿರಲಿ. ಏನಿದ್ದರೂ ಗಮನ ಹರಿಸಿ. ಜತೆಗೆ ನಿಮ್ಮ ವಹಿವಾಟಿನ ಸಂದರ್ಭದಲ್ಲಿ ಶ್ರೀ ಲಕ್ಷ್ಮೀಯನ್ನು ಸ್ತುತಿಸಿ. ಲಾಭದ ಬಗೆಗಾಗಿನ ದಾರಿ ಸುರಳೀತ.
ಶುಭ ಸಂಖ್ಯೆ : 8 ಶುಭ ದಿಕ್ಕು: ಪೂರ್ವ
ಕನ್ಯಾ: ಯಶೋಮಯ ಓಟಕ್ಕಾಗಿ ಸನ್ನದ್ಧರಾಗಿ!
ಗತಕಾಲದ ಕಹಿಯನ್ನು ಮರೆತು ಬಾಳಿನ ಯಶೋಮಯ ಓಟಕ್ಕಾಗಿ ಸನ್ನದ್ಧರಾಗಿ. ಚುನಾವಣೆಯು ಬರುವ ದಿನಗಳು ಇರುವುದರಿಂದ ನಿಮ್ಮ ಪಾಲಿನ ವರ್ಚಸ್ಸಿಗೆ ಸಂವರ್ಧನೆ ಸಿಗಲು ಇದು ಕಾಲ. ಕೇವಲ ರಾಜಕಾರಣಿಗಳ ಪಾಲಿಗಲ್ಲ, ಟೆಕ್ಕಿಗಳು, ವ್ಯವಹಾರ ವಹಿವಾಟುದಾರರು, ಚಿತ್ರರಂಗದ ಉದ್ಯಮಿಗಳು, ಚಿನ್ನ ಬೆಳ್ಳಿ ವ್ಯಾಪಾರಸ್ಥರಿಗೂ ಇದು ಅನ್ವಯ. ಈಶಾನ್ಯ ದಿಕ್ಕಿನ ಒಂದು ಮೂಲೆಯಲ್ಲಿ ಗೋದಿ ಕಾಳುಗಳನ್ನು ಚೆಲ್ಲಿ. ಅದೃಷ್ಟ ರೂಪದ ಬಹು ವರ್ಣದ ಪಕ್ಷಿಯು ನಿಮಗೆ ಅದೃಷ್ಟ ತರಲಿದೆ.
ಶುಭ ಸಂಖ್ಯೆ : 6 ಶುಭ ದಿಕ್ಕು: ನೈಋತ್ಯ
ತುಲಾ: ಸಾಲ ಕೊಡದಿರಿ, ಪಡೆಯದಿರಿ
ಮೈಮರೆತು ಕುಳಿತಿರಲು ಸಂದರ್ಭವಾಗದಿದು, ಎಚ್ಚರಿಕೆ ಬೇಕು ಎಲ್ಲ ಕಡೆಯಿಂದ. ನಿಮ್ಮನ್ನು ಪ್ರತಿ ಹೆಜ್ಜೆಯಲ್ಲೂ ಹಿಮ್ಮೆಟ್ಟಿಸಲು ಶತ್ರುಗಣ ಹೊಂಚು ಹಾಕಿ ಕುಳಿತಿದೆ. ಸಾಧ್ಯವಾದಷ್ಟು ನೀಲಿ ಅಥವಾ ಹಸಿರು, ಕಪ್ಪು, ಚಾಕಲೇಟ್ ಬಣ್ಣದ ಬಟ್ಟೆಗಳಿರಲಿ ತೊಡಲು. ಈ ಬಣ್ಣಗಳು ತಾಪತ್ರಯದ ಕ್ಷಣಗಳನ್ನು ಹಿಮ್ಮೆಟ್ಟಿಸಲು ವಜ್ರಾಯುಧವಾಗಲಿವೆ. ಯಾವುದೇ ಸಂದರ್ಭದಲ್ಲಿ ಕೂಡ ಸಾಲ ಕೊಡದಿರಿ. ಹಾಗೆಯೇ ಪಡೆಯದಿರಿ. ಬ್ಯಾಂಕ್‌ನಿಂದ ಪಡೆದರೂ ವಿನಿಯೋಗಕ್ಕೆ ಎಚ್ಚರ ಇರಲಿ. ಗಣೇಶನನ್ನು ಸ್ತುತಿಸಿ.
ಶುಭ ಸಂಖ್ಯೆ : 4 ಶುಭ ದಿಕ್ಕು: ಪಶ್ಚಿಮ
ವೃಶ್ಚಿಕ: ವಾಸುಕಿಯ ಬೆಂಬಲ ನಿಮಗಿದೆ
ಒಳಿತುಗಳನ್ನು ತಂದಿಡಲು ವರ್ತಮಾನ ನಿಮ್ಮ ಬೆಂಬಲಕ್ಕಿದೆ. ಬಾಳ ಸಂಗಾತಿಯ ಆರೋಗ್ಯದ ವಿಚಾರದಲ್ಲಿ ಎಚ್ಚರ ಇರಲಿ. ನವ ಖಂಡ ಸರ್ಪ ಸಮೂಹದಲ್ಲಿ ವಿಶೇಷವಾಗಿ ವಾಸುಕಿಯ ಬೆಂಬಲ ನಿಮಗಿದೆ. ನಿಮ್ಮ ವ್ಯಾಪಾರ, ಉದ್ಯಮ, ಶೇರು, ಆಯಾತ, ರಫ್ತುಗಳಲ್ಲಿ ವಾಸುಕಿ ಎಂಬ ಸರ್ಪದ ನಿಮಗೆ ಸಹಕಾರ ನೀಡಲಿದೆ. ಸದ್ಯ ಯಾವುದೇ ಕಾರಣಕ್ಕೂ ವಜ್ರವನ್ನು ಧರಿಸಲು ಮುಂದಾಗದಿರಿ. ಬಿಡದೇ ಗೆಲ್ಲುವೆ ಎಲ್ಲ ಯುದ್ಧವನ್ನು ಎಂಬ ನಿಮ್ಮ ನಿರ್ಧಾರ ಸರಿಯಾಗಿದೆ. ಆತ್ಮ ವಿಶ್ವಾಸವಿರಲಿ, ಆದರೆ ಅತಿಯಾದ ಆತ್ಮವಿಶ್ವಾಸ ಬೇಡ. ಷಣ್ಮುಖನನ್ನು ಸ್ತುತಿಸಿ.
ಶುಭ ಸಂಖ್ಯೆ : 9 ಶುಭ ದಿಕ್ಕು: ಉತ್ತರಾ
ಧನಸ್ಸು: ವ್ಯಾಪಾರಿಗಳಿಗೆ ಲಾಭದ ದಿನ
ವಿಶೇಷವಾಗಿ ವಾಣಿಜ್ಯ, ಕೃಷಿ ಉತ್ಪನ್ನಗಳ ಬೆಳೆಗಾರರಿಗೆ, ಮಧ್ಯವರ್ತಿಗಳಿಗೆ, ಸಂಸ್ಕರಣಾಕಾರರಿಗೆ ಲಾಭದ ದಿನಗಳಾಗಿವೆ. ಬುಧನು ಶೇರು ಮಾರುಕಟ್ಟೆಯಲ್ಲೂ ಕೂಡಾ ಉತ್ತಮ ಹಿಡಿತವನ್ನು ಒದಗಿಸಿಕೊಡಬಲ್ಲ. ಕಬ್ಬಿಣ, ರದ್ದಿ ಸಾಮಾನು, ಹಳೆ ವಸ್ತು ವಹಿವಾಟುದಾರರಿಗೆ ತುಸು ನಿರಾಸೆಯ ಸಾಧ್ಯತೆ ಜಾಸ್ತಿ. ನಿಮ್ಮ ಕೆಲಸಗಾರರ ವಿಷಯದಲ್ಲಿ ಎಚ್ಚರ ಇರಲಿ. ತುಸು ಆಲಸಿಗಳಾಗುವ ಸಂಭಾವ್ಯತೆ ಜಾಸ್ತಿ. ಮೂರು ಅಥವಾ ನಾಲ್ಕು ರಸ್ತೆ ಕೂಡುವ ಜಾಗೆಯಲ್ಲಿ ರಸ್ತೆಗಳಂಚಿಗೆ ಬೇಕರಿ ತಿನಿಸುಗಳನ್ನು ತುಸು ಚೆಲ್ಲಿ. ಜ್ಯೇಷ್ಠೆಯನ್ನು ಆರಾಧಿಸಿ.
ಶುಭ ಸಂಖ್ಯೆ : 5 ಶುಭ ದಿಕ್ಕು: ಈಶಾನ್ಯ
ಜ್ಯೋತಿಷ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಮಕರ: ಕೆರಳಿಸಬೇಡಿ, ಕರೆಳಲೂ ಬೇಡಿ!
ನಿಮಗೆ ತೊಂದರೆ ಯಾಗಬಹುದಾದ್ದು ಹಿಂದಿನಿಂದ ಬಂದು ಆಕ್ರಮಣ ನಡೆಸುವ ಧೂರ್ತರಿಂದ. ಒಂದೊಮ್ಮೆ ಹುಲಿಯೇ ಎದುರಿನಿಂದ ಬಂದು ಹೋರಾಟ ಮಾಡಿದರೆ ನೀವು ಸುಲಲಿತವಾಗಿ ಈ ದಾಳಿಯನ್ನು ಎದುರಿಸಬಲ್ಲಿರಿ. ಆದರೆ ಚಿಕ್ಕ, ಕ್ಷುದ್ರ ಇಲಿಯೊಂದು ಬೆನ್ನ ಹಿಂದಿನಿಂದ ದಾಳಿ ಇಟ್ಟರೆ ತುಂಬಾ ಕಷ್ಟದ ವಿಷಯ ಸೆಟೆದು ನಿಲ್ಲುವುದು. ಯಾರನ್ನೂ ಕೆರಳಿಸಬೇಡಿ. ಕೆರಳಲೂ ಬೇಡಿ. ಒಂದು ಹೋಗಿ ಇನ್ನೊಂದಾಗುವ ಉಸಾಬರಿಗೆ ಕೈ ಹಾಕದಿರಿ. ಶ್ರೀ ರಾಮ ರಕ್ಷಾ ಸ್ತ್ರೋತ್ರ ಓದಿ, ರಕ್ಷೆ ಇರುತ್ತದೆ.
ಶುಭ ಸಂಖ್ಯೆ : 1 ಶುಭ ದಿಕ್ಕು: ದಕ್ಷಿಣ
ಕುಂಭ: ಯಾರೊಂದಿಗೂ ವಾಗ್ವಾದಗಳು ಬೇಡ
ವಿನಾಕಾರಣವಾಗಿ ಚರ್ಚೆ ವಾಗ್ವಾದಗಳಿರದ ದಿನಗಳಾಗಿರಲು ಎಚ್ಚರದಿಂದ ಪ್ರಯತ್ನಿಸಿ. ವಿಶೇಷವಾಗಿ ದಂಪತಿಗಳ ನಡುವೆ ವಾಗ್ವಾದಗಳು ಬೇಡ. ಯಾವುದೋ ಚಿಕ್ಕ ವಿಷಯ ಮಹಾಯುದ್ಧಕ್ಕೆ ದಾರಿ ಪಡೆಯದಿರಲಿ. ಹಣಕಾಸಿನ ವಿಚಾರದಲ್ಲಿ ತೃಪ್ತಿಗೆ ಅವಕಾಶವಿರುವ ಕಾಲಘಟ್ಟ. ಆದರೆ ಮನ ಶಾಂತಿಯನ್ನು ಕಳೆಯಲು ಚಂದ್ರನೂ, ರವಿಯೂ ತಮ್ಮೆಲ್ಲಾ ಶಕ್ತಿಯನ್ನೂ ಒಗ್ಗೂಡಿಸಿ ನಿಮ್ಮನ್ನು ಸದೆ ಬಡಿಯಬಲ್ಲರು. ಒಂದೆರಡು ಕಾಳು ಕರಿ ಎಳ್ಳನ್ನು ನೀರಿಗೆ ಸೇರಿಸಿ ನೈಋತ್ಯ ದಿಕ್ಕಿಗೆ ಚೆಲ್ಲಿ. ಮಾರುತಿಯನ್ನು ಆರಾಧಿಸಿ.
ಶುಭ ಸಂಖ್ಯೆ : 3 ಶುಭ ದಿಕ್ಕು: ಆಗ್ನೇಯ
ಮೀನ : ಆರೋಗ್ಯದ ಬಗ್ಗೆ ಗಮನವಿರಲಿ
ಏನೋ ಒಂದು ರೀತಿಯ ಆಲಸ್ಯ, ದೇಹದ ಸ್ಥಿತಿಯಲ್ಲಿ ಚಿಕ್ಕಪುಟ್ಟ ಕಿರುಕುಳದಿಂದ ಹಿಡಿದು ದೊಡ್ಡದೇ ಆದ ಆರೋಗ್ಯದ ಬಾಧೆಗೆ ಅವಕಾಶ ಜಾಸ್ತಿ. ಆಹಾರದ ಬಗೆಗೆ ನಿಗಾ ವಹಿಸಿ. ವೈದ್ಯರ ಬಳಿ ಸೂಕ್ತ ಮಾರ್ಗದರ್ಶನ ಪಡೆಯಿರಿ. ಸರಿಯಾದ ವೈದ್ಯರ ಬಳಿಯೇ ಸಲಹೆ ಪಡೆಯಿರಿ. ಢೋಂಗೀ ವೈದ್ಯರೂ ಪ್ರಾರಬ್ಧ ಕರ್ಮವಶಾತ್ ಸಿಗಲು ಸಾಧ್ಯ. ಬಿರುಗಾಲಿಯು ಎಲ್ಲಿಂದ ಹೇಗೆ, ಏಕೆ, ಎಷ್ಟು ಎದ್ದೇಳಬಹುದೆಂಬುದನ್ನು ತಿಳಿಯುವುದು ಕಠಿಣ. ಹನುಮಾನ್ ಚಾಲೀಸಾ ಓದಿ, ಒಳಿತಿದೆ.
ಶುಭ ಸಂಖ್ಯೆ :7 ಶುಭ ದಿಕ್ಕು: ಪೂರ್ವ
ಎಂ.ಎಂ.ಕೆ. ಶರ್ಮ, ಬೆಂಗಳೂರು
ಮೊಬೈಲ್ ನಂ.: 9632980996
ಇದನ್ನೂ ಓದಿ : Astrology: ನಿಮ್ಮ ರಾಶಿಗೆ ಸಾಡೇಸಾತಿ ಮತ್ತು ಶನಿ ದೆಸೆ ಯಾವಾಗ ಇದೆ ಗೊತ್ತೆ?